ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಸರ್ಕಾರ ಸಂಪೂರ್ಣ ಜಾಗರೂಕವಾಗಿದೆ: ಪ್ರಧಾನಮಂತ್ರಿ
Posted On:
12 MAR 2020 5:41PM by PIB Bengaluru
ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಸರ್ಕಾರ ಸಂಪೂರ್ಣ ಜಾಗರೂಕವಾಗಿದೆ: ಪ್ರಧಾನಮಂತ್ರಿ
ಆತಂಕಕ್ಕೆ ಒಳಗಾಗದಂತೆ ಮತ್ತು ಅನಿವಾರ್ಯವಲ್ಲದ ಪ್ರಯಾಣ ತಡೆಯುವಂತೆ ಜನತೆಗೆ ಮನವಿ
ಮುಂಬರುವ ದಿನಗಳಲ್ಲಿ ಯಾವುದೇ ಕೇಂದ್ರ ಸಚಿವರಿಂದ ವಿದೇಶ ಪ್ರಯಾಣ ಇಲ್ಲ
ಮಾರಣಾಂತಿಕ ಕೊರೊನಾ ವೈರಸ್ ಕೋವಿಡ್-19ರಿಂದ ಎದುರಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣ ಜಾಗರೂಕವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.
ಎಲ್ಲರ ಸುರಕ್ಷತೆಯ ಖಾತ್ರಿಗಾಗಿ ಸಚಿವರುಗಳು ಹಾಗು ರಾಜ್ಯಗಳು ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ ಎಂದು ಪ್ರಧಾನಮಂತ್ರಿಯವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆತಂಕಕ್ಕೆ ಒಳಗಾಗದಂತೆ ಮತ್ತು ಅನಿವಾರ್ಯವಲ್ಲದ ಪ್ರಯಾಣ ಹಾಗೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಕಡೆ ಹೋಗುವುದನ್ನು ತಡೆಯುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಯಾವುದೇ ಸಚಿವರು ವಿದೇಶ ಪ್ರಯಾಣ ಮಾಡುವುದಿಲ್ಲ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
***
(Release ID: 1606198)
Visitor Counter : 123
Read this release in:
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Tamil
,
Malayalam