ಪ್ರಧಾನ ಮಂತ್ರಿಯವರ ಕಛೇರಿ

ಅಂತರರಾಷ್ಟ್ರೀಯ ಮಹಿಳಾ ದಿನದಂದು ನಾರಿ ಶಕ್ತಿಗೆ ಪ್ರಧಾನಮಂತ್ರಿ ವಂದನೆ

Posted On: 08 MAR 2020 11:56AM by PIB Bengaluru

ಅಂತರರಾಷ್ಟ್ರೀಯ ಮಹಿಳಾ ದಿನದಂದು ನಾರಿ ಶಕ್ತಿಗೆ ಪ್ರಧಾನಮಂತ್ರಿ ವಂದನೆ

 

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 'ನಾರಿ ಶಕ್ತಿಯ ಮನೋಭಾವಕ್ಕೆ ವಂದಿಸಿದ್ದಾರೆ.

"ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು! ನಮ್ಮ ನಾರಿ ಶಕ್ತಿಯ ಉತ್ಸಾಹ ಮತ್ತು ಸಾಧನೆಗಳಿಗೆ ನಾವು ನಮಸ್ಕರಿಸುತ್ತೇವೆ. ಕೆಲವು ದಿನಗಳ ಹಿಂದೆ ನಾನು ಹೇಳಿದಂತೆನಾನು ಸೈನ್ ಆಫ್ ಆಗಿದ್ದೇನೆ. ದಿನವಿಡೀಏಳು ಮಹಿಳಾ ಸಾಧಕರು ತಮ್ಮ ಜೀವನ ಪಯಣವನ್ನು ಹಂಚಿಕೊಳ್ಳುತ್ತಾರೆ ಮತ್ತು ಬಹುಶಃ  ನಿಮ್ಮೊಡನೆ ನನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂವಹನ ನಡೆಸುತ್ತಾರೆ " ಎಂದು ಪ್ರಧಾನಿ ಹೇಳಿದರು.

 ಭಾರತವು ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ಅತ್ಯುತ್ತಮ ಮಹಿಳಾ ಸಾಧಕರನ್ನು ಹೊಂದಿದೆ. ಈ ಮಹಿಳೆಯರು ವ್ಯಾಪಕವಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹೋರಾಟಗಳು ಮತ್ತು ಆಕಾಂಕ್ಷೆಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ. ಅಂತಹ ಮಹಿಳೆಯರ ಸಾಧನೆಗಳನ್ನು ಆಚರಿಸುವುದನ್ನು ಮತ್ತು ಅವರಿಂದ ಕಲಿಯುವುದನ್ನು ಮುಂದುವರಿಸೋಣ. #SheInspiresUs

 

ನಾನು ಯಾವಾಗಲೂ ಕಾಶ್ಮೀರದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸುವ ಕನಸು ಕಂಡಿದ್ದೇನೆ ಏಕೆಂದರೆ ಇದು ಸ್ಥಳೀಯ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಾಧನವಾಗಿದೆ.

ಮಹಿಳಾ ಕುಶಲಕರ್ಮಿಗಳ ಸ್ಥಿತಿಯನ್ನು ನಾನು ನೋಡಿದ್ದೇನೆ,  ಆದ್ದರಿಂದ ನಾಮಡಾ ಕರಕುಶಲತೆಯನ್ನು ಪರಿಷ್ಕರಿಸವೆಡೆಯಲ್ಲಿ  ನಾನು ಕಾರ್ಯವನ್ನು ಪ್ರಾರಂಭಿಸಿದೆ.

ನಾನು ಕಾಶ್ಮೀರದ ಆರಿಫಾ ಮತ್ತು ನನ್ನ ಜೀವನ ಪಯಣ ಇಲ್ಲಿದೆ  #SheInspiresUs

***



(Release ID: 1605870) Visitor Counter : 110