ಸಂಪುಟ

ಸಶಕ್ತ “ತಂತ್ರಜ್ಞಾನ ತಂಡ” ರಚನೆಗೆ ಸಂಪುಟ ಅಂಗೀಕಾರ

Posted On: 19 FEB 2020 4:42PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಶಕ್ತ “ತಂತ್ರಜ್ಞಾನ ತಂಡ” ರಚನೆಗೆ ಅಂಗೀಕಾರ ನೀಡಿದೆ.

ವಿವರಗಳು

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಅಧ್ಯಕ್ಷತೆಯಲ್ಲಿ 12 ಸದಸ್ಯರ ತಂತ್ರಜ್ಞಾನ ಸಮೂಹದ ರಚನೆಯನ್ನು ಸಂಪುಟ ಅಂಗೀಕರಿಸಿದೆ. ತಂತ್ರಜ್ಞಾನ ಮತ್ತು ತಂತ್ರಜ್ಞಾನ ಉತ್ಪನ್ನಗಳ ಮ್ಯಾಪಿಂಗ್; ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಸರ್ಕಾರಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಿದ ಉಭಯ ಬಳಕೆಯ ತಂತ್ರಜ್ಞಾನಗಳ ವ್ಯಾಪಾರೀಕರಣ; ಆಯ್ದ ಪ್ರಮುಖ ತಂತ್ರಜ್ಞಾನಗಳಿಗಾಗಿ ದೇಶೀಯ ಮಾರ್ಗಸೂಚಿ ಅಭಿವೃದ್ಧಿಪಡಿಸುವುದು ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಗುವ ಸೂಕ್ತವಾದ ಆರ್ & ಡಿ ಕಾರ್ಯಕ್ರಮಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳ ಕುರಿತು ಸಮಯೋಚಿತ ಸಲಹೆಯನ್ನು ಈ ಗುಂಪು ನೀಡುತ್ತದೆ.

ಪ್ರಮುಖ ಪರಿಣಾಮ

ತಂತ್ರಜ್ಞಾನ ಗುಂಪಿನ ಪ್ರಮುಖ ಕೆಲಸವೆಂದರೆ:

ಎ. ತಂತ್ರಜ್ಞಾನ ಪೂರೈಕೆದಾರ ಮತ್ತು ತಂತ್ರಜ್ಞಾನ ಖರೀದಿ ತಂತ್ರಕ್ಕಾಗಿ ಅಭಿವೃದ್ಧಿಪಡಿಸಬೇಕಾದ ತಂತ್ರಜ್ಞಾನದ ಬಗ್ಗೆ ಸೂಕ್ತ ಸಲಹೆಯನ್ನು ನೀಡುತ್ತದೆ;

ಬಿ. ನೀತಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯಲ್ಲಿ ಆಂತರಿಕ ಪರಿಣತಿಯನ್ನು ಅಭಿವೃದ್ಧಿಪಡಿಸುವುದು. ಸಿ. ಸಾರ್ವಜನಿಕ ವಲಯದ ತಂತ್ರಜ್ಞಾನದ ಸುಸ್ಥಿರತೆಯನ್ನು ಸಾರ್ಜನಿಕ ಉದ್ಯಮಗಳು, ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ / ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಅನುಷ್ಠಾನ ತಂತ್ರ ಮತ್ತು ಗುರಿಗಳು

ತಂತ್ರಜ್ಞಾನ ಗುಂಪಿನ ಕೆಲಸದ ಮೂರು ಸ್ತಂಭಗಳೆಂದರೆ:

I. ನೀತಿ ಬೆಂಬಲ

II. ಖರೀದಿ ಬೆಂಬಲ

III. ಸಂಶೋಧನೆ ಮತ್ತು ಅಭಿವೃದ್ಧಿ ಪ್ರಸ್ತಾಪಗಳಿಗೆ ಬೆಂಬಲ ತಂತ್ರಜ್ಞಾನ ಗುಂಪು ಖಾತ್ರಿಪಡಿಸಿಕೊಳ್ಳಬೇಕಾದ್ದು -

i. ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬೆಳವಣಿಗೆ ಮತ್ತು ಭಾರತೀಯ ಉದ್ಯಮದ ಸುಸ್ಥಿರ ಅಭಿವೃದ್ಧಿಗೆ ಇತ್ತೀಚಿನ ತಂತ್ರಜ್ಞಾನಗಳ ಪರಿಣಾಮಕಾರಿ, ಸುರಕ್ಷಿತ ಮತ್ತು ಸಂದರ್ಭಾನುಸಾರ ಬಳಕೆಗೆ ಸೂಕ್ತ ನೀತಿಗಳು ಹಾಗೂ ಕಾರ್ಯತಂತ್ರಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು.

ii. ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನಗಳ ಸಂಶೋಧನೆಗಾಗಿ ಆದ್ಯತೆಗಳು ಮತ್ತು ಕಾರ್ಯತಂತ್ರಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವುದು.

iii. ಭಾರತದಾದ್ಯಂತ ಲಭ್ಯವಿರುವ ಹಾಗೂ ಸ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಉತ್ಪನ್ನಗಳ ಪರಿಷ್ಕರಿಸಿದ ನಕ್ಷೆಯನ್ನು ನಿರ್ವಹಿಸುವುದು.

iv. ಆಯ್ದ ಪ್ರಮುಖ ತಂತ್ರಜ್ಞಾನಗಳಿಗಾಗಿ ದೇಶೀಯ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದು v. ತಂತ್ರಜ್ಞಾನ ಪೂರೈಕೆದಾರ ಮತ್ತು ಖರೀದಿ ತಂತ್ರದ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು;

vi. ಎಲ್ಲಾ ಸಚಿವಾಲಯಗಳು ಹಾಗೂ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ನೀತಿಯಲ್ಲಿ ಆಂತರಿಕ ಪರಿಣತಿಯನ್ನು ಅಭಿವೃದ್ಧಿಪಡಿಸಲು ಮತ್ತು ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಈ ನಿಟ್ಟಿನಲ್ಲಿ ತರಬೇತಿ ಮತ್ತು ಸಾಮರ್ಥ್ಯವೃದ್ಧಿಗೆ ಒಂದು ವಿಧಾನವನ್ನು ಅಭಿವೃದ್ಧಿಪಡಿಸುವುದು.

vii. ಸಾರ್ವಜನಿಕ ಉದ್ಯಮಗಳು / ಪ್ರಯೋಗಾಲಯಗಳಲ್ಲಿ ಸಾರ್ವಜನಿಕ ವಲಯದ ತಂತ್ರಜ್ಞಾನದ ಸುಸ್ಥಿರತೆಗಾಗಿ ನೀತಿಗಳನ್ನು ರೂಪಿಸುವುದು ಮತ್ತು ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಕಂಪನಿಗಳೊಂದಿಗೆ ಹಲವು ಕ್ಷೇತ್ರಗಳ ನಡುವೆ ಸಹಯೋಗ ಮತ್ತು ಸಂಶೋಧನಾ ಮೈತ್ರಿಗಳನ್ನು ಪ್ರೋತ್ಸಾಹಿಸುವುದು.

viii. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಪ್ರಸ್ತಾಪಗಳ ಪರಿಶೀಲನೆಗೆ ಅನ್ವಯಿಸಲು ಮಾನದಂಡಗಳು ಮತ್ತು ಸಾಮಾನ್ಯ ಶಬ್ದಕೋಶಗಳನ್ನು ರೂಪಿಸುವುದು.

ಹಿನ್ನೆಲೆ

ತಂತ್ರಜ್ಞಾನ ಕ್ಷೇತ್ರದಲ್ಲಿ ಐದು ಪ್ರಮುಖ ವಿಷಯಗಳಿವೆ ಅವುಗಳೆಂದರೆ: (ಎ) ತಂತ್ರಜ್ಞಾನದ ಅಭಿವೃದ್ಧಿಗೆ ನೀರಸ ವಿಧಾನಗಳು (ಬಿ) ತಂತ್ರಜ್ಞಾನದ ಮಾನದಂಡಗಳನ್ನು ಅಭಿವೃದ್ಧಿಪಡಿಸದೇ ಇರುವುದು ಅಥವಾ ಅನ್ವಯಿಸದಿರುವುದು (ಸಿ) ಉಭಯ ಬಳಕೆಯ ತಂತ್ರಜ್ಞಾನಗಳು ಅತ್ಯುತ್ತಮವಾಗಿ ವಾಣಿಜ್ಯೀಕರಣಗೊಳ್ಳದಿರುವುದು ( ಡಿ) ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಪ್ರಯತ್ನಗಳಿಗೆ ಹೊಂದಿಕೆಯಾಗದ ಆರ್ & ಡಿ ಕಾರ್ಯಕ್ರಮಗಳು (ಇ) ಸಮಾಜ ಮತ್ತು ಉದ್ಯಮದಲ್ಲಿನ ಅನ್ವಯಗಳಿಗೆ ಮುಖ್ಯವಾದ ತಂತ್ರಜ್ಞಾನಗಳ ಮ್ಯಾಪಿಂಗ್ ಅಗತ್ಯವಿರುವುದು. ತಂತ್ರಜ್ಞಾನ ಗುಂಪಿನ ರಚನೆಯು ಈ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವಾಗಿದೆ.


(Release ID: 1603809) Visitor Counter : 331