ಪ್ರಧಾನ ಮಂತ್ರಿಯವರ ಕಛೇರಿ

ಗಾಂಧಿನಗರದಲ್ಲಿ ವಲಸೆ ಪ್ರಭೇದದ ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತ ಸಮಾವೇಶದ  13 ನೇ ಆಡಳಿತ ಮಂಡಳಿ (ಸಿಒಪಿ)ಯನ್ನು  ಪ್ರಧಾನಮಂತ್ರಿಯವರು ಉದ್ಘಾಟಿಸಿದರು

Posted On: 17 FEB 2020 1:19PM by PIB Bengaluru

ಗಾಂಧಿನಗರದಲ್ಲಿ ವಲಸೆ ಪ್ರಭೇದದ ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತ ಸಮಾವೇಶದ  13 ನೇ ಆಡಳಿತ ಮಂಡಳಿ (ಸಿಒಪಿ)ಯನ್ನು  ಪ್ರಧಾನಮಂತ್ರಿಯವರು ಉದ್ಘಾಟಿಸಿದರು

 

ನಿಗಧಿತ ಅವಧಿಗಿಂತ ಎರಡು ವರ್ಷಗಳ ಮೊದಲೇ  ಭಾರತವು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿತು: ಪ್ರಧಾನಿ

ಭಾರತವು ಮೈಕ್ರೋ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ಸಮಸ್ಯೆಯನ್ನು ಬಗೆಪರಿಹರಿಸಲು   ಮರೈನ್ ಟರ್ಟಲ್ ಪಾಲಿಸಿ (ಕಡಲ ಆಮೆ ನೀತಿ) ಮತ್ತು ಸಾಗರ ಸ್ಟ್ರಾಂಡಿಂಗ್ ನಿರ್ವಹಣಾ ನೀತಿಯನ್ನು ಪ್ರಾರಂಭಿಸಲಿದೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಗಾಂಧಿನಗರದಲ್ಲಿ ವಲಸೆ ಪ್ರಭೇದದ ವನ್ಯಜೀವಿಗಳ ಸಂರಕ್ಷಣೆ ಕುರಿತ ಸಮಾವೇಶದ  13 ನೇ ಆಡಳಿತ ಮಂಡಳಿ (ಸಿಒಪಿ)ಯನ್ನು  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರುಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿದೆ.  ವಿಶ್ವದ 2.4% ಭೂಪ್ರದೇಶ ಹೊಂದಿರುವ ಭಾರತ ದೇಶವು,  ನಮಗೆ ಈವರೆಗೆ ತಿಳಿದಿರುವ ಜಾಗತಿಕ ಜೀವವೈವಿಧ್ಯತೆಯ ಸುಮಾರು 8% ನಷ್ಟು ಕೊಡುಗೆಯನ್ನು  ನೀಡುತ್ತಿದೆ ಎಂದು ಅವರು ಹೇಳಿದರು.  ಅನಾದಿ ಕಾಲದಿಂದಲೂವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಯು ಭಾರತದ ಸಾಂಸ್ಕೃತಿಕ ನೀತಿಯ ಒಂದು ಭಾಗವಾಗಿದೆ,   ಇದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಪ್ರೋತ್ಸಾಹಿಸುತ್ತದೆ.  " ಗಾಂಧೀಜಿ ಯವರಿಂದ ಪ್ರೇರಿತರಾಗಿಅಹಿಂಸಾ ನೀತಿ ಮತ್ತು ಪ್ರಾಣಿ ಮತ್ತು ಪ್ರಕೃತಿಯ ಸಂರಕ್ಷಣೆಯ ನೀತಿಗಳನ್ನು ಭಾರತದ ಸಂವಿಧಾನದಲ್ಲಿ ಸೂಕ್ತವಾಗಿ ಪ್ರತಿಪಾದಿಸಲಾಗಿದೆ.  ಇದು ಹಲವಾರು ಕಾನೂನುಗಳು ಮತ್ತು ಶಾಸನಗಳಲ್ಲಿ ವ್ಯಕ್ತವಾಗಿದೆ." ಎಂದು ಅವರು ಹೇಳಿದರು.

ಭಾರತದ ಅರಣ್ಯ ವ್ಯಾಪ್ತಿಯ ಹೆಚ್ಚಳದ ಬಗ್ಗೆ ಪ್ರಧಾನಮಂತ್ರಿಯವರು  ಮಾತನಾಡಿದರು,  ಇದು ಪ್ರಸ್ತುತ ದೇಶದ ಒಟ್ಟು ಭೌಗೋಳಿಕ ಪ್ರದೇಶದ 21.67% ರಷ್ಟಿದೆ. ಸಂರಕ್ಷಣೆಸುಸ್ಥಿರ ಜೀವನಶೈಲಿ ಮತ್ತು ಹಸಿರು ಅಭಿವೃದ್ಧಿ ಮಾದರಿಯ ಮೂಲಕ ಭಾರತವು "ಹವಾಮಾನ ಕ್ರಮ" ದ ಕಾರಣವನ್ನು ಹೇಗೆ ಸಾಧಿಸುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿಎಲೆಕ್ಟ್ರಿಕ್ ವಾಹನಗಳುಸ್ಮಾರ್ಟ್ ನಗರಗಳು ಮತ್ತು ನೀರಿನ ಸಂರಕ್ಷಣೆಯತ್ತ ತಳ್ಳುವುದನ್ನು ಅವರು ಉಲ್ಲೇಖಿಸಿದ್ದಾರೆ. ಪ್ಯಾರಿಸ್ ಒಪ್ಪಂದದ ಗುರಿಯೊಂದಿಗೆ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವಂತೆ ಅನುಸರಿಸುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂದು ಅವರು ಹೇಳಿದರು.

ವಿಶೇಷ ಗಮನಕೊಟ್ಟ ಪ್ರಭೇದಗಳ  ಸಂರಕ್ಷಣಾ ಯೋಜನೆಗಳು / ಕಾರ್ಯಕ್ರಮಗಳು ಹೇಗೆ ಉತ್ತಮ ಫಲಿತಾಂಶಗಳನ್ನು ತಂದಿವೆ ಎನ್ನುವುದನ್ನು ಪ್ರಧಾನಮಂತ್ರಿಯವರು ವಿವರಿಸಿದರು  " ಹುಲಿ ಮೀಸಲು ಪ್ರದೇಶಗಳ ಸಂಖ್ಯೆಯು ಅದರ ರಚನೆಯ ವರ್ಷದಿಂದ 9 ರಿಂದ ಪ್ರಸ್ತುತ 50 ಕ್ಕೆ ಏರಿದೆ.  ಈಗ ಭಾರತವು ಸುಮಾರು 2970 ಹುಲಿಗಳನ್ನು  ಹೊಂದಿದೆ.  ನಿಗಧಿತ ಅವಧಿ 2022 ರಕ್ಕಿಂತ ಎರಡು ವರ್ಷಗಳ ಮೊದಲೇ ಭಾರತವು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದೆ " ಎಂದು ಅವರು ತಿಳಿಸಿದರು.   ಸಮಾವೇಶದಲ್ಲಿ ಹಾಜರಿರುವ ಹುಲಿಗಳಿರುವ ದೇಶದವರಿಗೆ ಮತ್ತು ಇತರರಿಗೆ   ತಮ್ಮ ತಮ್ಮ ಕಾರ್ಯವೈಖರಿಗಳನ್ನು ಹಂಚಿಕೊಳ್ಳುವ ಮೂಲಕ ಹುಲಿ ಸಂರಕ್ಷಣೆಯನ್ನು ಬಲಪಡಿಸಲು ಒಗ್ಗೂಡಬೇಕೆಂದು ಕರೆ ನೀಡಿದರು .  ಏಷ್ಯಾದ ಆನೆಗಳ ಸಂರಕ್ಷಣೆಗಾಗಿ ಭಾರತ ಕೈಗೊಂಡ ಉಪಕ್ರಮಗಳ ಕುರಿತು ಮಾತನಾಡಿದರು. ಹಿಮ ಚಿರತೆಏಷಿಯಾಟಿಕ್ ಸಿಂಹಒಂದು ಕೊಂಬಿನ ಖಡ್ಗಮೃಗ ಮತ್ತು ಗ್ರೇಟ್ ಇಂಡಿಯನ್ ಬಸ್ಟರ್ಡ್ ಅನ್ನು ರಕ್ಷಿಸುವ ಪ್ರಯತ್ನಗಳ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದರು.  ಗ್ರೇಟ್ ಇಂಡಿಯನ್ ಬಸ್ಟರ್ಡ್ಗ್ ಪಕ್ಷಿಗೆ  ಗೌರವ ಸೂಚಕವಾಗಿ ಜಿಬಿ – ದಿ ಗ್ರೇಟ್,  ಜಿ ಐಬಿಐ- ದಿ ಗ್ರೇಟ್ ’ ಮ್ಯಾಸ್ಕಾಟ್ ಅನ್ನು ರೂಪಿಸಲಾಗಿದೆ  ಎಂದು ಅವರು ಹೇಳಿದರು.

ಸಿ.ಎಂ.ಎಸ್  ಸಿಓಪಿ  13 ಲಾಂಛನವು  ದಕ್ಷಿಣ ಭಾರತದ ಸಾಂಪ್ರದಾಯಿಕ ಕೋಲಂ’ ನಿಂದ ಸ್ಫೂರ್ತಿ ಪಡೆದಿದೆ. ಇದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂದರ್ಭದಲ್ಲಿ ಆಳವಾದ ಮಹತ್ವವನ್ನು ಹೊಂದಿದೆ. "ಅತಿಥಿ ದೇವೋ ಭವ" ಎಂಬ ಮಂತ್ರವು ಸಿಎಮ್ಎಸ್ ಸಿಒಪಿ 13 ರ ವಿಷಯದಲ್ಲಿ  ಪ್ರತಿಬಿಂಬಿಸಲಾಗಿದೆ ಎಂದು ಅವರು ಹೇಳಿದರು: "ವಲಸೆ ಪ್ರಭೇದಗಳು ಪ್ರಪಂಚವನ್ನು ಜೋಡಿಸುತ್ತವೆ ಮತ್ತು ಒಟ್ಟಿಗೆ ನಾವು ಅವುಗಳನ್ನು ಮನೆಗೆ ಸ್ವಾಗತಿಸುತ್ತೇವೆ."

ಮುಂಬರುವ ಮೂರು ವರ್ಷಗಳ ಕಾಲ ಭಾರತ ಈ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಲಿದೆ. ಅಧ್ಯಕ್ಷತೆಯ ಅವಧಿಯಲ್ಲಿಭಾರತವು ಭಾರತದ ಕೆಲವು ಆದ್ಯತೆಯ ಕ್ಷೇತ್ರಗಳನ್ನು ವಿವರಿಸಿದರು 

ಭಾರತವು ವಲಸೆ ಹಕ್ಕಿಗಳಿಗೆ ಮಧ್ಯ ಏಷ್ಯಾದ ಹಾರಾಟದ ಮಾರ್ಗದ ಒಂದು ಭಾಗವಾಗಿದೆ ಎಂದು ಗಮನಿಸಿದ ಪ್ರಧಾನಿಯವರುಮಧ್ಯ ಏಷ್ಯಾದ  ಹಾರುವ ಮಾರ್ಗ ಮತ್ತು ಅವುಗಳ ಆವಾಸಸ್ಥಾನಗಳ ಉದ್ದಕ್ಕೂ ಪಕ್ಷಿಗಳನ್ನು ಸಂರಕ್ಷಿಸುವ ಉದ್ದೇಶದಿಂದ  ಭಾರತವು ವಲಸೆ ಹಕ್ಕಿಗಳ ಸಂರಕ್ಷಣೆಗಾಗಿ ಮಧ್ಯ ಏಷ್ಯಾದ  ಹಾರುವ ಮಾರ್ಗದಲ್ಲಿ  ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಹೇಳಿದರು. "ಈ ನಿಟ್ಟಿನಲ್ಲಿ ಇತರ ದೇಶಗಳಿಗೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ಭಾರತಕ್ಕೆ ಸಂತೋಷವಾಗುತ್ತದೆ. ಎಲ್ಲಾ ಮಧ್ಯ ಏಷ್ಯಾದ ಹಾರಾಟ ಮಾರ್ಗದ ಶ್ರೇಣಿಯಲ್ಲಿ ಇರುವ ದೇಶಗಳ ಸಕ್ರಿಯ ಸಹಕಾರದೊಂದಿಗೆ ವಲಸೆ ಹಕ್ಕಿಗಳ ಸಂರಕ್ಷಣೆಯನ್ನು ಹೊಸ ದೃಷ್ಟಾಂತಕ್ಕೆ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.

ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆ ದೇಶಗಳೊಂದಿಗಿನ ಒಡನಾಟವನ್ನು ಬಲಪಡಿಸಲು ಭಾರತ ಪ್ರಸ್ತಾಪಿಸಿದೆ ಎಂದು ಪ್ರಧಾನಿ ಹೇಳಿದರು. ಇದು ಇಂಡೋ ಪೆಸಿಫಿಕ್ ಓಷನ್ ಇನಿಶಿಯೇಟಿವ್ (ಐಪಿಒಐ) ನೊಂದಿಗೆ ಬೆರೆಯಲಿದ್ದುಇದರಲ್ಲಿ ಭಾರತ ಮುಂದಾಳತ್ವ ವಹಿಸಲಿದೆ ಎಂದು ಅವರು ಹೇಳಿದರು.  2020 ರ ವೇಳೆಗೆ ಭಾರತ ತನ್ನ ಕಡಲ ಆಮೆ ನೀತಿ ಮತ್ತು ಸಾಗರ ಸ್ಟ್ರಾಂಡಿಂಗ್ ನಿರ್ವಹಣಾ ನೀತಿಯನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.  ಇದು ಮೈಕ್ರೋಪ್ಲ್ಯಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ ಎಂದು ಅವರು ಹೇಳಿದರು.  ಏಕ ಬಳಕೆಯ ಪ್ಲಾಸ್ಟಿಕ್‌ಗಳು ಪರಿಸರ ಸಂರಕ್ಷಣೆಗೆ ಸವಾಲಾಗಿವೆ ಮತ್ತು ಭಾರತದಲ್ಲಿ ನಾವು ಅದರ ಬಳಕೆಯನ್ನು ಕಡಿಮೆ ಮಾಡಲು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಭಾರತದಲ್ಲಿನ ಹಲವಾರು ಸಂರಕ್ಷಿತ ಪ್ರದೇಶಗಳು ನೆರೆಯ ರಾಷ್ಟ್ರಗಳ ಸಂರಕ್ಷಿತ ಪ್ರದೇಶಗಳೊಂದಿಗೆ ಸಾಮಾನ್ಯ ಗಡಿಗಳನ್ನು ಹಂಚಿಕೊಳ್ಳುತ್ತವೆ ಎಂದು ಪ್ರಸ್ತಾಪಿಸಿದ ಪ್ರಧಾನಿ, ‘ಟ್ರಾನ್ಸ್ ಬೌಂಡರಿ ಸಂರಕ್ಷಿತ ಪ್ರದೇಶಗಳನ್ನು’ ಸ್ಥಾಪಿಸುವ ಮೂಲಕ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸಹಕಾರವು ಅತ್ಯಂತ ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಸುಸ್ಥಿರ ಅಭಿವೃದ್ಧಿಯ ಹಾದಿಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು,  ಪರಿಸರಾತ್ಮಕವಾಗಿ  ದುರ್ಬಲವಾಗಿರುವ ಪ್ರದೇಶಗಳಲ್ಲಿ ಅಭಿವೃದ್ಧಿಗೆ ತಕ್ಕಂತೆ   ಮೂಲಸೌಕರ್ಯ ನೀತಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದನ್ನು ಪ್ರಸ್ತಾಪಿಸಿದರು.

ಸಬ್ಕಾ ಸಾಥ್ಸಬ್ಕಾ ವಿಕಾಸ್ಸಬ್ಕಾ ವಿಶ್ವಾಸ್ “ ನ  ಉತ್ಸಾಹದಲ್ಲಿದೇಶದ ಅರಣ್ಯ ಪ್ರದೇಶದ ಸಮೀಪದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರನ್ನು ಈಗ ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳು ಮತ್ತು ಪರಿಸರ ಅಭಿವೃದ್ಧಿ ಸಮಿತಿಗಳ ರೂಪದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಸಂಬಂಧಿಸಿದಂತೆ ಹೇಗೆ ಸಂಯೋಜಿಸಲಾಗಿದೆ ಎನ್ನುವುದನ್ನು ಪ್ರಧಾನಮಂತ್ರಿಯವರು ವಿವರಿಸಿದರು.

***



(Release ID: 1603524) Visitor Counter : 147