ಪ್ರಧಾನ ಮಂತ್ರಿಯವರ ಕಛೇರಿ

2020ರ ಫೆಬ್ರವರಿ 16ರಂದು ವಾರಾಣಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

Posted On: 14 FEB 2020 2:09PM by PIB Bengaluru

2020ರ ಫೆಬ್ರವರಿ 16ರಂದು ವಾರಾಣಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

ರಾಷ್ಟ್ರಕ್ಕೆ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಸಮರ್ಪಣೆ ಹಾಗೂ ಪುತ್ಥಳಿಯ ಅನಾವರಣ

3 ಜ್ಯೋತಿರ್ಲಿಂಗ ಕ್ಷೇತ್ರಗಳಾದ – ವಾರಾಣಸಿ, ಉಜ್ಜೈನ್ ಮತ್ತು ಓಂಕಾರೇಶ್ವರ ಸಂಪರ್ಕಸಲಿರುವ ಮಹಾಕಾಲ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ

ವಾರಾಣಸಿಯಲ್ಲಿ 430 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ/ ಸಮರ್ಪಣೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ 2020ರ ಫೆಬ್ರವರಿ 16ರಂದು ಒಂದು ದಿನದ ಭೇಟಿ ನೀಡುತ್ತಿದ್ದಾರೆ.

ಪ್ರಧಾನಮಂತ್ರಿಯವರು, ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭದ ಸಮಾರೋಪದಲ್ಲಿ ಭಾಗವಹಿಸುವ ಕಾರ್ಯಕ್ರಮವಿದೆ. ಶ್ರೀ ಮೋದಿ ಅವರು 19 ಭಾಷೆಗಳಿಗೆ ಭಾಷಾಂತರವಾಗಿರುವ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದ ಆವೃತ್ತಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು ಗ್ರಂಥದ ಮೊಬೈಲ್ ಆಪ್ ಅನ್ನು ಸಹ ಬಿಡುಗಡೆ ಮಾಡುವರು ಎಂದು ಗುರುಕುಲದ ಮುಖ್ಯಸ್ಥರಾದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದ್ದಾರೆ.

ನಂತರ ಶ್ರೀ ನರೇಂದ್ರ ಮೋದಿ ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 63 ಅಡಿ ಎತ್ತರದ ಪಂಚಲೋಹದ ಪುತ್ಥಳಿಯನ್ನೂ ಅನಾವರಣ ಮಾಡಲಿದ್ದಾರೆ. ಇದು ದೇಶದಲ್ಲಿರು ಈ ನಾಯಕನ ಅತಿ ಎತ್ತರದ ಪುತ್ಥಳಿಯಾಗಿದೆ. ಕಳೆದ ಒಂದು ವರ್ಷದಿಂದ 200ಕ್ಕೂ ಹೆಚ್ಚು ಶಿಲ್ಪಿಗಳು ಹಗಲಿರುಳು ಶ್ರಮಿಸಿ ಈ ಪುತ್ಥಳಿ ರೂಪಿಸಿದ್ದಾರೆ.

ಸ್ಮಾರಕ ಕೇಂದ್ರವು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನ ಮತ್ತು ಕಾಲದ ಕೆತ್ತನೆಗಳನ್ನು ಸಹ ಹೊಂದಿದೆ. ಕಳೆದ ಒಂದು ವರ್ಷದಿಂದ ಸುಮಾರು 30 ಒಡಿಶಾ ಕುಶಲಕರ್ಮಿಗಳು ಮತ್ತು ಕಲಾವಿದರು ಈ ಯೋಜನೆಯಲ್ಲಿ ಶ್ರಮಿಸಿದ್ದಾರೆ.

ನಂತರ ಪ್ರಧಾನಮಂತ್ರಿಯವರು ಸಾರ್ವಜನಿಕ ಸಮಾರಂಭದಲ್ಲಿ ರಾಷ್ಟ್ರಕ್ಕೆ 30ಕ್ಕೂ ಹೆಚ್ಚು ಯೋಜನೆಗಳನ್ನು ಸಮರ್ಪಿಸಲಿದ್ದಾರೆ. ಇದರಲ್ಲಿ ಕಾಶಿ ಹಿಂದೂ ವಿಶ್ವವಿದ್ಯಾಲಯ(ಬಿ.ಎಚ್.ಯು.)ದಲ್ಲಿ 430 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಮತ್ತು ಬಿ.ಎಚ್.ಯುನಲ್ಲಿ 74 ಹಾಸಿಗೆಗಳ ಮನೋವೈದ್ಯಕೀಯ ಚಿಕಿತ್ಸಾಲಯವೂ ಸೇರಿದೆ.

ಪ್ರಧಾನಮಂತ್ರಿಯವರು ಐಆರ್.ಸಿಟಿಸಿಯ ಮಹಾಕಾಲ ಎಕ್ಸ್ ಪ್ರೆಸ್ ಗೆ ವಿಡಿಯೋ ಸಂಪರ್ಕದ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ಮೂರು ಜ್ಯೋತಿರ್ಲಿಂಗ ಕ್ಷೇತ್ರಗಳಾದ ವಾರಾಣಸಿ, ಉಜ್ಜೈನ್ ಮತ್ತು ಓಂಕಾರೇಶ್ವರವನ್ನು ಸಂಪರ್ಕಿಸಲಿದೆ. ಇದು ದೇಶದಲ್ಲಿ ರಾತ್ರಿ ಪ್ರಯಾಣದ ಪ್ರಥಮ ಖಾಸಗಿ ರೈಲು ಆಗಲಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎರಡು ದಿನಗಳ “ಕಾಶಿ ಏಕ್, ರೂಪ್ ಅನೇಕ್’ ವಸ್ತುಪ್ರದರ್ಶನವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಹಸ್ತಕಲಾ ಸಂಕುಲದಲ್ಲಿ ಉದ್ಘಾಟಿಸಲಿದ್ದಾರೆ. ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳಿಂದ ಆಗಮಿಸಿರುವ ಖರೀದಿದಾರರು ಮತ್ತು ಕುಶಲಕರ್ಮಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಲಿದ್ದಾರೆ. 'ಕಾಶಿ ಏಕ್ ರೂಪ್ ಅನೇಕ್'ನಲ್ಲಿ ಉತ್ತರ ಪ್ರದೇಶದ 100 ಕ್ಕೂ ಹೆಚ್ಚು ಕುಶಲಕರ್ಮಿಗಳ ಉತ್ಪನ್ನಗಳನ್ನು ಪ್ರದರ್ಶನಗೊಳ್ಳಲಿದೆ. ಈ ಸಂದರ್ಭದಲ್ಲಿ ಕಲಾವಿದರು ಮತ್ತು ನೇಕಾರರು ದೊಡ್ಡ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಸೂಕ್ತವಾಗುವಂತೆ ತಮ್ಮ ಸರಕಿನ ಗುಣಮಟ್ಟ ಮತ್ತು ಬ್ರ್ಯಾಂಡಿಂಗ್ ಅನ್ನು ಸುಧಾರಿಸುವ ಕೌಶಲ್ಯಗಳನ್ನು ಸಹ ಪಡೆದುಕೊಳ್ಳಲಿದ್ದಾರೆ..

 

******


(Release ID: 1603499) Visitor Counter : 196