ಸಂಪುಟ
ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮತ್ತು ಐಸ್ ಲ್ಯಾಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
Posted On:
12 FEB 2020 3:54PM by PIB Bengaluru
ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮತ್ತು ಐಸ್ ಲ್ಯಾಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಐಸ್ ಲ್ಯಾಂಡ್ ನಡುವೆ ಮೀನುಗಾರಿಕೆ ಕ್ಷೇತ್ರದಲ್ಲಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2019ರ ಸೆಪ್ಟೆಂಬರ್ 10ರಂದು ಅಂಕಿತ ಹಾಕಲಾಗಿತ್ತು.
ತಿಳಿವಳಿಕೆ ಒಪ್ಪಂದದ ಪ್ರಮುಖಾಂಶಗಳು:
- ತೀರ ಪ್ರದೇಶ ಮತ್ತು ಆಳ ಸಮುದ್ರದ ಮೀನುಗಾರಿಕೆ ಕ್ಷೇತ್ರದಲ್ಲಿ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರ ವಿನಿಮಯ ಮತ್ತು ಅವರ ಸೂಕ್ತ ನಿಯೋಜನೆಗಾಗಿ ಸೌಲಭ್ಯಗಳ ಸೃಷ್ಟಿ;
- ಪ್ರಮುಖ ಮೀನುಗಾರಿಕೆ ಸಂಸ್ಥೆಗಳಿಂದ ಆಧುನಿಕ ಮೀನುಗಾರಿಕೆ ನಿರ್ವಹಣೆ ಮತ್ತು ಮೀನು ಸಂಸ್ಕರಣೆ ಕ್ಷೇತ್ರಗಳಲ್ಲಿ ವಿವಿಧ ನಿರ್ವಹಣಾ ಅಂಶಗಳ ಕುರಿತಂತೆ ಮೀನುಗಾರಿಕೆ ವೃತ್ತಿಪರರಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಲು
- ವೈಜ್ಞಾನಿಕ ಸಾಹಿತ್ಯ ಸಂಶೋಧನಾ ಆವಿಷ್ಕಾರಗಳ ಫಲಶ್ರುತಿ ಮತ್ತು ಇತರ ಮಾಹಿತಿಗಳ ವಿನಿಮಯ.
- ಮೀನುಗಾರಿಕೆಯ ಭವಿಷ್ಯವನ್ನು ಅಧ್ಯಯನ ಮಾಡಲು ತಜ್ಞರು / ಪರಿಣತಿಯ ವಿನಿಮಯ. ಉದ್ಯಮಶೀಲತೆ ಅಭಿವೃದ್ಧಿಗಾಗಿ ಮುಕ್ತ ಸಮುದ್ರ ಮೀನುಗಾರಿಕೆಯ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಲು.
ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಐಸ್ ಲ್ಯಾಂಡ್ ನಡುವಿನ ಹಾಲಿ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಇದು ದ್ವಿಪಕ್ಷೀಯ ವಿಚಾರಗಳು ಸೇರಿದಂತೆ ಮೀನುಗಾರಿಕೆಯಲ್ಲಿ ಸಹಕಾರ ಮತ್ತು ಸಮಾಲೋಚನೆಯನ್ನು ಹೆಚ್ಚಿಸುತ್ತದೆ.
*****
(Release ID: 1602950)
Visitor Counter : 180