ಪ್ರಧಾನ ಮಂತ್ರಿಯವರ ಕಛೇರಿ

ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 05 FEB 2020 2:00PM by PIB Bengaluru

ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯವರ ಭಾಷಣ

 

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದುಬಹಳ ಮುಖ್ಯವಾದ ಮತ್ತು ಐತಿಹಾಸಿಕ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ನಾನು ನಿಮ್ಮೆಲ್ಲರ ಮುಂದೆ ಬಂದಿದ್ದೇನೆ.

ಈ ವಿಷಯವು ನಮ್ಮ ಕೋಟ್ಯಂತರ ಸಹೋದರ ಸಹೋದರಿಯರ ಹೃದಯಕ್ಕೆ ಹತ್ತಿರವಾಗಿದೆ. ಮತ್ತು ಈ ಬಗ್ಗೆ ಮಾತನಾಡಲು ನನಗೆ  ಹಮ್ಮೆಯಿದೆ.

ಈ ವಿಷಯವು ಶ್ರೀ ರಾಮ ಜನ್ಮ  ಭೂಮಿಗೆ  ಸೇರಿದುದಾಗಿದೆ  ಮತ್ತು ಭಗವಾನ್ ಶ್ರೀ ರಾಮರ ಭವ್ಯವಾದ ದೇವಾಲಯವನ್ನು ಅಯೋಧ್ಯೆಯಲ್ಲಿ ಅವರ ಜನ್ಮಸ್ಥಳದಲ್ಲಿ ನಿರ್ಮಿಸುವ ಕುರಿತಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ತಾರೀಖು 9 ನವೆಂಬರ್ 2019 ರಂದು, 550 ನೇ ಪ್ರಕಾಶ್ ಪರ್ವೋಫ್ ಗುರುನಾನಕದೇವ್ ಜಿ ಅವರ ಸಂದರ್ಭದಲ್ಲಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ರಾಷ್ಟ್ರಕ್ಕೆ ಅರ್ಪಿಸುವುದ್ದಕ್ಕಾಗಿ ನಾನು ಪಂಜಾಬಿನಲ್ಲಿದ್ದೆ.  ಆ ಭಕ್ತಿಪೂರ್ವ ವಾತಾವರಣದಲ್ಲಿಯೇರಾಮ ಜನ್ಮ ಭೂಮಿ ಯ ವಿಷಯದ ಬಗ್ಗೆ ದೇಶದ ಅತ್ಯುನ್ನತ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಬಗ್ಗೆ ನನಗೆ ತಿಳಿಯಿತು.

ಈ ತೀರ್ಪಿನಲ್ಲಿಮಾನ್ಯ ಸರ್ವೋಚ್ಛ ನ್ಯಾಯಾಲಯವು ರಾಮ ಜನ್ಮ ಭೂಮಿಯಲ್ಲಿನ ವಿವಾದಿತ ಭೂಮಿಯ ಒಳ ಮತ್ತು ಹೊರ ಪ್ರಾಂಗಣವು ಭಗವಾನ್ ಶ್ರೀ ರಾಮ ಲಲ್ಲ ವಿರಾಜ್ಮಾನ್ ಅವರಿಗೆ ಸೇರಿದೆ ಎಂದು ತೀರ್ಮಾನಿಸಿತು.

ಮಾನ್ಯ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪಿನಲ್ಲಿಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪರಸ್ಪರ ಸಮಾಲೋಚಿಸಿ 5 ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ನೀಡಲಿದೆ ಎಂದು ತಿಳಿಸಿತ್ತು.

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು ಬೆಳಿಗ್ಗೆ ನಡೆದ ಕೇಂದ್ರ ಸಚಿವ ಸಂಪುಟವು ಸರ್ವೋಚ್ಚ ನ್ಯಾಯಾಲಯದ  ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ಈ ಘನತೆವೆತ್ತ ಸದನದೊಂದಿಗೆ ಮತ್ತು ಇಡೀ ದೇಶದೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ,

ಸರ್ವೋಚ್ಚ ನ್ಯಾಯಾಲಯದ  ನಿರ್ದೇಶನಗಳಿಗೆ ಅನುಗುಣವಾಗಿಭಗವಾನ್ ಶ್ರೀ ರಾಮರ ಭವ್ಯವಾದ ದೇವಾಲಯವನ್ನು ಅವರ ಜನ್ಮಸ್ಥಳದಲ್ಲಿ ಮತ್ತು ಇತರ ಸಂಬಂಧಿತ ವಿಷಯಗಳಲ್ಲಿ ನಿರ್ಮಿಸಲು ನನ್ನ ಸರ್ಕಾರ ಸವಿವರವಾದ ಯೋಜನೆಯನ್ನು ಸಿದ್ಧಪಡಿಸಿದೆ.

ಸುಪ್ರೀಂ ಕೋರ್ಟ್ನ ಆದೇಶದಂತೆಸ್ವಾಯತ್ತ ಟ್ರಸ್ಟ್ ಒಂದನ್ನು ಸ್ಥಾಪಿಸುವ ಪ್ರಸ್ತಾಪ  - ಶ್ರೀ ರಾಮ್ ಜನ್ಮ ಭೂಮಿ ತೀರ್ಥ ಕ್ಷೇತ್ರವನ್ನು ಅಂಗೀಕರಿಸಲಾಗಿದೆ.

ಅಯೋಧ್ಯೆಯ ಭಗವಾನ್ ಶ್ರೀ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ಮತ್ತು ದೈವಿಕ ಶ್ರೀ ರಾಮ ದೇವಾಲಯವನ್ನು ನಿರ್ಮಿಸಲು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಈ ಟ್ರಸ್ಟ್ ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿರುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ  ನಿರ್ದೇಶನಗಳಿಗೆ ಅನುಗುಣವಾಗಿ ಮತ್ತು ವಿವರವಾದ ಸಮಾಲೋಚನೆ ಮತ್ತು ಚರ್ಚೆಗಳ ನಂತರಉತ್ತರ ಪ್ರದೇಶ ಸರ್ಕಾರಕ್ಕೆ 5 ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು.  ಇದಕ್ಕೆ ರಾಜ್ಯ ಸರ್ಕಾರವೂ ಸಮ್ಮತಿಸಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಭಗವಾನ್ ಶ್ರೀ ರಾಮನ ದೈವಿಕ ಹಿರಿಮೆಅಯೋಧ್ಯೆಯ ಐತಿಹಾಸಿಕ ಸನ್ನಿವೇಶ ಮತ್ತು ಅಯೋಧ್ಯ ಧಾಮದ ಬಗ್ಗೆ ಇರುವ ಧಾರ್ಮಿಕ್ ಶ್ರದ್ಧೆಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆಇವೆಲ್ಲವೂ ಭಾರತದ ಆತ್ಮಆದರ್ಶಗಳು ಮತ್ತು ನೈತಿಕತೆಯ ಅವಿಭಾಜ್ಯವಾಗಿವೆ.

ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನವರ ಭವ್ಯವಾದ ದೇವಾಲಯದ ನಿರ್ಮಾಣವನ್ನು ಗಮನದಲ್ಲಿಟ್ಟುಕೊಂಡುಪ್ರಸ್ತುತ ರಾಮ್ ಲಲ್ಲಾ ದರ್ಶನಕ್ಕಾಗಿ ಬರುವ ಯಾತ್ರಾರ್ಥಿಗಳ ಸಂಖ್ಯೆ ಮತ್ತು ಭವಿಷ್ಯದಲ್ಲಿ ಬರಲಿರುವ ಎಲ್ಲರನ್ನೂ ಮತ್ತು ಅವರ ಭಾವನೆಗಳನ್ನು ಪರಿಗಣಿಸಿಇನ್ನೂ ಒಂದು ಪ್ರಮುಖ ನಿರ್ಧಾರವನ್ನು ಸರ್ಕಾರದಿಂದ ತೆಗೆದುಕೊಳ್ಳಲಾಗಿದೆ.

ಅಯೋಧ್ಯಾ ಕಾಯ್ದೆಯಡಿಯಲ್ಲಿ  ಸ್ವಾಧೀನಪಡಿಸಿಕೊಂಡಿರುವ ಒಳ ಮತ್ತು ಹೊರ ಪ್ರಾಂಗಣ ಸೇರಿದಂತೆ ಸುಮಾರು 67.703 ಎಕರೆ ವಿಸ್ತೀರ್ಣವಿರುವ   ಸಂಪೂರ್ಣ ಭೂಮಿಯನ್ನು ಹೊಸದಾಗಿ ಸ್ಥಾಪಿಸಲಾದ ಟ್ರಸ್ಟ್ ಆದ  ಶ್ರೀ ರಾಮ್ ಜನ್ ಭೂಮಿ ತೀರ್ಥ ಕ್ಷೇತ್ರ” ಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ನನ್ನ ಸರ್ಕಾರ ತೆಗೆದುಕೊಂಡಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನವೆಂಬರ್ 9, 2019ರಂದು ರಾಮ ಜನ್ಮ ಭೂಮಿ ಯ ಬಗ್ಗೆ ಹೊರಬಿದ್ದ ತೀರ್ಪಿನ ನಂತರ ಭಾರತೀಯರು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಸಂಪೂರ್ಣ ನಂಬಿಕೆ ಇಟ್ಟುಕೊಂಡು ಹೆಚ್ಚಿನ ಪ್ರಬುದ್ಧತೆಯನ್ನು ಮೆರೆದರು.

ಇಂದು  ಈ ಸದನದಲ್ಲಿನಮ್ಮ ಭಾರತೀಯರ ಈ ಪ್ರಬುದ್ಧ ವರ್ತನೆಗಾಗಿ ನಾನು ವಂದಿಸುತ್ತೇನೆ.

ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯಗಳು ವಸುದೈವ  ಕುಟುಂಬಕಂ ” ಮತ್ತು ಸರ್ವೇ ಭವಂತು ಸುಖಿನಃ” ಎನ್ನುವ  ತತ್ತ್ವಗಳನ್ನು ನೀಡುತ್ತವೆ ಮತ್ತು ಈ ಮನೋಭಾವದೊಂದಿಗೆ ಮುಂದುವರಿಯಲು ನಮಗೆ ಪ್ರೇರಣೆ ನೀಡುತ್ತವೆ.

ಭಾರತದ ಎಲ್ಲಾ ಧರ್ಮದ ಜನರುಅವರು ಹಿಂದೂಗಳಾಗಿರಲಿಮುಸ್ಲಿಮರಾಗಿರಲಿಸಿಖ್ಖರಾಗಿರಲಿಕ್ರಿಶ್ಚಿಯನ್ನರಾಗಿರಲಿಬೌದ್ಧರಾಗಿರಲಿಪಾರ್ಸಿಗಳಾಗಿರಲಿ,  ಜೈನರಾಗಿರಲಿಎಲ್ಲರೂ   ಒಂದೇ ದೊಡ್ಡ ಕುಟುಂಬದ  ಸದಸ್ಯರು.

ನನ್ನ ಸರ್ಕಾರವು ಸಬ್ಕಾ ಸಾಥ್ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್” ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ  ಇದರಿಂದಾಗಿ ಈ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಅಭಿವೃದ್ಧಿ ಹೊಂದುತ್ತಾರೆಸಂತೋಷದಿಂದ ಮತ್ತು ಆರೋಗ್ಯವಾಗಿರುತ್ತಾರೆಸಮೃದ್ಧಿಯಾಗುತ್ತಾರೆ ಮತ್ತು ದೇಶವು ಪ್ರಗತಿ ಹೊಂದುತ್ತದೆ.

ಈ ಮಹತ್ವದ ಸಂದರ್ಭದಲ್ಲಿಅಯೋಧ್ಯೆಯಲ್ಲಿನ ಶ್ರೀ ರಾಮ್ ಧಾಮ್ ನವೀಕರಣವನ್ನು ಮತ್ತು ಭವ್ಯವಾದ ರಾಮರ ದೇವಾಲಯದ ನಿರ್ಮಾಣವನ್ನು ಈ ಘನತೆವೆತ್ತ ಸದನದ ಎಲ್ಲ ಸದಸ್ಯರು  ಒಕ್ಕೊರಲಿನಿಂದ ಬೆಂಬಲಿಸಬೇಕೆಂದು ನಾನು ಕರೆ ನೀಡುತ್ತಿದ್ದೇನೆ.

***



(Release ID: 1602227) Visitor Counter : 113