ಸಂಪುಟ
ಹೊಮಿಯೋಪಥಿ ರಾಷ್ಟ್ರೀಯ ಆಯೋಗ ವಿಧೇಯಕ 2019ರ ಅಧಿಕೃತ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
Posted On:
29 JAN 2020 2:03PM by PIB Bengaluru
ಹೊಮಿಯೋಪಥಿ ರಾಷ್ಟ್ರೀಯ ಆಯೋಗ ವಿಧೇಯಕ 2019ರ ಅಧಿಕೃತ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹೋಮಿಯೋಪಥಿ ಕೇಂದ್ರೀಯ ಮಂಡಳಿಯ (ಎಚ್.ಸಿ.ಸಿ.) ಕಾಯ್ದೆ 1973ಕ್ಕೆ ತಿದ್ದುಪಡಿ ತರುವ ಸಲುವಾಗಿ ಹೋಮಿಯೋಪಥಿ ರಾಷ್ಟ್ರೀಯ ಆಯೋಗ ವಿಧೇಯಕ 2019ರ ಅಧಿಕೃತ ತಿದ್ದುಪಡಿಗಳಿಗೆ ತನ್ನ ಅನುಮೋದನೆ ನೀಡಿದೆ. ಪ್ರಸ್ತುತ ಈ ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಇದೆ.
ತಿದ್ದುಪಡಿಗಳು:
· ಹೋಮಿಯೋಪಥಿ ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ನಿಯಂತ್ರಣ ಸುಧಾರಣೆಗಾಗಿ ಖಾತ್ರಿಗಾಗಿ
· ಸಾರ್ವಜನಿಕರ ಹಿತವನ್ನು ರಕ್ಷಿಸಲು ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ತರಲು. ಆಯೋಗವು ಕೈಗೆಟಕುವ ದರದ ಆರೋಗ್ಯ ಆರೈಕೆ ಸೇವೆಗಳು ದೇಶದ ಎಲ್ಲ ಭಾಗಗಳಲ್ಲಿ ದೊರಕುವಂತೆ ಪ್ರೋತ್ಸಾಹ ನೀಡುತ್ತದೆ.
ಹಿನ್ನೆಲೆ:
ಹೊಮಿಯೋಪಥಿ ಕೇಂದ್ರೀಯ ಮಂಡಳಿ (ಎಚ್.ಸಿ.ಸಿ.) ಕಾಯ್ದೆ 1973ನ್ನು ಹೋಮಿಯೋಪಥಿಯ ಶಿಕ್ಷಣ ಮತ್ತು ವೈದ್ಯಸೇವಾವೃತ್ತಿ ನಿಯಂತ್ರಣಕ್ಕಾಗಿ, ಹೋಮಿಯೋಪಥಿಯ ಕೇಂದ್ರೀಯ ದಾಖಲೆ ಪುಸ್ತಕ ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ವಿಷಯಗಳಿಗಳ ನಿರ್ವಹಣೆಗಾಗಿ ಹೋಮಿಯೋಪಥಿಯ ಕೇಂದ್ರೀಯ ಮಂಡಳಿ ಸ್ಥಾಪಿಸುವ ಸಲುವಾಗಿ ರೂಪಿಸಲಾಗಿದೆ. ಈ ಕಾಯ್ದೆ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರ ಸ್ವರೂಪದಲ್ಲೇ ರೂಪಿಸಲಾಗಿದೆ. ಮಂಡಳಿಯ ಕಾರ್ಯಾಚರಣೆ, ಸಂವಿಧಾನ, ನಿಯಂತ್ರಣ ರೂಪಿಸುವ ಅಧಿಕಾರ ಎಲ್ಲವೂ ಭಾರತೀಯ ವೈದ್ಯಕೀಯ ಮಂಡಳಿಯ ಸ್ವರೂಪದಲೇ ಇವೆ. ಹೋಮಿಯೋಪಥಿ ವೈದ್ಯ ಸೇವಾವೃತ್ತಿ ಮತ್ತು ವೈದ್ಯಕೀಯ ಶಿಕ್ಷಣದ ಬೆಳವಣಿಗೆಗೆ ಇದು ಭದ್ರ ಬುನಾದಿ ಹಾಕಲಿದೆ, ಆದರೆ, ಮಂಡಳಿಯ ಕಾರ್ಯಚಟುವಟಿಕೆಯಲ್ಲಿ ಅನುಭವಿಸಲಾಗಿರುವ ವಿವಿಧ ಅಡಚಣೆಗಳು, ವೈದ್ಯಕೀಯ ಶಿಕ್ಷಣದ ಮೇಲೆ ಗಂಭೀರ ಪ್ರತೀಕೂಲ ಪರಿಣಾಮಗಳಿಗೆ ಮತ್ತು ಗುಣಮಟ್ಟದ ಹೋಮಿಯೋಪಥಿ ಆರೋಗ್ಯ ಸೇವೆಗಳ ಪೂರೈಕೆಗೆ ತೊಡಕಾಗಿತ್ತು.
*****
(Release ID: 1601003)
Visitor Counter : 151
Read this release in:
Manipuri
,
Malayalam
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Tamil
,
Telugu