ಸಂಪುಟ
ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ, ಟುನೀಶಿಯಾ ಮತ್ತು ಪಪುವಾ ನ್ಯೂ ಗಯಾನಾ ನಡುವಿನ ಒಪ್ಪಂದಗಳಿಗೆ ಸಂಪುಟದ ಅಂಗೀಕಾರ
Posted On:
22 JAN 2020 3:40PM by PIB Bengaluru
ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ, ಟುನೀಶಿಯಾ ಮತ್ತು ಪಪುವಾ ನ್ಯೂ ಗಯಾನಾ ನಡುವಿನ ಒಪ್ಪಂದಗಳಿಗೆ ಸಂಪುಟದ ಅಂಗೀಕಾರ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಟುನೀಶಿಯಾದ ಚುನಾವಣಾ ಸ್ವತಂತ್ರ ಉನ್ನತ ಪ್ರಾಧಿಕಾರ (ಐಎಸ್ಐಇ) ಹಾಗೂ ಪಪುವಾ ನ್ಯೂ ಗಯಾನಾ ಚುನಾವಣಾ ಆಯೋಗ (ಪಿಎನ್ಜಿಇಸಿ)ಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಚುನಾವಣಾ ಆಯೋಗಕ್ಕೆ ಅವಕಾಶ ನೀಡುವ ಶಾಸಕಾಂಗ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಪರಿಣಾಮ
ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಟ್ಯುನಿಷಿಯಾದ ಚುನಾವಣೆಗಳ ಸ್ವತಂತ್ರ ಉನ್ನತ ಪ್ರಾಧಿಕಾರ (ಐಎಸ್ಐಇ) ಮತ್ತು ಪಪುವಾ ನ್ಯೂಗಿನಿಯಾದ ಚುನಾವಣಾ ಆಯೋಗ (ಪಿಎನ್ಜಿಇಸಿ) ಕ್ಕೆ ತಾಂತ್ರಿಕ ನೆರವು / ಸಾಮರ್ಥ್ಯದ ಬೆಂಬಲವನ್ನು ಒದಗಿಸುವ ಗುರಿಯ ದ್ವಿಪಕ್ಷೀಯ ಸಹಕಾರವನ್ನು ಈ ಒಪ್ಪಂದಗಳು ಉತ್ತೇಜಿಸುತ್ತವೆ. ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರವನ್ನು ರೂಪಿಸುವುದು ಮತ್ತು ಆಯಾ ದೇಶಗಳಲ್ಲಿ ಚುನಾವಣೆ ನಡೆಸಲು ನೆರವಾಗುತ್ತವೆ. ಇದು ಭಾರತದ ಅಂತರರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಸಲು ಕಾರಣವಾಗುತ್ತದೆ.
ಹಿನ್ನೆಲೆ
ಸಂಬಂಧಪಟ್ಟ ದೇಶಗಳು ಸಹಿ ಮಾಡಿದ ಒಪ್ಪಂದದ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಚುನಾವಣಾ ಆಯೋಗವು ಕೆಲವು ವಿದೇಶಗಳು ಮತ್ತು ಏಜೆನ್ಸಿಗಳೊಂದಿಗೆ ವಿಶ್ವದಾದ್ಯಂತ ಚುನಾವಣಾ ವಿಷಯಗಳು ಮತ್ತು ಚುನಾವಣಾ ಪ್ರಕ್ರಿಯೆಗಳ ಸಹಕಾರವನ್ನು ಉತ್ತೇಜಿಸುವಲ್ಲಿ ಭಾಗವಹಿಸುತ್ತಿದೆ. ಚುನಾವಣಾ ಆಯೋಗ, ಸಾಂವಿಧಾನಿಕ ಸಂಸ್ಥೆಯಾಗಿದ್ದು, ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ನಡೆಸುತ್ತದೆ. ವೈವಿಧ್ಯಮಯ ಸಾಮಾಜಿಕ-ರಾಜಕೀಯ ಮತ್ತು ಆರ್ಥಿಕ ಹಿನ್ನೆಲೆ ಹೊಂದಿರುವ ಸುಮಾರು 85 ಕೋಟಿ ಮತದಾರರ ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಆಯೋಜಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಚುನಾವಣಾ ಆಯೋಗವು ವಹಿಸುತ್ತಿರುವ ಪಾತ್ರವು ರಾಜಕೀಯ ವ್ಯವಹಾರಗಳಲ್ಲಿ ಜನರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸುತ್ತಿದೆ. ಭಾರತವನ್ನು ಇಂದು ವಿಶ್ವದ 'ಅತಿದೊಡ್ಡ' ಪ್ರಜಾಪ್ರಭುತ್ವ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಯಶಸ್ಸು ಜಗತ್ತಿನ ಎಲ್ಲ ರಾಜಕೀಯ ವ್ಯವಸ್ಥೆಯ ಗಮನವನ್ನು ಸೆಳೆದಿದೆ.
ಉತ್ಕೃಷ್ಟತೆಯ ಅನ್ವೇಷಣೆಯಲ್ಲಿ, ಚುನಾವಣಾ ಆಯೋಗವು ಚುನಾವಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಲು ವಿದೇಶಿ ಚುನಾವಣಾ ಸಂಸ್ಥೆಗಳಿಂದ ವಿವಿಧ ಪ್ರಸ್ತಾಪಗಳನ್ನು ಸ್ವೀಕರಿಸುತ್ತಿದೆ. ಚುನಾವಣಾ ಆಯೋಗ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರ ಕುರಿತು ಮಾಲ್ಡೀವ್ಸ್ ಚುನಾವಣಾ ಆಯೋಗದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಬಗ್ಗೆ ಚುನಾವಣಾ ಆಯೋಗವು ಕಾನೂನು ಮತ್ತು ನ್ಯಾಯ ಸಚಿವಾಲಯದ ಶಾಸಕಾಂಗ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದೆ.
ಚುನಾವಣಾ ಪ್ರಕ್ರಿಯೆಯ ಸಾಂಸ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿಯ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವದ ವಿನಿಮಯದ ಪ್ರಚಾರ ಸೇರಿದಂತೆ ಮಾಹಿತಿ ವಿನಿಮಯ, ಸಾಂಸ್ಥಿಕ ಬಲಪಡಿಸುವಿಕೆ ಮತ್ತು ಸಾಮರ್ಥ್ಯ ವೃದ್ಧಿ, ಸಿಬ್ಬಂದಿಗಳ ತರಬೇತಿ, ನಿಯಮಿತ ಸಮಾಲೋಚನೆಗಳನ್ನು ನಡೆಸುವಲ್ಲಿ ಬೆಂಬಲ ಇತ್ಯಾದಿ ಸೇರಿದಂತೆ ಈ ಒಪ್ಪಂದಗಳು ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರದ ಉತ್ತೇಜನವನ್ನು ವ್ಯಾಪಕವಾಗಿ ವ್ಯಕ್ತಪಡಿಸುವ ಅಂಶಗಳುಹಾಗೂ ಷರತ್ತುಗಳನ್ನು ಒಳಗೊಂಡಿವೆ.
***
(Release ID: 1600200)
Visitor Counter : 145
Read this release in:
Assamese
,
Assamese
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Tamil
,
Malayalam