ಸಂಪುಟ
ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವಿನ ಭಾರತ ಮತ್ತು ಬ್ರೆಜಿಲ್ ನಡುವಿನ ಒಪ್ಪಂದಕ್ಕೆಸಂಪುಟದ ಅನುಮೋದನೆ
प्रविष्टि तिथि:
22 JAN 2020 3:38PM by PIB Bengaluru
ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವಿನ ಭಾರತ ಮತ್ತು ಬ್ರೆಜಿಲ್ ನಡುವಿನ ಒಪ್ಪಂದಕ್ಕೆಸಂಪುಟದ ಅನುಮೋದನೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ನೀಡುವ ಕುರಿತು ಭಾರತ ಮತ್ತು ಬ್ರೆಜಿಲ್ ನಡುವಿನ ಸಹಿ ಹಾಕಬೇಕಾಗಿರುವ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಅಪರಾಧದ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ಕಾನೂನು ನೆರವು ನೀಡುವ ಮೂಲಕ ಅಪರಾಧಗಳ ತನಿಖೆ ಮತ್ತು ವಿಚಾರಣೆಯಲ್ಲಿ ಎರಡೂ ದೇಶಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಉದ್ದೇಶವನ್ನು ಒಪ್ಪಂದ ಹೊಂದಿದೆ. ಅಂತರ್ದೇಶೀಯ ಅಪರಾಧ ಮತ್ತು ಭಯೋತ್ಪಾದನೆಯೊಂದಿಗಿನ ಸಂಪರ್ಕಗಳ ಹಿನ್ನೆಲೆಯಲ್ಲಿ ಪ್ರಸ್ತಾವಿತ ಒಪ್ಪಂದವು ಅಪರಾಧದ ತನಿಖೆ ಮತ್ತು ವಿಚಾರಣೆ, ಪತ್ತೆಹಚ್ಚುವುದು, ಅಪರಾಧ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಒದಗಿಸುವ ಹಣಕಾಸು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಬ್ರೆಜಿಲ್ ನೊಂದಿಗೆ ದ್ವಿಪಕ್ಷೀಯ ಸಹಕಾರದ ಕಾನೂನು ಚೌಕಟ್ಟನ್ನು ಒದಗಿಸುತ್ತದೆ.
***
(रिलीज़ आईडी: 1600162)
आगंतुक पटल : 152
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Bengali
,
Punjabi
,
Gujarati
,
Tamil
,
Telugu
,
Malayalam