ಸಂಪುಟ
ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ವಿಲೀನದಿಂದಾಗಿ ಸರಕು ಮತ್ತು ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ ಮತ್ತು ಅಬಕಾರಿ ಸುಂಕವನ್ನು ನಿರ್ವಹಿಸುವ ಕಾಯ್ದೆಗಳಲ್ಲಿ ತಿದ್ದುಪಡಿ / ವಿಸ್ತರಣೆ / ರದ್ದುಗೊಳಿಸುವಿಕೆಗೆ ಸಂಪುಟದ ಅನುಮೋದನೆ
Posted On:
22 JAN 2020 3:31PM by PIB Bengaluru
ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ವಿಲೀನದಿಂದಾಗಿ ಸರಕು ಮತ್ತು ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ ಮತ್ತು ಅಬಕಾರಿ ಸುಂಕವನ್ನು ನಿರ್ವಹಿಸುವ ಕಾಯ್ದೆಗಳಲ್ಲಿ ತಿದ್ದುಪಡಿ / ವಿಸ್ತರಣೆ / ರದ್ದುಗೊಳಿಸುವಿಕೆಗೆ ಸಂಪುಟದ ಅನುಮೋದನೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ರಾಜ್ಯ ಅಬಕಾರಿ ತೆರಿಗೆಯ ಕಾಯ್ದೆಗಳು ಮತ್ತು ನಿಯಮಗಳಲ್ಲಿ ತಿದ್ದುಪಡಿ / ವಿಸ್ತರಣೆ / ರದ್ದುಗೊಳಿಸುವಿಕೆಯನ್ನು ಅನುಮೋದಿಸಿದೆ. ದಮನ್ ಅನ್ನು ಕೇಂದ್ರಸ್ಥಾನವನ್ನಾಗಿ ಘೋಷಿಸುವ ನಿರ್ಧಾರಕ್ಕೂ ಅಂಗೀಕಾರ ನೀಡಿದೆ.
i. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (2017 ರ ಸಂಖ್ಯೆ .12) ಅನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಕಾಯ್ದೆ, 2020 ಎಂದು ತಿದ್ದುಪಡಿ ಮಾಡಲಾಗುವುದು;
ii. ಕೇಂದ್ರಾಡಳಿತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (2017 ರ ಸಂಖ್ಯೆ 14) ಅನ್ನು ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿಗಳು ಕಾಯ್ದೆ, 2020 ಎಂದು ತಿದ್ದುಪಡಿ ಮಾಡಲಾಗುವುದು;
iii. ದಾದ್ರಾ ಮತ್ತು ನಗರ ಹವೇಲಿ ಮೌಲ್ಯವರ್ಧಿತ ತೆರಿಗೆ ನಿಯಂತ್ರಣ, 2005 (2005 ರ ಸಂಖ್ಯೆ .2) ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮೌಲ್ಯವರ್ಧಿತ ತೆರಿಗೆ (ತಿದ್ದುಪಡಿಗಳು) ಕಾಯ್ದೆ, 2020 ಎಂದು ತಿದ್ದುಪಡಿ ಮಾಡಲಾಗುವುದು;
iv. ದಮನ್ ಮತ್ತು ದಿಯು ಮೌಲ್ಯವರ್ಧಿತ ತೆರಿಗೆ ಕಾಯ್ದೆ, 2005 (2005 ರ ಸಂಖ್ಯೆ .1) ಬದಲಿಗೆ ದಮನ್ ಮತ್ತು ದಿಯು ಮೌಲ್ಯವರ್ಧಿತ ತೆರಿಗೆ (ರದ್ದುಗೊಳಿಸುವಿಕೆ) ಕಾಯ್ದೆ, 2020 ಜಾರಿಯಾಗಲಿದೆ ;
v. ಗೋವಾ, ದಮನ್ ಮತ್ತು ದಿಯು ಅಬಕಾರಿ ಸುಂಕ ಕಾಯ್ದೆ, 1964 (1964 ರ ಸಂಖ್ಯೆ 5) ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಅಬಕಾರಿ ಸುಂಕ (ತಿದ್ದುಪಡಿ) ಕಾಯ್ದೆ, 2020 ಎಂದು ತಿದ್ದುಪಡಿ ಮಾಡಲಾಗುವುದು;
vi. ದಾದ್ರಾ ಮತ್ತು ನಗರ ಹವೇಲಿ ಅಬಕಾರಿ ಸುಂಕ ಕಾಯ್ದೆ, 2012 (2012 ರ ಸಂಖ್ಯೆ .1) ಬದಲಿಗೆ ದಾದ್ರಾ ಮತ್ತು ನಗರ ಹವೇಲಿ ಅಬಕಾರಿ ಸುಂಕ (ರದ್ದುಪಡಿಸುವ) ಕಾಯ್ದೆ, 2020 ಜಾರಿಯಾಗಲಿದೆ;
vii. ದಮನ್, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುಗಳ ಕೇಂದ್ರ ಸ್ಥಾನವಾಗಿರಲಿದೆ .
ಈ ತಿದ್ದುಪಡಿಗಳು ಸಾಮಾನ್ಯ ತೆರಿಗೆ ಆಡಳಿತವನ್ನು ಹೊಂದುವ ಮೂಲಕ "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ" ಕ್ಕೆ ಕಾರಣವಾಗುತ್ತವೆ. ಮಾಡಿದ ಕೆಲಸವನ್ನೇ ಮಾಡುವುದನ್ನು ಕಡಿಮೆ ಮಾಡುವುದರ ಮೂಲಕ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಸುಧಾರಿಸುವ ಮೂಲಕ ನಾಗರಿಕರಿಗೆ ಉತ್ತಮ ಸೇವೆಗಳನ್ನು ತಲುಪಿಸುತ್ತವೆ. ಜಿಎಸ್‌ಟಿ, ವ್ಯಾಟ್ ರಾಜ್ಯ ಅಬಕಾರಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಹೆಚ್ಚು ಏಕರೂಪತೆಯನ್ನು ತರಲು ಸಹಾಯ ಮಾಡುತ್ತವೆ. ರಾಜ್ಯ ಅಬಕಾರಿ ಸುಂಕ ಮತ್ತು ಬಾಕಿ ವಸೂಲಿ ಸೇರಿದಂತೆ ಜಿಎಸ್ಟಿ ತೆರಿಗೆ, ವ್ಯಾಟ್, ರಾಜ್ಯ ಅಬಕಾರಿ ವಸೂಲಿ ಮತ್ತು ಸಂಗ್ರಹಣೆಯಲ್ಲಿ ಯಾವುದೇ ಕಾನೂನು ತೊಡಕುಗಳನ್ನು ತಪ್ಪಿಸಲು ಸಹ ಇದು ಸಹಾಯ ಮಾಡುತ್ತವೆ. ಇದಲ್ಲದೆ, ಈ ತಿದ್ದುಪಡಿಗಳು ತೆರಿಗೆ ಕಾನೂನುಗಳಲ್ಲಿ ಏಕರೂಪತೆಯನ್ನು ತರುವುದಲ್ಲದೆ ಕಾನೂನುಗಳ ವ್ಯವಸ್ಥೆಯನ್ನು ಬಲಪಡಿಸುತ್ತವೆ .
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಅಬಕಾರಿಗಳೊಂದಿಗೆ ವ್ಯವಹರಿಸುವ ಕಾಯಿದೆಗಳಲ್ಲಿ ತಿದ್ದುಪಡಿ / ವಿಸ್ತರಣೆ / ರದ್ದುಗೊಳಿಸುವ ಮೂಲಕ ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಆಡಳಿತವು ಎರಡು ಕೇಂದ್ರಾಡಳಿತ ಪ್ರದೇಶ ಗಳ ಜನರಿಗೆ "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ" ವನ್ನು ಸಾಕಾರಗೊಳಿಸಲು ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡುವುದು ಮತ್ತು ದಿನನಿತ್ಯದ ತೆರಿಗೆ ಆಡಳಿತದಲ್ಲಿ ಏಕರೂಪತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಗಳನ್ನು ವಿಲೀನಗೊಳಿಸಿರುವ ನಿಟ್ಟಿನಲ್ಲಿ 26.01.2020 ರಿಂದ ದಮನ್ ಇವುಗಳ ಕೇಂದ್ರ ಸ್ಥಾನವಾಗಿರುತ್ತದೆ.
***
(Release ID: 1600129)
Visitor Counter : 121