ಸಂಪುಟ

ಭಾರತ ಮತ್ತು ಜಪಾನ್ ಕಲ್ಲಿದ್ದಲು ಇಂಧನ ಕೇಂದ್ರದ ನಡುವೆ ವಿದ್ಯುತ್ ಪೂರೈಕೆ ಕ್ಷೇತ್ರದ ಸಹಕಾರ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ

Posted On: 11 DEC 2019 6:11PM by PIB Bengaluru

ಭಾರತ ಮತ್ತು ಜಪಾನ್ ಕಲ್ಲಿದ್ದಲು ಇಂಧನ ಕೇಂದ್ರದ ನಡುವೆ ವಿದ್ಯುತ್ ಪೂರೈಕೆ ಕ್ಷೇತ್ರದ ಸಹಕಾರ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಮತ್ತು ಜಪಾನಿನ ಕಲ್ಲಿದ್ದಲು ಇಂಧನ ಕೇಂದ್ರದ ನಡುವೆ ಸುಸ್ಠಿರ , ಸ್ಥಿರ ಮತ್ತು ಕಡಿಮೆ ಕಾರ್ಬನ್ ಯುಕ್ತ ಇಂಧನ /ವಿದ್ಯುತ್ ಪೂರೈಕೆಯಲ್ಲಿ ದಕ್ಷತೆ ಮತ್ತು ಪರಿಸರ ಸುಧಾರಣೆಗಾಗಿ ಜಪಾನ್-ಭಾರತ ಸಹಕಾರಕ್ಕೆ ಸಂಬಂಧಿಸಿದ ತಿಳುವಳಿಕಾ ಒಡಂಬಡಿಕೆ ಅಂಕಿತಕ್ಕೆ ಸಂಪುಟ ಅನುಮೋದನೆ ನೀಡಿತು.

ಈ ತಿಳುವಳಿಕಾ ಒಡಂಬಡಿಕೆಯು ಅಧ್ಯಯನಗಳು, ತರಬೇತಿ ಕಾರ್ಯಕ್ರಮಗಳು, ಮತ್ತು ಜ್ಞಾನ ಹಂಚಿಕೆ ಕಾರ್ಯಕ್ರಮಗಳ ಮೂಲಕ ಸುಸ್ಥಿರ, ಸ್ಥಿರ, ಮತ್ತು ಕಡಿಮೆ ಕಾರ್ಬನ್ ಯುಕ್ತ ಉಷ್ಣ ವಿದ್ಯುತ್ ಅಭಿವೃದ್ದಿಯಲ್ಲಿರುವ ತೊಡಕುಗಳು ಮತ್ತು ಸಮಸ್ಯೆಗಳನ್ನು ಅರಿಯಲು ಚೌಕಟ್ಟನ್ನು ಒಅದಗಿಸಲಿದೆ. ಇದರ ಫಲಿತಗಳು ಭಾರತದಲ್ಲಿ ಇಂಧನ ಅಭಿವೃದ್ದಿಗೆ ಪೂರಕವಾಗಿರಲಿವೆ ಮಾತ್ರವಲ್ಲ ಭಾರತ ಸರಕಾರ ಸೂಕ್ತ ನೀತಿ ಅನುಷ್ಟಾನವನ್ನು ತ್ವರಿತಗೊಳಿಸಲು ನೆರವಾಗಲಿವೆ.



(Release ID: 1596169) Visitor Counter : 123