ಸಂಪುಟ
ಸ್ಪೇನ್ ನಲ್ಲಿ ಮುಂದಿನ ವಾರ ಜರುಗಲಿರುವ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಸಮಾವೇಶದಲ್ಲಿ ಭಾರತದ ನಿಲುವಿಗೆ ಸಂಪುಟ ಅನುಮೋದನೆ
Posted On:
27 NOV 2019 11:47AM by PIB Bengaluru
ಸ್ಪೇನ್ ನಲ್ಲಿ ಮುಂದಿನ ವಾರ ಜರುಗಲಿರುವ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಸಮಾವೇಶದಲ್ಲಿ ಭಾರತದ ನಿಲುವಿಗೆ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2019ರ ಡಿಸೆಂಬರ್ 2ರಿಂದ 13ರವರೆಗೆ ಸ್ಪೇನ್ ನ (ಚಿಲಿ ಪ್ರೆಸಿಡೆನ್ಸಿಯ ಅಧೀನದಲ್ಲಿರುವ) ಮ್ಯಾಡ್ರೀಡ್ ನಲ್ಲಿ ನಿಗಿದಿಯಾಗಿರುವ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಕುರಿತ(ಯು ಎನ್ ಎಫ್ ಸಿ ಸಿ ಸಿ) ಒಪ್ಪಂದದ ಸಮಾವೇಶ 25ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಸಿಒಪಿ)ಯಲ್ಲಿ ಮಂಡಿಸಲಿರುವ ಭಾರತದ ನಿಲುವನ್ನು ಅನುಮೋದಿಸಲಾಯಿತು.
ಭಾರತೀಯ ನಿಯೋಗದ ನೇತೃತ್ವವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಖಾತೆಯ ಗೌರವಾನಿತ್ವ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ವಹಿಸುವರು. ಪ್ಯಾರೀಸ್ ಒಪ್ಪಂದದಡಿ ಕ್ವೈಟೋ ಪ್ರೋಟೋಕಾಲ್ ಅನ್ವಯ 2020ರ ಪೂರ್ವದಿಂದ 2020ರ ನಂತರಕ್ಕೆ ವರ್ಗಾವಣೆಗೊಳ್ಳಲು ದೇಶಗಳು ಸಜ್ಜಾಗುವ ನಿಟ್ಟಿನಲ್ಲಿ 25ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಸಿಒಪಿ) ಅತ್ಯಂತ ಮಹತ್ವದ ಸಮಾವೇಶವಾಗಿದೆ. ಭಾರತದ ನಿಲುವಿಗೆ ಯು ಎನ್ ಎಫ್ ಸಿ ಸಿ ಸಿ ನಿಯಮಗಳು ಹಾಗೂ ಮತ್ತು ತತ್ವಗಳು ಮಾರ್ಗದರ್ಶಿಯಾಗಿವೆ, ವಿಶೇಷವಾಗಿ ಸಮಾನ ಮತ್ತು ಸಾಮಾನ್ಯ ಹಾಗೂ ಭಿನ್ನ ಹೊಣೆಗಾರಿಕೆಗಳು ಮತ್ತು ಸಂಬಂಧಿಸಿದವರ ಸಾಮರ್ಥ್ಯ (ಸಿಬಿಡಿಆರ್ – ಆರ್ ಸಿ) ಕೂಡ ಆಧರಿಸಿದೆ.
ಹವಾಮಾನ ವೈಪರೀತ್ಯ ವಿಷಯದಲ್ಲಿ ಭಾರತದ ನಾಯಕತ್ವ ಎದ್ದು ಕಾಣುತ್ತಿದ್ದು, ಅದು ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ. ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರ ಹವಾಮಾನ ವೈಪರೀತ್ಯ ಎದುರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಆ ಕ್ರಮಗಳು ಹವಾಮಾನ ವೈಪರೀತ್ಯ ತಡೆ ನಿಟ್ಟಿನಲ್ಲಿ ಭಾರತದ ಬದ್ಧತೆ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರು ಆಯೋಜಿಸಿದ್ದ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ, ಪ್ರಧಾನಮಂತ್ರಿ ಅವರು ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು 450 GW ಗೆ ಹೆಚ್ಚಿಸುವ ಭಾರತದ ಗುರಿಯನ್ನು ಪ್ರಕಟಿಸಿದರು ಮತ್ತು ಸಿಬಿಡಿಆರ್ –ಆರ್ ಸಿಯಲ್ಲಿ ಸಮಾನ ಹೊಣೆಗಾರಿಕೆಯಡಿ ಎಲ್ಲ ರಾಷ್ಟ್ರಗಳು ಜವಾಬ್ದಾರಿಯುತ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದರು. ಅಂತಾರಾಷ್ಟ್ರೀಯ ಸೌರ ಮೈತ್ರಿ (ಐ ಎಸ್ ಎ) ಮೂಲಕ ಸೌರ ಇಂಧನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಇಡೀ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ.
ಐಎಸ್ಎ ಅಲ್ಲದೆ, ಹವಾಮಾನ ಕ್ರಿಯಾ ಯೋಜನೆಗೆ ಇಡೀ ವಿಶ್ವವನ್ನು ಒಂದುಗೂಡಿಸುವ ಪ್ರಯತ್ನದ ಭಾಗವಾಗಿ ಭಾರತ ಮತ್ತೆರಡು ಹೊಸ ಉಪಕ್ರಮಗಳನ್ನು ಆರಂಭಿಸಿದೆ. ಇದರಲ್ಲಿ ಒಂದು ಪ್ರಕೋಪ ಸ್ಥಿತಿಸ್ಥಾಪಕತ್ವ ಮೂಲಸೌಕರ್ಯ ಮೈತ್ರಿ ಸೇರಿದ್ದು, ಅದರಲ್ಲಿ ಹವಾಮಾನ ಮತ್ತು ಪ್ರಕೋಪ ಸ್ಥಿತಿಸ್ಥಾಪಕತ್ವ ಮೂಲಸೌಕರ್ಯದ ನಾನಾ ಆಯಾಮಗಳ ಕುರಿತಂತೆ ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಒದಗಿಸಲಿದೆ ಮತ್ತು ಎರಡು, ಭಾರತ - ಸ್ವೀಡನ್ ಜಂಟಿಯಾಗಿ “ ಕೈಗಾರಿಕಾ ಸ್ಥಿತ್ಯಂತರ ಕುರಿತ ನಾಯಕತ್ವ ಗುಂಪು” ರಚಿಸಿವೆ. ಇದು ನಾನಾ ದೇಶಗಳ ಮತ್ತು ಸರ್ಕಾರಗಳಿಗೆ ವೇದಿಕೆಯನ್ನು ಒದಗಿಸಿ ಕೊಡಲಿದ್ದು, ನಾವಿನ್ಯ ತಂತ್ರಜ್ಞಾನ ವಲಯದಲ್ಲಿ ಸಹಕಾರ ಮತ್ತು ಇಂಗಾಲದ ಪ್ರಮಾಣ ತಗ್ಗಿಸುವ ಕುರಿತು ಒಗ್ಗೂಡಿ ಕೆಲಸ ಮಾಡಲು ನೆರವಾಗುತ್ತದೆ.
ಭಾರತ ತನ್ನ ಕ್ರಿಯೆಗಳಲ್ಲಿ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದು, 2020ರ ವೇಳೆಗೆ ವಾರ್ಷಿಕ ನೂರು ಬಿಲಿಯನ್ ಅಮೆರಿಕನ್ ಡಾಲರ್ ನಿಧಿ ಸಂಗ್ರಹಿಸುವ ಹವಾಮಾನ ವೈಪರೀತ್ಯ ಕುರಿತ ಹಣಕಾಸು ಬದ್ಧತೆಯನ್ನು ಈಡೇರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ಮುಂಚೂಣಿಗೆ ಬರಬೇಕೆಂದು ಬಲವಾಗಿ ಪ್ರತಿಪಾದಿಸುತ್ತದೆ. ಅಲ್ಲದೆ ಎನ್ ಡಿ ಸಿ ಎಸ್ ಕಾರ್ಯಕ್ರಮಗಳ ಮೂಲಕ ಭವಿಷ್ಯದ ಕ್ರಿಯೆಗಾಗಿ ಸಂಬಂಧಿಸಿದವರನ್ನು ಆರ್ಥಿಕವಾಗಿ ಬೆಂಬಲಿಸುವುದು ಮತ್ತು ಅವರ ಸುಸ್ಥಿರತೆಯನ್ನು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು 2020ಕ್ಕೆ ಮುನ್ನ ಈಡೇರಿಸಬೇಕಾದ ಬದ್ಧತೆಗಳನ್ನು ಕುರಿತು ಬಲವಾಗಿ ಪ್ರತಿಪಾದಿಸಲಿದೆ ಮತ್ತು 2020ಕ್ಕೆ ಮುನ್ನ ಎದುರಾಗುವ ಅನುಷ್ಠಾನದ ವೇಳೆಯಲ್ಲಿನ ಅಡೆ-ತಡೆಗಳನ್ನು 2020ರ ನಂತರವೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೆಚ್ಚುವರಿ ಹೊರೆಯಾಗಬಾರದು ಎಂದು ಪ್ರತಿಪಾದಿಸಲಿದೆ.
ಒಟ್ಟಾರೆ ಭಾರತ ಸಕಾರಾತ್ಮಕ ಮತ್ತು ಗುಣಾತ್ಮಕ ಆಯಾಮದೊಂದಿಗೆ ಮಾತುಕತೆಗಳನ್ನು ಎದುರು ನೋಡುತ್ತಿದೆ ಹಾಗೂ ದೀರ್ಘಾವಧಿಯ ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
*****
(Release ID: 1593937)
Visitor Counter : 229