ಸಂಪುಟ
ಭಾರತ ಮತ್ತು ಸೌದಿ ಅರೇಬಿಯ ನಡುವೆ ಕಾರ್ಯತಂತ್ರ ಪಾಲುದಾರಿಕೆ ಮಂಡಳಿ ಸ್ಥಾಪನೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದಿಂದ ಪೂರ್ವಾನ್ವಯ ಅನುಮೋದನೆ
Posted On:
27 NOV 2019 11:20AM by PIB Bengaluru
ಭಾರತ ಮತ್ತು ಸೌದಿ ಅರೇಬಿಯ ನಡುವೆ ಕಾರ್ಯತಂತ್ರ ಪಾಲುದಾರಿಕೆ ಮಂಡಳಿ ಸ್ಥಾಪನೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದಿಂದ ಪೂರ್ವಾನ್ವಯ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೌದಿ ಅರೇಬಿಯ ನಡುವೆ ಕಾರ್ಯತಂತ್ರ ಪಾಲುದಾರಿಕೆ ಮಂಡಳಿ ಸ್ಥಾಪನೆಗೆ 2019ರ ಅಕ್ಟೋಬರ್ 29ರಂದು ಪ್ರಧಾನಮಂತ್ರಿಗಳು ಸಹಿ ಹಾಕಿದ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆ ನೀಡಲಾಯಿತು.
ಈ ಒಪ್ಪಂದದಿಂದಾಗಿ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ನಾಯಕರು ನಿರಂತರವಾಗಿ ಭೇಟಿ ಮಾಡಲಿದ್ದು, ಕಾರ್ಯತಂತ್ರ ಪಾಲುದಾರಿಕೆಯ ಅಡಿಯಲ್ಲಿ ಕೈಗೊಂಡಿರುವ ಹಲವು ಕ್ರಮಗಳು ಮತ್ತು ಯೋಜನೆಗಳ ಪ್ರಗತಿಯ ಮೇಲ್ವಿಚಾರಣೆ ಮಾಡಲಾಗುವುದು. ಅಲ್ಲದೆ ಕಾರ್ಯತಂತ್ರ ಪಾಲುದಾರಿಕೆ ಒಪ್ಪಂದದಡಿ ಹೊಸ ವಲಯಗಳನ್ನು ಗುರುತಿಸಲು ನೆರವಾಗಲಿದೆ ಮತ್ತು ನಿಗದಿತ ಗುರಿಗಳನ್ನು ಹೊಂದಿ, ಅವುಗಳನ್ನು ಸಾಧಿಸಲು ಹಾಗೂ ಪ್ರಯೋಜನಗಳನ್ನು ಪಡೆಯಲು ನೆರವಾಗಲಿದೆ.
ಪ್ರಯೋಜನಗಳು :
ಈ ಒಪ್ಪಂದದ ಪ್ರಸ್ತಾವ ಯಾವುದೇ ಲಿಂಗ ತಾರತಮ್ಯ, ವರ್ಗ ಅಥವಾ ಆದಾಯ ತಾರತಮ್ಯವಿಲ್ಲದೆ ಸೌದಿ ಅರೇಬಿಯ ನಡುವೆ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳ ಸುಧಾರಣೆಗೆ ಪ್ರಜೆಗಳಿಗೆ ನೆರವಾಗುವ ಗುರಿಯನ್ನು ಹೊಂದಿದೆ.
ಈ ಒಪ್ಪಂದದಿಂದಾಗಿ ರಕ್ಷಣೆ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ ಭದ್ರತೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ಕಾರ್ಯತಂತ್ರ ಪಾಲುದಾರಿಕೆ ಹೊಂದಲು ಮತ್ತು ಹೊಸ ವಲಯಗಳನ್ನು ಗುರುತಿಸಲು ಸಹಾಯಕವಾಗಲಿದೆ.
************
(Release ID: 1593746)
Visitor Counter : 123