ಸಂಪುಟ

ಭಾರತ ಸರ್ಕಾರ (ಕಾರ್ಯ ನಿರ್ವಹಣೆ) ನಿಯಮಾವಳಿಗಳ ನಿಯಮ 1961 ರ 12ರ ಅಡಿಯಲ್ಲಿ ಅನುಮೋದಿಸಲಾದ ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯ್ದೆ 2019 ರ ಸೆಕ್ಷನ್ 73 ರ ಜೊತೆಗೆ ಕಾಯಿದೆಯ ಸೆಕ್ಷನ್ 74 ರ ಅಡಿಯಲ್ಲಿ ಹೊರಡಿಸಲಾದ ಆದೇಶಗಳ ಪ್ರಸ್ತಾಪಗಳಿಗೆ ಸಂಪುಟದ ಪುರ್ವಾನ್ವಯ ಅನುಮೋದನೆ

Posted On: 20 NOV 2019 10:40PM by PIB Bengaluru

ಭಾರತ ಸರ್ಕಾರ (ಕಾರ್ಯ ನಿರ್ವಹಣೆ) ನಿಯಮಾವಳಿಗಳ ನಿಯಮ 1961 ರ 12ರ ಅಡಿಯಲ್ಲಿ ಅನುಮೋದಿಸಲಾದ ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯ್ದೆ 2019 ರ ಸೆಕ್ಷನ್ 73 ರ ಜೊತೆಗೆ ಕಾಯಿದೆಯ ಸೆಕ್ಷನ್ 74 ರ ಅಡಿಯಲ್ಲಿ ಹೊರಡಿಸಲಾದ ಆದೇಶಗಳ ಪ್ರಸ್ತಾಪಗಳಿಗೆ ಸಂಪುಟದ ಪುರ್ವಾನ್ವಯ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ರಾಷ್ಟ್ರಪತಿಯವರು ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯಿದೆ 2019ರ ಸೆಕ್ಷನ್ 73ರ ಜೊತೆಗೆ ಕಾಯಿದೆಯ ಸೆಕ್ಷನ್ 74ರ ಅಡಿಯಲ್ಲಿ ಹೊರಡಿಸಲಾಗಿರುವ ಆದೇಶಗಳಿಗೆ ಪೂರ್ವಾನ್ವಯ ಅನುಮೋದನೆ ನೀಡಿದೆ.

ಸಂಸತ್ತಿನ ಶಿಫಾರಸಿನ ಮೇಲೆ ರಾಷ್ಟ್ರಪತಿಯವರು ಭಾರತ ಸಂವಿಧಾನದ ವಿಧಿ 30ರ ಅಡಿಯಲ್ಲಿ ಘೋಷಣೆ ಮಾಡಿ, ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯಿದೆ 2019ಕ್ಕೆ ತಮ್ಮ ಸಮ್ಮತಿ ನೀಡಿದ್ದಾರೆ. ಆ ಪ್ರಕಾರವಾಗಿ, ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ನೂತನ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ನೂತನ ಕೇಂದ್ರಾಡಳಿತ ಪ್ರದೇಶವಾಗಿ 2019ರ ಅಕ್ಟೋಬರ್ 31ರಂದು  ಪುನರ್ ರಚಿಸಲಾಗಿದೆ.

2019ರ ಅಕ್ಟೋಬರ್ 31ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿರುವ ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯಿದೆ 2019ರ ತರುವಾಯ ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಶಾಸನಸಭೆಯುಳ್ಳ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಶಾಸನ ಸಭೆ ರಹಿತ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಪುನರ್ ಸಂಘಟಿಸಲಾಗಿದೆ. 2018ರ ಡಿಸೆಂಬರ್ 19ರಂದು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. ಸಂವಿಧಾನದ 356ನೇ ವಿಧಿ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗದ ಕಾರಣ, 2019ರ ಅಕ್ಟೋಬರ್ 31ರಂದು ರಾಷ್ಟ್ರಪತಿ ಆಡಳಿತವನ್ನು ತೆರವುಗೊಳಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಇನ್ನೂ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಯಾವುದೇ ರೀತಿಯ ಸಾಂವಿಧಾನಿಕ ನಿರ್ವಾತವನ್ನು ತಡೆಯುವ ಸಲುವಾಗಿ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜ್ಯಪಾಲರ ವರದಿಯ ಆಧಾರದ ಮೇಲೆ 2019ರ ಅಕ್ಟೋಬರ್ 31ರಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಕುರಿತಂತೆ ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯಿದೆ 2019ರ ಸೆಕ್ಷನ್ 73ರ ಅಡಿಯಲ್ಲಿ ರಾಷ್ಟ್ರಪತಿಗಳ ಮೂಲಕ ಆದೇಶ ಹೊರಡಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪುನರ್ಸಂಘಟನೆ ಕಾಯ್ದೆ 2019 ರ ಸೆಕ್ಷನ್ 74 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಏಕೀಕೃತ ನಿಧಿಯಿಂದ ಮಾಡುವ ಖರ್ಚನ್ನು ಅಧಿಕೃತಗೊಳಿಸುವ ಉದ್ದೇಶದಿಂದ 2019ರ ಅಕ್ಟೋಬರ್ 31ರಂದು ರಾಷ್ಟ್ರಪತಿಯವರು ಒಂದು ಆದೇಶವನ್ನು ಹೊರಡಿಸಿದ್ದಾರೆ.

 

*****    



(Release ID: 1593074) Visitor Counter : 222