ಸಂಪುಟ
ಕೈಗಾರಿಕಾ ಸಂಬಂಧಗಳ ಮಸೂದೆ 2019ಕ್ಕೆ ಸಂಸತ್ ಅನುಮೋದನೆ
Posted On:
20 NOV 2019 10:35PM by PIB Bengaluru
ಕೈಗಾರಿಕಾ ಸಂಬಂಧಗಳ ಮಸೂದೆ 2019ಕ್ಕೆ ಸಂಸತ್ ಅನುಮೋದನೆ
ಸಂಸತ್ತಿನಲ್ಲಿ ಕೈಗಾರಿಕಾ ಸಂಬಂಧಗಳ ಮಸೂದೆ 2019 ಅನ್ನು ಪ್ರಸ್ತಾಪಿಸಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಲಾಭಗಳು:
- ಇಬ್ಬರು ಸದಸ್ಯರ ನ್ಯಾಯ ಮಂಡಳಿಯನ್ನು ಸ್ಥಾಪಿಸುವುದರ (ಒಬ್ಬ ಸದಸ್ಯನ ಬದಲಾಗಿ) ಮೂಲಕ ಕೆಲವು ಪ್ರಮುಖ ಪ್ರಕರಣಗಳಲ್ಲಿ ಜಂಟಿಯಾಗಿ ತೀರ್ಪು ನೀಡುವುದು ಮತ್ತು ಇನ್ನುಳಿದ ಪ್ರಕರಣಗಳನ್ನು ಓರ್ವ ಸದಸ್ಯನಿಂದ ತೀರ್ಮಾನಿಸಲಾಗುವುದು ಎಂಬ ಪರಿಕಲ್ಪನೆಯ ಪರಿಚಯ.
- ನಿರ್ಗಮನ ನಿಬಂಧನೆಗಳನ್ನು ಸಡಿಲಗೊಳಿಸುವ (ವೆಚ್ಚದಲ್ಲಿ ಕಡಿತಕ್ಕೆ ಸಂಬಂಧಿಸಿದ್ದು... ಮುಂತಾದವು) ಇದಕ್ಕಾಗಿ, ಮಿತಿಯನ್ನು ನಿಗದಿ ಪಡಿಸಲು ಸರ್ಕಾರದ ಪೂರ್ವಾನುಮತಿಗಾಗಿ 100 ಉದ್ಯೋಗಿಗಳಿಗೆ ಎಂಬುದನ್ನು ಬದಿಲಿಸದೇ ಹಾಗೇ ಉಳಿಸಿಕೊಳ್ಳಲಾಗಿದೆ. ಆದರೆ, ಅಧಿಸೂಚನೆಯ ಮೂಲಕ ಅಂಥ ಉದ್ಯೋಗಿಗಳ ಸಂಖ್ಯೆಯನ್ನು ಬದಲಾಯಿಸುವ ಅವಕಾಶವನ್ನು ಇದರಲ್ಲಿ ಸೇರಿಸಲಾಗಿದೆ.
- ಕೌಶಲ್ಯ ನವೀಕರಣದ ನಿಧಿಯನ್ನು, ನಿಗದಿತ ಕ್ರಮಗಳಿಗೆ ಅನುಸಾರ ಕಾರ್ಮಿಕರಿಗಾಗಿ ಬಳಸತಕ್ಕದ್ದು.
- ಸ್ಥಿರ ಅವಧಿಯ ಉದ್ಯೋಗ ವ್ಯಾಖ್ಯೆ ಎಂಬುದು ಯಾವುದೇ ಸೂವನಾ ಅವಧಿಗೆ ಅವಕಾಶ ನೀಡುವುದಿಲ್ಲ ಹಾಗೂ ಉದ್ಯೋಗ ಹಿಂಪಡೆದುದರ ಮೇಲಿನ ಪರಿಹಾರ ಪಾವತಿಯಿಂದ ಹೊರೆತುಪಡಿಸಲಾಗಿದೆ.
- ಜುಲ್ಮಾನೆಯನ್ನು ದಂಡದ ರೂಪದಲ್ಲಿ ವಿಧಿಸಿದ ವ್ಯಾಜ್ಯೆಗಳ ಪರಿಹಾರದ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡುವುದು ಆ ಮೂಲಕ ನ್ಯಾಯಮಂಡಳಿಯ ಮೇಲಿನ ಹೊರೆಯನ್ನು ತಗ್ಗಿಸುವುದು.
ಹಿನ್ನೆಲೆ:
ಕೈಗಾರಿಕಾ ಸಂಬಂಧಗಳ ಕರಡು ಸಂಕೇತವನ್ನು ಕೇಂದ್ರ ಕಾರ್ಮಿಕ ಕಾಯ್ದೆಗಳ ಮೂರು ಅಂಶಗಳಾದ ಸಂಯೋಜನೆ, ಸರಳೀಕರಣ ಮತ್ತು ತರ್ಕಬದ್ಧಗೊಳಿಸುವಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಿದ್ಧಪಡಿಸಲಾಗಿದೆ:
i. ಟ್ರೇಡ್ ಯೂನಿಯನ್ ಆಕ್ಟ್, 1926
ii. ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ, 1946
iii. ಕೈಗಾರಿಕಾ ವಿವಾದ ಕಾಯ್ದೆ, 1947
***
(Release ID: 1593057)
Visitor Counter : 158
Read this release in:
Assamese
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Tamil
,
Telugu
,
Malayalam