ಪ್ರಧಾನ ಮಂತ್ರಿಯವರ ಕಛೇರಿ

ಬ್ರೆಜಿಲ್ ಭೇಟಿಯಿಂದ ಭಾರತ-ಬ್ರೆಜಿಲ್ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸಲು ನನಗೆ ಅವಕಾಶ ದೊರಕುತ್ತದೆ: ಪ್ರಧಾನಮಂತ್ರಿ

Posted On: 12 NOV 2019 4:00PM by PIB Bengaluru

ಬ್ರೆಜಿಲ್ ಭೇಟಿಯಿಂದ ಭಾರತ-ಬ್ರೆಜಿಲ್ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸಲು ನನಗೆ ಅವಕಾಶ ದೊರಕುತ್ತದೆ: ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವೆಂಬರ್ 13 ಮತ್ತು 14ರಂದು ಬ್ರೆಜಿಲ್ ನಲ್ಲಿ ನಡೆಯಲಿರುವ ಈ ವರ್ಷದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯ ಘೋಷವಾಕ್ಯ “ನಾವಿನ್ಯ ಭವಿಷ್ಯಕ್ಕಾಗಿ ಆರ್ಥಿಕ ಪ್ರಗತಿ” ಎಂಬುದಾಗಿದೆ. 

“ಹಲವು ವಿವಿಧ ವಲಯಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರೊಂದಿಗೆ ಇನ್ನೂ ಹೆಚ್ಚಿನ ಸಹಕಾರ ಹೊಂದುವ ಕುರಿತಂತೆ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಶೃಂಗಸಭೆಯ ನೇಪಥ್ಯದಲ್ಲಿ ನಾನು ಬ್ರಿಕ್ಸ್ ವಾಣಿಜ್ಯ ವೇದಿಕೆಯನ್ನುದ್ದೇಶಿಸಿ ಮಾತನಾಡಲಿದ್ದೇನೆ ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್ ಹಾಗೂ ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗೆ ಸಂವಾದ ನಡೆಸಲಿದ್ದೇನೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವುದು  ಬ್ರಿಕ್ಸ್ ರಾಷ್ಟ್ರಗಳಿಗೆ ಹೊಸ ಭರವಸೆ ಮೂಡಿಸಿದೆ. ನನ್ನ ಈ ಬ್ರೆಜಿಲ್ ಭೇಟಿಯಿಂದ ಭಾರತ – ಬ್ರೆಜಿಲ್ ಕಾರ್ಯತಂತ್ರ ಪಾಲುದಾರಿಕೆ ಇನ್ನಷ್ಟು ಬಲಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಬ್ರೆಜಿಲ್ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ದೊರಕಲಿದೆ. ವ್ಯಾಪಾರ, ರಕ್ಷಣೆ, ಕೃಷಿ ಮತ್ತು ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ವಿಪುಲ ಅವಕಾಶಗಳಿವೆ” ಎಂದು ಪ್ರಧಾನಮಂತ್ರಿ ಹೇಳಿದರು. 

ನಾನು ನವೆಂಬರ್ 13 ಮತ್ತು 14ರಂದು ಬ್ರೆಜಿಲ್ ನಲ್ಲಿ ನಡೆಯಲಿರುವ ಈ ವರ್ಷದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ. ಈ ಶೃಂಗಸಭೆಯ ಘೋಷವಾಕ್ಯ “ನಾವಿನ್ಯ ಭವಿಷ್ಯಕ್ಕಾಗಿ ಆರ್ಥಿಕ ಪ್ರಗತಿ” ಹಲವು ಕ್ಷೇತ್ರಗಳ ನಾನಾ ವಿಷಯಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರೊಂದಿಗೆ ಹೆಚ್ಚಿನ ಸಹಕಾರ ಕುರಿತು ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ. 

ಶೃಂಗಸಭೆಯ ನೇಪಥ್ಯದಲ್ಲಿ ನಾನು ಬ್ರಿಕ್ಸ್ ವಾಣಿಜ್ಯ ವೇದಿಕೆಯನ್ನುದ್ದೇಶಿಸಿ ಮಾತನಾಡಲಿದ್ದೇನೆ ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್ ಹಾಗೂ ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗೆ ಸಂವಾದ ನಡೆಸಲಿದ್ದೇನೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವುದು  ಬ್ರಿಕ್ಸ್ ರಾಷ್ಟ್ರಗಳಿಗೆ ಭರವಸೆ ಮೂಡಿಸಿದೆ. 

ನನ್ನ ಬ್ರೆಜಿಲ್ ಭೇಟಿ ವೇಳೆ ಅಧ್ಯಕ್ಷ @jairbolsonaro  ರೊಂದಿಗೆ ಭಾರತ – ಬ್ರೆಜಿಲ್ ಕಾರ್ಯತಂತ್ರ ಪಾಲುದಾರಿಕೆ ವೃದ್ಧಿಯ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಗುವುದು. ವ್ಯಾಪಾರ, ರಕ್ಷಣೆ, ಕೃಷಿ ಮತ್ತು ಇಂಧನ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. 

*******



(Release ID: 1592706) Visitor Counter : 64