ಪ್ರಧಾನ ಮಂತ್ರಿಯವರ ಕಛೇರಿ

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿಯಾದ ಪ್ರಧಾನಿ

Posted On: 04 NOV 2019 11:10AM by PIB Bengaluru

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿಯಾದ ಪ್ರಧಾನಿ
 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜಪಾನ್‌ ಪ್ರಧಾನಿ ಗೌರವಾನ್ವಿತ ಶಿಂಜೊ ಅಬೆ ಅವರನ್ನು ಬ್ಯಾಂಗ್‌ಕಾಕ್‌ನಲ್ಲಿ ನಡೆದ ಇಂಡಿಯಾ–ಆಸಿಯಾನ್‌ ಮತ್ತು ಪೂರ್ವ ಏಷ್ಯಾ ಶೃಂಗಸಭೆ–2019ರ ಶೃಂಗಸಭೆ ಸಂದರ್ಭದಲ್ಲಿ ಭೇಟಿಯಾದರು. ಕಳೆದ ನಾಲ್ಕು ತಿಂಗಳು ಉಭಯ ನಾಯಕರು ಮೂರು ಬಾರಿ ಪರಸ್ಪರ ಭೇಟಿಯಾದರು. ಈ ಹಿಂದೆ 2019ರ ಸೆಪ್ಟೆಂಬರ್‌ನಲ್ಲಿ ವ್ಲಾದಿವೊಸ್ಟೊಕ್‌ನಲ್ಲಿ ಭೇಟಿಯಾಗಿದ್ದರು.


 
 
ಜಪಾನ್‌ ದೊರೆ ಅವರ ಪಟ್ಟಾಭಿಷೇಕ ನಡೆಸಿದ್ದಕ್ಕೆ ಪ್ರಧಾನಿ ಮೋದಿ ಅವರು ಜಪಾನ್‌ ಪ್ರಧಾನಿ ಅಬೆ ಅವರನ್ನು ಅಭಿನಂದಿಸಿದರು. ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಅವರು ಹೃದಯಪೂರ್ವಕವಾಗಿ ಭಾಗವಹಿಸಿದ್ದರು ಎಂದು ಸ್ಮರಿಸಿದರು.
ಮುಂದಿನ ತಿಂಗಳು ನಡೆಯಲಿರುವ ಭಾರತ–ಜಪಾನ್‌ ಶೃಂಗಸಭೆಯಲ್ಲಿ ಪ್ರಧಾನಿ ಅಬೆ ಅವರನ್ನು ಉತ್ಸಾಹದಿಂದ ಸ್ವಾಗತಿಸಲು ಕಾಯುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಶ್ರೀ ಮೋದಿ ಅವರು ತಿಳಿಸಿದರು.  ಮುಂದಿನ ವಾರ್ಷಿಕ ಶೃಂಗಸಭೆ ಯಶಸ್ವಿಯಾಗಿ ನಡೆಯಲಿದ್ದು, ಭಾರತ ಮತ್ತು ಜಪಾನ್‌ನ ವಿಶೇಷ ಜಾಗತಿಕ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಉಭಯ ದೇಶಗಳ ನಡುವಣ ಆರ್ಥಿಕ ಸಂಬಂಧ ವೃದ್ಧಿಯಾಗುತ್ತಿರುವುದನ್ನು ಇಬ್ಬರು ನಾಯಕರು ಸ್ವಾಗತಿಸಿದರು. ಇಬ್ಬರು ನಾಯಕರು ಮುಂಬೈ–ಅಹಮದಾಬಾದ್‌ ಹೈಸ್ಪೀಡ್‌ ರೈಲು ಯೋಜನೆಯ ಅನುಷ್ಠಾನದ ಪ್ರಗತಿಯ ಬಗ್ಗೆ ಪರಿಶೀಲಿಸಿದರು. ಈ ಯೋಜನೆಯನ್ನು ಸುಗಮವಾಗಿ ಅನುಷ್ಠಾನಗೊಳಿಸುವ ಕುರಿತು ಪರಸ್ಪರ ಪ್ರಯತ್ನಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಭಾರತದಲ್ಲಿ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಿದೇಶಿ ಮತ್ತು ರಕ್ಷಣಾ ಇಲಾಖೆಗಳ 2+2 ಸಚಿವರ ಮಟ್ಟದ ಮಾತುಕತೆಯನ್ನು ಉಭಯ ನಾಯಕರು ಸ್ವಾಗತಿಸಿದರು. ಈ ಮಾತುಕತೆಯಿಂದ ದ್ವಿಪಕ್ಷೈ ಭದ್ರತೆ ಮತ್ತು ರಕ್ಷಣಾ ಸಹಕಾರದಲ್ಲಿನ ಕ್ಷೇತ್ರಗಳು ಬಲಗೊಳ್ಳಲು ಸಹಾಯಕವಾಗುತ್ತವೆ ಎಂದು ಒಪ್ಪಿಕೊಂಡರು.
ಮುಕ್ತವಾದ ಮತ್ತು ಇಂಡೊ ಪೆಸಿಫಿಕ್‌ ಪ್ರಾದೇಶಿಕ ಒಳಗೊಂಡ ವಹಿವಾಟು ಕೈಗೊಳ್ಳಲು ಇಬ್ಬರು ನಾಯಕರು ಪರಸ್ಪರ ಭರವಸೆ ನೀಡಿದರು. ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಇಬ್ಬರು ನಾಯಕರು ಒಪ್ಪಿಕೊಂಡರು. ಈ ಮೂಲಕ ಇಂಡೊ ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ, ಪ್ರಗತಿ  ಸಾಧಿಸುವ ಉದ್ದೇಶದ ಬಗ್ಗೆ ವಿನಿಮಯ ಮಾಡಿಕೊಂಡರು.



(Release ID: 1592619) Visitor Counter : 85