ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 2 ರಿಂದ 4 ರವರೆಗೆ ಥೈಲ್ಯಾಂಡ್‌ಗೆ ಪ್ರಧಾನ ಮಂತ್ರಿಯವರ ಭೇಟಿ

Posted On: 02 NOV 2019 11:03AM by PIB Bengaluru

ನವೆಂಬರ್ 2 ರಿಂದ 4 ರವರೆಗೆ ಥೈಲ್ಯಾಂಡ್‌ಗೆ ಪ್ರಧಾನ ಮಂತ್ರಿಯವರ ಭೇಟಿ

ಇಂದು ಬ್ಯಾಂಕಾಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲು ಆಸಿಯನ್‌ಗೆ ಸಂಬಂಧಿಸಿದ ವಿವಿಧ ಶೃಂಗಸಭೆಗಳಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸಲಿದ್ದಾರೆ

 

ಪ್ರಧಾನಿ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ಭೇಟಿ ನೀಡುತ್ತಿದ್ದಾರೆ. ಆಸಿಯಾನ್-ಇಂಡಿಯಾ ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಆರ್‌ಸಿಇಪಿ ಮಾತುಕತೆಗಳ ಸಭೆ ಸೇರಿದಂತೆ ವಿವಿಧ ಆಸಿಯಾನ್ ಸಂಬಂಧಿತ ಶೃಂಗಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಪ್ರಮುಖ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲು ಅವರು ವಿಶ್ವ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಆಸಿಯಾನ್ ಸಂಬಂಧಿತ ಶೃಂಗಸಭೆಗಳು ಭಾರತದ ವಿದೇಶಾಂಗ ನೀತಿಯ ಪ್ರಮುಖ ಅಂಶಗಳಾಗಿವೆ, ಮುಖ್ಯವಾಗಿ ನಮ್ಮ ಆಕ್ಟ್ ಈಸ್ಟ್ ಪಾಲಿಸಿ ಎಂದು ಪ್ರಧಾನ ಮಂತ್ರಿ ತಮ್ಮ ಪ್ರವಾಸಕ್ಕೆ ನಿರ್ಗಮಿಸುವ ಮುನ್ನದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೂರ್ವ ಏಷ್ಯಾ ಶೃಂಗಸಭೆಯ ಮಹತ್ವವನ್ನು ತಿಳಿಸಿದ ಪ್ರಧಾನ ಮಂತ್ರಿಯವರು, ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಇರುವ ನಮ್ಮ ದೂರದೃಷ್ಟಿಯನ್ನು ಪ್ರಸ್ತುತಪಡಿಸಲು ಇದು ಒಂದು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಇಂದು ಸಂಜೆ 6 ಗಂಟೆಗೆ ಪ್ರಧಾನಿ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ‘ಸಾವಸ್ಡೀ ಪಿಎಂ ಮೋದಿ’ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಥೈಲ್ಯಾಂಡ್ ದೇಶಕ್ಕೆ ಭಾರತೀಯ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿಯವರು, ಅವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಆಸಿಯಾನ್-ಇಂಡಿಯಾ ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಆರ್‌ಸಿಇಪಿ ಮಾತುಕತೆಗಳ ಸಭೆ ಸೇರಿದಂತೆ ವಿವಿಧ @ASEAN ಆಸಿಯಾನ್ ಸಂಬಂಧಿತ ಶೃಂಗಸಭೆಗಳಲ್ಲಿ ಭಾಗವಹಿಸಲು ನಾನು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುತ್ತೇನೆ. ಆಸಿಯಾನ್ ಸಂಬಂಧಿತ ಶೃಂಗಸಭೆಗಳು ಭಾರತದ ವಿದೇಶಾಂಗ ನೀತಿಯ ಪ್ರಮುಖ ಅಂಶಗಳಾಗಿವೆ, ಮುಖ್ಯವಾಗಿ ನಮ್ಮ ಆಕ್ಟ್ ಈಸ್ಟ್ ಪಾಲಿಸಿ. @ ASEAN2019TH

- ನರೇಂದ್ರ ಮೋದಿ (@narendramodi) ನವೆಂಬರ್ 2, 2019

ಆಸಿಯಾನ್-ಇಂಡಿಯಾ ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಆರ್‌ಸಿಇಪಿ ಮಾತುಕತೆಗಳ ಸಭೆ ಸೇರಿದಂತೆ ವಿವಿಧ @ ಆಸಿಯಾನ್ ಸಂಬಂಧಿತ ಶೃಂಗಸಭೆಗಳಲ್ಲಿ ಭಾಗವಹಿಸಲು ನಾನು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುತ್ತೇನೆ. ಆಸಿಯಾನ್ ಸಂಬಂಧಿತ ಶೃಂಗಸಭೆಗಳು ಭಾರತದ ವಿದೇಶಾಂಗ ನೀತಿಯ ಪ್ರಮುಖ ಅಂಶಗಳಾಗಿವೆ, ಮುಖ್ಯವಾಗಿ ನಮ್ಮ ಆಕ್ಟ್ ಈಸ್ಟ್ ಪಾಲಿಸಿ. @ ASEAN2019TH

- ನರೇಂದ್ರ ಮೋದಿ (@narendramodi) ನವೆಂಬರ್ 2, 2019

ಅನಿವಾಸಿ ಭಾರತೀಯರೊಂದಿಗೆ ಸಂಪರ್ಕ ಸಾಧಿಸುವುದನ್ನು ನಾನು ಯಾವಾಗಲೂ ಎದುರು ನೋಡುತ್ತಿರುತ್ತೇನೆ. ಈ ಸಂಜೆ ಬ್ಯಾಂಕಾಕ್‌ನಲ್ಲಿ ಸಂಜೆ 6 ಗಂಟೆಗೆ, ನಾನು ಥೈಲ್ಯಾಂಡ್ ಮೂಲದ ಭಾರತೀಯ ಸಮುದಾಯದೊಂದಿಗೆ ಮಾತುಕತೆ ನಡೆಸುತ್ತೇನೆ. ವಿವಿಧ ಕ್ಷೇತ್ರಗಳಲ್ಲಿ ಥೈಲ್ಯಾಂಡ್ ದೇಶಕ್ಕೆ ಅವರು ನೀಡಿದ ಕೊಡುಗೆಗಳು ಗಣನೀಯವಾಗಿವೆ. https://t.co/ceR74W2sLr

- ನರೇಂದ್ರ ಮೋದಿ (@narendramodi)



(Release ID: 1592596) Visitor Counter : 60