ಪ್ರಧಾನ ಮಂತ್ರಿಯವರ ಕಛೇರಿ

ಶಿಲ್ಲಾಂಗ್ ನ ಆರ್ಚ್ ಬಿಷಪ್ ರೆವರೆಂಡ್ ಡಾಮಿನಿಕ್ ಜಾಲ ನಿಧನಕ್ಕೆ ಪ್ರಧಾನಿ ಕಂಬನಿ

Posted On: 12 OCT 2019 10:34AM by PIB Bengaluru

ಶಿಲ್ಲಾಂಗ್ ನ ಆರ್ಚ್ ಬಿಷಪ್ ರೆವರೆಂಡ್ ಡಾಮಿನಿಕ್ ಜಾಲ ನಿಧನಕ್ಕೆ ಪ್ರಧಾನಿ ಕಂಬನಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಶಿಲ್ಲಾಂಗ್ ನ ಆರ್ಚ್ ಬಿಷಪ್ ರೆವರೆಂಡ್ ಡಾಮಿನಿಕ್ ಜಾಲ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಆರ್ಚ್ ಬಿಷಪ್ ನಿಧನಕ್ಕೆ ತೀವ್ರ ವೇದನೆ ವ್ಯಕ್ತಪಡಿಸಿದ್ದಾರೆ. ‘ರೆವರೆಂಡ್ ಜಾಲಾ ಅವರನ್ನು ನಾವು ಸದಾ ಅವರು ಸಮಾಜಕ್ಕೆ ಸಲ್ಲಿಸಿರುವ ಅಪ್ರತಿಮ ಸೇವೆ ಮತ್ತು ಮೇಘಾಲಯದ ಪ್ರಗತಿಗೆ ಅವರಿಗಿದ್ದ ಕಾಳಜಿಯಿಂದಾಗಿ ಸ್ಮರಿಸಬೇಕಾಗುತ್ತದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

@PMO India

‘ರೆವರೆಂಡ್ ಜಾಲಾ ನಿಧನದಿಂದ ತೀವ್ರ ವೇದನೆಯಾಗುತ್ತಿದೆ, ರೆವರೆಂಡ್ ಜಾಲಾ ಅವರು ಸಮಾಜಕ್ಕೆ ಸಲ್ಲಿಸಿರುವ ಅಪ್ರತಿಮ ಸೇವೆ ಮತ್ತು ಮೇಘಾಲಯದ ಪ್ರಗತಿಗೆ ಅವರಿಗಿದ್ದ ಕಾಳಜಿಯನ್ನು ನಾವು ಸದಾ ಸ್ಮರಿಸಬೇಕಾಗುತ್ತದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ’ PM @narendramodi

ಶಿಲ್ಲಾಂಗ್ ನ ರೆವರೆಂಡ್ ಆರ್ಚ್ ಬಿಷಪ್ ಡಾಮಿನಿಕ್ ಜಾಲ ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 2019ರ ಅಕ್ಟೋಬರ್ 11ರಂದು ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ಅವರು 1977ರ ನವೆಂಬರ್ 19ರಂದು ಡಾನ್ ಬಾಸ್ಕೋದ ಸೆಲೆಸಿಯನ್ಸ್ ನಿಂದ ಪಾದ್ರಿಯಾಗಿ ದೀಕ್ಷೆ ಸ್ವೀಕರಿಸಿದ್ದರು. ಅವರು ಡಿಸೆಂಬರ್ 1999ರಲ್ಲಿ ಶಿಲ್ಲಾಂಗ್ ನ ಆರ್ಚ್ ಬಿಷಪ್ ಆಗಿ ನೇಮಕಗೊಳ್ಳುವ ಮುಂಚೆ ಗುವಾಹತಿ ಪ್ರಾಂತ್ಯದ ಪ್ರದೇಶದಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.



(Release ID: 1588335) Visitor Counter : 81