ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಯುಎನ್ಸಿಸಿಡಿಯ ಸಿಒಪಿ 14 ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಭಾರತವು ಎರಡು ವರ್ಷಗಳ ಸಿಒಪಿ ಅಧ್ಯಕ್ಷತೆಯನ್ನು ಚೀನಾದಿಂದ ವಹಿಸಿಕೊಂಡಿದೆ

Posted On: 08 SEP 2019 8:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಯುಎನ್ಸಿಸಿಡಿಯ ಸಿಒಪಿ 14 ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

ಭಾರತವು ಎರಡು ವರ್ಷಗಳ ಸಿಒಪಿ ಅಧ್ಯಕ್ಷತೆಯನ್ನು ಚೀನಾದಿಂದ ವಹಿಸಿಕೊಂಡಿದೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಮರುಭೂಮೀಕರಣ ವಿರುದ್ಧ ಹೋರಾಟದ ವಿಶ್ವಸಂಸ್ಥೆ ಸಮಾವೇಶದ (ಯುಎನ್ಸಿಸಿಡಿ) ಪಕ್ಷಗಳ 14 ನೇ ಸಮ್ಮೇಳನ (ಸಿಒಪಿ 14) ದ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮ್ಮೇಳನವನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಆಯೋಜಿಸಲಾಗಿದೆ.

ಭಾರತವು ಎರಡು ವರ್ಷಗಳ ಸಿಒಪಿ ಅಧ್ಯಕ್ಷ ಸ್ಥಾನವನ್ನು ಚೀನಾದಿಂದ ವಹಿಸಿಕೊಂಡಿರುವ ಸಂದರ್ಭದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಇದು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಶೇಷವಾಗಿ ಭೂ ನಿರ್ವಹಣೆಯ ಬಗ್ಗೆ ಜಾಗತಿಕ ಸಂವಾದವನ್ನು ಹೆಚ್ಚಿಸುತ್ತದೆ. ಹವಾಮಾನ ಬದಲಾವಣೆ, ಜೀವವೈವಿಧ್ಯತೆ ಮತ್ತು ಭೂ ನಿರ್ವಹಣೆ ಕುರಿತ ಮೂರು ರಿಯೊ ಸಮಾವೇಶಗಳ ಸಿಒಪಿಯ ಆತಿಥ್ಯ ವಹಿಸುವ ಗೌರವ ಭಾರತಕ್ಕೆ ದೊರೆತಿರುವುದು ಗಮನಾರ್ಹ.

ಸಮ್ಮೇಳನದಲ್ಲಿ ಅಂದಾಜು 7,200 ಮಂದಿ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ. ಇದರಲ್ಲಿ 197 ಪಕ್ಷಗಳ ಸಚಿವರು ಮತ್ತು ಸರ್ಕಾರಗಳ ಪ್ರತಿನಿಧಿಗಳು, ಸರ್ಕಾರೇತರ ಮತ್ತು ಅಂತರ್ ಸರ್ಕಾರಿ ಸಂಸ್ಥೆಗಳು, ವಿಜ್ಞಾನಿಗಳು, ಮಹಿಳೆಯರು ಮತ್ತು ಯುವ ಪ್ರತಿನಿಧಿಗಳು ಸೇರಿದ್ದಾರೆ. ವಿಶ್ವಾದ್ಯಂತ ಭೂ-ಬಳಕೆಯ ನೀತಿಗಳನ್ನು ಬಲಪಡಿಸುವ ಮತ್ತು ಬಲವಂತದ ವಲಸೆ, ಮರಳು ಹಾಗೂ ಧೂಳಿನ ಬಿರುಗಾಳಿಗಳು ಮತ್ತು ಬರಗಾಲದಂತಹ ಬೆದರಿಕೆಗಳನ್ನು ಪರಿಹರಿಸುವ ಉದ್ದೇಶದಿಂದ ಅವರು ಸುಮಾರು 30 ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ.



(Release ID: 1585289) Visitor Counter : 94