ಸಂಪುಟ

ಐಡಿಬಿಐ ಬ್ಯಾಂಕಿಗೆ ಸರ್ಕಾರದಿಂದ ಬಂಡವಾಳ ತುಂಬಿಸಲು ಸಂಪುಟದ ಅನುಮೋದನೆ

Posted On: 03 SEP 2019 3:37PM by PIB Bengaluru
ಐಡಿಬಿಐ ಬ್ಯಾಂಕಿಗೆ ಸರ್ಕಾರದಿಂದ ಬಂಡವಾಳ ತುಂಬಿಸಲು ಸಂಪುಟದ ಅನುಮೋದನೆ

  

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಐಡಿಬಿಐ ಬ್ಯಾಂಕಿಗೆ ಸರ್ಕಾರವು 4,557 ಕೋಟಿ ರೂ.ಗಳನ್ನು ತುಂಬಿಸಲು ಅಂಗೀಕಾರ ನೀಡಿದೆ.

 

ಇದು ಐಡಿಬಿಐ ಬ್ಯಾಂಕಿನ ವಹಿವಾಟಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಮತ್ತು ಲಾಭದಾಯಕತೆ ಮತ್ತು ಸಾಮಾನ್ಯ ಸಾಲಕ್ಕೆ ಮರಳಲು ಅನುವು ಮಾಡಿಕೊಡುತ್ತದೆ ಹಾಗೂ ತನ್ನ ಹೂಡಿಕೆಯನ್ನು ಸೂಕ್ತ ಸಮಯದಲ್ಲಿ ಮರುಪಡೆಯುವ ಆಯ್ಕೆಯನ್ನು ಸರ್ಕಾರಕ್ಕೆ ನೀಡುತ್ತದೆ.

 

ಐಡಿಬಿಐ ಬ್ಯಾಂಕ್ ತನ್ನ ಪೂರ್ವಾರ್ಜಿತ ಸ್ವತ್ತಿನೊಂದಿಗೆ ವ್ಯವಹಾರವನ್ನು ಪೂರ್ಣಗೊಳಿಸಲು ಒಂದು ಬಾರಿಯ ಬಂಡವಾಳದ ಅಗತ್ಯತೆಯಿದೆ. ಇದು ಈಗಾಗಲೇ ಗಣನೀಯವಾಗಿ ಸ್ವಚ್ಛಗೊಳಿಸಲಾಗಿದೆ. ನಿವ್ವಳ ಅನುತ್ಪಾದಕ ಸ್ವತ್ತ (ಎನ್ ಪಿ ಎ) ನ್ನು ಜೂನ್ 2018 ರಲ್ಲಿದ್ದ  ಗರಿಷ್ಠ ಶೇ.18.8 ರಿಂದ 2019 ರ ಜೂನ್‌ನಲ್ಲಿ ಶೇ.8 ಕ್ಕೆ ಇಳಿಸಲಾಗಿದೆ. ಇದಕ್ಕಾಗಿ ಬಂಡವಾಳವು ಅದರ ಷೇರುದಾರರಿಂದ ಬರಬೇಕಾಗಿದೆ. ಇದರಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ್ದು ಶೇ.51 ರಷ್ಟಿದ್ದು ಇದಕ್ಕಿಂತ ಹೆಚ್ಚು ಪಡೆಯಲು ವಿಮಾ ನಿಯಂತ್ರಣದ ಅನುಮತಿಯಿರುವುದಿಲ್ಲ. ಅಗತ್ಯವಿರುವ 9,300 ಕೋಟಿ ರೂ.ಗಳಲ್ಲಿ ಎಲ್ಐಸಿ ಶೇ. 51 (ರೂ. 4,743 ಕೋಟಿ) ರಷ್ಟು ಪೂರೈಸಲಿದೆ. ಉಳಿದ ಶೇ.49ರ 4,557 ಕೋಟಿ ರೂ. ಗಳನ್ನು ಒಂದು ಬಾರಿಯ ಆಧಾರದಲ್ಲಿ ಸರ್ಕಾರವು ತುಂಬಲಿದೆ.

 

ಈ ಬಂಡವಾಳ ತುಂಬಿಕೆ ನಂತರ, ಐಡಿಬಿಐ ಬ್ಯಾಂಕ್ ಮತ್ತಷ್ಟು ಬಂಡವಾಳವನ್ನು ಸ್ವಂತವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಮುಂದಿನ ವರ್ಷದ ಹೊತ್ತಿಗೆ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಚೌಕಟ್ಟಿನಿಂದ ಹೊರಬರುವುದನ್ನು ನಿರೀಕ್ಷಿಸಲಾಗಿದೆ. ಈ ನಗದು ತಟಸ್ಥ ಬಂಡವಾಳವು ರೀಕ್ಯಾಪ್ ಬಾಂಡ್‌ಗಳ ಮೂಲಕ ಇರುತ್ತದೆ. ಅಂದರೆ ಸರ್ಕಾರವು ಬಂಡವಾಳವನ್ನು ಬ್ಯಾಂಕಿಗೆ ಸೇರಿಸುವುದು ಮತ್ತು ಬ್ಯಾಂಕ್ ಅದೇ ದಿನ ಸರ್ಕಾರದಿಂದ ರೀಕ್ಯಾಪ್ ಬಾಂಡ್ ಅನ್ನು ಖರೀದಿಸುತ್ತದೆ. ಇದು ದ್ರವ್ಯತೆ ಅಥವಾ ಪ್ರಸಕ್ತ ವರ್ಷದ ಬಜೆಟ್‌ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 

ಹಿನ್ನೆಲೆ:

ಆಗಸ್ಟ್ 2018 ರಲ್ಲಿ ಸಂಪುಟದ ಅನುಮೋದನೆಯ ನಂತರ, ಎಲ್ಐಸಿಯು, ಐಡಿಬಿಐ ಬ್ಯಾಂಕಿನಲ್ಲಿ ಶೇ.51 ಪಾಲನ್ನು ಪಡೆದುಕೊಂಡಿದೆ. ಸರ್ಕಾರ ಪ್ರವರ್ತಕರಾಗಿ ಮುಂದುವರೆದಿದ್ದು, ಶೇ.46.46 ಪಾಲನ್ನು ಹೊಂದಿದೆ.

ಕಳೆದ ಒಂದು ವರ್ಷದಲ್ಲಿ ಐಡಿಬಿಐ ಬ್ಯಾಂಕಿನ ಆರ್ಥಿಕ ನಿಯತಾಂಕಗಳು ಗಣನೀಯವಾಗಿ ಸುಧಾರಿಸಿವೆ:

·        30.9.18 ರಲ್ಲಿ ಶೇ. 6.22 ರಷ್ಟಿದ್ದ CRAR 31.3.19 ಕ್ಕೆ ಶೇ.11.58 ಕ್ಕೆ ಸುಧಾರಿಸಿದೆ.

·        ನಿವ್ವಳ ಎನ್‌ಪಿಎ ಅನುಪಾತವು 30.9.18 ರಲ್ಲಿದ್ದ ಶೇ.17.3 ರಿಂದ 31.3.19 ರ ವೇಳೆಗೆ ಶೇ.10.11 ಕ್ಕೆ ಇಳಿದಿತ್ತು. 2019 ರ ಜೂನ್ 30 ರ ವೇಳೆಗೆ ಶೇ.8.02 ಕ್ಕೆ ಇಳಿದಿದೆ.

·        ಪ್ರೊವಿಷನ್ ವ್ಯಾಪ್ತಿ ಅನುಪಾತ (ಪಿಸಿಆರ್) ಶೇ.69 (30.9.18) ರಿಂದ ಶೇ.83 (31.3.19) ಕ್ಕೆ ಮತ್ತು 2019 ರ ಜೂನ್ 30 ರಂದು ಶೇ. 88 ಕ್ಕೆ ಸುಧಾರಿಸಿದೆ.

·        ಎಲ್‌ಐಸಿಯೊಂದಿಗಿನ ಸಂಯೋಜನೆ 3184 ಶಾಖೆಗಳಲ್ಲಿರುವ 29 ಕೋಟಿ ಪಾಲಿಸಿದಾರರು  ಮತ್ತು 11 ಲಕ್ಷ ಏಜೆಂಟರಿಗೆ ಮತ್ತು ಎಲ್‌ಐಸಿಯ 2 ಲಕ್ಷ ಉದ್ಯೋಗಿಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಿದೆ.

·        2020 ನೇ ಆರ್ಥಿಕ ವರ್ಷಕ್ಕೆ 500 ಕೋಟಿ ರೂ. ಮತ್ತು 2021ರ ಆರ್ಥಿಕ ವರ್ಷಕದಿಂದ 1,000 ಕೋಟಿ ರೂ ಆದಾಯವನ್ನು ಎಲ್‌ಐಸಿ ಸಂಯೋಜನೆಯಿಂದ ಅಂದಾಜಿಸಲಾಗಿದೆ.

·        ಮಾರ್ಚ್ 2019 ರಲ್ಲಿ 160 ಕೋಟಿ ರೂ ಪ್ರೀಮಿಯಂನೊಂದಿಗೆ ವಿಮಾ ಮಾರಾಟ ಪ್ರಾರಂಭವಾಯಿತು. ಈ ಆವೇಗವು ಈ ವರ್ಷದ ಮೊದಲ ನಾಲ್ಕೂವರೆ ತಿಂಗಳಲ್ಲಿ 250 ಕೋಟಿ ರೂ. ಪ್ರೀಮಿಯಂ ಸಂಗ್ರಹದವರೆಗೆ ಮುಂದುವರೆದಿದೆ. 2019-20ನೇ ಆರ್ಥಿಕ ವರ್ಷಕ್ಕೆ 2000 ಕೋಟಿ ರೂ. ಪ್ರೀಮಿಯಂ ಮತ್ತು 200 ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ.

·        ಎಲ್ಐಸಿ ಏಜೆಂಟರ ನೆಟ್‌ವರ್ಕ್ ಅನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ 5,000 ಕೋಟಿ ರೂ.ಗಳ ಹೆಚ್ಚುವರಿ ವ್ಯವಹಾರವನ್ನು (ವಸತಿ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ) ಎಂದು ನಿರೀಕ್ಷಿಸಲಾಗಿದೆ.



(Release ID: 1584003) Visitor Counter : 94