ಸಂಪುಟ
ಮಾಸ್ಕೋದಲ್ಲಿ ಇಸ್ರೋ ತಾಂತ್ರಿಕ ಸಂಪರ್ಕ ಘಟಕಕ್ಕೆ ಸಂಪುಟದ ಅನುಮೋದನೆ
Posted On:
31 JUL 2019 3:39PM by PIB Bengaluru
ಮಾಸ್ಕೋದಲ್ಲಿ ಇಸ್ರೋ ತಾಂತ್ರಿಕ ಸಂಪರ್ಕ ಘಟಕಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಷ್ಯಾದ ಮಾಸ್ಕೋದಲ್ಲಿ ಇಸ್ರೋದ ತಾಂತ್ರಿಕ ಸಂಪರ್ಕ ಘಟಕ (ಐಟಿಎಲ್.ಯು) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.
ಹಣಕಾಸಿನ ಪರಿಣಾಮಗಳು:
ರಷ್ಯಾದ ಮಾಸ್ಕೋದಲ್ಲಿನ ಐಟಿಎಲ್.ಯುನಲ್ಲಿ ಸಂಬಳ, ಕಚೇರಿ ವೆಚ್ಚ, ಬಾಡಿಗೆ, ತೆರಿಗೆ ಇತ್ಯಾದಿ ಸೇರಿ ವಾರ್ಷಿಕ ಸುಮಾರು 1.50 ಕೋಟಿ ರೂಪಾಯಿಗಳ ಖರ್ಚು ಬರುತ್ತದೆ ಎಂದು ಅಂದಾಜಿಸಲಾಗಿದೆ.
ವಿವರಗಳು:
ಮಾಸ್ಕೋದ ಇಸ್ರೋದ ತಾಂತ್ರಿಕ ಸಂಪರ್ಕ ಘಟಕ (ಐಟಿಎಲ್.ಯು) ಇಸ್ರೋದ ಕಾರ್ಯಕ್ರಮಾತ್ಮಕ ಗುರಿಗಳ ಸಾಕ್ಷಾತ್ಕಾರಕ್ಕಾಗಿ ರಷ್ಯಾ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಸಮಯೋಚಿತ ಮಧ್ಯಪ್ರವೇಶಕ್ಕೆ ಪರಿಣಾಮಕಾರಿ ತಾಂತ್ರಿಕ ಸಮನ್ವಯವನ್ನು ಅಣಿಗೊಳಿಸುತ್ತದೆ. ಇಸ್ರೋದಿಂದ ಐಟಿಎಲ್.ಯು.ಗೆ ನಿಯುಕ್ತಿಗೊಳಿಸಲಾದ ಸಂಪರ್ಕಾಧಿಕಾರಿ, ಸಂಶೋಧನೆಯಲ್ಲಿನ ಅಭಿವೃದ್ಧಿ ಮತ್ತು ತಾಂತ್ರಿಕತೆ ಮತ್ತು ಆಯಾ ರಾಷ್ಟ್ರಗಳ ಸಂಶೋಧಕರು, ಸರ್ಕಾರಿ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ನಡೆಸಿದ ಸಭೆಗಳಲ್ಲಿ ಹೊರಹೊಮ್ಮುವ ಫಲಶ್ರುತಿಗಳನ್ನು ಒದಗಿಸುತ್ತಾರೆ. ಅವರು ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಸಹಕಾರದಿಂದ ನಡೆಯುತ್ತಿರುವ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಾರೆ ಮತ್ತು ಉಲ್ಲೇಖಿತ ವಿಚಾರಗಳಲ್ಲಿ ಇಸ್ರೋ ಪರವಾಗಿ ಕಾರ್ಯ ನಿರ್ವಹಿಸುತ್ತಾರೆ.
ಪ್ರಯೋಜನಗಳು:
ಪರಸ್ಪರ ವ್ಯೂಹಾತ್ಮಕ ಫಲಶ್ರುತಿಗಾಗಿ ರಷ್ಯಾ ಮತ್ತು ನೆರೆಯ ರಾಷ್ಟ್ರಗಳಲ್ಲಿನ ಕೈಗಾರಿಕೆ/ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಇಸ್ರೋಗೆ ಅವಕಾಶ ಆಗಲಿದೆ.
ಇಸ್ರೋದ ಗಗನಯಾನ ಕಾರ್ಯಕ್ರಮಕ್ಕೆ ಕೆಲವು ತಾಂತ್ರಿಕತೆಗಳ ಅಭಿವೃದ್ಧಿ ಮತ್ತು ವಿಶೇಷ ಸೌಲಭ್ಯಗಳ ಸ್ಥಾಪನೆಯ ಅಗತ್ಯವಿರುತ್ತದೆ, ಇದು ಬಾಹ್ಯಾಕಾಶದ ಬದುಕು ಬೆಂಬಲಿಸಲು ಅಗತ್ಯವಾಗಿದೆ.
ಮಾನವ ಸಹಿತ ಗಗನಯಾನ ಕಾರ್ಯಕ್ರಮವನ್ನು ಸಾಕಾರಗೊಳಿಸಲು 2022ರ ಆಗಸ್ಟ್ 15ರ ಗಡುವನ್ನು ಗಮನದಲ್ಲಿಟ್ಟುಕೊಂಡು, ಈಗಾಗಲೇ ತಮ್ಮ ತಾಂತ್ರಿಕ ಸಾಮರ್ಥ್ಯಗಳನ್ನು ನಿರ್ದಿಷ್ಟ ಕ್ಷೇತ್ರಗಳಲ್ಲಿ ಪ್ರದರ್ಶಿಸಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳಿಂದ ತಾಂತ್ರಿಕ ಸಹಕಾರವನ್ನು ಪಡೆಯುವುದು ಯುಕ್ತವಾಗಿದೆ. ರಷ್ಯಾ ಬಾಹ್ಯಾಕಾಶ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ, ರಷ್ಯಾದೊಂದಿಗೆ ಪ್ರಸ್ತುತವಾದ ವಿವಿಧ ರೀತಿಯ ರಂಗದಲ್ಲಿ ವ್ಯಾಪಕವಾಗಿ ಸಹಕರಿಸಲು ಉದ್ದೇಶಿಸಲಾಗಿದೆ.
ಅನುಷ್ಠಾನದ ಕಾರ್ಯತಂತ್ರ:
ಐಟಿಎಲ್.ಯು ಮಾಸ್ಕೋ ಕಚೇರಿಯನ್ನು “ಕೌನ್ಸಿಲರ್ (ಬಾಹ್ಯಾಕಾಶ)” ಎಂದು ನಿಯುಕ್ತಿಗೊಂಡ ಇಸ್ರೋದ ನಿಯೋಜಿತ ವಿಜ್ಞಾನಿ/ಎಂಜಿನಿಯರ್ ಸ್ಥಳೀಯ ಸಿಬ್ಬಂದಿಯ ಬೆಂಬಲದೊಂದಿಗೆ ನಿರ್ವಹಿಸುತ್ತಾರೆ. ಈ ಪ್ರಕ್ರಿಯೆಯನ್ನು ಅನುಮೋದನೆ ದೊರೆತ ಆರು ತಿಂಗಳುಗಳ ಒಳಗಾಗಿ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಪರಿಣಾಮಗಳು:
ಸಂಪರ್ಕಾಧಿಕಾರಿಗಳು ಸಂಶೋಧನೆಯಲ್ಲಿನ ಅಭಿವೃದ್ಧಿ ಮತ್ತು ತಾಂತ್ರಿಕತೆ ಮತ್ತು ಆಯಾ ರಾಷ್ಟ್ರಗಳ ಸಂಶೋಧಕರು, ಸರ್ಕಾರಿ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ನಡೆಸಿದ ಸಭೆಗಳಲ್ಲಿ ಹೊರಹೊಮ್ಮುವ ಫಲಶ್ರುತಿ ಸೇರಿದಂತೆ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತಾರೆ. ಅವರು ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನ ಸಹಕಾರ ಕುರಿತಂತೆ ನಡೆಯುತ್ತಿರುವ ದ್ವಿಪಕ್ಷೀಯ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಾರೆ ಮತ್ತು ಉಲ್ಲೇಖಿತ ವಿಚಾರಗಳಲ್ಲಿ ಇಸ್ರೋ ಪರವಾಗಿ ಕಾರ್ಯನಿರ್ವಹಿಸುತ್ತಾರೆ.
ಹಿನ್ನೆಲೆ:
ಬಾಹ್ಯಾಕಾಶ ಇಲಾಖೆ ತಾಂತ್ರಿಕ ಸಂಪರ್ಕ ಘಟಕಗಳನ್ನು ಅಂದರೆ ಇಸ್ರೋ ತಾಂತ್ರಿಕ ಸಂಪರ್ಕ ಘಟಕ (ಐಟಿ.ಎಲ್.ಯು.)ಗಳನ್ನು ಅನುಕ್ರಮವಾಗಿ ಅಮೆರಿಕ ಮತ್ತು ಯುರೋಪ್ ನ ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಸರ್ಕಾರಗಳೊಂದಿಗೆ ಸಂಪರ್ಕಿಸುವ ಪ್ರಮುಖ ಉದ್ದೇಶದೊಂದಿಗೆ ಅಮೆರಿಕದ ವಾಷಿಂಗ್ಟನ್ ಮತ್ತು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಸ್ಥಾಪಿಸಿದೆ. ಬಾಹ್ಯಾಕಾಶ ಯುಗ ಆರಂಭವಾದಾಗಿನಿಂದಲೂ ಭಾರತ ಮತ್ತು ರಷ್ಯಾ ನಡುವೆ ಬಾಹ್ಯಾಕಾಶ ಸಹಕಾರ ಪ್ರಮುಖ ಸಂಪರ್ಕಗಳಲ್ಲಿ ಒಂದಾಗಿದೆ ಮತ್ತು ಪ್ರಸ್ತುತ ಎರಡೂ ಕಡೆಯವರು ಬಾಹ್ಯಾಕಾಶ ಕಾರ್ಯಕ್ರಮದ ವೈವಿಧ್ಯಮಯ ರಂಗದಲ್ಲಿ ಸಂವಾದಗಳನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ. ರಷ್ಯಾದೊಂದಿಗೆ ಸಹಕಾರವನ್ನು ವ್ಯಾಪಕಗೊಳಿಸುವುದರ ಜೊತೆಗೆ, ಭಾರತವು ತನ್ನ ಬಾಹ್ಯಾಕಾಶ ಸಹಕಾರವನ್ನು ರಷ್ಯಾ ಸಮೀಪದ ರಾಷ್ಟ್ರಗಳಿಗೂ ವಿಸ್ತರಿಸುತ್ತಿದೆ. ಹೆಚ್ಚಿನ ಮಟ್ಟದ ಅಂತಾರಾಷ್ಟ್ರೀಯ ತಾಂತ್ರಿಕ ಸಹಯೋಗಕ್ಕಾಗಿ ವ್ಯಾಪಕವಾದ ನಿರಂತರ ಸಮನ್ವಯ ಮತ್ತು ನೇರ ಸಂಪರ್ಕ ಬೆಂಬಲವನ್ನು ಇದು ಬಯಸುತ್ತದೆ.
********
(Release ID: 1580974)
Visitor Counter : 202
Read this release in:
Assamese
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Tamil
,
Telugu
,
Malayalam