ಪ್ರಧಾನ ಮಂತ್ರಿಯವರ ಕಛೇರಿ

4ನೇ ಆವೃತ್ತಿಯ ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆ-2018ರ ಫಲಿತಾಂಶ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ

Posted On: 28 JUL 2019 4:53PM by PIB Bengaluru

4ನೇ ಆವೃತ್ತಿಯ ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆ-2018ರ ಫಲಿತಾಂಶ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 29,2019ರಂದು ಸೋಮವಾರ ಲೋಕ ಕಲ್ಯಾಣ ಮಾರ್ಗದಲ್ಲಿ 4ನೇ ಆವೃತ್ತಿಯ ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆ -2018ರ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಹುಲಿ ಅಂದಾಜು ಸಮೀಕ್ಷೆ, ಅದರ ವ್ಯಾಪ್ತಿ, ಮಾದರಿಯ ತೀವ್ರತೆ ಮತ್ತು ಕ್ಯಾಮರಾದಲ್ಲಿ ಸೆರೆಹಿಡಿಯುವ ಪ್ರಮಾಣದಿಂದಾಗಿ 

ವಿಶ್ವದಲ್ಲಿಯೇ ಅತಿದೊಡ್ಡ ವನ್ಯಜೀವಿ ಸಮೀಕ್ಷೆ ಎಂದು ನಂಬಲಾಗಿದೆ.

ಭಾರತ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆಯನ್ನು ನಡೆಸುತ್ತಿದೆ. ಮೂರು ಆವೃತ್ತಿಗಳ  ಅಂದಾಜು 2006,2010 ಮತ್ತು 2014ರಲ್ಲಿ ಪೊರ್ಣಗೊಂಡಿದೆ.

ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಪ್ರತಿಕೂಲ ಹವಾಮಾನ ವೈಪರೀತ್ಯದ ಪರಿಣಾಮ ಹುಲಿಗಳ ಮೇಲಿನ ಆರ್ಥಿಕ ಮೌಲ್ಯಮಾಪನ  ಕೂಡ ನಡೆಸಿದೆ. ಹುಲಿ ಸಂರಕ್ಷಣಾ ಯೋಜನೆಯಡಿ ಕಾನೂನು ಬದ್ಧವಾಗಿ ಮಾಡಬೇಕಾಗಿರುವ ಪ್ರಕ್ರಿಯೆಗಳನ್ನು ಕಾರ್ಯಾಚರಣೆಗೊಳಿಸಿ ಅವುಗಳಿಗೆ ಸಾಂಸ್ಥಿಕ ರೂಪ ನೀಡಲಾಗಿದೆ.


(Release ID: 1580608) Visitor Counter : 151