ಸಂಪುಟ

ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವಿನ ಅಂತರ ಸಾಂಸ್ಥಿಕ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 17 JUL 2019 4:21PM by PIB Bengaluru

ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವಿನ ಅಂತರ ಸಾಂಸ್ಥಿಕ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುನರುತ್ಪಾದಕ ಔಷಧ ಮತ್ತು 3 ಡಿ ಬಯೋಪ್ರಿಂಟಿಂಗ್, ಹೊಸ ತಂತ್ರಜ್ಞಾನಗಳು, ವೈಜ್ಞಾನಿಕ ವಿಚಾರಗಳು/ಮಾಹಿತಿ ಮತ್ತು ತಂತ್ರಜ್ಞಾನಗಳ ವಿನಿಮಯ, ಮತ್ತು ವೈಜ್ಞಾನಿಕ ಮೂಲಸೌಕರ್ಯಗಳ ಜಂಟಿ ಬಳಕೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವಿನ ಅಂತರ ಸಾಂಸ್ಥಿಕ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ಪ್ರಯೋಜನಗಳು:

ಈ ಒಪ್ಪಂದದ ಅಡಿಯಲ್ಲಿ ಜಂಟಿ ಸಂಶೋಧನಾ ಯೋಜನೆಗಳು, ತರಬೇತಿ ಕಾರ್ಯಕ್ರಮಗಳು, ಸಮಾವೇಶಗಳು, ವಿಚಾರಗೋಷ್ಠಿ ಇತ್ಯಾದಿಗಳು ಎಲ್ಲಾ ಅರ್ಹ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಮುಕ್ತವಾಗಿರುತ್ತವೆ ಮತ್ತು ವೈಜ್ಞಾನಿಕ ಅರ್ಹತೆ ಮತ್ತು ಉತ್ಕೃಷ್ಟತೆಯ ಆಧಾರದ ಮೇಲೆ ಬೆಂಬಲ ನೀಡಲಾಗುತ್ತದೆ. ಪುನರುತ್ಪಾದಕ ಔಷಧ ಮತ್ತು 3ಡಿ ಬಯೋ ಪ್ರಿಂಟಿಂಗ್ ಕ್ಷೇತ್ರದಲ್ಲಿನ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗಳು ಹೊಸ ಬೌದ್ಧಿಕ ಆಸ್ತಿ ಸೃಷ್ಟಿ, ಪ್ರಕ್ರಿಯೆ, ಮೂಲಮಾದರಿಗಳು ಅಥವಾ ಉತ್ಪನ್ನಗಳ ಉತ್ಪಾದನೆಗೆ ಸಾಮರ್ಥ್ಯವನ್ನು ಹೊಂದಿರುತ್ತವೆ.

 

ಎರಡೂ ಸಂಸ್ಥೆಗಳು ಒಪ್ಪಂದದಡಿಯಲ್ಲಿ ಆಲೋಚಿಸಿದ ಸಾಮಾನ್ಯ ಶೈಕ್ಷಣಿಕ ವಿನಿಮಯವು ನಿರ್ದಿಷ್ಟ ಯೋಜನೆಗಳ ಅಭಿವೃದ್ಧಿಗೆ ಕಾರಣವಾಗುತ್ತದೆ, ಪ್ರತಿಯೊಂದು ಶೈಕ್ಷಣಿಕ, ಚಿಕಿತ್ಸಾಲಯದ ಮತ್ತು ವಾಣಿಜ್ಯ ಪರಿಣಾಮಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತವೆ.

 

 

ಪ್ರಮುಖ ಅಂಶಗಳು:

ಶೈಕ್ಷಣಿಕ ಸಹಯೋಗದ ಮೂಲಕ ಎರಡೂ ಸಂಸ್ಥೆಗಳ ಸಂಶೋಧನೆ ಮತ್ತು ಶಿಕ್ಷಣದ ಅಭಿವೃದ್ಧಿಗೆ ಕೊಡುಗೆ ನೀಡುವುದು ಒಪ್ಪಂದದ ಉದ್ದೇಶವಾಗಿದೆ. ಸಹಯೋಗ ಮತ್ತು ಜ್ಞಾನದ ವಿನಿಮಯ ಎರಡಕ್ಕೂ ಉದ್ದೇಶಿಸಿರುವ ಸಾಮಾನ್ಯ ಆಸಕ್ತಿಯ ಸಾಮಾನ್ಯ ಕ್ಷೇತ್ರಗನ್ನು ಒಳಗೊಂಡಿದೆ:

 

(1) ವಿಶೇಷವಾಗಿ 3D ಬಯೋ ಪ್ರಿಂಟಿಂಗ್ ಕ್ಷೇತ್ರಗಳಲ್ಲಿ ತರಬೇತಿ, ಅಧ್ಯಯನ ಮತ್ತು ಸಂಶೋಧನೆಗಾಗಿ ಬೋಧಕ ಸದಸ್ಯರು ಮತ್ತು ವಿದ್ಯಾರ್ಥಿಗಳ ವಿನಿಮಯ;

 

(2) ಜಂಟಿ ಸಂಶೋಧನಾ ಯೋಜನೆಗಳ ಕಾರ್ಯಗತಗೊಳಿಸುವಿಕೆ; ಮತ್ತು

 

(3) ಮಾಹಿತಿ ವಿನಿಮಯ ಮತ್ತು ಶೈಕ್ಷಣಿಕ ಪ್ರಕಟಣೆಗಳು.

 

ಹಿನ್ನೆಲೆ:

ಭಾರತ ಸರ್ಕಾರ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವೆ ಪರಸ್ಪರರ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬಲಿಷ್ಠ ಮತ್ತು ದೀರ್ಘಕಾಲೀನ ಸಹಕಾರಕ್ಕೆ ಭಾರತ ಸರ್ಕಾರ ನೀಡಿರುವ ಒತ್ತಿನ ನಿಟ್ಟಿನಲ್ಲಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿನ ರಾಷ್ಟ್ರೀಯ ಮಹತ್ವದ ಟ್ರಿವೇಂಡ್ರಮ್ ನ ಶ್ರೀ ಚೈತ್ರ ತಿರುನಲ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಎಸ್.ಸಿ.ಟಿ.ಐ.ಎಂ.ಎಸ್.ಟಿ.)ಯು  ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರ ಕೆರೊಲಿನಾದ ಇನ್ಸ್ಟಿಟ್ಯೂಟ್ ಫಾರ್ ರಿಜೆನೆರೇಟಿವ್ ಮೆಡಿಸಿನ್ (ಡಬ್ಲ್ಯುಎಫ್ಐಆರ್.ಎಂ) ಪರವಾಗಿ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಜೊತೆ ಶೈಕ್ಷಣಿಕ ಸಹಕಾರ ಕುರಿತ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಕ್ಕೆ ಟ್ರಿವೇಂಡ್ರಮ್ ನ ಶ್ರೀ ಚೈತ್ರ ತಿರುನಲ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಪರವಾಗಿ ಎಸ್.ಸಿ.ಟಿ.ಐ.ಎಂ.ಎಸ್.ಟಿ, ನಿರ್ದೇಶಕರಾದ ಪ್ರೊ. ಆಶಾ ಕಿಶೋರ್ ಮತ್ತು ಮುಖ್ಯ ವಿಜ್ಞಾನ ಅಧಿಕಾರಿ ಮತ್ತು ಸಂಶೋಧನಾ ನಿರ್ವಾಹಕ ಸೀನಿಯರ್ ಅಸೋಸಿಯೇಟ್ ಡೀನ್ ಶ್ರೀ ಗ್ರೆಗೊರಿ ಬರ್ಕ್ ಮತ್ತು ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದ-ಆರೋಗ್ಯ ವಿಜ್ಞಾನಗಳ ಪರವಾಗಿ ಅದರ ಉತ್ತರ ಕೆರೊಲಿನಾದ ಪುನರುತ್ಪಾದಕ ಔಷಧಗಳ ಸಂಸ್ಥೆಯ, ನಿರ್ದೇಶಕ ಪ್ರೊ. ಆಂಥೋನಿ ಅಟಲಾ, 2018ರ ಡಿಸೆಂಬರ್ 13ರಂದು ರಂದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಂಕಿತ ಹಾಕಿದ್ದರು.



(Release ID: 1579253) Visitor Counter : 107