ಸಂಪುಟ

ವೃತ್ತಿ ಸುರಕ್ಷೆ , ಆರೋಗ್ಯ ಮತ್ತು ಕೆಲಸದ ನಿಬಂಧನೆಗಳ ವಿಧೇಯಕ, 2019 ಕುರಿತ ಸಂಹಿತೆಗೆ ಸಂಪುಟದ ಅಂಗೀಕಾರ 

Posted On: 10 JUL 2019 6:04PM by PIB Bengaluru

ವೃತ್ತಿ ಸುರಕ್ಷೆ , ಆರೋಗ್ಯ ಮತ್ತು ಕೆಲಸದ ನಿಬಂಧನೆಗಳ ವಿಧೇಯಕ, 2019 ಕುರಿತ ಸಂಹಿತೆಗೆ ಸಂಪುಟದ ಅಂಗೀಕಾರ 
 

13 ಕೇಂದ್ರೀಯ ಕಾಯ್ದೆಗಳು ಹೊಸ ಸಂಹಿತೆಯ ವ್ಯಾಪ್ತಿಗೆ.

“ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ “ ಮತ್ತು “ಸಬ್ ಕಾ ವಿಶ್ವಾಸ್” ಸ್ಪೂರ್ತಿಯೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಎನ್.ಡಿ.ಎ. ಸರಕಾರ ಬದುಕಿನ ವಿವಿಧ ರಂಗದ ಜನತೆಗೆ ಪ್ರಯೋಜನಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಈ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ವೃತ್ತಿ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಗತಿ /ನಿಬಂಧನೆಗಳ ವಿಧೇಯಕ 2019 ರ ಸಂಹಿತೆಯನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆಯನ್ನು ನೀಡಿದೆ. ಈ ಪ್ರಸ್ತಾಪಗಳು ಸುರಕ್ಷೆ, ಆರೋಗ್ಯ, ಮತ್ತು ಕೆಲಸದ ಸ್ಥಿತಿ ಗತಿ/ ನಿಬಂಧನೆಗಳ ವ್ಯಾಪ್ತಿಯನ್ನು ಈಗಿರುವ ಸ್ಥಿತಿಗೆ ಹೋಲಿಸಿದಾಗ ಬಹುಪಾಲು ವಿಸ್ತರಿಸಲಿವೆ. ಈ ನಿರ್ಧಾರವು ಸುರಕ್ಷೆ, ಆರೋಗ್ಯ ಮತ್ತು ಕೆಲಸದ ನಿಬಂಧನೆಗಳಿಗೆ ಸಂಬಂಧಿಸಿ ಅದರ ವ್ಯಾಪ್ತಿಯನ್ನು ಈಗಿರುವ ಪರಿಸ್ಥಿತಿಗೆ ಹೋಲಿಸಿದಾಗ ಬಹುಪಾಲು ಹೆಚ್ಚಿಸುತ್ತದೆ. 

ಹೊಸ ಸಂಹಿತೆಯನ್ನು 13 ಕೇಂದ್ರೀಯ ಕಾರ್ಮಿಕ ಕಾಯ್ದೆಗಳ ಸೂಕ್ತ ಪ್ರಸ್ತಾವನೆಗಳನ್ನು ಒಳಗೊಳಿಸಿಕೊಂಡು, ಸರಳೀಕರಣ ಮಾಡಿ, ತರ್ಕಬದ್ದಗೊಳಿಸಿ ರಚಿಸಲಾಗಿದೆ. ಅವುಗಳೆಂದರೆ :

· ಕಾರ್ಖಾನೆಗಳ ಕಾಯ್ದೆ , 1948 ; 

· ಗಣಿ ಕಾಯ್ದೆ, 1952: ಡಾಕ್ ಕಾರ್ಮಿಕರ (ಸುರಕ್ಷೆ, ಆರೋಗ್ಯ ಮತ್ತು ಕಲ್ಯಾಣ ) ಕಾಯ್ದೆ , 1986. ; 

· ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಸ್ಥಿತಿ ಗತಿಗಳ ನಿಯಂತ್ರಣ ನಿಯಮಾವಳಿ) ಕಾಯ್ದೆ, 1996;

· ಪ್ಲಾಂಟೇಶನ್ ಕಾರ್ಮಿಕರ ಕಾಯ್ದೆ, 1951;

· ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ರದ್ದು ) ಕಾಯ್ದೆ, 1970;

· ಅಂತರ ರಾಜ್ಯ ವಲಸೆ ಕಾರ್ಮಿಕರ ( ಉದ್ಯೋಗ ಮತ್ತು ಸೇವಾ ನಿಬಂಧನೆಗಳ ನಿಯಂತ್ರಣ ನಿಯಮಾವಳಿ) ಕಾಯ್ದೆ, 1979.

· ಕಾರ್ಯ ನಿರತ ಪತ್ರಕರ್ತರು ಮತ್ತು ಇತರ ಪತ್ರಿಕಾ ಸಿಬ್ಬಂದಿಗಳ ( ಸೇವಾ ನಿಬಂಧನೆಗಳು ಮತ್ತು ಇತರ ಪ್ರಸ್ತಾವನೆಗಳು) ಕಾಯ್ದೆ, 1955;

· ಕಾರ್ಯ ನಿರತ ಪತ್ರಕರ್ತರ ( ವೇತನ ದರ ನಿಗದಿ) ಕಾಯ್ದೆ, 1958;

· ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961;

· ಮಾರಾಟ ಉತ್ತೇಜನ ಸಿಬ್ಬಂದಿಗಳು (ಸೇವಾ ನಿಬಂಧನೆ) ಕಾಯ್ದೆ, 1976

· ಬೀಡಿ ಮತ್ತು ಸಿಗಾರ್ ಕಾರ್ಮಿಕ (ಉದ್ಯೋಗ ನಿಬಂಧನೆ) ಕಾಯ್ದೆ, 1966 ಮತ್ತು

· ಸಿನೇಮಾ ಕಾರ್ಮಿಕರು ಮತು ಚಲನಚಿತ್ರ ಮಂದಿರ ಕಾರ್ಮಿಕರ ಕಾಯ್ದೆ, 1981. ಸಂಹಿತೆ ಜಾರಿಗೊಂಡ ಬಳಿಕ ಈ ಎಲ್ಲಾ ಕಾಯ್ದೆಗಳು ಸಂಹಿತೆಯಲ್ಲಿ ಅಂತರ್ಗತಗೊಂಡು ರದ್ದಾಗುತ್ತವೆ.

ಪ್ರಯೋಜನಗಳು:

· ಸುರಕ್ಷೆ, ಆರೋಗ್ಯ, ಕಲ್ಯಾಣ ಮತ್ತು ಸುಧಾರಿತ ಕೆಲಸದ ನಿಬಂಧನೆಗಳು/ ಸ್ಥಿತಿ ಗತಿಗಳು ಕಾರ್ಮಿಕರ ಒಳಿತಿಗೆ ಅವಶ್ಯಕ ಮತ್ತು ಅವು ದೇಶದ ಆರ್ಥಿಕ ಬೆಳವಣಿಗೆಗೂ ಅಗತ್ಯ. ಆರೋಗ್ಯ ಪೂರ್ಣ ಕಾರ್ಮಿಕ ಶಕ್ತಿ ಇದ್ದರೆ ದೇಶ ಹೆಚ್ಚು ಉತ್ಪಾದನಾಶೀಲವಾಗಿರುತ್ತದೆ ಮತ್ತು ಅಪಘಾತಗಳು, ಅನಿರೀಕ್ಷಿತ ಘಟನೆಗಳು ಸಂಭವಿಸುವುದು ಕಡಿಮೆಯಾಗಿ ಅದರಿಂದ ಉದ್ಯೋಗದಾತರಿಗೂ ಪ್ರಯೋಜನವಾಗುತ್ತದೆ. ದೇಶದ ಎಲ್ಲಾ ಕಾರ್ಮಿಕ ಶಕ್ತಿಗೆ ಸುರಕ್ಷೆ, ಆರೋಗ್ಯಪೂರ್ಣ ಕೆಲಸದ ಪರಿಸ್ಥಿತಿಗಳನ್ನು ವಿಸ್ತರಿಸುವ ಏಕ ಮೇವ ಉದ್ದೇಶದಿಂದ ಈ ಸಂಹಿತೆಯನ್ನು ಜಾರಿಗೆ ತರಲಾಗುತ್ತಿದೆ. ಸಂಹಿತೆಯು ಸುರಕ್ಷೆ, ಆರೋಗ್ಯ, , ಕಲ್ಯಾಣ, ಮತ್ತು ಕೆಲಸದ ನಿಬಂಧನೆಗಳ ವ್ಯಾಪ್ತಿಯನ್ನು ಈಗಿರುವ ಪ್ರಮುಖ 9 ವಲಯಗಳಲ್ಲದೆ, 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿಗಳು ಇರುವ ಸಂಸ್ಥೆಗಳಿಗೂ ವಿಸ್ತರಿಸುತ್ತದೆ.



(Release ID: 1578304) Visitor Counter : 355