ಸಂಪುಟ

ಆರೋಗ್ಯ ವಲಯದಲ್ಲಿ ಭಾರತ ಮತ್ತು ಮಾಲ್ದೀವ್ಸ್ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

Posted On: 03 JUL 2019 4:41PM by PIB Bengaluru

ಆರೋಗ್ಯ ವಲಯದಲ್ಲಿ ಭಾರತ ಮತ್ತು ಮಾಲ್ದೀವ್ಸ್ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

 

ಪ್ರಜಾಪ್ರಭುತವಾದೀ ರಾಷ್ಟ್ರ ಭಾರತ ಸರಕಾರ ಮತ್ತು ಮಾಲ್ದೀವ್ಸ್ ಗಣತಂತ್ರ ಸರಕಾರದ ನಡುವೆ ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಸಂಬಂಧಿಸಿ 2019 ರ ಜೂನ್ 8 ರಂದು ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗೆ (ಎಂ.ಒ.ಯು.) ಕೇಂದ್ರ ಸಂಪುಟವು ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿದೆ.

 

ಈ ತಿಳುವಳಿಕಾ ಒಡಂಬಡಿಕೆಯ ವ್ಯಾಪ್ತಿಯಲ್ಲಿ  ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಕಾರವು ಸೇರಿದೆ. –

1. ವೈದ್ಯಕೀಯ ಕ್ಷೇತ್ರದ ವೈದ್ಯರು, ಅಧಿಕಾರಿಗಳು ಮತ್ತು ಇತರ ಆರೋಗ್ಯ ವೃತ್ತಿಪರರು ಹಾಗು  ತಜ್ಞರ ವಿನಿಮಯ ಮತ್ತು ತರಬೇತಿ.

2. ವೈದ್ಯಕೀಯ ಮತ್ತು ಆರೋಗ್ಯ ಸಂಶೋಧನೆಯ ಅಭಿವೃದ್ದಿ.

3. ಔಷಧಿಗಳು ಮತ್ತು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳ ವಿನಿಮಯ.

4. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಖಾಯಿಲೆಗಳು;

5. ಈ-ಆರೋಗ್ಯ ಮತ್ತು ಟೆಲಿ ವೈದ್ಯಕೀಯ; ಹಾಗು 

6. ಪರಸ್ಪರ ಸಮ್ಮತವಾಗಿ ನಿರ್ಧರಿಸಲ್ಪಟ್ಟ ಇತರ ಯಾವುದೇ ಕ್ಷೇತ್ರದಲ್ಲಿ ಸಹಕಾರ.

ಸಹಕಾರದ ಇನ್ನಷ್ಟು ವಿಸ್ತೃತ ವಿವರಗಳಿಗಾಗಿ ಮತ್ತು ಈ ತಿಳುವಳಿಕಾ ಒಡಂಬಡಿಕೆಯ ಅನುಷ್ಟಾನದ ಮೇಲುಸ್ತುವಾರಿಗಾಗಿ  ಕಾರ್ಯತಂಡವನ್ನು ರಚಿಸಲಾಗುವುದು.



(Release ID: 1576919) Visitor Counter : 131