ಸಂಪುಟ

ಭಾರತ ಮತ್ತು ಕಿರ್ಗಿಜ್ ಸ್ತಾನ್ ನಡುವೆ ಹೈ ಆಲ್ಟಿಟ್ಯೂಡ್ ಜೀವಶಾಸ್ತ್ರ ಮತ್ತು ಔಷಧ  ಕುರಿತಂತೆ ಜಂಟಿ ಸಂಶೋಧನಾ ಕಾರ್ಯ ಕೈಗೊಳ್ಳುವ ಕುರಿತಂತೆ ಸಹಯೋಗ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 12 JUN 2019 8:10PM by PIB Bengaluru

ಭಾರತ ಮತ್ತು ಕಿರ್ಗಿಜ್ ಸ್ತಾನ್ ನಡುವೆ ಹೈ ಆಲ್ಟಿಟ್ಯೂಡ್ ಜೀವಶಾಸ್ತ್ರ ಮತ್ತು ಔಷಧ  ಕುರಿತಂತೆ ಜಂಟಿ ಸಂಶೋಧನಾ ಕಾರ್ಯ ಕೈಗೊಳ್ಳುವ ಕುರಿತಂತೆ ಸಹಯೋಗ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವಿಜ್ಞಾನ ಮತ್ತು ಔಷಧ ಅದರಲ್ಲೂ ಅತಿ ಎತ್ತರದ ಜೀವಶಾಸ್ತ್ರ ಮತ್ತು ಔಷಧ ಕುರಿತಂತೆ ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಅಭಿವೃದ್ಧಿ ಮತ್ತು ಬಲಪಡಿಸುವ ಗುರಿಯೊಂದಿಗೆ ಭಾರತ ಮತ್ತು ಕಿರ್ಗಿಜ್ ಸ್ತಾನ್ ನಡುವೆ ಹೈ ಆಲ್ಟಿಟ್ಯೂಡ್ ಜೀವಶಾಸ್ತ್ರ ಮತ್ತು ಔಷಧ  ಕುರಿತಂತೆ ಜಂಟಿ ಸಂಶೋಧನಾ ಕಾರ್ಯ ಕೈಗೊಳ್ಳುವ ಕುರಿತಂತೆ ಸಹಯೋಗ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

 

ಈ ಸಹಯೋಗ ಒಪ್ಪಂದವು ಅತಿ ಎತ್ತರದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಭಾರತ ಮತ್ತು ಕಿರ್ಗಿಜ್ ಸೈನಿಕರ ದೈಹಿಕ ಮತ್ತು ಮಾನಸಿಕ ಸ್ಥಿತಿ ತಿಳಿಯಲು ಮತ್ತು ಅತಿ ಎತ್ತರದ ಕಾರಣದಿಂದಾಗಿ ಭಾರತೀಯ ಮತ್ತು ಕಿರ್ಗಿಜ್ ಸೈನಿಕರು/ಜನರಲ್ಲಿ ಕಂಡುಬರುವ ಕಾಯಿಲೆಗಳನ್ನು ಯೋಗಾಭ್ಯಾಸ, ಗಿಡಮೂಲಿಕೆಗಳು ಮತ್ತು ನ್ಯೂಟ್ರಾಸ್ಯುಟಿಕಲ್ ಗಳನ್ನು ಬಳಸಿಕೊಂಡು ತಗ್ಗಿಸಲು ನೆರವಾಗುತ್ತದೆ.



(Release ID: 1574199) Visitor Counter : 150