ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಪತ್ರಿಕಾ ಟಿಪ್ಪಣಿ - ಸಾಂಖ್ಯಿಕ ಸುಧಾರಣೆಗಳು ಮತ್ತು ಹಾಲಿ ಜಿಡಿಪಿ ಸರಣಿ ಕುರಿತಂತೆ ಸ್ಪಷ್ಟೀಕರಣ
Posted On:
10 JUN 2019 5:19PM by PIB Bengaluru
ಪತ್ರಿಕಾ ಟಿಪ್ಪಣಿ
ಸಾಂಖ್ಯಿಕ ಸುಧಾರಣೆಗಳು ಮತ್ತು ಹಾಲಿ ಜಿಡಿಪಿ ಸರಣಿ ಕುರಿತಂತೆ ಸ್ಪಷ್ಟೀಕರಣ
1. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂ.ಓ.ಎಸ್.ಪಿ.ಐ) ಕೈಗೊಂಡಿರುವ ಸಾಂಖ್ಯಿಕ ಸುಧಾರಣೆಗಳು ಮತ್ತು ಹಾಲಿ ಡಿಜಿಪಿ ಸರಣಿಯ ಕುರಿತಂತೆ ಕೆಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.
2. ಸಾಂಖ್ಯಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ, ಮುಖ್ಯವಾಗಿ ಉಲ್ಲೇಖಿಸಲೇಬೇಕಾದ್ದೆಂದರೆ, ವ್ಯವಸ್ಥೆಯ ಸುಧಾರಣೆಯು ಒಂದು ನಿರಂತರ ಪ್ರಕ್ರಿಯೆ ಮತ್ತು ಅದು ಬದಲಾಗುತ್ತಿರುವ ಸಮಾಜದ ಸ್ಪಂದನೆಯ ಖಾತ್ರಿಗೆ ಅಗತ್ಯವಾದುದಾಗಿದೆ. ಕೆಲವು ಕಾಲದ ನಂತರ, ಸಂಬಂಧಿತ ಮತ್ತು ಗುಣಮಟ್ಟದ ಅಂಕಿಅಂಶಗಳ ಉತ್ಪಾದನೆಗೆ ಸಾಂಖ್ಯಿಕ ವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಸಚಿವಾಲಯವು ಲಭ್ಯ ಸಂಪನ್ಮೂಲಗಳನ್ನು ಸರಳೀಕರಿಸಿ ಮತ್ತು ತಂತ್ರಜ್ಞಾನದ ಬಳಕೆಯಿಂದ ಈ ಬೇಡಿಕೆಗಳನ್ನು ಪೂರೈಸುತ್ತಿದೆ. ಯಾವುದೇ ವ್ಯವಸ್ಥೆಯಲ್ಲಿರುವಂತೆ, ತಂತ್ರಜ್ಞಾನದ ಆಗಮನವು ಹಾಲಿ ಸಂಪನ್ಮೂಲದ ಕ್ರೋಡೀಕರಣದ ಗುರಿಯೊಂದಿಗೆ ಸಾಂಖ್ಯಿಕ ಪ್ರಕ್ರಿಯೆಗಳು ಮತ್ತು ಉತ್ಪನ್ನಗಳಲ್ಲಿನ ಸುಧಾರಣೆಗಳು ಅವಶ್ಯಕವಾಗಿಸುತ್ತದೆ, ಇದರಿಂದಾಗಿ ವ್ಯವಸ್ಥೆ ಸ್ಪಂದನಾತ್ಮಕವಾಗಿ ಉಳಿಯುತ್ತದೆ. ಸಿ.ಎಸ್.ಓ. ಮತ್ತು ಎನ್.ಎಸ್.ಎಸ್.ಓ.ಗಳನ್ನು ವಿಲೀನಗೊಳಿಸುವ ಇತ್ತೀಚಿನ ಕ್ರಮ ಕೂಡ ಎರಡು ಸಂಘಟನೆಗಳ ಬಲವನ್ನು ಒಗ್ಗೂಡಿಸುವುದಾಗಿದೆ, ಆ ಮೂಲಕ ಅದು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ.
3. 2018ರಲ್ಲಿ, ಸಂಪುಟವು ಸೇವಾ ವಲಯದ ವಾರ್ಷಿಕ ಸಮೀಕ್ಷೆ ಕುರಿತಂತೆ ಹೊಸ ಸಮೀಕ್ಷೆ ಕೈಗೊಳ್ಳುವುದು (ಸೇವಾ ವಲಯದ ಹೆಚ್ಚಿನ ವ್ಯಾಪ್ತಿಗಾಗಿ), ಸಂಘಟಿತವಲ್ಲದ ಉದ್ದಿಮೆಗಳ ವಾರ್ಷಿಕ ಸಮೀಕ್ಷೆ (ಈ ಉದ್ದಿಮೆಗಳನ್ನು, ಅದರಲ್ಲೂ ಅನೌಪಚಾರಿಕ ವಲಯವನ್ನು ಸರಿಯಾಗಿ ಅರಿಯಲು), ಸಮಯದ ಬಳಕೆಯ ಸಮೀಕ್ಷೆ (ಕುಟುಂಬದ ಸದಸ್ಯರ ಸಮಯ ವಿನಿಯೋಗ ತಿಳಿಯಲು), ಮತ್ತು ಎಲ್ಲ ಸ್ಥಾಪನೆಗಳ ಆರ್ಥಿಕ ಗಣತಿ ಸೇರಿದಂತೆ, ಹಲವು ಹೊಸ ಚಟುವಟಿಕೆಗಳಿಗೆ ತನ್ನ ಅನುಮೋದನೆ ನೀಡಿತ್ತು. ಈ ಎಲ್ಲ ಚಟುವಟಿಕೆಗಳಿಗೂ ಗಣನೀಯ ಆರ್ಥಿಕ ಮತ್ತು ಮಾನವ ಸಂಪನ್ಮೂಲದ ಅಗತ್ಯವಿದ್ದು, ಇದು ಲಭ್ಯತೆಗೆ ಸಮಯವನ್ನೂ ತೆಗೆದುಕೊಳ್ಳುತ್ತದೆ. ಮಾನವ ಸಂಪನ್ಮೂಲದ ತತ್ ಕ್ಷಣದ ಅಗತ್ಯವನ್ನು ವಿವೇಚನಾತ್ಮಕ ಮಿಶ್ರಣದೊಂದಿಗೆ ಹಾಲಿ ಇರುವ ಮಾನವ ಸಂಪನ್ಮೂಲದ ಮರು ನಿಯೋಜನೆ ಮತ್ತು ವೃತ್ತಿಪರ ಮಾನವ ಸಂಪನ್ಮೂಲ ಸಂಸ್ಥೆಗಳ ಹೊರಗುತ್ತಿಗೆಯ ಮೂಲಕ ನಿಭಾಯಿಸಬಹುದಾಗಿದೆ. ಹೊರಗುತ್ತಿಗೆ ಪಡೆದ ಕ್ಷೇತ್ರ ಸಿಬ್ಬಂದಿಯ ನಿಯುಕ್ತಿಗೂ ಮುನ್ನ ಅವರಿಗೆ ವ್ಯಾಪಕ ತರಬೇತಿ ನೀಡಲಾಗುತ್ತದೆ ಮತ್ತು ತದನಂತರ ದಕ್ಷ ನಿಗಾ ಇಡಲಾಗುತ್ತದೆ. ಈ ಮಾದರಿಯನ್ನು ಆರ್ಥಿಕ ಸಮೀಕ್ಷೆ ಮತ್ತು ಇತರ ಎನ್.ಎಸ್.ಎಸ್. ಸಮೀಕ್ಷೆಗಳಲ್ಲಿ ಜಾರಿ ಮಾಡಲಾಗಿದೆ. 2013ರಲ್ಲಿ ನಡೆಸಲಾದ ಕೊನೆಯ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಫಲಶ್ರುತಿಯ ಸಾಕಾರ ಮತ್ತು ಆಖೈರಿನಲ್ಲಿ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಕಾರ್ಯ ನಿರ್ವಹಣೆಗಾಗಿ ಸಿಬ್ಬಂದಿಯನ್ನು ವ್ಯವಸ್ಥೆ ಮಾಡುವಂತೆ ಕೋರಿದ್ದವು. 2019ರಲ್ಲಿ ನಡೆಯುತ್ತಿರುವ ಆರ್ಥಿಕ ಗಣತಿಯಲ್ಲಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಕ್ಷೇತ್ರ ಕಾರ್ಯ ಕೈಗೊಳ್ಳಲು ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ.) ಎಸ್.ಪಿ.ವಿ.ಗಳೊಂದಿಗೆ ಪಾಲುದಾರಿಕೆಯನ್ನು ಸಾಧಿಸಿದೆ, ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್.ಎಸ್.ಎಸ್.) ಅಧಿಕಾರಿಗಳು, ರಾಜ್ಯ ಸರ್ಕಾರಗಳು ಮತ್ತು ಈ ನಿಟ್ಟಿನ ಸಚಿವಾಲಯಗಳು ದತ್ತಾಂಶದ ಗುಣಮಟ್ಟ ಮತ್ತು ಉತ್ತಮ ವ್ಯಾಪ್ತಿಯ ಖಾತ್ರಿಗಾಗಿ ಕ್ಷೇತ್ರ ಕಾರ್ಯದ ಮೇಲೆ ಸೂಕ್ತ ನಿಗಾ ಮತ್ತು ಉಸ್ತುವಾರಿ ವಹಿಸಿವೆ. ಎನ್ಎಸ್ಎಸ್.ನಲ್ಲಿ ನಡೆಯುತ್ತಿರುವ ಕ್ಷೇತ್ರ ಕಾರ್ಯದ ಮೇಲೆ ಇದೇ ಮೊದಲ ಬಾರಿಗೆ ವ್ಯಾಪಕ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಕೈಗೊಳ್ಳಲಾಗಿದ್ದು, ಇದರಿಂದ ನ್ಯಾಷನಲ್ ಸ್ಟಾಟಿಸ್ ಟಿಕಲ್ ಬ್ಯುಸೆನೆಸ್ ರಿಜಿಸ್ಟರ್ ರಚನೆಯ ಫಲಶ್ರುತಿ ಉತ್ತಮವಾಗಿರಲಿದೆ. ಈ ಪ್ರಕ್ರಿಯೆಯನ್ನು ಏಕರೂಪದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್.ಎಸ್.ಓ.) ಸ್ಥಾಪನೆಯ ಮೂಲಕ ಸಾಕಾರಗೊಳಿಸಲಾಗಿದೆ.
4. ಪುನಾರಚನೆಗೆ ಸಂಬಂಧಿಸಿದ ಹಲವು ಮಾಧ್ಯಮ ವರದಿಗಳಲ್ಲಿ, ಮುಖ್ಯವಾಗಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, ದತ್ತಾಂಶದ ಗುಣಮಟ್ಟದ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಹಾಲಿ ದತ್ತಾಂಶ ಪ್ರಕ್ರಿಯಾ ಸಿಬ್ಬಂದಿಯನ್ನು ಪುನರ್ ನಿಯೋಜನೆಯ ಮೂಲಕ ಇದರ ಖಾತ್ರಿ ಪಡಿಸಲಾಗುತ್ತಿದೆ ಎಂಬ ಅಂಶ ಬಿಟ್ಟು ಹೋಗಿದೆ. ಸಾಂಪ್ರದಾಯಿಕ ದತ್ತಾಂಶ ಸಂಸ್ಕರಣೆ ಕಾರ್ಯಚಟುವಟಿಕೆಗೆ ಕಂಪ್ಯೂಟರ್ ನೆರವಿನ ಸಿಬ್ಬಂದಿಯ ಕೌಶಲದ ಸಂದರ್ಶನ (ಸಿಎಪಿಐ) ಮತ್ತು ಎನ್ಎಸ್ಎಸ್.ನಲ್ಲಿ ಇ-ವೇಳಾಪಟ್ಟಿ ತಂತ್ರಜ್ಞಾನದ ಅಳವಡಿಕೆಯ ರೂಪಾಂತರದ ಅಗತ್ಯವಿದೆ. ಎರಡನೆಯದು ಉತ್ತಮವಾದ ಮತ್ತು ಹೆಚ್ಚು ವಿಶ್ವಾಸಾರ್ಹ ದತ್ತಾಂಶ ಸಂಗ್ರಹಣೆಯನ್ನು ಅಂತರ್ನಿರ್ಮಿತ ಮೌಲ್ಯಮಾಪನ ತಪಾಸಣೆಗೆ ಅನುಕೂಲ ಕಲ್ಪಿಸುತ್ತದೆ. ಈ ಬದಲಾವಣೆಗಳಿಗೆ ಹಾಲಿ ಇರುವ ದತ್ತಾಂಶ ಸಂಸ್ಕರಣಾ ಸಿಬ್ಬಂದಿಗೆ ಪುನರ್ ಕೌಶಲದ ಅಗತ್ಯವಿದ್ದು, ಆಗ ಅವರು ಗುಣಮಟ್ಟದ ದತ್ತಾಂಶ ಕಾರ್ಯವನ್ನು ವಿಶ್ವಾಸಾರ್ಹವಾಗಿ ಕೈಗೊಳ್ಳಬಹುದಾಗಿದೆ. ಸಾಂಖ್ಯಿಕ ವ್ಯವಸ್ಥೆಯಲ್ಲಿ ತಮ್ಮ ಗುಣಮಟ್ಟ ಮತ್ತು ಉಪಯುಕ್ತತೆಯನ್ನು ಖಾತರಿಪಡಿಸಿದ ನಂತರ ವಿಕಸನಗೊಂಡ ಅಥವಾ ವಿಕಸನಗೊಳ್ಳುತ್ತಿರುವ ಆಡಳಿತಾತ್ಮಕ ದತ್ತಾಂಶಗಳ ಗುಚ್ಚಗಳ ಹೆಚ್ಚಿನ ಬಳಕೆಗೆ ಒತ್ತು ನೀಡಲಾಗುತ್ತದೆ.
5. ದತ್ತಾಂಶದ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ, ಭಾರತ ಸರ್ಕಾರ ಮೇ 2016 ರಲ್ಲಿ ಅಧಿಕೃತ ಅಂಕಿ-ಅಂಶಗಳ ವಿಶ್ವಸಂಸ್ಥೆಯ ಮೂಲಭೂತ ತತ್ವಗಳನ್ನು (ಎಫ್.ಪಿ.ಓ.ಎಸ್.) ಅಳವಡಿಸಿಕೊಂಡಿದೆ. ಈ ಮೂಲಕ ಸರ್ಕಾರ, ಸಾಂಖ್ಯಿಕ ವ್ಯವಸ್ಥೆಯ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಖಾತ್ರಿಪಡಿಸಲು ಮತ್ತು ಅಂತಾರಾಷ್ಟ್ರೀಯವಾಗಿ ಒಪ್ಪಿಕೊಂಡ ವೃತ್ತಿಪರ ಮತ್ತು ವೈಜ್ಞಾನಿಕ ಮಾನದಂಡಗಳಿಗೆ ಅನುಸಾರವಾಗಿ ವಿಶ್ವಾಸಾರ್ಹ ದತ್ತಾಂಶ ಉತ್ಪಾದನೆಗೆ ಬದ್ಧವಾಗಿದೆ. ಭಾರತದ ವಿಚಾರದಲ್ಲಿ, ಹಿಂದೆ ಸರಣಿಯಾಗಿ ತಜ್ಞರ ಸಮಿತಿಗಳನ್ನು ರಚಿಸಲಾಗಿತ್ತು, ಇವು ಹಲವು ರಾಷ್ಟ್ರೀಯ ಸಾಂಖ್ಯಿಕ ವ್ಯವಸ್ಥೆಯ ಕಾರ್ಯಚಟುವಟಿಕೆಗಳ ಸುಧಾರಣೆಗೆ ಹಲವು ಶಿಫಾರಸುಗಳನ್ನು ಮಾಡಿದ್ದವು. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಕೈಗೊಂಡ ಸುಧಾರಣೆಗಳು, ಈ ನೀತಿಗಳಿಗೆ ಮತ್ತು ರಾಷ್ಟ್ರೀಯ ಸಾಂಖ್ಯಿಕ ಆಯೋಗ (ಎನ್.ಎಸ್.ಸಿ.)ಯ ಶಿಫಾರಸುಗಳಿಗೆ ಅನುಸಾರವಾಗಿದೆ. ಸಚಿವಾಲಯವು, ಅಧಿಕೃತ ಅಂಕಿ ಸಂಖ್ಯೆ ಕುರಿತಂತೆ ರಾಷ್ಟ್ರೀಯ ನೀತಿ (ಎನ್.ಪಿ.ಓ.ಎಸ್.)ಯನ್ನು ರಚಿಸಿದೆ ಮತ್ತು ಅದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದೆ. ಸ್ವೀಕರಿಸಲಾಗುವ ಪ್ರತಿಕ್ರಿಯೆಗಳ ಆಧಾರದಲ್ಲಿ ನೀತಿಯನ್ನು ಪುನಾರಚಿಸಲಾಗುತ್ತದೆ.
6. ಇತರ ರಾಷ್ಟ್ರಗಳಲ್ಲಿ ಇರುವಂತೆಯೇ ಏಕೀಕೃತ ಎನ್.ಎಸ್.ಓ. ಗುರಿಯೊಂದಿಗೆ 2019ರ ಮೇ 23ರಂದು ಆದೇಶ ಹೊರಡಿಸಲಾಗಿದ್ದು, ಇದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಲ್ಲಿ ಲಭ್ಯವಿರುವ ಅವಕಾಶಗಳನ್ನೇ ಬಳಸಿಕೊಂಡು ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸಾಂಖ್ಯಿಕ ಉತ್ಪನ್ನಗಳನ್ನು ರೂಪಿಸುತ್ತದೆ. ಸರ್ಕಾರವು ಎನ್.ಎಸ್.ಓ. ಮುನ್ನಡೆಸಲು ಭಾರತದ ಮುಖ್ಯ ಸಾಂಖ್ಯಿಕರ (ಸಿ.ಎಸ್.ಐ.)ಮತ್ತು ಎಂ.ಓ.ಎಸ್.ಪಿ.ಐ ಕಾರ್ಯದರ್ಶಿ ಹುದ್ದೆಯನ್ನು ವಿಲೀನಗೊಳಿಸಿದೆ. ಈ ಪ್ರಕಾರವಾಗಿ ಪುನಾರಚೆಗೆ 2019ರ ಮೇ 23ರ ಆದೇಶವು ಸ್ಬಷ್ಟಪಡಿಸುತ್ತದೆ.
7. ಎನ್.ಎಸ್.ಸಿ.ಯ ಅಧ್ಯಕ್ಷರು ಮತ್ತು ಸದಸ್ಯರು, ಹಿರಿಯ ಅಧಿಕಾರಿಗಳಾಗಿದ್ದು, ಅವರಿಗೆ ರಾಷ್ಟ್ರೀಯ ಸಾಂಖ್ಯಿಕ ವ್ಯವಸ್ಥೆಯನ್ನು ಸುಧಾರಿಸುವ ಜವಾಬ್ದಾರಿ ನೀಡಲಾಗಿದೆ ಮತ್ತು ಸಚಿವಾಲಯವು ಅವರ ಸಲಹೆ ಮತ್ತು ಶಿಫಾರಸುಗಳನ್ನು ಸೂಕ್ತವಾಗಿ ಪರಿಗಣಿಸುತ್ತದೆ. ಎನ್.ಎಸ್.ಸಿ.ಯ ಸ್ಥಿತಿ, ಪಾತ್ರ ಮತ್ತು ಕಾರ್ಯಾಚರಣೆ ಈ ಹಿಂದಿನಂತೆಯೇ ಮುಂದುವರಿಯುತ್ತದೆ (2019ರ ಮೇ 31ರಂದು ನೀಡಲಾಗಿರುವ ಪತ್ರಿಕಾ ಟಿಪ್ಪಣಿ ನೋಡಿ). ಎನ್.ಎಸ್.ಸಿ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಶಾಸನಾತ್ಮಕ ಚೌಕಟ್ಟನ್ನು ರೂಪಿಸಲು ಮತ್ತು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ, ಮತ್ತು ಅದೇ ಸಾಲಿನ ರಾಜ್ಯ ಸರ್ಕಾರಗಳನ್ನು ಒಳಗೊಳ್ಳುವ ರಾಷ್ಟ್ರೀಯ ಸಾಂಖ್ಯಿಕ ವ್ಯವಸ್ಥೆಯನ್ನು ಸುಧಾರಿಸಲು ಸಮಗ್ರವಾದ ಮಾರ್ಗದರ್ಶನ ನೀಡುವ ಪ್ರಯತ್ನ ಸಾಗಿದೆ.
8. ಜಿಡಿಪಿ ಸರಣಿಗೆ ಸಂಬಂಧಿಸಿದಂತೆ ಈವರೆಗೆ ಸಚಿವಾಲಯವು ಹಲವು ಸ್ಪಷ್ಟೀಕರಣಗಳನ್ನು ನೀಡಿದೆ, ಇದನ್ನು ಸೂಕ್ತವಾಗಿ ಪರಿಗಣಿಸಿ ಮಾಹಿತಿ ನೀಡುವ ಮತ್ತು ಸಮತೋಲಿತ ಅಭಿಪ್ರಾಯ ಹೊರಚೆಲ್ಲುವ ಅಗತ್ಯವಿದೆ. ಜಿಡಿಪಿ ಸರಣಿ (ಹೊಸ ಸರಣಿ ಮತ್ತು ಹಿಂದಿನ ಸರಣಿ)ಗೆ ಸಂಬಂಧಿಸಿದಂತೆ ಸವಿವರವಾದ ವಿಧಾನ ಮತ್ತು ದೃಷ್ಟಿಕೋನವು ಸಾರ್ವಜನಿಕವಾಗಿ ಲಭ್ಯವಿದೆ. 2019ರ ಮೇ 30ರಂದು ಸವಿರವಾದ ಮಾಧ್ಯಮ ಟಿಪ್ಪಣಿಯು, ಜಿಡಿಪಿ ಅಂದಾಜಿನಲ್ಲಿ ಎಂ.ಸಿ.ಎ. ಸಾಂಸ್ಥಿಕ ದತ್ತಾಂಶದ ವ್ಯಾಪ್ತಿಯನ್ನು ವಿವರಿಸಿದೆ ಜೊತೆಗೆ ಎಂ.ಸಿ.ಎ. ದತ್ತಾಂಶ ಬಳಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಎತ್ತಿರುವ ವಿಚಾರಗಳ ನಿಭಾವಣೆಯ ಹಿನ್ನೆಲೆಯಲ್ಲಿ ಸೇವಾ ವಲಯದ ಎನ್.ಎಸ್.ಎಸ್. (74ನೇ ಸುತ್ತು) ತಾಂತ್ರಿಕ ವರದಿಯನ್ನು ನೀಡಿದೆ. ಸೇವಾ ವಲಯದ ವಾರ್ಷಿಕ ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ಹೊರಹೊಮ್ಮುವ ಎನ್.ಎಸ್.ಎಸ್. ಈ ಸಮೀಕ್ಷೆಯನ್ನು ನಡೆಸಿದೆ ಎಂದೂ ವಿವರಿಸಲಾಗಿದೆ. ಟಿಪ್ಪಣಿಗಳನ್ನು ದೊಡ್ಡ ಮಟ್ಟದಲ್ಲಿ ವಿಶ್ಲೇಷಿಸಿದ್ದು, ಬಹುತೇಕ ಕಂಪನಿಗಳು ಎಂ.ಸಿ.ಎ.ಯಲ್ಲಿ ತಮ್ಮ ಶಾಸನಾತ್ಮಕ ಆನ್ ಲೈನ್ ನಿರ್ಧರಣೆಗಳನ್ನು ಸಲ್ಲಿಸಿವೆ ಮತ್ತು ಅವು ಜಿಡಿಪಿ ಅಂದಾಜಿನಲ್ಲಿ ಬಿಟ್ಟು ಹೋಗಿಲ್ಲ. ತಪ್ಪು ವರ್ಗೀಕರಣದ ಬಗ್ಗಯೂ ಇಲ್ಲಿ ವಿವರಣೆ ನೀಡಲಾಗಿದ್ದು, ಅದರಲ್ಲಿ, ಸಾಂಸ್ಥಿಕ ಗುರುತಿನ ಸಂಖ್ಯೆ (ಸಿ.ಐ.ಎನ್) ರಾಷ್ಟ್ರೀಯ ಕೈಗಾರಿಕಾ ವರ್ಗೀಕರಣದ ಅಂತರ್ಗತ ಕೋಡ್ ಆಗಿದ್ದು, ಅದರ ನೋಂದಣಿ ಸಮಯದಲ್ಲಿ ಘೋಷಿಸಿದ ಚಟುವಟಿಕೆಗಳನ್ನು ಕಂಪನಿಯು ಬದಲಾಯಿಸಿದರೂ ಸಹ ಸಾಮಾನ್ಯವಾಗಿ ಅಪ್ ಡೇಟ್ ಮಾಡಲಾಗುವುದಿಲ್ಲ ಎಂದು ತಿಳಿಸಿದೆ. ಸೇವಾ ವಲಯಕ್ಕೆ ಸಂಬಂಧಿಸಿದಂತೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ವಾರ್ಷಿಕ ಸಮೀಕ್ಷೆ ಕೈಗೊಳ್ಳುವ ಮುನ್ನ ಈ ಇತಿಮಿತಿಗಳನ್ನು ಸಮೀಕ್ಷೆಯ ವಿಧಾನದಲ್ಲಿ ಸೂಕ್ತವಾಗಿ ಅಳವಡಿಸಲಾಗಿದೆ. ಈ ಅಂಶಗಳನ್ನು ಹೊಸ ಆಧಾರದ ಜಿಡಿಪಿ ಸರಣಿಯ ಪರಿಷ್ಕರಣೆಯಲ್ಲೂ ಬಳಸಲಾಗಿದೆ.
9. ಜಿಡಿಪಿ ಅಂದಾಜು ಒಂದು ಸಂಕೀರ್ಣ ಕಸರತ್ತಾಗಿದ್ದು ಇದನ್ನು ಅಪೂರ್ಣ ಮಾಹಿತಿಯ ಒಂದು ಪರಿಸರ ವ್ಯವಸ್ಥೆಯಲ್ಲಿ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕಾಗಿದೆ. ವಿಷಯ ತಜ್ಞರ ಜೊತೆ ಸಮಾಲೋಚನೆಯಲ್ಲಿ ಕ್ರಮಬದ್ಧವಾದ ವಿಧಾನವು ಅಂತಿಮಗೊಳ್ಳುವ ಮೊದಲು ಇದು ಸಂಕೀರ್ಣ ಮತ್ತು ಸಾಂಖ್ಯಿಕ ಊಹೆಗಳನ್ನು ಅನಿವಾರ್ಯಗೊಳಿಸುತ್ತದೆ. ವಾಸ್ತವವಾಗಿ, ಪ್ರಸಕ್ತ ಜಿಡಿಪಿ ಸರಣಿಯ ಅನೇಕ ವಿಮರ್ಶಕರು ವಿವಿಧ ಸಮಿತಿಗಳಲ್ಲಿ ಭಾಗಿಯಾಗಿದ್ದು, 2011-12ರ ವರೆಗಿನ ಆಧಾರದ ಪರಿಷ್ಕರಣ ವಿಧಾನವನ್ನು ನಿರ್ಧರಿಸಿ, ಅಂತಿಮಗೊಳಿಸಿದ್ದಾರೆ. ಈ ಸಮಿತಿಗಳ ನಿರ್ಧಾರಗಳು ಸಂಘಟಿತ ಮತ್ತು ಅವಿರೋಧವಾದುದಾಗಿವೆ ಮತ್ತು ಹೆಚ್ಚು ಸೂಕ್ತ ದೃಷ್ಟಿಕೋನದ ಶಿಫಾರಸಿಗೂ ಮುನ್ನ ಲಭ್ಯ ದತ್ತಾಂಶ ಮತ್ತು ವಿಧಾನದ ಅಂಶಗಳನ್ನು ಪರಿಗಣಿಸಲಾಗಿದೆ. ಸಚಿವಾಲಯವು, ಸಾಂಪ್ರದಾಯಿಕವಾಗಿ, ವಿಸ್ತೃತ ಶ್ರೇಣಿಯ ವೃತ್ತಿಪರ ತಜ್ಞರೊಂದಿಗೆ ಚರ್ಚಿಸಿದ್ದು, ಇದು, ರಾಷ್ಟ್ರೀಯ ಸಾಂಖ್ಯಿಕ ವ್ಯವಸ್ಥೆಗೆ ಅಪಾರ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ, ಭಾರತವು ಅಂತಾರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್)ಯ ವಿಶೇಷ ದತ್ತಾಂಶ ಪ್ರಸರಣ ಗುಣಮಟ್ಟ (ಎನ್.ಡಿಡಿಎಸ್)ಕ್ಕೆ ಸೇರ್ಪಡೆಯಾಗಿದ್ದು, ಒಂದು ಮುಂದುವರಿದ ದಿನದರ್ಶಿಯನ್ನು ಅಂದಾಜುಗಳ ಬಿಡುಗಡೆಗಾಗಿ ನಿರ್ಧರಿಸಲಾಗುತ್ತದೆ. ಭಾರತೀಯ ಜಿಡಿಪಿ ಸರಣಿಯಲ್ಲಿ ದುಪ್ಪಟ್ಟು ಬೆಲೆ ಇಳಿಕೆಯ ಬಳಕೆಯ ಬಗ್ಗೆ ಐಎಮ್ಎಫ್ ಕೆಲವು ವಿಷಯಗಳನ್ನು ಉಲ್ಲೇಖ ಮಾಡಿದ್ದು, ಭಾರತವು ಪ್ರಸ್ತುತ ದತ್ತಾಂಶ ಲಭ್ಯತೆಯಲ್ಲಿ ತನ್ನ ಆನ್ವಯಿಕದಲ್ಲಿ ಅನುಮತಿಸುವುದಿಲ್ಲ ಎಂದು ಐಎಂಎಫ್.ಗೆ ತಿಳಿಸಿದೆ. ವಾಸ್ತವವಾಗಿ, ಮಾಧ್ಯಮ ವರದಿಗಳು, ಜಿಡಿಪಿ ವೃದ್ಧಿಯಲ್ಲಿನ ಬದಲಾವಣೆಗಳ ಬಗ್ಗೆ ಉಲ್ಲೇಖಿಸುವಾಗ, ದುಪ್ಪಟ್ಟು ದರ ಇಳಿಕೆ (ಡಿಫ್ಲೇಷನ್)ಯ ಪರಿಣಾಮ ಎಂದು ತಮ್ಮದೇ ಆದ ವಿಭಿನ್ನ ಊಹೆಗಳಿಂದ ವಿವಿಧ ಲೇಖಕರು ಅರ್ಥೈಸಿರುತ್ತಾರೆ. ಅಂಥ ಅಭಿಪ್ರಾಯಗಳಿಂದಾಗಿ ಪ್ರಸ್ತುತ ಹಂತದಲ್ಲಿ ದುಪ್ಪಟ್ಟು ದರ ಇಳಿತವನ್ನು ಬಳಸಿಕೊಳ್ಳಲು ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ (ಎಸಿಎನ್ಎಎಸ್) ಸಲಹಾ ಮಂಡಳಿ ಒಪ್ಪಿಕೊಂಡಿಲ್ಲ. ಮಿಗಿಲಾಗಿ, ಇನ್ ಪುಟ್ ಅನ್ನು ಕಡಿಮೆ ಮಾಡಲು, ಉತ್ಪಾದಕರ ದರ ಸೂಚ್ಯಂಕ (ಪಿಪಿಐ) ಇರುವ ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ದುಪ್ಪಟ್ಟು ದರ ಇಳಿಕೆಯನ್ನು ಬಳಸಲಾಗುತ್ತದೆ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಪಿಪಿಐ ವಿಧಾನ ಆಖೈರುಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದೊಂದಿಗೆ ಆಪ್ತವಾಗಿ ಶ್ರಮಿಸುತ್ತಿದೆ.
10. ಜಿಡಿಪಿಯಲ್ಲಿನ ಹೆಚ್ಚಿನ ಪರಿಷ್ಕರಣೆ ಅಂದಾಜುಗಳು ದತ್ತಾಂಶ ವ್ಯಾಪ್ತಿಯು ಆಡಳಿತಾತ್ಮಕ ಮೂಲಗಳಲ್ಲಿ ಸುಧಾರಣೆಯಾದಾಗ ಮುಂಬರುವ ದಿನಗಳಲ್ಲಿ ಸಾಧ್ಯವಾಗುತ್ತದೆ ಮತ್ತು ಈ ಸುಧಾರಣೆಗಳನ್ನು ಸೂಕ್ತವಾಗಿ ದಾಖಲಿಸಲಾಗುತ್ತದೆ. ಇದರ ಸುಧಾರಣೆಗಾಗಿ, ಹೆಚ್ಚಿನ ಬೃಹತ್ ಮಾದರಿ ತಂತ್ರಗಳನ್ನು ಬಳಸಲು ಅನುಕೂಲವಾಗುವಂತೆ ಮಾಹಿತಿ ಮೂಲದ ಸಂಸ್ಥೆಗಳಲ್ಲಿ ವಲಯದ ದತ್ತಾಂಶ ಹರಿವಿನಲ್ಲಿ ಸಂಯೋಜಿತ ಬದಲಾವಣೆ ಮತ್ತು ಸಂಯೋಜಿತ ನಿಯಂತ್ರಕ ಬದಲಾವಣೆಗಳು ಅಗತ್ಯವಾಗಿರುತ್ತವೆ. ಸಚಿವಾಲಯವು, ಅಧಿಕೃತ ಸಾಂಖ್ಯಿಕ ರಾಷ್ಟ್ರೀಯ ದತ್ತಾಂಶ ಕೋಶ ಸ್ಥಾಪನೆ ಮಾಡಲು ಉದ್ದೇಶಿಸಿದ್ದು, ಇದರಲ್ಲಿ ಬೃಹತ್ ಆರ್ಥಿಕ ಸರಾಸರಿಯ ಗುಣಮಟ್ಟದ ಸುಧಾರಣೆಗಾಗಿ ತಂತ್ರಜ್ಞಾನವನ್ನು ಬೃಹತ್ ದತ್ತಾಂಶ ವಿಶ್ಲೇಷಣೆ ಸಾಧನವಾಗಿ ಬಳಸಲಾಗುತ್ತದೆ. ಈ ಎಲ್ಲ ಸುಧಾರಣೆಗಳು ನಿರಂತರ ಪ್ರಕ್ರಿಯೆಗಳಾಗಿವೆ, ದತ್ತಾಂಶದ ಮಿತಿ ಮತ್ತು ಅಂದಾಜಿನಲ್ಲಿರುವ ಸವಾಲುಗಳ ಹಿನ್ನೆಲೆಯಲ್ಲಿ ಓದುಗರು ಮತ್ತು ಬಳಕೆದಾರರು ಇದನ್ನು ಚೆನ್ನಾಗಿ ಮತ್ತು ಸೂಕ್ತವಾಗಿ ಅರ್ಥಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಈ ಸುಧಾರಣೆಗಳನ್ನು ಕೈಗೊಳ್ಳುವಾಗ, ಹೊಸ ದತ್ತಾಂಶ ಗುಚ್ಛ ಮತ್ತು ಸಮೀಕ್ಷಾ ಫಲಿತಾಂಶಗಳನ್ನು ಏಕರೂಪವಾಗಿ ಬಳಸಲಾಗುವುದು ಮತ್ತು ಹೊಸ ಪ್ರಕ್ರಿಯೆಗಳಿಗಿಂತ ಹಳೆಯ ಪ್ರಕ್ರಿಯೆಗಳು ಉತ್ತಮವೆಂದು ಟೀಕೆ ಮಾಡುವುದು ತಪ್ಪಾಗುತ್ತದೆ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಕೈಗೊಂಡಿರುವ ಸುಧಾರಣೆಗಳು ಭವಿಷ್ಯದಲ್ಲಿ ಉತ್ತಮ ದತ್ತಾಂಶ ಗುಚ್ಛ ಮತ್ತು ಉತ್ತಮ ಅಂದಾಜಿಗೆ ಕಾರಣವಾಗುತ್ತದೆ, ಮತ್ತು ಆಧಾರ ವರ್ಷದ ಪರಿಷ್ಕರಣೆಯ ವೇಳೆ ಎ.ಸಿ.ಎನ್.ಎ.ಎಸ್.ನಿಂದ ಸೂಕ್ತವಾಗಿ ಸಮಾಲೋಚಿತವಾಗುತ್ತದೆ.
11. ಪ್ರಸಕ್ತ ಜಿಡಿಪಿ ಸರಣಿಯಲ್ಲಿ ಅನೌಪಚಾರಿಕ ಉತ್ಪಾದನ ವಲಯದ ಕೈಗಾರಿಕಾ ವಾರ್ಷಿಕ ಸಮೀಕ್ಷೆ (ಎಎಸ್ಐ) ಯಲ್ಲಿ ಮಾಪನ ಮಾಡಿದಂತೆ ಔಪಚಾರಿಕ ಉತ್ಪಾದನಾ ವಲಯವು ಅದೇ ಪ್ರಮಾಣದಲ್ಲಿ ಬೆಳೆಯಲಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಾಸ್ತವವಾಗಿ, ಇದು ಎಎಸ್.ಐನಲ್ಲಿ ಸೂಕ್ತ ವಿಧಾನದ ಉದ್ದಿಮೆಗಳ ಪ್ರಗತಿ ಮಾತ್ರ (ಅಂದರೆ, ಮಾಲಿಕತ್ವ, ಪಾಲುದಾರಿಕೆ, ಎಚ್.ಯು.ಎಫ್.) ಇದನ್ನು ಅನೌಪಚಾರಿಕ/ಅಸಂಘಟಿತ ಉತ್ಪಾದನಾ ವಲಯದ ಬೆಂಚ್ ಮಾರ್ಕ್ ಅಂದಾಜಿಗೆ ಬಳಸಲಾಗುತ್ತದೆಯೇ ಹೊರತು ಸಂಪೂರ್ಣ ಎ.ಎಸ್.ಐ. ವೃದ್ಧಿಗಾಗಿ ಅಲ್ಲ. ಮಿಗಿಲಾಗಿ, ಪಾವತಿಸಿದ-ಬಂಡವಾಳ ಮೂಲದ ಮಾದರಿ ಫಲಿತಾಂಶಗಳನ್ನು ಬಳಸುವಾಗ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ದೊಡ್ಡ ಎಂ.ಸಿ.ಎ. ದತ್ತಾಂಶ ಗುಚ್ಛವನ್ನು ಬಳಸುತ್ತದೆ (ಸುಮಾರು 7 ಲಕ್ಷ ಕ್ರಿಯಾತ್ಮಕ ನಿಗಮಗಳು) ಆದರೆ ಹಿಂದಿನ ಜಿಡಿಪಿ ಸರಣಿಯಲ್ಲಿ ಆರ್.ಬಿಐನಿಂದ ವಿಶ್ಲೇಷಿಸಲ್ಪಟ್ಟ ಕೇವಲ 2,500 ಸಾಂಸ್ಥಿಕ ಮಾದರಿಯ ಫಲಿತಾಂಶಗಳನ್ನು ಬಳಸಲಾಗುತ್ತಿತ್ತು.
12. ರಾಷ್ಟ್ರೀಯ ಸಾಂಖ್ಯಿಕ ವ್ಯವಸ್ಥೆಯು ತನ್ನ ಸಾಂಖ್ಯಿಕ ಪ್ರಕ್ರಿಯೆಗೆ ಸ್ವಾಯತ್ತ ಮತ್ತು ಸ್ವತಂತ್ರ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಬಾಹ್ಯ ಪ್ರಭಾವದ ಪ್ರಸ್ತಾಪಗಳು ಒಟ್ಟಾರೆಯಾಗಿ ಅನಧಿಕೃತವಾಗಿದೆ. ವಿವಿಧ ಸಾಂಖ್ಯಿಕ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳ ಬಳಕೆದಾರರಿಗೆ ನಿರಂತರ ಶಿಕ್ಷಣ ನೀಡುವ ವಿಚಾರದಲ್ಲಿ ಇದು ಸಚಿವಾಲಯದ ಪ್ರಯತ್ನವಾಗಿದೆ, ಇದು ಅವಶ್ಯ ಸಾರ್ವಜನಿಕ ಸರಕಾಗಿದೆ. ಈ ನಿಟ್ಟಿನಲ್ಲಿ, ಸಚಿವಾಲಯವು ಈಗ ಎಲ್ಲ ಸಂಗ್ರಹಿತ ಪ್ರಾಥಮಿಕ ದತ್ತಾಂಶಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ಬಾಹ್ಯ ಪ್ರೌಢ ಮತ್ತು ಆಡಳಿತಾತ್ಮಕ ದತ್ತಾಂಶ ಗುಚ್ಛಗಳನ್ನು ಹಂಚಿಕೊಳ್ಳಲು, ವಿವಿಧ ಶಾಸನಗಳಿಂದ ನಿರ್ವಹಿಸಲಾಗುತ್ತದೆ ಮತ್ತು ಸಂಶೋಧಕರು ಹೆಚ್ಚಿನ ದತ್ತಾಂಶಕ್ಕಾಗಿ ಸಂಬಂಧಿತ ದತ್ತಾಂಶ ಕಾಪಾಡುವ ಮೂಲ ಸಂಸ್ಥೆಗಳನ್ನು ಸಂಪರ್ಕಿಸಬಹುದು.
***
(Release ID: 1573974)
Visitor Counter : 169