ಪ್ರಧಾನ ಮಂತ್ರಿಯವರ ಕಛೇರಿ
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರಿಂದ ಭಾರತದ ಪ್ರಧಾನಮಂತ್ರಿಯವರಿಗೆ ದೂರವಾಣಿ ಕರೆ
Posted On:
24 MAY 2019 12:10PM by PIB Bengaluru
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರಿಂದ ಭಾರತದ ಪ್ರಧಾನಮಂತ್ರಿಯವರಿಗೆ ದೂರವಾಣಿ ಕರೆ
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರು 2019ರ ಮೇ 23ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ 17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿನ ಜಯಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಆಸ್ಟ್ರೇಲಿಯಾದೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಭಾರತ ಶ್ರೇಷ್ಠ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ಬಲಿಷ್ಠ ಮತ್ತು ಚಲನಶೀಲ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ವಿಸ್ತರಿಸುತ್ತಿರುವ ನಮ್ಮ ಆರ್ಥಿಕ ಕಾರ್ಯಕ್ರಮಗಳು, ಹೆಚ್ಚುತ್ತಿರುವ ಉನ್ನತ ಮಟ್ಟದ ಮಾತುಕತೆಗಳು ಮತ್ತು ಜನರ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಒತ್ತಿ ಹೇಳಿದ ಅವರು, ನಮ್ಮ ನಡುವಿನ ಬಾಂಧವ್ಯದಲ್ಲಿ ಸೃಷ್ಟಿಯಾಗಿರುವ ವೇಗವನ್ನು ಮತ್ತಷ್ಟು ಮುಂದುವರಿಸುವುದಾಗಿ ತಿಳಿಸಿದರು.
ಪ್ರಧಾನಮಂತ್ರಿಯವರು ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಪೂರ್ಣಗೊಂಡ ಚುನಾವಣೆಯಲ್ಲಿ ಲಿಬರಲ್ ನ್ಯಾಷನಲ್ ಕೊಯಿಲೇಷನ್ ಪಕ್ಷದ ವಿಜಯಕ್ಕೆ ಮಾರ್ಗದರ್ಶನ ಮಾಡಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾರಿಸನ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮಾರಿಸನ್ ಅವರಿಗೆ ಅವರು ಆಹ್ವಾನ ನೀಡಿದರು.
(Release ID: 1572521)
Visitor Counter : 119