ಸಂಪುಟ

ದೆಹಲಿ ಮೆಟ್ರೋ 4ನೇ ಹಂತದ ಯೋಜನೆಗೆ ಸಂಪುಟದ ಅನುಮೋದನೆ

Posted On: 07 MAR 2019 2:28PM by PIB Bengaluru

ದೆಹಲಿ ಮೆಟ್ರೋ 4ನೇ ಹಂತದ ಯೋಜನೆಗೆ ಸಂಪುಟದ ಅನುಮೋದನೆ

 

61.679ಕಿ.ಮೀ ಉದ್ದದಲ್ಲಿ 17 ಸುರಂಗ ಮತ್ತು 29 ಮೇಲ್ಸೇತುವೆಯ ನಿಲ್ದಾಣಗಳು 3 ಕಾರಿಡಾರ್ ಗಳು ಏರೋ ನಗರದಿಂದ ತುಘಲಕಾಬಾದ್ ನಡುವೆ 15 ನಿಲ್ದಾಣಗಳು, ಆರ್.ಕೆ. ಆಶ್ರಮ ಮತ್ತು ಜನಕ್ ಪುರಿ ಪಶ್ಚಿಮದ ನಡುವೆ 25 ನಿಲ್ದಾಣಗಳು, ಮೌಜ್ಪುರ್ ಮತ್ತು ಮುಕುಂದ್ ಪುರ ನಡುವೆ 6 ನಿಲ್ದಾಣಗಳು.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ  ಸಭೆ, 3 ಆದ್ಯತೆಯ ಕಾರಿಡಾರ್ ಗಳನ್ನೊಳಗೊಂಡ ದೆಹಲಿ ಮೆಟ್ರೋ 4ನೇ ಹಂತಕ್ಕೆ ತನ್ನ ಅನುಮೋದನೆ ನೀಡಿದೆ. ಈ ಮೂರು ಕಾರಿಡಾರ್ ಗಳ ಒಟ್ಟು ಉದ್ದ 61.679 ಕಿ.ಮೀ. ಒಟ್ಟು 61.679 ಕಿ.ಮೀಗಳ ಪೈಕಿ 22.359ಕಿ.ಮೀ ಗಳನ್ನು ಭೂಮಿಯ ಒಳಗೆ ಮತ್ತು 39.320 ಕಿ.ಮೀ ಮೇಲು ಮಾರ್ಗದಲ್ಲಿ ನಿರ್ಮಿಸಲಾಗುವುದು. ಈ ಕಾರಿಡಾರ್ ಗಳು 46 ನಿಲ್ದಾಣಗಳನ್ನು ಒಳಗೊಂಡಿವೆ. ಈ ಪೈಕಿ 17 ನಿಲ್ದಾಣಗಳು ಸುರಂಗದಲ್ಲಿದ್ದರೆ ಉಳಿದ 29 ಮೇಲ್ಭಾಗದ ವಿಭಾಗದಲ್ಲಿರುತ್ತವೆ.

 

ಮೂರೂ ಕಾರಿಡಾರ್ ಗಳ ಪೂರ್ಣವಾಗುವವರೆಗಿನ ಒಟ್ಟು ವೆಚ್ಚ 24,948.65ಕೋಟಿ ರೂಪಾಯಿಗಳು. ಈ ಯೋಜನೆಯನ್ನು ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿಎಂಆರ್.ಸಿ.), ಹಾಲಿ ಇರುವ 50:50ರ ಅನುಪಾತದ ಭಾರತ ಸರ್ಕಾರ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಜಿಎನ್.ಸಿ.ಟಿ.ಡಿ.) ಸರ್ಕಾರದ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.) ಯಿಂದ ಅನುಷ್ಠಾಗೊಳಿಸಲಾಗುವುದು.

 

ಸಂಪರ್ಕದ ಮುಖ್ಯಾಂಶಗಳು:

 

1.  ಏರೋಸಿಟಿಯಿಂದ ತುಘಲಕಾಬಾದ್ – 15 ನಿಲ್ದಾಣಗಳು (ಏರೋಸಿಟಿ, ಮಹಿಪಾಲ್ಪುರ, ವಸಂತ್ ಕುಂಜ್ ಸೆಕ್ಟರ್ –ಡಿ, ಮಸೂದ್ಪುರ, ಕಿಶನ್ ಘರ್, ಮೆಹರೌಲಿ, ಲಾಡೋ ಸರಾಯ್, ಸಾಕೇತ್, ಸಾಕೇತ್ ಜಿ ಬ್ಲಾಕ್, ಅಂಬೇಡ್ಕರ್ ನಗರ, ಖಾನ್ಪುರ್, ತಿಗ್ರಿ, ಆನಂದಮಯಿ ಮಾರ್ಗ್ ಜಂಕ್ಷನ್, ತುಘಲಕಾಬಾದ್ ರೈಲ್ವೆ ಕಾಲೋನಿ, ತುಘಲಕಾಬಾದ್)

 

2. ಆರ್.ಕೆ. ಆಶ್ರಮ್ ನಿಂದ ಜನಕ್ ಪುರಿ ಪಶ್ಚಿಮ – 25 ನಿಲ್ದಾಣಗಳು (ಆರ್.ಕೆ. ಆಶ್ರಮ, ಮೋತಿಖಾನ್, ಸರ್ದಾರ್ ಬಜಾರ್, ಪುಲ್ಬಾಂಗಶ್, ಘಂಟಾಘರ್/ಸಬ್ಜಿ ಮಂಡಿ, ರಾಜಪುರ್, ದೇರಾವಾಲ್ ನಗರ್, ಅಶೋಕ್ ವಿಹಾರ್, ಆಜಾದ್ಪುರ್, ಮುಕುಂದ್ಪುರ್, ಭಾಲಾಶ್ವ, ಮುಕರ್ಬಾ ಚೌಕ್, ಬದ್ಲಿಮೋರ್, ಉತ್ತರ ಪಿತಾಮ್ಪುರ್, ಪ್ರಶಾಂತ್ ವಿಹಾರ್, ಮಧುಬನ್ ಚೌಕ್, ದೀಪಾಲಿ ಚೌಕ್, ಪುಷ್ಪಾಂಜಲಿ ಎನ್ ಕ್ಲೇವ್, ಪಶ್ಚಿಮ ಎನ್ ಕ್ಲೇವ್, ಮಂಗೋಲ್ಪುರಿ, ಪಿರಾಗರ್ಹಿ ಚೌಕ್, ಪಶ್ಚಿಮ್ ವಿಹಾರ್, ಮೀರಾಭಾಗ್, ಕೇಶೋಪುರ್, ಕೃಷ್ಣ ಪಾರ್ಕ್ ವಿಸ್ತರಣೆ, ಜನಕ್ಪುರಿ ಪಶ್ಚಿಮ)

 

3. ಮೌಜಿಪುರ್ – ಮುಕುಂದ್ಪುರ್ – 6 ನಿಲ್ದಾಣಗಳು (ಯಮುನಾ ವಿಹಾರ್, ಭಜನ್ಪುರ್, ಖಜೌರಿ ಖಾಸ್, ಸೂರ್ ಘಾಟ್, ಜಗತ್ಪುರ್ ಗ್ರಾಮ, ಬೌರಾರಿ)

 

3 ಕಾರಿಡಾರ್ ಗಳು ಭೂಮಿಯ ಒಳಗೆ (22.359 ಕಿ.ಮೀ) ಮತ್ತು ಮೇಲ್ಸೇತುವೆಯಲ್ಲಿ (39.320 ಕಿ.ಮೀ) ವಿಭಾಗ ಹೊಂದಿವೆ.

 

ಪರಿಣಾಮಗಳು:

 

4ನೇ ಹಂತದ ಯೋಜನೆಯ ಈ ಕಾರಿಡಾರ್ ಗಳು ಮೆಟ್ರೋ ಜಾಲದ ವ್ಯಾಪ್ತಿಯನ್ನು ವಿಸ್ತರಿಸುತ್ತವೆ, ಆ ಮೂಲಕ ರಾಷ್ಟ್ರೀಯ ರಾಜಧಾನಿಯ ಹೆಚ್ಚಿನ ಪ್ರದೇಶವನ್ನು ಸಂಪರ್ಕಿಸುತ್ತವೆ. ಈ ಕಾರಿಡಾರ್ ಗಳು ಪೂರ್ಣಗೊಂಡ ತರುವಾಯ ಮೆಟ್ರೋ ಪ್ರಯಾಣಿಕರಿಗೆ ಹಾಲಿ ಇರುವ ದೆಹಲಿ ಮೆಟ್ರೋ ಮಾರ್ಗಗಳನ್ನು ಹೊಸ ಕಾರಿಡಾರ್ ಜೊತೆಗೆ ಸಂಪರ್ಕಿಸಲು ಹೆಚ್ಚಿನ ಬದಲಾವಣೆ ನಿಲ್ದಾಣಗಳು ಇರುತ್ತವೆ. ಸುಧಾರಿತ ಸಂಪರ್ಕವು ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗುವ ಮಾರ್ಗದಲ್ಲಿನ ಪ್ರಯಾಣದ ಅವಕಾಶ ಒದಗಿಸುತ್ತದೆ. ಈ ಹೊಸ 3 ಕಾರಿಡಾರ್ ಮೂಲಕ 61.679 ಕಿ.ಮೀ ಜಾಲವು ರಸ್ತೆಯ ಮೇಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಅದು ಮೋಟಾರು ವಾಹನಗಳಿಂದಾಗುವ ಮಾಲಿನ್ಯವನ್ನೂ ತಗ್ಗಿಸುತ್ತದೆ. ತುಘಲಕಾಬಾದ್ – ಏರೋಸಿಟಿ ಕಾರಿಡಾರ್ ವಿಮಾನ ನಿಲ್ದಾಣದ ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ. ಈ ಕಾರಿಡಾರ್ ಗಳು ಪೂರ್ಣಗೊಂಡರೆ ದೆಹಲಿ ಮೆಟ್ರೋ ಜಾಲದ ಒಟ್ಟು ಉದ್ದ 400 ಕಿ.ಮೀ. ಗಡಿ ದಾಡುತ್ತದೆ.



(Release ID: 1568293) Visitor Counter : 61