ಸಂಪುಟ

ಮಾಜಿ ಯೋಧರ ವಂತಿಗೆಯ ಆರೋಗ್ಯ ಯೋಜನೆ (ಇ.ಸಿ.ಎಚ್.ಎಸ್.) ಅಡಿಯಲ್ಲಿ ಎರಡನೇ ವಿಶ್ವಯುದ್ಧದ ಶೂರರು, ತುರ್ತು ಕಮಿಷನ್ಡ್ ಅಧಿಕಾರಿಗಳು (ಇಸಿಓಗಳು), ಕಿರು ಸೇವೆಯ ಕಮಿಷನ್ಡ್ ಅಧಿಕಾರಿಗಳು (ಎಸ್.ಎಸ್.ಸಿ.ಓ.ಗಳು) ಮತ್ತು ಅವಧಿಗೆ ಮುನ್ನವೇ ನಿವೃತ್ತರಾದವರಿಗೆ ವೈದ್ಯಕೀಯ ಸೌಲಭ್ಯ ಮಂಜೂರು ಮಾಡಲು ಸಂಪುಟದ ಅನುಮೋದನೆ 40,000ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಆಗಲಿದೆ ಪ್ರಯೋಜನ

Posted On: 07 MAR 2019 2:18PM by PIB Bengaluru

ಮಾಜಿ ಯೋಧರ ವಂತಿಗೆಯ ಆರೋಗ್ಯ ಯೋಜನೆ (ಇ.ಸಿ.ಎಚ್.ಎಸ್.) ಅಡಿಯಲ್ಲಿ ಎರಡನೇ ವಿಶ್ವಯುದ್ಧದ ಶೂರರು, ತುರ್ತು ಕಮಿಷನ್ಡ್ ಅಧಿಕಾರಿಗಳು (ಇಸಿಓಗಳು), ಕಿರು ಸೇವೆಯ ಕಮಿಷನ್ಡ್ ಅಧಿಕಾರಿಗಳು (ಎಸ್.ಎಸ್.ಸಿ.ಓ.ಗಳು) ಮತ್ತು ಅವಧಿಗೆ ಮುನ್ನವೇ ನಿವೃತ್ತರಾದವರಿಗೆ ವೈದ್ಯಕೀಯ ಸೌಲಭ್ಯ ಮಂಜೂರು ಮಾಡಲು ಸಂಪುಟದ ಅನುಮೋದನೆ 

40,000ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಆಗಲಿದೆ ಪ್ರಯೋಜನ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾಜಿ ಯೋಧರ ವಂತಿಗೆಯ ಆರೋಗ್ಯ ಯೋಜನೆ (ಇ.ಸಿ.ಎಚ್.ಎಸ್.) ಅಡಿಯಲ್ಲಿ ಎರಡನೇ ವಿಶ್ವಯುದ್ಧದ ಶೂರರು, ತುರ್ತು ಕಮಿಷನ್ಡ್ ಅಧಿಕಾರಿಗಳು (ಇಸಿಓಗಳು), ಕಿರು ಸೇವೆಯ ಕಮಿಷನ್ಡ್ ಅಧಿಕಾರಿಗಳು (ಎಸ್.ಎಸ್.ಸಿ.ಓ.ಗಳು) ಮತ್ತು ಅವಧಿಗೆ ಮುನ್ನವೇ ನಿವೃತ್ತರಾದವರಿಗೆ ವೈದ್ಯಕೀಯ ಸೌಲಭ್ಯ ಮಂಜೂರು ಮಾಡಲು ತನ್ನ ಅನುಮೋದನೆ ನೀಡಿದೆ 

ಇದರ ಫಲವಾಗಿ ಈವರೆಗೆ ಇಸಿಎಚ್.ಎಸ್. ವ್ಯಾಪ್ತಿಗೆ ಒಳಪಡದ 43,000ಕ್ಕೂ ಹೆಚ್ಚು ವ್ಯಕ್ತಿಗಳು ಇಸಿಎಚ್.ಎಸ್. ಸೌಲಭ್ಯದ ಅಡಿಯಲ್ಲಿ ದೇಶದಾದ್ಯಂತದ 425 ಇಸಿಎಚ್ಎಸ್ ಪಾಲಿ ಕ್ಲಿನಿಕ್ ಗಳು, 2500ಕ್ಕೂ ಹೆಚ್ಚು ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಗಳು ಮತ್ತು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವೊಂದು ಷರತ್ತುಗಳಿಗೆ ಒಳಪಟ್ಟು ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ. 

ವಿಶೇಷ ಮಂಜೂರಾತಿಯಾಗಿ, ಯುದ್ಧ ವಿಧವೆಯರಿಗೆ ಇಸಿಎಚ್ಎಸ್ ಸೇರಲು ಒಂದು ಬಾರಿಯ ವಂತಿಗೆಯಿಂದ ವಿನಾಯಿತಿ ನೀಡಲಾಗಿದೆ. 

2003ರಲ್ಲಿ ಎನ್.ಡಿ.ಎ. ಸರ್ಕಾರ ಆರಂಭಿಸಿದ ಇ.ಸಿ.ಎಚ್.ಎಸ್. 54 ಲಕ್ಷ ಪಿಂಣಿದಾರ ಮಾಜಿ ಯೋಧರಿಗೆ ಮತ್ತು ಅವರ ಅವಲಂಬಿತರಿಗೆ ಮತ್ತು ಇತರ ಕೆಲವು ವರ್ಗದವರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ, 

ಮಾಜಿ ಯೋಧರ ಕಲ್ಯಾಣಕ್ಕೆ ಕ್ರಮಗಳು : 

ಇಂದಿನ ನಿರ್ಧಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಸರ್ಕಾರ, ದೇಶಕ್ಕಾಗಿ ಅಮೂಲ್ಯ ಸೇವೆ ಸಲ್ಲಿಸಿದ ನಮ್ಮ ಧೈರ್ಯಶಾಲಿ ಮಾಜಿ ಯೋಧರ ಕಲ್ಯಾಣಕ್ಕಾಗಿ ಕೈಗೊಳ್ಳುತ್ತಿರುವ ಸಕ್ರಿಯ ನೀತಿಯ ಮತ್ತೊಂದು ಮೈಲಿಗಲ್ಲಿನ ಹೆಜ್ಜೆಯಾಗಿದೆ. 

ಮಾಜಿ ಯೋಧರಿಗೆ ಒಂದೇ ಶ್ರೇಣಿ ಒಂದೇ ಪಿಂಚಣಿ ಜಾರಿ, ಈ ಬೇಡಿಕೆ ನಾಲ್ಕು ದಶಕಗಳಿಂದ ಬಾಕಿ ಉಳಿದಿತ್ತು. ಇದರ ಜಾರಿಯಿಂದ 20 ಲಕ್ಷ ಮಾಜಿ ಯೋಧರು ಯೋಜನೆಯಡಿ 35,000 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದಾರೆ. ಮಾಜಿ ಯೋಧರಿಗೆ ಸರ್ಕಾರ ಕೈಗೊಂಡ ಇತರ ಕಲ್ಯಾಣ ಉಪಕ್ರಮಗಳಲ್ಲಿ ಪಿಂಚಣಿಯಲ್ಲಿ ಶೇ.40 ಹೆಚ್ಚಳ, ಅವಧಿಗೆ ಮುನ್ನವೇ ನಿವೃತ್ತರಾದವರಿಗೆ ಅಂಗವೈಕಲ್ಯ ಪಿಂಚಣಿ, ಯುದ್ಧದಲ್ಲಿ ಹುತಾತ್ಮರಾದವರಿಗೆ ನೀಡುವ ಪರಿಹಾರ, ವಾಸ್ತವ ಗಡಿ ರೇಖೆ, ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಮಡಿದವರಿಗೂ ಅನ್ವಯ, ಹೊಸದಾಗಿ ರೂಪಿಸಲಾಗಿರುವ ಸೇನಾ ಯುದ್ಧ ಹುತಾತ್ಮರ ಕಲ್ಯಾಣ ನಿಧಿ ಮೂಲಕ ಸರ್ವೋಚ್ಛ ಬಲಿದಾನಕ್ಕಾಗಿ ಯೋಧರಿಗೆ ಆರ್ಥಿಕ ನೆರವು, ಪರಿಹಾರ ಮತ್ತು ಅಡ್ ಹಾಕ್ ಭತ್ಯೆ ಹೆಚ್ಚಳ, ಮಾಜಿ ನಾವಿಕರಿಗೆ ವಿಶೇಷ ಪಿಂಚಣಿ, ಮತ್ತು ಈವರೆಗೆ ನಿವೃತ್ತರಾದ 30,000 ಸೈನಿಕರಿಗೆ 36 ಉದ್ಯೋಗಗಳಲ್ಲಿ ಕೌಶಲ ಅಭಿವೃದ್ಧಿ ತರಬೇತಿಯೂ ಸೇರಿದೆ. 



(Release ID: 1568276) Visitor Counter : 111