ಸಂಪುಟ
ಹೊಸದಾಗಿ ರಚಿಸಲಾಗಿರುವ ಮೀನುಗಾರಿಕೆ ಇಲಾಖೆಯಲ್ಲಿ ಒಂದು ಕಾರ್ಯದರ್ಶಿ ಹುದ್ದೆ ಮತ್ತು ಒಂದು ಜಂಟಿ ಕಾರ್ಯದರ್ಶಿ ಹುದ್ದೆಯ ಸೃಷ್ಟಿಗೆ ಸಂಪುಟದ ಅನುಮೋದನೆ
प्रविष्टि तिथि:
19 FEB 2019 9:07PM by PIB Bengaluru
ಹೊಸದಾಗಿ ರಚಿಸಲಾಗಿರುವ ಮೀನುಗಾರಿಕೆ ಇಲಾಖೆಯಲ್ಲಿ ಒಂದು ಕಾರ್ಯದರ್ಶಿ ಹುದ್ದೆ ಮತ್ತು ಒಂದು ಜಂಟಿ ಕಾರ್ಯದರ್ಶಿ ಹುದ್ದೆಯ ಸೃಷ್ಟಿಗೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೀನುಗಾರಿಕೆ ಇಲಾಖೆಯ ಸುಗಮ ಕಾರ್ಯನಿರ್ವಹಣೆಗಾಗಿ ಮತ್ತು ಹೊಸದಾಗಿ ರಚಿಸಲಾಗಿರುವ ಇಲಾಖೆಯ ಅಗತ್ಯ ಪೂರೈಸಲು 17ನೇ ಮಟ್ಟದಲ್ಲಿ (ರೂ. 2,25,000/- ಸ್ಥಿರ) ಒಂದು ಕಾರ್ಯದರ್ಶಿ ಹುದ್ದೆ ಮತ್ತು ವೇತನ ಮೆಟ್ರಿಕ್ಸ್ ನ 14ನೇ ಮಟ್ಟದಲ್ಲಿ (ರೂ. 144200-218200) ಒಂದು ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಶಾಶ್ವತ ಆಧಾರದ ಮೇಲೆ ಸೃಷ್ಟಿಸಲು ತನ್ನ ಅನುಮೋದನೆ ನೀಡಿದೆ.
ಹೊಸದಾಗಿ ರಚಿಸಲಾದ ಹುದ್ದೆಗಳು ವಲಯದ ಅಭಿವೃದ್ಧಿಗಾಗಿ, ದೊಡ್ಡ ಸಂಖ್ಯೆಯ ಮೀನುಗಾರರ ಹಿತ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಮೀನುಗಾರಿಕೆ ಇಲಾಖೆ ಕೈಗೊಳ್ಳಬೇಕಾದ/ನಿಗಾವಹಿಸಬೇಕಾದ ವಿವಿಧ ಯೋಜನೆಗಳಿಗೆ ಅವಕಾಶ ಕಲ್ಪಿಸಲಿದೆ
(रिलीज़ आईडी: 1565721)
आगंतुक पटल : 122