ಸಂಪುಟ

ಛತ್ತೀಸ್ ಗಢದ ಪರಿಶಿಷ್ಟ ಪಂಗಡದ ಪಟ್ಟಿ ಪರಿಷ್ಕರಣೆಗೆ ಕೇಂದ್ರ ಸಂಪುಟ ಅನುಮೋದನೆ 

Posted On: 13 FEB 2019 9:14PM by PIB Bengaluru

ಛತ್ತೀಸ್ ಗಢದ ಪರಿಶಿಷ್ಟ ಪಂಗಡದ ಪಟ್ಟಿ ಪರಿಷ್ಕರಣೆಗೆ ಕೇಂದ್ರ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಛತ್ತೀಸ್ ಗಢದ ಪರಿಶಿಷ್ಟ ಪಂಗಡ(ಎಸ್ ಟಿ) ಪಟ್ಟಿ ಪರಿಷ್ಕರಣೆಗೆ ಕೇಂದ್ರ ಸಂವಿಧಾನದ(ಪರಿಶಿಷ್ಟ ಜಾತಿ ಮತ್ತು ಪಂಗಡ) ಆದೇಶ ತಿದ್ದುಪಡಿ ವಿಧೇಯಕ 2016ಕ್ಕೆ ಅಧಿಕೃತ ತಿದ್ದುಪಡಿ ಮಾಡುವ ಸಂಪುಟ ಟಿಪ್ಪಣಿಗೆ ಅನುಮೋದನೆ ನೀಡಿತು.

ಛತ್ತೀಸ್ ಗಢದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುವುದು.

1. ಐದನೇ ಸೇರ್ಪಡೆಯಲ್ಲಿ “ಭರಿಯಭುಮಿಯ” ನಂತರ ಈ ಕೆಳಗಿನವುಗಳನ್ನು ಸೇರಿಸಬೇಕು, ಅವುಗಳೆಂದರೆ “ಭುನ್ಯಾ, ಭುಯಿಯಾನ್, ಭುಯಾನ್”.

2. 14ನೇ ಉಲ್ಲೇಖದಲ್ಲಿ ಈ ಕೆಳಗಿನ ಪದಗಳನ್ನು ಸೇರ್ಪಡೆಮಾಡಿ ಪರ್ಯಾಯವಾಗಿ ಬಳಸುವುದು. “14. ಧನ್ ವರ್, ಧನುಹಾರ್, ಧನುವಾರ್”



3. 32 ಮತ್ತು 33ನೇ ಉಲ್ಲೇಖದಲ್ಲಿ ಈ ಕೆಳಗಿನ ಹೆಸರುಗಳನ್ನು ಪರ್ಯಾಯವಾಗಿ ಉಲ್ಲೇಖಿಸುವುದು.

“32. ನಾಗೆಸಿಯ, ನಾಗಸಿಯ, ಕಿಸಾನ್, 33. ಒರಾನ್, ಧನಕ, ಧನಗಢ್”

4. 41ನೇ ಉಲ್ಲೇಖದಲ್ಲಿ ಈ ಕೆಳಗಿನ ಹೆಸರುಗಳನ್ನು ಸೇರ್ಪಡೆ ಮಾಡಲಾಗುವುದು.

“41. ಸಾವರ್, ಸಾವರಾ, ಸಾವುನ್ರಾ, ಸೋನ್ರಾ

43. 42ನೇ ಉಲ್ಲೇಖದ ನಂತರ ಈ ಕೆಳಗಿನ ಪದವನ್ನು ಸೇರ್ಪಡೆ ಮಾಡುವುದು, ಆ ಹೆಸರೆಂದರೆ “43. ಬಿಂಜ್ಹಿಯಾ”

ಈ ಕಾಯ್ದೆಯನ್ನು ಸಂವಿಧಾನ(ಪರಿಶಿಷ್ಟ ಜಾತಿ ಮತ್ತು ಪಂಗಡ) ತಿದ್ದುಪಡಿ ವಿಧೇಯಕ-2019 ಎಂದು ಕರೆಯಲಾಗುವುದು. ಈ ಮಸೂದೆ ಶಾಸನವಾದ ನಂತರ ಛತ್ತೀಸ್ ಗಢದ ಪರಿಶಿಷ್ಟ ಪಂಗಡದ ಪಟ್ಟಿ ಪರಿಷ್ಕೃತಗೊಳ್ಳಲಿದ್ದು, ಆನಂತರ ಅದರಲ್ಲಿ ಸೇರ್ಪಡೆಯಾಗುವ ಜಾತಿಗಳ ಜನರು ಪರಿಶಿಷ್ಟ ಪಂಗಡಕ್ಕೆ ಹಾಲಿ ಇರುವ ಸರ್ಕಾರದ ಯೋಜನೆಗಳ ಅನ್ವಯ ಲಭ್ಯವಿರುವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಕೆಲವು ಪ್ರಮುಖ ಯೋಜನೆಗಳೆಂದರೆ ಪೋಸ್ಟ್ ಮೆಟ್ರಿಕ್ ಸ್ಕಾಲರ್ ಶಿಪ್, ರಾಷ್ಟ್ರೀಯ ಸಾಗರೋತ್ತರ ಸ್ಕಾಲರ್ ಶಿಪ್, ರಾಷ್ಟ್ರೀಯ ಫೆಲೋಶಿಪ್, ಟಾಪ್ ಕ್ಲಾಸ್ ಎಜುಕೇಶನ್, ರಾಷ್ಟ್ರೀಯ ಅಧಿಸೂಚಿತ ಬುಡಕಟ್ಟು ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ರಿಯಾಯಿತಿ ದರದಲ್ಲಿ ಸಾಲಸೌಲಭ್ಯ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಸತಿನಿಲಯ ಸೌಲಭ್ಯ ಮತ್ತಿತರವುಗಳು. ಈ ಸೌಕರ್ಯಗಳಲ್ಲದೆ, ಸರ್ಕಾರದ ನೀತಿಯಂತೆ ಸೇವೆಯಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲೂ ಸಹ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಅವರು ಅರ್ಹರಾಗುತ್ತಾರೆ.
 

***************



(Release ID: 1564444) Visitor Counter : 87