ಪ್ರಧಾನ ಮಂತ್ರಿಯವರ ಕಛೇರಿ

ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ 

Posted On: 10 FEB 2019 8:27PM by PIB Bengaluru

ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ 
 

1.5 ಎಂ.ಎಂ.ಟಿ. ಮಂಗಳೂರು ಎಸ್.ಪಿ.ಆರ್. ಮತ್ತು 2.5 ಎಂ.ಎಂ.ಟಿ. ಪಾದೂರು ಎಸ್.ಪಿ.ಆರ್. ದೇಶಕ್ಕೆ ಸಮರ್ಪಣೆ. 

ಧಾರವಾಡ ಐ.ಐ.ಟಿ. ಮತ್ತು ಧಾರವಾಡ ಐ.ಐ.ಐ.ಟಿ.ಗೆ ಶಿಲಾನ್ಯಾಸ, ಪಿ.ಎಂ.ಎ.ವೈ. (ನಗರ) ಅಡಿಯಲ್ಲಿ 2350 ಫಲಾನುಭವಿಗಳ ಇ-ಗೃಹ ಪ್ರವೇಶಕ್ಕೆ ಸಾಕ್ಷಿಯಾದ ಪ್ರಧಾನಮಂತ್ರಿ ಅವರಿಂದ ಹಲವು ಅಭಿವೃದ್ದಿ ಯೋಜನೆಗಳ ಅನಾವರಣ

ಆಂಧ್ರಪ್ರದೇಶ, ತಮಿಳುನಾಡು, ಮತ್ತು ಕರ್ನಾಟಕಗಳ ತಮ್ಮ ಏಕದಿನ ಪ್ರವಾಸದ ಕೊನೆಯ ಹಂತದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕರ್ನಾಟಕದ ಹುಬ್ಬಳ್ಳಿಗೆ ಭೇಟಿ ನೀಡಿದರು. ಹುಬ್ಬಳ್ಳಿಯ ಗಬ್ಬೂರಿನಲ್ಲಿ ಅವರು ಹಲವು ಅಭಿವೃದ್ದಿ ಯೋಜನೆಗಳನ್ನು ಅನಾವರಣ ಮಾಡಿದರು.

ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ) ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ-ಧಾರವಾಡ (ಐ.ಐ.ಐ.ಟಿ.) ಗಳಿಗೆ ಶಿಲಾನ್ಯಾಸದ ಅಂಗವಾಗಿ ಅವರು ನಾಮಫಲಕ ಅನಾವರಣ ಮಾಡಿದರು.

ಧಾರವಾಡದಲ್ಲಿ ನಗರ ಅನಿಲ ವಿತರಣಾ ಯೋಜನೆಯನ್ನು ಈ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ನಾಗರಿಕರಿಗೆ ಸ್ವಚ್ಚ ಇಂಧನ ಲಭ್ಯತೆಯನ್ನು ಹೆಚ್ಚಿಸುವ ಇರಾದೆಯಿಂದಾಗಿ ದೇಶಾದ್ಯಂತ ನಗರ ಅನಿಲ ವಿತರಣಾ (ಸಿ.ಜಿ.ಡಿ.) ಜಾಲವನ್ನು ವಿಸ್ತರಿಸುವುದಕ್ಕೆ ಭಾರತ ಸರಕಾರವು ಹೆಚ್ಚು ಆದ್ಯತೆ ನೀಡುತ್ತಿದೆ.

ಇಂಧನ ಭದ್ರತೆ ಖಾತ್ರಿಪಡಿಸಲು, ಐ.ಎಸ್.ಪಿ.ಆರ್. ನ 1.5 ಎಂ.ಎಂ.ಟಿ. ಮಂಗಳೂರು ವ್ಯೂಹಾತ್ಮಕ ಪೆಟ್ರೋಲಿಯಂ ಮೀಸಲು (ಎಸ್.ಪಿ.ಆರ್. ) ಸೌಲಭ್ಯವನ್ನು ಮತ್ತು 2.5 ಎಂ.ಎಂ.ಟಿ ಪಾದೂರು ಎಸ್.ಪಿ.ಆರ್. ಸೌಲಭ್ಯವನ್ನು ಕೂಡಾ ರಾಷ್ಟ್ರಕ್ಕೆ ಸಮರ್ಪಿಸಲಾಯಿತು. 

ಚಿಕ್ಕಜಾಜೂರು- ಮಾಯಕೊಂದ ಸೆಕ್ಷನ್ನಿನ 18 ಕಿ.ಮೀ.ಉದ್ದದ ದ್ವಿಪಥವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಚಿಕ್ಕಜಾಜೂರು-ಮಾಯಕೊಂಡ ಸೆಕ್ಷನ್ ನೈರುತ್ಯ ರೈಲ್ವೇಯ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿದ್ದು ಅದು 190 ಕಿ.ಮೀ. ಉದ್ದದ ಹುಬ್ಬಳ್ಳಿ-ಚಿಕ್ಕಜಾಜೂರು ದ್ವಿಪಥ ಯೋಜನೆಯ ಭಾಗವಾಗಿದೆ. ದ್ವಿಪಥಗೊಳಿಸುವಿಕೆಯಿಂದ ಬೆಂಗಳೂರನ್ನು ಹುಬ್ಬಳ್ಳಿ, ಬೆಳಗಾವಿ, ಪುಣೆ ಮತ್ತು ಮುಂಬಯಿಯೊಂದಿಗೆ ಬೆಸೆಯುವ ಈ ಪ್ರಮುಖ ಮಾರ್ಗದ ಸಾಮರ್ಥ್ಯ ವೃದ್ದಿಯಾಗಲಿದೆ ಹಾಗು ರೈಲುಗಳ ತ್ವರಿತ ಓಡಾಟಕ್ಕೆ ಅನುಕೂಲವಾಗಲಿದೆ.

ಎಲ್ಲರಿಗೂ ವಸತಿ ಒದಗಿಸುವ ತಮ್ಮ ಬದ್ದತೆಯ ಭಾಗವಾಗಿ ಪಿ.ಎಂ.ಎ.ವೈ. (ನಗರ ) ಅಡಿಯಲ್ಲಿ ಧಾರವಾಡದಲ್ಲಿ ನಿರ್ಮಿಸಲಾದ 2350 ಮನೆಗಳ ಇ-ಗೃಹ ಪ್ರವೇಶವನ್ನು ಪ್ರಧಾನಮಂತ್ರಿ ಅವರು ವೀಕ್ಷಿಸಿದರು. 



(Release ID: 1563866) Visitor Counter : 106