ಸಂಪುಟ

ಭಾರತ ಮತ್ತು ರೊಮಾನಿಯ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಿಳುವಳಿಕಾ ಒಪ್ಪಂದಕ್ಕೆ ಸಂಪುಟ ಅಸ್ತು 

Posted On: 10 OCT 2018 1:36PM by PIB Bengaluru

ಭಾರತ ಮತ್ತು ರೊಮಾನಿಯ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಿಳುವಳಿಕಾ ಒಪ್ಪಂದಕ್ಕೆ ಸಂಪುಟ ಅಸ್ತು 
 

ಭಾರತ ಮತ್ತು ರೊಮಾನಿಯ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಿಹಾಕಿದ ತಿಳುವಳಿಕಾ ಒಪ್ಪಂದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸಂಪುಟವು ಪೂರ್ವಾನ್ವಯ ಅನುಮೋದನೆ ನೀಡಿದೆ. ಭಾರತದ ಉಪರಾಷ್ಟ್ರಪತಿ ಅವರು ಸೆಪ್ಟೆಂಬರ್ ತಿಂಗಳಲ್ಲಿ ರೊಮಾನಿಯಕ್ಕೆ ಭೇಟಿ ನೀಡಿದ್ದಾಗ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 

ತಿಳುವಳಿಕಾ ಒಪ್ಪಂದದ ಪ್ರಧಾನ ಉದ್ಧೇಶಗಳು: 

ಎ) ಪ್ರವಾಸೋದ್ಯಮಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಗಳ ವಿಸ್ತರಣೆ. 

ಬಿ) ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳ ಮತ್ತು ದತ್ತಾಂಶಗಳ ವಿನಿಮಯ. ಹೋಟೆಲು ಮತ್ತು ಪ್ರವಾಸ ಆಯೋಜಕರನ್ನು ಸೇರಿಸಿಕೊಂಡ ಪ್ರವಾಸೋದ್ಯಮ ಕ್ಷೇತ್ರದ ಭಾಗಿದಾರರ ನಡುವೆ ಸಹಕಾರಗಳಿಗೆ ಪ್ರೋತ್ಸಾಹ. 

ಸಿ) ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ. 

ಡಿ) ಪ್ರವಾಸ ಆಯೋಜಕರು / ಮಾದ್ಯಮ / ಅಭಿಪ್ರಾಯ ಸೃಷ್ಠಿಸುವವರು ಮುಂತಾದವರ ಪರಸ್ಪರ ಪ್ರವಾಸ / ಭೇಟಿ ಮೂಲಕ ಇಬ್ಬಗೆಯ ಪ್ರವಾಸೋದ್ಯಮದ ವೃದ್ಧಿಗೆ ಪ್ರೋತ್ಸಾಹ. 

ಇ) ಪ್ರೊಮೋಷನ್, ಮಾರ್ಕೇಟಿಂಗ್, ಪ್ರವಾಸಿ ಸ್ಥಳಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಅನುಭವಗಳ ವಿನಿಮಯ ಎಫ್) ಎರಡೂ ದೇಶಗಳ ಆಕರ್ಷಕ ಪ್ರವಾಸಿ ಸ್ಥಳಗಳನ್ನು ಪ್ರಚುರ ಪಡಿಸಲು (ಪ್ರೊಮೋಷನ್) ಚಲನಚಿತ್ರ ಪ್ರವಾಸೋದ್ಯಮ ಮೂಲಕ ದ್ವಿಪಕ್ಷೀಯ ಸಹಕಾರಗಳ ಪಾಲನೆಮಾಡುವುದು.

ಜಿ) ಸುರಕ್ಷಿತ, ಗೌರವಯುತ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವುದು. 

ಹೆಚ್) ಎರಡೂ ದೇಶಗಳ ನಡುವೆ ಪ್ರವಾಸೋದ್ಯಮ ಚಲನವಲನಗಳಿಗೆ ಅವಕಾಶನೀಡುವುದು. 

ಭಾರತಕ್ಕೆ ರೊಮಾನಿಯವು ಸಂಭಾವಿತ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ (2017ರಲ್ಲಿ ರೊಮಾನಿಯದಿಂದ ಅಂದಾಜು / ಸರಿಸುಮಾರು 11844 ಪ್ರವಾಸಿಗರನ್ನು ಭಾರತ ಸ್ವೀಕರಿಸಿದೆ). ರೊಮಾನಿಯ ಜೊತೆ ತಿಳುವಳಿಕಾ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಈ ಮಾರುಕಟ್ಟೆ ಮೂಲದಿಂದ ಆಗಮಿಸುವ ಯಾತ್ರಿಗಳ ಸಂಖ್ಯೆಯು ಹೆಚ್ಚಳವಾಗಲಿದೆ. 

ಹಿನ್ನಲೆ: 

ಭಾರತ ಮತ್ತು ರೊಮಾನಿಯಗಳು ಅತ್ಯಂತ ಬಲಿಷ್ಟ ರಾಜತಾಂತ್ರಿಕ ಮತ್ತು ಸುದೀರ್ಘ ಆರ್ಥಿಕ ಸಂಬಂಧಗಳನ್ನು ಹೊಂದಿವೆ. ಪ್ರಸ್ತುತ ಎರಡೂ ರಾಷ್ಟ್ರಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಸದೃಢಗೊಳಿಸಲು ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ರೊಮಾನಿಯ ಸರಕಾರದ ಪ್ರವಾಸೋದ್ಯಮ ಸಚಿವಾಲಯಗಳ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿಹಾಕಲಾಗಿದೆ 


(Release ID: 1549511)