ಪ್ರಧಾನ ಮಂತ್ರಿಯವರ ಕಛೇರಿ

ಮಿಷನ್ ಗಂಗಾ ನಿಯೋಗದೊಂದಿದೆ ಪ್ರಧಾನಮಂತ್ರಿ ಸಂವಾದ 

Posted On: 04 OCT 2018 12:41PM by PIB Bengaluru

ಮಿಷನ್ ಗಂಗಾ ನಿಯೋಗದೊಂದಿದೆ ಪ್ರಧಾನಮಂತ್ರಿ ಸಂವಾದ 
 

ಪರ್ವತಾರೋಹಣದಲ್ಲಿ ಅನುಭವಹೊಂದಿರುವ ಸುಮಾರು 40 ಉತ್ಸಾಹಿಗಳು “ಗಂಗಾ ನದಿಯನ್ನು ಶುಚಿಗೊಳಿಸುವ” ಕುರಿತು ಜಾಗೃತಿ ಮೂಡಿಸಲು ವಿಶೇಷ ಯಾತ್ರೆ ಆರಂಭಿಸುವ ಮುನ್ನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ತಂಡದಲ್ಲಿ 8 ಪರ್ವತಾರೋಹಿಗಳಿದ್ದು, ಅದರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ ಮೊತ್ತಮೊದಲ ಮಹಿಳೆ ಕು. ಬಚೆಂದ್ರಿ ಪಾಲ್ ಅವರೂ ಸೇರಿದ್ದಾರೆ. 

ಕೇಂದ್ರ ಸರಕಾರದ “ನಮಾಮಿ ಗಂಗೆ” ಅಭಿಯಾನದಿಂದ ಪ್ರೇರಿತರಾಗಿ ಪ್ರಾರಂಭಗೊಂಡ ಈ ಯಾತ್ರೆಗೆ “ಮಿಷನ್ ಗಂಗೆ” ಎಂಬ ಹೆಸರಿಟ್ಟಿದ್ದಾರೆ. ದೋಣಿಗಳ ಮೂಲಕ ( ಜೀವರಕ್ಷಕದೊಂದಿಗೆ) ಹರಿದ್ವಾರದಿಂದ ಪಾಟ್ನಾಕ್ಕೆ ಒಂದು ತಿಂಗಳ ಕಾಲ ನಡೆಯುವ ಯಾತ್ರೆಯು ಬಿಜೊರ್, ನರೋರಾ, ಫರ್ರುಖಾಬಾದ್ , ಕಾನ್ಪುರ್ ಅಲಹಾಬಾದ್ , ವಾರನಾಸಿ ಮತ್ತು ಬಕ್ಸರ್ ಗಳಲ್ಲಿ ತಂಗಲಿದೆ. ಈ 9 ನಗರಗಳಲ್ಲಿ ಗಂಗಾ ನದಿಯ ಶುಚಿತ್ವ ಕುರಿತಾಗಿ ತಂಡವು ಅರಿವು ಮೂಡಿಸಲಿದ್ದಾರೆ ಮತ್ತು ಶುಚಿಗೊಳಿಸುವ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ. 

ತಂಡದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು ಇಂತಹ ಉಪಕ್ರಮ ಕೈಗೆತ್ತಿಕೊಂಡದ್ದಕ್ಕಾಗಿ ತಂಡವನ್ನು ಅಭಿನಂದಿಸಿದರು. ಶುದ್ಧ ಮತ್ತು ಪ್ರಜ್ಜಲಿಸುವ ಗಂಗಾ ನದಿಯ ಪ್ರಾಮಖ್ಯತೆಯ ಮಹತ್ವವನ್ನು ಅವರು ತಿಳಿಸಿದರು. ತಂಡವು ಪಯಣಿಸುವ ನಗರಗಳ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿಶೇಷವಾಗಿ ಪ್ರಯತ್ನಿಸಬೇಕು ಎಂದು ಅವರು ತಂಡಕ್ಕೆ ತಿಳಿಸಿದರು. 



(Release ID: 1549410) Visitor Counter : 68