ಸಂಪುಟ

ಇಂದೋರ್ ನ ಮೆಟ್ರೊ ರೈಲು ಸಂಪರ್ಕಕ್ಕೆ ಕಾಯಕಲ್ಪ ಸುಭದ್ರ 

Posted On: 03 OCT 2018 6:57PM by PIB Bengaluru

ಇಂದೋರ್ ನ ಮೆಟ್ರೊ ರೈಲು ಸಂಪರ್ಕಕ್ಕೆ ಕಾಯಕಲ್ಪ ಸುಭದ್ರ 

ರಿಂಗ್ ಲೈನ್ ( ಬೆಂಗಾಳಿ ಸ್ಕ್ವೇರ್ – ವಿಜಯ ನಗರ – ಭವರ್ಸಾಲ – ವಿಮಾನ ನಿಲ್ದಾಣ – ಪಟಾಸಿಯ - ಬೆಂಗಾಳಿ ಸ್ಕ್ವೇರ್ ) ಸೇರಿದಂತೆ ಇಂದೋರ್ ಮೆಟ್ರೊ ರೈಲ್ ಯೋಜನೆಗೆ ಸಂಪುಟ ಅಸ್ತು. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 31.55 ಕಿ.ಮಿ. ರಿಂಗ್ ಲೈನ್ ( ಬೆಂಗಾಳಿ ಸ್ಕ್ವೇರ್ – ವಿಜಯ ನಗರ – ಭವರ್ಸಾಲ – ವಿಮಾನ ನಿಲ್ದಾಣ – ಪಟಾಸಿಯ - ಬೆಂಗಾಳಿ ಸ್ಕ್ವೇರ್ ) ಸೇರಿದಂತೆ ಇಂದೋರ್ ನ ಬೃಹತ್ ಸಾರ್ವಜನಿಕ ಸ್ಥಳಗಳು ಮತ್ತು ನಗರದ ಜನಸಾಂಧ್ರತೆಯ ಪ್ರದೇಶಗಳ ಸಂಪರ್ಕ ಏರ್ಪಡಿಸುವ “ ಇಂದೋರ್ ಮೆಟ್ರೊ ರೈಲ್ ಯೋಜನೆ” ಅನುಷ್ಠಾನಕ್ಕೆ ಅನುಮೋದನೆ ನೀಡಿತು.

ವಿವರಗಳು:

1. ರಿಂಗ್ ಲೈನ್ ಉದ್ದಳತೆ 31.55 ಕಿಮಿ.

2. ಬೆಂಗಾಳಿ ಸ್ಕ್ವೇರ್ ನಿಂದ ವಿಜಯ ನಗರ – ಭವರ್ಸಾಲ – ವಿಮಾನ ನಿಲ್ದಾಣ – ಪಟಾಸಿಯ - ಬೆಂಗಾಳಿ ಸ್ಕ್ವೇರ್ ತನಕ ರಿಂಗ್ ಲೈನ್ 

3. ರಿಂಗ್ ಲೈನ್ ನಲ್ಲಿ ಒಟ್ಟು 30 ನಿಲ್ದಾಣಗಳಿರುತ್ತವೆ

4. ಯೋಜನೆಯು ಕೈಗೆಟಕುವ ಬೆಲೆಯಲ್ಲಿ ವಿಶ್ವಾಸಾರ್ಹ, ಸುರಕ್ಷಿತ, ಸುಭದ್ರ

ಮತ್ತು ತಡೆರಹಿತ ನಿರಂತರ ಸಾರಿಗೆ ವ್ಯವಸ್ಥೆಯನ್ನು ನಗರದ ಜನಸಮುದಾಯಗಳಿಗೆ ಸದಾ ನೀಡಲಿದೆ. ಇದರಿಂದಾಗಿ ಅಪಘಾತಗಳು, ವಾಯುಮಾಲಿನ್ಯ, ಪ್ರಯಾಣ ಸಮಯ, ಇಂಧನ ಬಳಕೆ, ಸಮಾಜಘಾತಕ ಅವಘಡಗಳು ಕಡೆಮೆಗೊಂಡು ನಗರ ವಿಸ್ತರಣೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಭೂ ಬಳಕೆಗಳ ನಿಯಂತ್ರಣ ಸಾಧ್ಯವಾಗುತ್ತದೆ. 

5. ಅಂದಾಜು ರೂ 7500.80 ಕೋಟಿಗಳ ವೆಚ್ಚದ ಈ ಯೋಜನೆಯು ನಾಲ್ಕು ವರ್ಷಗಳಲ್ಲಿ ಪೂರ್ತಿಗೊಳ್ಳಲಿದೆ.

ಪ್ರಯೋಜನಗಳು: 

ಈ ಮೆಟ್ರೋ ರೈಲು ಯೋಜನೆಯು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಂದೋರ್ ನ 30 ಲಕ್ಷ ನಜಸಂಖ್ಯೆಗೆ ಪ್ರಯೋಜನವಾಗಲಿದೆ. ರೈಲ್ವೇ ನಿಲ್ದಾಣಗಳು & ಬಿ.ಆರ್.ಟಿ.ಎಸ್. ನಿಲ್ದಾಣಗಳು ಮತ್ತು ಬಸ್ , ಪೂರಕ ಮಧ್ಯಂತರ ಸಾರ್ವಜನಿಕ ಸಾರಿಗೆಗಳ (ಐ.ಪಿ.ಟಿ.) ಮತ್ತು ಮೋಟರ್ ರಹಿತ ಸಾರಿಗೆಗಳು (ಎನ್.ಎಮ್.ಟಿ.) ಇಂತಹ ಪೂರಕ ಸಂಪರ್ಕ ವ್ಯವಸ್ಥೆಗಳ ಏಕೀಕೃತ ಬಹುಮಾದರಿಯನ್ನು ಮೆಟ್ರೊ ಮಾರ್ಗವು ಹೊಂದಲಿದೆ. ಬಾಡಿಗೆ & ಜಾಹೀರಾತು ಹಾಗೂ ಟ್ರಾನ್ಸಿಟ್ ಓರಿಯೆಂಟೆಡ್ ಡೆವೆಲೊಪ್ಮೆಂಟ್ ( ಟಿ.ಒ.ಡಿ.) ಮತ್ತು ಟ್ರಾನ್ಸ್ಫರ್ ಆಫ್ ಡೆವೆಲೊಪ್ಮೆಂಟ್ ರೈಟ್ಸ್ (ಟಿ.ಡಿ.ಆರ್.) ಮುಂತಾದ ಟಿಕೆಟು ದರವಲ್ಲದ ಇತರ ಆದಾಯಗಳನ್ನೂ ಈ ಯೋಜನೆಯು ಹೊಂದಿದೆ.

ಈ ಯೋಜನೆಯಿಂದ ಮೆಟ್ರೋ ಮಾರ್ಗದುದ್ದಕ್ಕೂ ಇರುವ ವಸತಿ ಪ್ರದೇಶಗಳ ಜನರಿಗೆ ಪ್ರಮಾಣದಲ್ಲಿ ಪ್ರಯೋಜನವಾಗಲಿದೆ. ಈ ಮಾರ್ಗದ ನೆರೆಕರೆಯ ಪ್ರದೇಶಗಳ ಜನರಿಗೆ ರೈಲು ಬಳಸುವ ಮೂಲಕ ಅನುಕೂಲಕರವಾಗಿ ನಗರದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. 

ನಗರದ ಅತ್ಯಂತ ಜನನಿಬಿಡ ಪ್ರದೇಶಗಳ ಜೊತೆ ರೈಲ್ವೇ ನಿಲ್ಧಾಣ, ವಿಮಾನನಿಲ್ದಾಣ, ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿಯ ಎ.ಬಿ.ಡಿ. ಮುಂತಾದ ನೂತನವಾಗಿ ಅಭಿವೃದ್ಧಿಯಾಗುವ ಪ್ರದೇಶಗಳನ್ನು ರಿಂಗ್ ಲೈನ್ ಮೆಟ್ರೋ ಮಾರ್ಗ ಜೋಡಿಸಲಿದೆ. ವಸತಿಪ್ರದೇಶದ ಜನರು, ದೈನಂದಿನ ಪಯಣಿಗಳು ಕಚೇರಿಗಳಿಗೆ ಹೋಗುವವರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಮುಂತಾದವರಿಗೆಲ್ಲಾ ಪರಿಸರಯೋಜ್ಯ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಯನ್ನು ಮೆಟ್ರೋ ರೈಲು ಪೂರೈಸಲಿದೆ.

ಪ್ರಗತಿ:

• ಈ ಯೋಜನೆಯ ಅನುಷ್ಠಾನಕ್ಕಾಗಿ ಮಧ್ಯಪ್ರದೇಶ ಮೆಟ್ರೋ ರೈಲು ಕಂ. ಲಿ. ( ಎಮ್.ಪಿ.ಎಮ್.ಆರ್.ಸಿ.ಎಲ್.) ಎಂಬ ಎಸ್.ವಿ.ಪಿ.ಯನ್ನು ಸ್ಥಾಪಿಸಲಾಗಿದೆ.

• ಇಂಧೋರ್ ಮೆಟ್ರೋ ರೈಲು ಯೋಜನೆಯು ಕೇಂದ್ರ ಸರಕಾರ ಮತ್ತು ಮಧ್ಯಪ್ರದೇಶದ ರಾಜ್ಯ ಸರಕಾರಗಳು ಸಹಭಾಗದ ಹೂಡಿಕೆಯ ಮತ್ತು ಆಂಶಿಕವಾಗಿ ಏಷ್ಯನ್ ಡೆವೆಲೊಪ್ಮೆಂಟ್ ಬ್ಯಾಂಕ್ (ಎ.ಡ.ಬಿ.) ಮತ್ತು ನ್ಯೂ ಡೆವೆಲೊಪ್ಮೆಂಟ್ ಬ್ಯಾಂಕ್ (ಎನ್.ಡಿ.ಬಿ.) ಗಳ ಸಾಲದ ಆರ್ಥಿಕ ಬಂಡವಾಳ ವ್ಯವಸ್ಥೆಯಾಗಿದೆ.

• ಮೆಸ್ಸರ್ಸ್ ಡಿ.ಬಿ. ಎಂಜಿನೀಯರಿಂಗ್ & ಕನ್ಸಲ್ಟಿಂಗ್ ಜಿ.ಎಮ್.ಬಿ.ಹೆಚ್. ಸಂಸ್ಥೆಯು ಮೆಸ್ಸರ್ಸ್ ಲೂಯಿಸ್ ಬೆರ್ಗರ್ ಎಸ್.ಎ.ಎಸ್. ಮತ್ತು ಮೆಸ್ಸರ್ಸ್ ಜಿಯೊಡೆಟಾ ಎಂಜಿನೀಯರಿಂಗ್ ಎಸ್.ಪಿ.ಎ. ಗಳ ಜೊತೆಗೂಡಿದ ಒಕ್ಕೂಟವನ್ನು ಇಂಧೋರ್ ಮೆಟ್ರೋ ಯೋಜನೆಗೆ ಜನರಲ್ ಕನ್ಸಲ್ಟಂಟ್ (ಜಿ.ಸಿ) ಆಗಿ ನೇಮಿಸಲಾಗಿದೆ.

• ಮೊದಲ ಸಿವಿಲ್ ವರ್ಕ್ ಪ್ಯಾಕೇಜ್ ಗಾಗಿ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲೇ ಕೆಲಸ ಪ್ರಾರಂಭವಾಗಲಿದೆ.



(Release ID: 1549399) Visitor Counter : 76