ಸಂಪುಟ

ಭಾರತ ಮತ್ತು ಮೊರೊಕೊ ನಡುವಣ ವಾಯು ಸೇವೆಗಳ ಒಪ್ಪಂದದ ಅಂಕಿತಕ್ಕೆ ಸಂಪುಟದ ಸಮ್ಮತಿ 

Posted On: 29 AUG 2018 1:32PM by PIB Bengaluru

ಭಾರತ ಮತ್ತು ಮೊರೊಕೊ ನಡುವಣ ವಾಯು ಸೇವೆಗಳ ಒಪ್ಪಂದದ ಅಂಕಿತಕ್ಕೆ ಸಂಪುಟದ ಸಮ್ಮತಿ 
 

ಭಾರತ ಮತ್ತು ಮೊರೊಕೊ ನಡುವಣ ನವೀಕೃತ ವಾಯು ಸೇವೆಗಳ ಒಪ್ಪಂದಗಳ ಅಂಕಿತಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅಂಗೀಕಾರ ನೀಡಿದೆ. ನೂತನ ವಾಯು ಸೇವೆಗಳ ಒಪ್ಪಂದ ಜಾರಿಗೆಬಂದ ನಂತರ ಡಿಸೆಂಬರ್, 2004ರ  ವಾಯು ಸೇವಾ ಒಪ್ಪಂದ ರದ್ದಾಗುವುದು.  

 

ಪ್ರಯೋಜನಗಳು :

 

ಭಾರತ ಮತ್ತು ಮೊರೊಕೊವಿನ ಪ್ರಯಾಣಿಕ ವಾಯುಯಾನದ ಸಂಬಂಧಗಳಲ್ಲಿ ವಾಯು ಸೇವೆಗಳ ಒಪ್ಪಂದ ಪ್ರಮುಖ ಮೈಲುಗಲ್ಲಾಗಲಿದೆ ಮತ್ತು ಇದರಿಂದಾಗಿ ಸಾಂಸ್ಕೃತಿಕ ವಿನಿಮಯ ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ವ್ಯಪಾರವೃದ್ಧಿಯಾಗುವ ಅಧಿಕ ಸಾಧ್ಯತೆಗಳಿವೆ. ಅಧಿಕ ಸುರಕ್ಷತೆ ಮತ್ತು ಭದ್ರತೆಯ ಭರವಸೆಯೊಂದಿಗೆ ಎರಡೂ ಬದಿಯ ಸಾಗಾಟವಾಹನಗಳಿಗೆ  ವಾಣಿಜ್ಯ ಅವಕಾಶಗಳ ಜೊತೆ ವೃದ್ಧಿಸಿದ ಮತ್ತು ತಡೆರಹಿತ ಸಂಪರ್ಕ ಸಾಧ್ಯವಾಗುತ್ತದೆ. 

 

ವಿವರಗಳು:

 

ಒಪ್ಪಂದದ ಪ್ರಮುಖ ಲಕ್ಷಣಗಳು:

 

1)ಎರಡೂ ದೇಶಗಳಿಂದ ಬಹುಸ್ಥಳಗಳಿಗೆ ವಾಯುಯಾನ ಸೇವೆಗಳು. 

 

2)ಎರಡೂ ದೇಶಗಳ ನಿಯೋಜಿತ ವಿಮಾನ ಸಂಸ್ಥೆಗಳು, ನಿಯೋಜಿತ ವಿಮಾನ ಸಂಸ್ಥೆಯೊಂದಿಗೆ, ಇತರ ಸಂಸ್ಥೆಗಳೊಂದಿಗೆ ಮತ್ತು ಅವರ ಮೂರನೇ ಸಂಸ್ಥೆಗಳೊಂದಿಗೆ ಸಹಕಾರಿ ಮಾರುಕಟ್ಟೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು.

 

 

3)ಎರಡೂ ದೇಶಗಳ ನಿಯೋಜಿತ ವಿಮಾನ ಸಂಸ್ಥೆಗಳು ಎ.ಎಸ್.ಎ ರೂಟ್ ಶೆಡ್ಯೂಲ್ ನಲ್ಲಿ ಹೆಸರಿಸಿರುವ 6 ಸ್ಥಳಗಳಿಂದ  ಎರಡೂ ಕಡೆಗೂ ಯಾವುದೇ ಸಂಖ್ಯೆಯಲ್ಲಿ    ಸಂಖ್ಯೆಯಲ್ಲಿ ಸೇವೆಗಳನ್ನು \ ಅಂದರೆ ಭಾರತೀಯ ನಿಯೋಜಿತ ವಿಮಾನ ಸಂಸ್ಥೆಗಳು ಮೊರೊಕ್ಲೊ ದಿಂದ ಕಾಸಾಬ್ಲಂಕಾ, ರಾಬಟ್, ಮರ್ರಕೇಶ್, ಅಗದಿರ್, ಟಂಜಿಯರ್ ಮತ್ತು ಫೆಜ್ ಗಳಿಂದ ಮತ್ತು ಗಳಿಗೆ (ಎರಡೂ ಕಡೆಗೂ) ಯಾವುದೇ ಸಂಖ್ಯೆಯಲ್ಲಿ ಸೇವೆಗಳನ್ನು ಹೊಂದಬಹುದು ಹಾಗೂ ಅದೇ ರೀತಿ ಮೊರೊಕ್ಕೊದ ನಿಯೋಜಿತ ವಿಮಾನ ಸಂಸ್ಥೆಗಳು ನವದೆಹಲಿ, ಮುಂಬಯಿ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಗಳಿಂದ ಸೇವೆಗಳನ್ನು ಹೊಂದಬಹುದು.

 

4)ಷರತ್ತುಗಳಿಗೆ ಒಳಪಟ್ಟ  ಒಪ್ಪಂದದ ಸೇವೆಗಳು, ವಾಣಿಜ್ಯ ಅವಕಾಶಗಳು, ಸುರಕ್ಷತೆ ಮತ್ತು ಭದ್ರತೆಗಳ ಮೂಲ ತತ್ವಗಳು, ಸೇವಾ ಅಧಿಕೃತತೆಯ ಹಿಂತೆಗೆದುಕೊಳ್ಳುವಿಕೆ ಮತ್ತು ರದ್ದುಗೊಳಿಸುವಿಕೆಗಳ ಅವಕಾಶಗಳೂ ಭಾರತೀಯ ಎ.ಎಸ್.ಎ ಮಾದರಿಯಲ್ಲಿ ವಾಯು ಸೇವೆಗಳ ಒಪ್ಪಂದಗಳಲ್ಲಿ ಸೇರಿಸಲ್ಪಟ್ಟಿದೆ.

 

ಹಿನ್ನಲೆ:

 

ಸಾರ್ವಜನಿಕ ವಾಯುಯಾನ ಕ್ಷೇತ್ರದ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮತ್ತು ಅಧುನೀಕರಣದ ದೃಷ್ಠಿಕೋನದಲ್ಲಿ ಹಾಗೂ ಎರಡೂ ಸಾರ್ವಭೌಮ ದೇಶಗಳ ನಡುವೆ ತಡೆರಹಿತ ವಾಯುಯಾನ ಸಂಪರ್ಕ ಸುಧಾರಣೆಯಾಗಲು ಈಗ ಪ್ರಸ್ತುತ ಇರುವ ಭಾರತ ಮತ್ತು ಮೊರೊಕ್ಕೊ ನಡುವಣ ವಾಯು ಸೇವೆಗಳ ಒಪ್ಪಂದವನ್ನು ನವೀಕರಿಸಲಾಗಿದೆ.

 

ಪ್ರಸ್ತುತ ಭಾರತ ಮತ್ತು ಮೊರೊಕ್ಕೊ ನಡುವೆ ಇರುವ ವಾಯು ಸೇವೆಗಳ ಒಪ್ಪಂದಕ್ಕೆ 2004ರಲ್ಲಿ ಸಹಿ ಹಾಕಲಾಗಿದೆ ಮತ್ತು ಸುರಕ್ಷತೆ, ಭದ್ರತೆ, ವಿಮಾನಗಳ ಹಾರಾಟದ ಸ್ಥಳಗಳು, ವಾಣಿಜ್ಯ ಚಟುವಟಿಕೆಗಳು, ಸುಂಕಗಳು ( ದರ/ಬೆಲೆಸೂಚಿ ), ಇತ್ಯಾದಿಗಳ ನವೀಕೃತ ಪರಿಷ್ಕೃತ  ಷರತ್ತುಗಳನ್ನು ಹೊಂದಿಲ್ಲ. ಪ್ರತಿ ಇನ್ನೊಂದು ವಿಮಾನಯಾನಗಳ ಮತ್ತು ಮೂರನೇ ದೇಶದ ಸಂಸ್ಥೆಗಳ ವಿಮಾನಗಳ ಜೊತೆ ಕೋಡ್ ಷೇರ್ ( ವಾಯುಯಾನ ಸಂಕೇತಗಳ ಪಾಲು ) ಮೂಲಕ ಸಹಕಾರಿ ಮಾರುಕಟ್ಟೆ ವ್ಯವಸ್ಥೆಗಳ ಅವಕಾಶಗಳು  ಚಾಲ್ತಿ  ಇರುವ ವಾಯು ಸೇವೆಗಳ ಒಪ್ಪಂದಗಳಲ್ಲಿಲ್ಲ.

 

*****



(Release ID: 1544480) Visitor Counter : 61