ಸಂಪುಟ

ಡಿ.ಎನ್.ಎ. ತಂತ್ರಜ್ಞಾನ (ಬಳಕೆ ಮತ್ತು ಆನ್ವಯಿಕತೆ) ನಿಯಂತ್ರಣ ವಿಧೇಯಕ 2018 ಕ್ಕೆ ಸಂಪುಟ ಅನುಮೋದನೆ. ಡಿ.ಎನ್.ಎ. ಪ್ರಯೋಗಾಲಯಗಳಿಗೆ ಮಾನ್ಯತೆ ಮತ್ತು ನಿಯಂತ್ರಣ ಆವಶ್ಯಕತೆಗಳು

Posted On: 04 JUL 2018 2:25PM by PIB Bengaluru

ಡಿ.ಎನ್.ಎ. ತಂತ್ರಜ್ಞಾನ (ಬಳಕೆ ಮತ್ತು ಆನ್ವಯಿಕತೆ) ನಿಯಂತ್ರಣ ವಿಧೇಯಕ 2018 ಕ್ಕೆ ಸಂಪುಟ ಅನುಮೋದನೆ.

ಡಿ.ಎನ್.ಎ. ಪ್ರಯೋಗಾಲಯಗಳಿಗೆ ಮಾನ್ಯತೆ ಮತ್ತು ನಿಯಂತ್ರಣ ಆವಶ್ಯಕತೆಗಳು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು  ಡಿ.ಎನ್.ಎ. ತಂತ್ರಜ್ಞಾನ (ಬಳಕೆ ಮತ್ತು ಆನ್ವಯಿಕತೆ) ನಿಯಂತ್ರಣ ವಿಧೇಯಕ 2018 ಕ್ಕೆ ಅನುಮೋದನೆ ನೀಡಿದೆ.

ವಿವರಗಳು:

·        “ಡಿ.ಎನ್.ಎ. ಆಧಾರಿತ ತಂತ್ರಜ್ಞಾನ (ಬಳಕೆ ಮತ್ತು ನಿಯಂತ್ರಣ) ವಿಧೇಯಕ 2018” ರ ಜಾರಿಯ  ಪ್ರಮುಖ ಉದ್ದೇಶ ಡಿ.ಎನ್.ಎ. ಆಧಾರಿತ ಅಪರಾಧ ತನಿಖೆ ತಂತ್ರಜ್ಞಾನವನ್ನು ದೇಶದ ನ್ಯಾಯ ವಿತರಣೆ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಬಳಸಿಕೊಳ್ಳುವುದಾಗಿದೆ.

·        ಅಪರಾಧಗಳನ್ನು ಬಗೆಹರಿಸುವುದರಲ್ಲಿ ಡಿ.ಎನ್.ಎ. ಆಧಾರಿತ ತಂತ್ರಜ್ಞಾನ ಬಳಕೆ ಮತ್ತು ಕಾಣೆಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಗುರುತಿಸುವಲ್ಲಿ ಇದರ ಬಳಕೆ ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ.

·        ಡಿ.ಎನ್.ಎ. ಪ್ರಯೋಗಾಲಯಗಳಿಗೆ ಅವಶ್ಯವಾದ ಮಾನ್ಯತೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಒದಗಿಸುವ ಮೂಲಕ ಈ ವಿಧೇಯಕವು ದೇಶದಲ್ಲಿ ಈ ತಂತ್ರಜ್ಞಾನದ ಉದ್ದೇಶಿತ ವಿಸ್ತರಿತ ಉಪಯೋಗವನ್ನು ಪಡೆಯುವುದನ್ನು ಖಾತ್ರಿಪಡಿಸಲಿದೆ. ಡಿ.ಎನ್.ಎ. ಪರೀಕ್ಷಾ ಫಲಿತಾಂಶಗಳು ವಿಶ್ವಾಸಾರ್ಹ  ಮತ್ತು ದತ್ತಾಂಶಗಳು ನಮ್ಮ ನಾಗರಿಕರ ಖಾಸಗಿತನದ ಹಕ್ಕು ಹಾಗು  ದುರ್ಬಳಕೆಯಿಂದ ರಕ್ಷಿಸಲ್ಪಟ್ಟಿರುತ್ತವೆ ಎಂಬ ಬಗ್ಗೆ ಭರವಸೆ ಇದೆ.

·        ತ್ವರಿತ ನ್ಯಾಯ ವಿತರಣೆ.

·        ಶಿಕ್ಷೆಯ ದರದಲ್ಲಿ ಹೆಚ್ಚಳ

·        ವಿಧೇಯಕದ ಪ್ರಸ್ತಾವನೆಗಳು ಒಂದೆಡೆ ನಾಪತ್ತೆಯಾದವರು ಯಾ ಕಾಣೆಯಾದವರು ಹಾಗು ಇನ್ನೊಂದೆಡೆ ದೇಶದ ವಿವಿಧೆಡೆ ಗುರುತಿಸಲ್ಪಡದ ಮೃತದೇಹಗಳನ್ನು  ಪರಸ್ಪರ ಹೊಂದಿಸಿ ನೋಡಲು ಅವಕಾಶ ಒದಗಿಸುತ್ತವೆ ಮತ್ತು ಸಾಮೂಹಿಕ ದುರಂತ ಸಂಭವಿಸಿದ ಸಂಧರ್ಭದಲ್ಲಿ ಬಲಿಪಶುಗಳಾದವರ ಗುರುತು ಪತ್ತೆಗೂ ಅನುಕೂಲ ಮಾಡಿಕೊಡುತ್ತವೆ.

ಹಿನ್ನೆಲೆ:

ಅಪರಾಧ ತಖ್ತೆ ಡಿ.ಎನ್.ಎ. ರೇಖಿಸುವಿಕೆಯಿಂದ  ಮಾನವ ದೇಹಕ್ಕೆ ಹಾನಿ ಮಾಡುವ ವರ್ಗದಲ್ಲಿ ಬರುವ ಅಪರಾಧ ಪ್ರಕರಣಗಳನ್ನು ( ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ ಅಥವಾ ಮಾರಕ ಹಲ್ಲೆ, ಗಾಯ) ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ( ಕಳವು, ಮನೆ ಕಳವು ಮತ್ತು ದರೋಡೆ )  ಭೇಧಿಸುವ ನಿಟ್ಟಿನಲ್ಲಿ ಗಮನಾರ್ಹ ನೆರವು ಲಭಿಸುವುದು ಸಾಬೀತಾಗಿದೆ. ದೇಶದಲ್ಲಿ  ಇಂತಹ ಸರಾಸರಿ ಕೃತ್ಯಗಳ ಸಂಖ್ಯೆ , ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ.) ಪ್ರಕಾರ 2016 ರಲ್ಲಿ ವರ್ಷಕ್ಕೆ 3 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿದೆ. ಪ್ರಸ್ತುತ ಇದರಲ್ಲಿ ಬಹಳ ಸಣ್ಣ ಸಂಖ್ಯೆಯಲ್ಲಿ ಪ್ರಕರಣಗಳು ಡಿ.ಎನ್.ಎ. ಪರೀಕ್ಷೆಗೆ ಒಳಪಡುತ್ತಿವೆ.  ಈ ತಂತ್ರಜ್ಞಾನದ ವಿಸ್ತರಿತ ಬಳಕೆಯು ಈ ವರ್ಗದಲ್ಲಿ ಬರುವ ಅಪರಾಧ ಪ್ರಕರಣಗಳ ನ್ಯಾಯ ವಿತರಣೆಯನ್ನು ತ್ವರಿತಗೊಳಿಸಲಿದೆ ಮಾತ್ರವಲ್ಲ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಿದೆ. ಪ್ರಸ್ತುತ ಈ ಪ್ರಮಾಣ 30% ಇದೆ (ಎನ್.ಸಿ.ಅರ್.ಬಿ. 2016 ರ  ಅಂಕಿ ಅಂಶಗಳ ಪ್ರಕಾರ )

 



(Release ID: 1537820) Visitor Counter : 90