ಸಂಪುಟ

“ನದಿಗಳ ಜೋಡಣೆ ಕುರಿತ ವಿಶೇಷ ಸಮಿತಿ”ಯ ಸ್ಥಿತಿ ಗತಿ ಮತ್ತು ಪ್ರಗತಿ ವರದಿ

Posted On: 06 JUN 2018 3:25PM by PIB Bengaluru

“ನದಿಗಳ ಜೋಡಣೆ ಕುರಿತ ವಿಶೇಷ ಸಮಿತಿ”ಯ ಸ್ಥಿತಿ ಗತಿ ಮತ್ತು ಪ್ರಗತಿ ವರದಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ನದಿಗಳ ಜೋಡಣೆಗೆ ಸಂಬಂಧಿಸಿದ ವಿಶೇಷ ಸಮಿತಿಯ 1-7-2016ರಿಂದ 31-3-2018 ರ ವರೆಗಿನ ವರದಿಯನ್ನು ಪರಾಮರ್ಶಿಸಿತು.

ನದಿಗಳ ಜೋಡಣೆ ಜಾಲಕ್ಕೆ ಸಂಬಂಧಿಸಿದಂತೆ 2002 ರಲ್ಲಿ ಸಲ್ಲಿಕೆಯಾದ ರಿಟ್ ಅರ್ಜಿ (ಸಿವಿಲ್) ಸಂಖ್ಯೆ 512 ಮತ್ತು ರಿಟ್ ಅರ್ಜಿ ಸಂಖ್ಯೆ 668/2002ಕ್ಕೆ ಸಂಬಂಧಿಸಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು 27-02-2012ರಂದು ನೀಡಿದ ತೀರ್ಪಿನಲ್ಲಿ ನದಿಗಳ ಜೋಡಣೆಗೆ ಸಂಬಂಧಿಸಿ ವಿಶೇಷ ಸಮಿತಿ ರಚಿಸುವಂತೆ ಭಾರತ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅದರನ್ವಯ ರಚಿಸಲಾದ ಸಮಿತಿಯು ಸಂಪುಟಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ನದಿಗಳ ಜೋಡಣೆಗೆ ಸಂಬಂಧಿಸಿ ವಿಶೇಷ ಸಮಿತಿಯ ಪ್ರಗತಿ ವರದಿಯನ್ನು ಕಾಲ ಕಾಲಕ್ಕೆ ಅನುಗುಣವಾಗಿ ಸಂಪುಟಕ್ಕೆ ಸಲ್ಲಿಸಬೇಕಾಗುತ್ತದೆ.

ನದಿ ಜೋಡಣೆಗೆ ಸಂಬಂಧಿಸಿದಂತೆ ಸಮಿತಿ (ಐ.ಎಲ್.ಆರ್.)ಯು ಸಲ್ಲಿಸಿದ ಸ್ಥಿತಿ- ಗತಿ ವರದಿಯು ಮೂರು ಪ್ರಮುಖ ಜೋಡಣೆಗಳಾದ ಕೆನ್-ಬೆಟ್ವಾ ಜೋಡಣೆ, ದಮನ್ ಗಂಗಾ –ಪಿಂಜಾಲ್ ಜೋಡಣೆ ಮತ್ತು ಪಾರಾ-ತಪತಿ-ನರ್ಮದಾ ಜೋಡಣೆ ಸಹಿತ ಇತರ ಹಿಮಾಲಯದ ಮತ್ತು 1980 ರ ರಾಷ್ಟ್ರೀಯ ದೃಷ್ಟಿಕೋನದ ಯೋಜನೆಯನ್ವಯ ಗುರುತಿಸಲಾದ ಪರ್ಯಾಯ ದ್ವೀಪದ ಜೋಡಣೆಗಳ ಸ್ಥಿತಿ ಗತಿಯ ಮತ್ತು ಪ್ರಗತಿಯ ವಿವರಗಳನ್ನು ಒಳಗೊಂಡಿದೆ.



(Release ID: 1535130) Visitor Counter : 96