ಸಂಪುಟ

ಭಾರತ ಮತ್ತು ಮೊರಾಕ್ಕೊ ನಡುವೆ ಗಣಿ ಹಾಗೂ ಭೂವಿಜ್ಞಾನ ಕ್ಷೇತ್ರದ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಒಪ್ಪಿಗೆ

Posted On: 16 MAY 2018 3:42PM by PIB Bengaluru

ಭಾರತ ಮತ್ತು ಮೊರಾಕ್ಕೊ ನಡುವೆ ಗಣಿ ಹಾಗೂ ಭೂವಿಜ್ಞಾನ ಕ್ಷೇತ್ರದ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಒಪ್ಪಿಗೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗಣಿ ಮತ್ತು ಭೂ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಮೊರಕ್ಕೊ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ 11.04.2018ರಂದು ನವದೆಹಲಿಯಲ್ಲಿ ಮೊರಾಕ್ಕೋದ ಇಂಧನ, ಗಣಿ ಮತ್ತು ಸುಸ್ಥಿರ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರದ ಗಣಿ ಸಚಿವಾಲಯದ ನಡುವೆ ಅಂಕಿತ ಹಾಕಲಾಗಿತ್ತು. 

ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಮೊರಾಕ್ಕೊ ನಡುವೆ ಗಣಿ ಮತ್ತು ಭೂ ವಿಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಾಂಸ್ಥಿಕ ವ್ಯವಸ್ಥೆಯನ್ನು ಒದಗಿಸಲಿದೆ. ಈ ಸಹಕಾರವು ಎರಡೂ ರಾಷ್ಟ್ರಗಳ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಕ್ಷೇತ್ರದಲ್ಲಿ ಪರಸ್ಪರ ಉಪಯುಕ್ತವಾಗಿದೆ. 

ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಮೊರಾಕ್ಕೊ ನಡುವೆ ಗಣಿ ಮತ್ತು ಭೂ ವಿಜ್ಞಾನ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸುವ ಗುರಿ ಹೊಂದಿದೆ. ಈ ಸಹಕಾರವು ಚಟುವಟಿಕೆಗಳು ಭೂವಿಜ್ಞಾನ ಮೂಲಸೌಕರ್ಯ, ಗಣಿ ಮತ್ತು ಭೂ ವಿಜ್ಞಾನ ಉತ್ತೇಜನ, ತರಬೇತಿ ಕಾರ್ಯಕ್ರಮ ಮತ್ತು ಭೂವಿಜ್ಞಾನ ದತ್ತಾಂಶ ಬ್ಯಾಂಕ್ ಸ್ಥಾಪನೆ ಒಳಗೊಂಡಿದ್ದು, ನಾವಿನ್ಯತೆಯ ಉದ್ದೇಶವನ್ನು ಈಡೇರಿಸಲಿದೆ. 
 

****



(Release ID: 1532589) Visitor Counter : 78