ಸಂಪುಟ

ಭಾರತೀಯ ಗಣಿ ಬ್ಯೂರೋ ಪುನಾರಚನೆಗೆ ಸಂಪುಟ ಅಂಗೀಕಾರ (ಐ.ಬಿ.ಎಂ.) - ರಚನೆ, ರದ್ದತಿ ಮತ್ತು ಜಂಟಿ ಕಾರ್ಯದರ್ಶಿ ಮಟ್ಟದ ಹಾಗು ಅದಕ್ಕಿಂತ ಮೇಲ್ಮಟ್ಟದ ಹುದ್ದೆಗಳ ಮೇಲ್ದರ್ಜೆಗೇರಿಸುವಿಕೆ. 

Posted On: 02 MAY 2018 3:36PM by PIB Bengaluru

ಭಾರತೀಯ ಗಣಿ ಬ್ಯೂರೋ ಪುನಾರಚನೆಗೆ ಸಂಪುಟ ಅಂಗೀಕಾರ (ಐ.ಬಿ.ಎಂ.) - ರಚನೆ, ರದ್ದತಿ ಮತ್ತು ಜಂಟಿ ಕಾರ್ಯದರ್ಶಿ ಮಟ್ಟದ ಹಾಗು ಅದಕ್ಕಿಂತ ಮೇಲ್ಮಟ್ಟದ ಹುದ್ದೆಗಳ ಮೇಲ್ದರ್ಜೆಗೇರಿಸುವಿಕೆ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಮೇಲ್ದರ್ಜೆಗೇರಿಸುವಿಕೆ , ರಚನೆ, ಜಂಟಿ ಕಾರ್ಯದರ್ಶಿ ಮಟ್ಟ ಹಾಗು ಅದಕ್ಕಿಂತ ಹೆಚ್ಚಿನ ಮಟ್ಟದ ನಿರ್ದಿಷ್ಟ ಹುದ್ದೆಗಳ ರದ್ದತಿಯನ್ನು ಒಳಗೊಂಡಂತೆ ಭಾರತೀಯ ಗಣಿ ಬ್ಯೂರೋ ಪುನಾರಚನೆಗೆ ಅಂಗೀಕಾರ ನೀಡಿತು. ಭಾರತೀಯ ಗಣಿ ಬ್ಯೂರೋದ ಒಟ್ಟು ಕೆಡರ್ ಬಲವನ್ನು ಈಗಿರುವ 1477 ರಲ್ಲಿಯೇ ಉಳಿಸಲಾಗುವುದು. 

ಈ ಪುನಾರಚನೆಯಿಂದ ಐ.ಬಿ.ಎಂ. ಗೆ ಹೆಚ್ಚು ದಕ್ಷತೆಯಿಂದ ಮತ್ತು ಕ್ರಿಯಾಶೀಲವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸಲು ಮತ್ತು ಖನಿಜ ವಲಯದ ನಿಯಮಾವಳಿಗಳನ್ನು ಪರಿವರ್ತಿಸಲು ಸಾಧ್ಯವಾಗುತ್ತದೆ. ಖನಿಜ ವಲಯದಲ್ಲಿ ನಿಯಂತ್ರಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಕಾರ್ಯದಕ್ಷತೆಗಾಗಿ ಮಾಹಿತಿ ತಂತ್ರಜ್ಞಾನ ಹಾಗು ಬಾಹ್ಯಾಕಾಶ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಇದರಿಂದ ಅವಕಾಶ ಒದಗುತ್ತದೆ. ಮಾತ್ರವಲ್ಲದೆ ಹುದ್ದೆಗಳಿಗೆ ನಿರ್ಧಾರ ಕೈಗೊಳ್ಳುವ ಮತ್ತು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಉತ್ತರದಾಯಿತ್ವದ ಜವಾಬ್ದಾರಿಯನ್ನು ಒದಗಿಸುತ್ತವೆ. 

ಪರಿಣಾಮ: 

ಈ ಪ್ರಸ್ತಾವವು ತಾಂತ್ರಿಕ ವ್ಯಕ್ತಿಗಳಿಗೆ ಹೆಚ್ಚು ಜವಾಬ್ದಾರಿಯ ನೇರ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಹಾಗು ಖನಿಜ ವಲಯದ ಬೆಳವಣೆಗೆಗೆ ವೇಗ ದೊರಕಿಸಿಕೊಡಲಿದೆ. ಆ ಮೂಲಕ ಹೆಚ್ಚುವರಿಯಾಗಿ ಉದ್ಯೋಗಗಳ ಸೃಷ್ಟಿಯಾಗಲಿದೆ. ಐ.ಬಿ.ಎಂ.ನ ಸುಧಾರಿತ ಮತ್ತು ಉನ್ನತೀಕರಿಸಿದ ಸಾಧನೆ ಗಣಿ ವಲಯಕ್ಕೆ ಲಾಭ ತರಲಿದೆ. 

ವಿವರಗಳು:

 ಮೇಲ್ದರ್ಜೆಗೇರಿಸುವಿಕೆ, ರಚನೆ, ಸೃಷ್ಟಿ ಮತ್ತು ಐ.ಬಿ.ಎಂ.ನಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಕೆಲವು ಹುದ್ದೆಗಳ ರದ್ದತಿ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ. 

  1. ಶ್ರೇಣಿ 15ರಲ್ಲಿ ಗಣಿಗಳ ಮುಖ್ಯ ನಿಯಂತ್ರಣಾಧಿಕಾರಿಯ ಒಂದು ಹುದ್ದೆ ಸೃಜನೆ  ಮತ್ತು ಶ್ರೇಣಿ 14 ರಲ್ಲಿ ಗಣಿ ನಿಯಂತ್ರಣಾಧಿಕಾರಿಗಳ 3 ಹುದ್ದೆಗಳ ಸೃಜನೆ. 
  1. 11 ಹುದ್ದೆಗಳು ಮೇಲ್ದರ್ಜೆಗೆ : ಅವುಗಳೆಂದರೆ ಶ್ರೇಣಿ 15 ರಿಂದ ಶ್ರೇಣಿ 16 ಕ್ಕೆ ಕಂಟ್ರೋಲರ್ ಜನರಲ್ 1 ಹುದ್ದೆ, ಶ್ರೇಣಿ 14 ರಿಂದ 15 ಕ್ಕೇರಿಸಿದ ಮುಖ್ಯ ಗಣಿ ನಿಯಂತ್ರಣಾಧಿಕಾರಿ ಹಾಗು ಅದಿರು ವಿಭಾಗದ ನಿರ್ದೇಶಕರ ತಲಾ ಎರಡು ಹುದ್ದೆಗಳು , ಮುಖ್ಯ ಖನಿಜ ಅರ್ಥ ಶಾಸ್ತ್ರಜ್ಞರು, ಮುಖ್ಯ ಅದಿರು ಒಪ್ಪ ಮಾಡುವ ಮುಖ್ಯಾಧಿಕಾರಿ ಮತ್ತು ಮುಖ್ಯ ಗಣಿಗಾರಿಕಾ ಭೂಗರ್ಭ ಶಾಸ್ತ್ರಜ್ಞರ ತಲಾ ಒಂದು ಹುದ್ದೆ ಮತ್ತು ಗಣಿ ನಿಯಂತ್ರಣಾಧಿಕಾರಿಗಳ 5 ಹುದ್ದೆಗಳು ಸಹಿತ  ಒಟ್ಟು 8 ಹುದ್ದೆಗಳನ್ನು ಈಗಿರುವ ಶ್ರೇಣಿ 13 ಎ ಯಿಂದ 14 ಕ್ಕೇರಿಸುವಿಕೆ, ಮತ್ತು 
  1. . ಹಾಲಿ ಇರುವ ಕೆಡರ್ ಹುದ್ದೆಯಾದ ಉಪ ಮಹಾ ನಿರ್ದೇಶಕ ( ಸಂಖ್ಯಾ ಶಾಸ್ತ್ರ) ಹುದ್ದೆಯ ರದ್ದತಿ. ಪ್ರಸ್ತುತ ಭಾರತೀಯ ಸಂಖ್ಯಾಶಾಸ್ತ್ರ ಸೇವೆಯ ಓರ್ವ ಅಧಿಕಾರಿ ಶ್ರೇಣಿ 14ರಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆ ಇದಾಗಿದೆ. 

ಹಿನ್ನೆಲೆ: 

ಕಾಮಗಾರಿ, ಗಣಿಗಳು ಮತ್ತು ಇಂಧನ ಮಂತ್ರಾಲಯದಡಿಯಲ್ಲಿ ಭಾರತ ಸರಕಾರವು 1948 ರ ಮಾರ್ಚ್1 ರಂದು ಐ.ಬಿ.ಎಂ. ಅನ್ನು ಸ್ಥಾಪಿಸಿತ್ತು. ಪ್ರಾಥಮಿಕವಾಗಿ ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ  ಗಣಿಗಾರಿಕೆ ವಲಯದ ನೀತಿ ರೂಪಿಸುವ , ಕಾನೂನು ಚೌಕಟ್ಟು ಒದಗಿಸುವ ಮತ್ತು ಸಲಹೆಗಳನ್ನು ನೀಡುವ ಸಂಸ್ಥೆಯಾಗಿ ರೂಪಿಸಲಾಗಿತ್ತು. ಖನಿಜ ಸಂಪನ್ಮೂಲ ಬಳಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಈ ಸಂಸ್ಥೆ ಸರಕಾರಗಳಿಗೆ ಸಲಹೆಗಳನ್ನು ನೀಡುತ್ತಿತ್ತು. ಈ ವಲಯದ  ಆಧುನಿಕ ಆವಶ್ಯಕತೆಗಳ ಹಿನ್ನೆಲೆಯಲ್ಲಿ ಐ.ಬಿ.ಎಂ. ನ ಜವಾಬ್ದಾರಿ ಮತ್ತು ಅದರ ಪಾತ್ರದ ಬದಲಾವಣೆಯೂ ಅಗತ್ಯವಾಗಿತ್ತು. ಅದು ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಅಣು ಖನಿಜಗಳನ್ನು ಹೊರತುಪಡಿಸಿ ಉಳಿದ ವಲಯಗಳ ಬದಲಾದ ಪರಿಸ್ಥಿಗೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡಲು ಇದರಿಂದ ಅವಕಾಶವಾಗುತ್ತದೆ. 

ರಾಷ್ಟ್ರೀಯ ಖನಿಜ ನೀತಿ (ಎನ್.ಎಂ.ಪಿ.) 2008 ರ ಹಿನ್ನೆಲೆಯಲ್ಲಿ ಐ.ಬಿ.ಎಂ. ನ ಪಾತ್ರ ಮತ್ತು ಕಾರ್ಯಚಟುವಟಿಕೆಗಳನ್ನು ಸಮಗ್ರವಾಗಿ ಪುನರ್ವಿಮರ್ಶಿಸಲು ಮತ್ತು ಪುನಾರಚಿಸಲು  ಗಣಿಗಳ ಮಂತ್ರಾಲಯವು ಸಮಿತಿಯನ್ನು ರಚಿಸಿತ್ತು. ಸಮಿತಿಯು 04.05.2012 ರಂದು ವರದಿಯನ್ನು ಸಲ್ಲಿಸಿತ್ತು ಮತ್ತು ಅದನ್ನು ಮಂತ್ರಾಲಯವು ಅಂಗೀಕರಿಸಿತ್ತು. 

ಗಣಿಗಳ ಮಂತ್ರಾಲಯವು ಐ.ಬಿ.ಎಂ. ಮೂಲಕ ಖನಿಜ ವಲಯದ ಅನುಕೂಲತೆಗಳಿಗಾಗಿ ಮತ್ತು ನಿಯಂತ್ರಣಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ : 

  1. ಸಹ್ಯ ಅಭಿವೃದ್ಧಿ ಚೌಕಟ್ಟು (ಎಸ್.ಡಿ.ಎಫ್.) ಮತ್ತು ಗಣಿಗಳಲ್ಲಿ ಗಣಿಗಾರಿಕೆ ನಡೆಸುವಾಗ ಅಳವಡಿಸಿಕೊಳ್ಳುವ ವೈಜ್ಞಾನಿಕ ಮತ್ತು ಪರಿಸರ ಸ್ನೇಹೀ ಹಾಗೂ ಸಾಮಾಜಿಕ ಕ್ರಮಗಳನ್ನು ಅನುಸರಿಸಿ ಗಣಿಗಳಿಗೆ ನಕ್ಷತ್ರ ಶ್ರೇಣಿಗಳನ್ನು ನೀಡುವಿಕೆ ವ್ಯವಸ್ಥೆಯ ಜಾರಿ. 
  1. ಭಾಸ್ಕರಾಚಾರ್ಯ ಆನ್ವಯಿಕ ಬಾಹ್ಯಾಕಾಶ ಮತ್ತು ಭೂ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಬಿ.ಐ.ಎಸ್. ಎ.ಜಿ.) ಸಹಯೋಗದಲ್ಲಿ ಗುತ್ತಿಗೆ ನೀಡಲಾದ ಪ್ರದೇಶದ 500 ಮೀಟರ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ ಗಣಿಗಾರಿಕೆ ಗುಪ್ತಚರ್ಯೆ ವ್ಯವಸ್ಥೆ ( ಎಂ.ಎಸ್.ಎಸ್.) ಅಭಿವೃದ್ಧಿ. 

೩. ಖನಿಜ ಸಂಸ್ಕರಣೆ ಕಾರ್ಯಚಟುವಟಿಕೆಗಳು, ಕಡಿಮೆ ಗುಣಮಟ್ಟದ ಅದಿರನ್ನು ಸಂಸ್ಕರಿಸಿ ಗುಣಮಟ್ಟ ಉನ್ನತೀಕರಣ , (4) ಖನಿಜ ವಲಯದ ಕಾರ್ಯಚಟುವಟಿಕೆಗಳ ಕಂಪ್ಯೂಟರೀಕರಣಕ್ಕೆ ತಂತ್ರಜ್ಞಾನ ಆಧಾರಿತ ಜಮೀನು ಗುತ್ತಿಗೆ ವ್ಯವಸ್ಥೆ (ಎಂ.ಟಿ.ಎಸ್.) ಯ ಅಭಿವೃದ್ಧಿ. 

ಇತ್ತೀಚಿನ ನೀತಿ ಮತ್ತು ಕಾಯ್ದೆ ಬದಲಾವಣೆಗಳ ಹಿನ್ನೆಲೆ ಹಾಗು ಐ.ಬಿ.ಎಂ. ನ ಕಾರ್ಯವೈಖರಿಗೆ ಸಂಬಂಧಿಸಿದ ಸನ್ನದಿನಲ್ಲಿ ಮಾಡಲಾದ ಪುನರ್ವಿಮರ್ಶಿತ ಬದಲಾವಣೆ ಗಳು ಮತ್ತು ಐ.ಬಿ.ಎಂ. ಕೈಗೆತ್ತಿಕೊಂಡ ಹೊಸ ಕಾರ್ಯಚಟುವಟಿಕೆಗಳ ಹಿನ್ನೆಲೆಯಲ್ಲಿ ಐ.ಬಿ.ಎಂ.ನ ಪುನಾರಚನೆ ಅದರ ಕಾರ್ಯಚಟುವಟಿಕೆಗಳಲ್ಲಿ ಅಡಕಗೊಳಿಸಲಾದ ಜವಾಬ್ದಾರಿಗಳನ್ನು ನಿಭಾಯಿಸಲು ಅವಶ್ಯಕವಾಗಿತ್ತು. ಐ.ಬಿ.ಎಂ. ಖನಿಜ ರಿಯಾಯತಿಗಳ ನೀಡಿಕೆ ಮತ್ತು ಖನಿಜ ಬ್ಲಾಕ್ ಗಳ ಹರಾಜು ಪ್ರಕ್ರಿಯೆಯನ್ನೂ ನಿಭಾಯಿಸುತ್ತಿದೆ. ಅದನ್ನು ಹೆಚ್ಚು ಪಾರದರ್ಶಕವಾಗಿಸುವುದಕ್ಕೂ ಇದು ಅಗತ್ಯವಾಗಿತ್ತು. ಬ್ಲಾಕುಗಳ  ಹರಾಜು ಸಿದ್ದತೆ, ಸರಾಸರಿ ಮಾರಾಟ ಬೆಲೆ , ಹರಾಜು ಬಳಿಕದ ಮೇಲುಸ್ತುವಾರಿ ಮತ್ತು ಅನುಮೋದನೆ ಪ್ರಕ್ರಿಯೆಗಳನ್ನು ನಿಭಾಯಿಸಲು ಸರಕಾರಗಳಿಗೆ  ಐ.ಬಿ.ಎಂ. ನೆರವಾಗುತ್ತದೆ. 

ಐ.ಬಿ.ಎಂ. ಅಧಿಕಾರಿಗಳ ಸ್ಥಳಾಂತರವನ್ನು ಐ.ಬಿ.ಎಂ.ನ ಜವಾಬ್ದಾರಿ ನಿಭಾವಣೆಗಾಗಿ ಈಗಾಗಲೇ ಜಾರಿಗೆ ತರಲಾಗಿದೆ. ರಾಯಪುರ ಮತ್ತು ಗಾಂಧಿನಗರಗಳಲ್ಲಿ ಹೊಸ ಪ್ರಾದೇಶಿಕ ಕಚೇರಿಗಳನ್ನು ತೆರೆಯಲಾಗಿದೆ. ಮತ್ತು ಗುವಾಹಟಿಯ ಉಪ ಪ್ರಾದೇಶಿಕ ಕಚೇರಿಯನ್ನು ಪ್ರಾದೇಶಿಕ ಕಾರ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಗಿದೆ.  ಕೋಲ್ಕೊತ್ತಾ ಮತ್ತು ಉದಯಪುರಗಳಲ್ಲ್ಲಿರುವ  ಪ್ರಾದೇಶಿಕ ಕಾರ್ಯಾಲಯಗಳನ್ನು ವಲಯ ಕಾರ್ಯಾಲಯ (ಪೂರ್ವ) ಹಾಗು ವಲಯ ಕಾರ್ಯಾಲಯ ( ಉತ್ತರ) ಗಳಾಗಿ ಉನ್ನತೀಕರಿಸಲಾಗಿದೆ. ಕೌಶಲ್ಯ ಅಭಿವೃದ್ಧಿಗಾಗಿ  ಸಹ್ಯ ಅಭಿವೃದ್ಧಿ ಚೌಕಟ್ಟಿನ ಸಂಸ್ಥೆಯನ್ನು ಉದಯಪುರದಲ್ಲಿ ಮತ್ತು ದೂರಸಂವೇದಿ ಕೇಂದ್ರವನ್ನು ಹೈದರಾಬಾದಿನಲ್ಲಿ ಹಾಗು ರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳಾಗಿ  ಸಹ್ಯ ಗಣಿಗಾರಿಕೆ ಸಂಸ್ಥೆಯನ್ನು ಕೋಲ್ಕೊತ್ತಾದಲ್ಲಿ ಸ್ಥಾಪಿಸಲಾಗಿದೆ. ವಾರಣಾಸಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಶೀಘ್ರವೇ ಸ್ಥಾಪಿಸಲಾಗುತ್ತದೆ



(Release ID: 1531288) Visitor Counter : 63