Infrastructure

ಭಾರತದ ಇಂಧನ ಪಯಣ: ಸಾಮರ್ಥ್ಯದ ವಿಸ್ತರಣೆ, ಸುರಕ್ಷತೆಯ ಬಲವರ್ಧನೆ

प्रविष्टि तिथि: 13 AUG 2026 15:26 PM

ಭಾರತದ ಇಂಧನ ದೃಶ್ಯಾವಳಿ

ಭಾರತದ ಇಂಧನ ಕ್ಷೇತ್ರವು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಜೊತೆಗೆ, ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಸ್ವಚ್ಛ ಭವಿಷ್ಯಕ್ಕೆ ಬೆಂಬಲ ನೀಡಲು ವೇಗವಾಗಿ ಬದಲಾಗುತ್ತಿದೆ. ಈ ರೂಪಾಂತರವು ನವೀಕರಿಸಬಹುದಾದ ಇಂಧನ, ಪರಮಾಣು ಶಕ್ತಿ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ನೀತಿ ಬೆಂಬಲ, ಮೂಲಸೌಕರ್ಯ ಅಭಿವೃದ್ಧಿ, ದೇಶೀಯ ಉತ್ಪಾದನೆ, ಉತ್ಪಾದನಾ ವಿಸ್ತರಣೆ ಮತ್ತು ವ್ಯಾಪಕ ಇಂಧನ ತಲುಪುವಿಕೆಯು ಈ ಬದಲಾವಣೆಗೆ ರೂಪು ನೀಡುತ್ತಿವೆ. ಭಾರತವು ಒಂದೇ ಸಮಯದಲ್ಲಿ ಪಳೆಯುಳಿಕೆ-ರಹಿತ ಇಂಧನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ, ದೇಶೀಯ ಇಂಧನ ಸಂಪನ್ಮೂಲಗಳನ್ನು ಬಲಪಡಿಸುತ್ತಿದೆ ಮತ್ತು ಭವಿಷ್ಯಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಒಂದು ನೋಟದಲ್ಲಿ ಅಂಕಿ-ಅಂಶಗಳು:

  • ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ: 2014 ರಲ್ಲಿದ್ದ 249 ಗಿಗಾವ್ಯಾಟ್ (ಜಿಡಬ್ಲು) ಗೆ ಹೋಲಿಸಿದರೆ ಜುಲೈ 2026 ರ ವೇಳೆಗೆ ಸುಮಾರು 552 ಗಿಗಾವ್ಯಾಟ್ (ಜಿಡಬ್ಲು) ತಲುಪಿದೆ.
  • ಪಳೆಯುಳಿಕೆ-ರಹಿತ ಸಾಮರ್ಥ್ಯ: 31 ಜುಲೈ 2026 ರ ವೇಳೆಗೆ 300.50 ಗಿಗಾವ್ಯಾಟ್ (ಜಿಡಬ್ಲು) ತಲುಪಿದ್ದು, ಇದು ಒಟ್ಟು ಸ್ಥಾಪಿತ ಸಾಮರ್ಥ್ಯದ ಶೇಕಡಾ 54 ಕ್ಕಿಂತ ಹೆಚ್ಚಾಗಿದೆ.
  • ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ.

ಕಲ್ಲಿದ್ದಲಿನ ಮೂಲಕ ಇಂಧನ ಭದ್ರತೆಗೆ ಶಕ್ತಿ

ಭಾರತದ ಇಂಧನ ಭದ್ರತೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ಕಲ್ಲಿದ್ದಲು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದು ದೇಶದ ಪ್ರಾಥಮಿಕ ಇಂಧನ ಅಗತ್ಯಗಳ ಸುಮಾರು ಶೇಕಡಾ 55 ರಷ್ಟನ್ನು ಪೂರೈಸುತ್ತದೆ ಮತ್ತು ಶೇಕಡಾ 70 ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಗೆ ಬೆಂಬಲ ನೀಡುತ್ತದೆ. ಭಾರತವು ಸುಮಾರು 4,00,715 ಮಿಲಿಯನ್ ಟನ್ ಕಲ್ಲಿದ್ದಲು ಮೀಸಲು ಶೇಖರಣೆಯನ್ನು ಹೊಂದಿದ್ದು, ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಮತ್ತು ಬಳಕೆದಾರ ದೇಶವಾಗಿದೆ.

  • 2014-15 ಹಣಕಾಸು ವರ್ಷದಲ್ಲಿ 609.18 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದ್ದರೆ, ಭಾರತವು 2024-25 ಹಣಕಾಸು ವರ್ಷದಲ್ಲಿ 1,047.52 ಮಿಲಿಯನ್ ಟನ್ ಮತ್ತು 2025-26 ಹಣಕಾಸು ವರ್ಷದಲ್ಲಿ 1,040.08 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಿದೆ.
  • ಕ್ಯಾಪ್ಟಿವ್ ಮತ್ತು ವಾಣಿಜ್ಯ ಗಣಿಗಾರಿಕೆ: ಕ್ಯಾಪ್ಟಿವ್ ಮತ್ತು ವಾಣಿಜ್ಯ ಗಣಿಗಳಿಂದ ಉತ್ಪಾದನೆಯು 2025-26 ಹಣಕಾಸು ವರ್ಷದಲ್ಲಿ 210.46 ಮಿಲಿಯನ್ ಟನ್ ತಲುಪಿದ್ದು, ಹಿಂದಿನ ವರ್ಷಕ್ಕಿಂತ ಶೇಕಡಾ 10.22 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
  • ಆಮದು ಅವಲಂಬನೆ ಕಡಿತ: ಉಷ್ಣ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಆಮದು 2024-25 ಹಣಕಾಸು ವರ್ಷದಲ್ಲಿದ್ದ 62.5 ಮಿಲಿಯನ್ ಟನ್‌ಗಳಿಂದ 2025-26 ಹಣಕಾಸು ವರ್ಷದಲ್ಲಿ 45.4 ಮಿಲಿಯನ್ ಟನ್‌ಗಳಿಗೆ ಕುಸಿದಿದೆ. ಇದು ಸುಮಾರು ಶೇಕಡಾ 27.4 ರಷ್ಟು ಇಳಿಕೆಯಾಗಿದೆ.

ಮೇಲ್ಮೈ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನೆ (2026)

ಮೇಲ್ಮೈ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣವನ್ನು ಉತ್ತೇಜಿಸಲು ಸರ್ಕಾರವು ಮೇ 2026 ರಲ್ಲಿ ₹37,500 ಕೋಟಿ ವೆಚ್ಚದ ಯೋಜನೆಯನ್ನು ಅನುಮೋದಿಸಿದೆ.

  • ಇದು ಸರಿಸುಮಾರು 75 ಎಂಟಿಪಿಎ ಕಲ್ಲಿದ್ದಲನ್ನು ಬಳಸಿಕೊಳ್ಳುವ ನಿರೀಕ್ಷೆಯಿದ್ದು, 2030 ರ ವೇಳೆಗೆ 100 ಎಂಟಿ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣದ ರಾಷ್ಟ್ರೀಯ ಗುರಿಗೆ ಕೊಡುಗೆ ನೀಡಲಿದೆ.
  • ಇದು ₹2.5–3 ಲಕ್ಷ ಕೋಟಿ ಹೂಡಿಕೆಯನ್ನು ಸಜ್ಜುಗೊಳಿಸುವ ನಿರೀಕ್ಷೆಯಿದೆ.
  • 25 ಯೋಜನೆಗಳಾದ್ಯಂತ ಸುಮಾರು 50,000 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಂದಾಜಿದೆ.

ಸೌರಶಕ್ತಿ: ವಿಸ್ತರಣೆ, ಹೆಚ್ಚಿನ ಜನರಿಗೆ ತಲುಪುವಿಕೆ

ಭಾರತದ ಸ್ಥಾಪಿತ ಸೌರ ಸಾಮರ್ಥ್ಯವು 2014 ರಲ್ಲಿದ್ದ 2.8 ಗಿಗಾವ್ಯಾಟ್‌ನಿಂದ (ಜಿಡಬ್ಲು) 164.59 ಗಿಗಾವ್ಯಾಟ್‌ಗೆ (31 ಜುಲೈ 2026 ರ ವೇಳೆಗೆ) ತಲುಪಿದೆ. ಸೌರಶಕ್ತಿಯು ಈಗ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಅತಿದೊಡ್ಡ ಭಾಗವಾಗಿದೆ. ಯುನೈಟೆಡ್ ಸ್ಟೇಟ್ಸ್ ಸೇರಿಸಿದ 34 ಗಿಗಾವ್ಯಾಟ್‌ಗೆ ಹೋಲಿಸಿದರೆ, ಭಾರತವು 37 ಗಿಗಾವ್ಯಾಟ್‌ಗಿಂತಲೂ ಹೆಚ್ಚು ಸೌರ ಸಾಮರ್ಥ್ಯವನ್ನು ಸೇರಿಸುವ ಮೂಲಕ 2025 ರಲ್ಲಿ ವಿಶ್ವದ ಎರಡನೇ ಅತಿದೊಡ್ಡ ಸೌರ ಬೆಳವಣಿಗೆಯ ಮಾರುಕಟ್ಟೆಯಾಗಿದೆ.

ಪಿಎಂ-ಸೂರ್ಯ ಘರ್: ಉಚಿತ ಬಿಜಲಿ ಯೋಜನೆ

ಫೆಬ್ರವರಿ 2024 ರಲ್ಲಿ 1 ಕೋಟಿ ಕುಟುಂಬಗಳಿಗಾಗಿ ₹75,021 ಕೋಟಿ ಒಟ್ಟು ವೆಚ್ಚದೊಂದಿಗೆ ಚಾಲನೆ ನೀಡಲಾಯಿತು.

  • ದೇಶಾದ್ಯಂತ 51.58 ಲಕ್ಷ ಕುಟುಂಬಗಳು ಈಗ ಛಾವಣಿಯ ಸೌರ (ರೂಫ್‌ಟಾಪ್ ಸೋಲಾರ್) ಅಳವಡಿಕೆಗಳಿಂದ ಪ್ರಯೋಜನ ಪಡೆಯುತ್ತಿವೆ (12.08.2026 ರ ವೇಳೆಗೆ).
  • ಫಲಾನುಭವಿಗಳಿಗೆ ಸರಿಸುಮಾರು ₹28,024 ಕೋಟಿ ಸಬ್ಸಿಡಿಯನ್ನು ವರ್ಗಾಯಿಸಲಾಗಿದೆ.
  • ಸುಮಾರು 19 ಲಕ್ಷ ಕುಟುಂಬಗಳು ಈಗ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ.
  • ಯೋಜನೆಯಡಿ ಇದುವರೆಗೆ ಒಟ್ಟಾರೆಯಾಗಿ 14.8 ಜಿಡಬ್ಲು ಸಾಮರ್ಥ್ಯದ ಛಾವಣಿಯ ಸೌರ ವಿದ್ಯುತ್ ಯೋಜನೆಯನ್ನು ಕಮಿಷನ್ ಮಾಡಲಾಗಿದೆ (ಚಾಲನೆಗೆ ತರಲಾಗಿದೆ).

ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ

ಸರ್ಕಾರವು 31 ಜುಲೈ 2026 ರಂದು ₹5,070 ಕೋಟಿ ವೆಚ್ಚದೊಂದಿಗೆ ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆಗೆ ಅನುಮೋದನೆ ನೀಡಿದೆ. ಇದು ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (ವಿದ್ಯುತ್ ಸಂಗ್ರಹಣೆ ವ್ಯವಸ್ಥೆ) ನೊಂದಿಗೆ ತೇಲುವ ಸೌರ ದ್ಯುತಿವಿದ್ಯುಚ್ಛಕ್ತಿ (ಫ್ರೋಟಿಂಗ್ ಸೋಲಾರ್ ಪಿವಿ) ಯೋಜನೆಗಳ ಅಭಿವೃದ್ಧಿಯ ಮೂಲಕ ಭಾರತದ ಸೌರಶಕ್ತಿ ವಿಸ್ತರಣೆಗೆ ಹೊಸ ಆಯಾಮವನ್ನು ನೀಡುತ್ತದೆ.

  • ಗುರಿ: 5,000 ಎಂಡಬ್ಲು ಸಾಮರ್ಥ್ಯದ ತೇಲುವ ಸೌರ ಪಿವಿ (ಫ್ರೋಟಿಂಗ್ ಸೋಲಾರ್ PV) ಯೋಜನೆಗಳು.
  • ಕನಿಷ್ಠ ಎರಡು ಗಂಟೆಗಳ ಅವಧಿಯ ಸಹ-ಸ್ಥಾಪಿತ ವಿದ್ಯುತ್ ಸಂಗ್ರಹಣೆ, ಇದು 10,000 ಎಂಡಬ್ಲುh ಗೆ ಸಮಾನವಾಗಿರುತ್ತದೆ.
  • ಆರ್ಥಿಕ ವರ್ಷ 2026–27 ರಿಂದ 2030–31 ರವರೆಗೆ ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು.

ಪವನ ಶಕ್ತಿ (ವಿಂಡ್ ಎನರ್ಜಿ)

ಪವನ ಶಕ್ತಿಯು ಭಾರತದ ಮರುಬಳಕೆ ಮಾಡಬಹುದಾದ ಇಂಧನ (ನವೀಕರಿಸಬಹುದಾದ ಇಂಧನ) ವಿಸ್ತರಣೆಯ ಪ್ರಮುಖ ಸ್ತಂಭವಾಗಿ ಮುಂದುವರಿದಿದೆ. ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಈ ವಲಯವು ಬಲವಾದ ವಾರ್ಷಿಕ ಸೇರ್ಪಡೆಗಳನ್ನು ಮತ್ತು ಬೆಳೆಯುತ್ತಿರುವ ದೇಶೀಯ ಉತ್ಪಾದನೆಯನ್ನು ಕಾಣುತ್ತಿದೆ.

  • ಸ್ಥಾಪಿತ ಸಾಮರ್ಥ್ಯ: 31 ಜುಲೈ 2026 ರ ವೇಳೆಗೆ 58.14 ಜಿಡಬ್ಲು.
  • ಆರ್ಥಿಕ ವರ್ಷ 2025–26 ರಲ್ಲಿ ಭಾರತವು 6.05 ಜಿಡಬ್ಲು ವಿದ್ಯುತ್ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದೆ. ಇದು ಸಾರ್ವಕಾಲಿಕ ಹೆಚ್ಚಿನ ವಾರ್ಷಿಕ ಪವನ ಶಕ್ತಿ ಸಾಮರ್ಥ್ಯದ ಸೇರ್ಪಡೆಯಾಗಿದ್ದು, ಆರ್ಥಿಕ ವರ್ಷ 2024–25 ಕ್ಕಿಂತ ಶೇಕಡಾ 46 ರಷ್ಟು ಹೆಚ್ಚಾಗಿದೆ.
  • ಸುಮಾರು 28 ಜಿಡಬ್ಲು ಹೆಚ್ಚುವರಿ ಪವನ ಶಕ್ತಿ ಸಾಮರ್ಥ್ಯದ ಯೋಜನೆಗಳು ಅನುಷ್ಠಾನ ಹಂತದಲ್ಲಂತಿವೆ.
  • ಪವನ ಯಂತ್ರ (ವಿಂಡ್ ಟರ್ಬೈನ್) ಉತ್ಪಾದನಾ ಸಾಮರ್ಥ್ಯವು 2014 ರಲ್ಲಿ 10 ಜಿಡಬ್ಲು ನಿಂದ (ಮಾರ್ಚ್ 2026 ರ ವೇಳೆಗೆ) ಸುಮಾರು 24 ಜಿಡಬ್ಲು ಗೆ ತಲುಪಿದೆ. ಈ ವಲಯವು ಪ್ರಮುಖ ಬಿಡಿಭಾಗಗಳಲ್ಲಿ ಶೇಕಡಾ 70–80 ರಷ್ಟು ಸ್ವದೇಶಿ ಸಾಮರ್ಥ್ಯವನ್ನು (ಇಂಡಿಜಿನೈಸೇಶನ್) ಸಾಧಿಸಿದೆ.
  • 1 ಜಿಡಬ್ಲು ಆಫ್‌ಶೋರ್ (ಸಮುದ್ರದಲ್ಲಿನ) ಪವನ ಶಕ್ತಿ ಯೋಜನೆಗಳಿಗಾಗಿ ಕೇಂದ್ರ ಸಂಪುಟವು 19 ಜೂನ್ 2024 ರಂದು ₹7,453 ಕೋಟಿ ವಿಜಿಎಫ್ ಯೋಜನೆಗೆ ಅನುಮೋದನೆ ನೀಡಿದೆ.

ಜೈವಿಕ ಶಕ್ತಿ (ಬಯೋ-ಎನರ್ಜಿ)

31 ಜುಲೈ 2026ರ ವೇಳೆಗೆ ಜೈವಿಕ ವಿದ್ಯುತ್ (ಬಯೋ-ಪವರ್) ಸಾಮರ್ಥ್ಯವು 11.75 ಜಿಡಬ್ಲು ನಷ್ಟಿದೆ. ಸಿಬಿಜಿ ವ್ಯವಸ್ಥೆಯು ಸಹ ವಿಸ್ತರಿಸಿದ್ದು, 13 ಆಗಸ್ಟ್ 2026ರ ವೇಳೆಗೆ 1,929 CBG/ಬಯೋ-ಸಿಎನ್‌ಜಿ ಘಟಕಗಳು ನೋಂದಾಯಿಸಲ್ಪಟ್ಟಿವೆ. ಇವುಗಳಲ್ಲಿ 217 ಘಟಕಗಳನ್ನು ಕಮಿಷನ್ ಮಾಡಲಾಗಿದೆ (ಚಾಲನೆಗೊಳಿಸಲಾಗಿದೆ) ಮತ್ತು 357 ಘಟಕಗಳು ನಿರ್ಮಾಣ ಹಂತದಲ್ಲಿವೆ.

  • ಬಯೋಮಾಸ್ ಕೋಜನರೇಷನ್ (ಜೈವಿಕ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ): 31 ಜುಲೈ 2026 ರ ವೇಳೆಗೆ ಕಬ್ಬಿನ ಸಿಪ್ಪೆ (ಬಗಾಸ್) ಆಧಾರಿತ 9,821.32 ಎಂಡಬ್ಲು ಮತ್ತು ಕಬ್ಬಿನ ಸಿಪ್ಪೆಯೇತರ ಆಧಾರಿತ 1,048.84 ಎಂಡಬ್ಲು ಸಾಮರ್ಥ್ಯವಿದೆ.
  • ತ್ಯಾಜ್ಯದಿಂದ ಇಂಧನ (ವೇಸ್ಟ್-ಟು-ಎನರ್ಜಿ): 31 ಜುಲೈ 2026 ರ ವೇಳೆಗೆ, ಗ್ರಿಡ್‌ಗೆ ಸಂಪರ್ಕಗೊಂಡಿರುವ ತ್ಯಾಜ್ಯದಿಂದ ಇಂಧನ ತಯಾರಿಸುವ ಸಾಮರ್ಥ್ಯವು 324.24 ಎಂಡಬ್ಲು ನಷ್ಟಿತ್ತು. ಗ್ರಿಡ್‌ರಹಿತ (ಆಫ್-ಗ್ರಿಡ್) ಘಟಕಗಳು ಹೆಚ್ಚುವರಿ 554.16 ಎಂಡಬ್ಲು ಕೊಡುಗೆ ನೀಡಿವೆ.
  • ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮ (ನ್ಯಾಷನಲ್ ಬಯೋಎನರ್ಜಿ ಪ್ರೋಗ್ರಾಂ): ಈ ಕಾರ್ಯಕ್ರಮವು ಆರ್ಥಿಕ ನೆರವಿನ ಮೂಲಕ ತ್ಯಾಜ್ಯದಿಂದ ಇಂಧನ, ಬಯೋಮಾಸ್ ಮತ್ತು ಬಯೋ ಗ್ಯಾಸ್ ಯೋಜನೆಗಳಿಗೆ ಬೆಂಬಲ ನೀಡುತ್ತದೆ. ಹಂತ-I ರ ಕಾರ್ಯಕ್ರಮವು ₹858 ಕೋಟಿ ವೆಚ್ಚದೊಂದಿಗೆ ಆರ್ಥಿಕ ವರ್ಷ 2021–22 ರಿಂದ 2025–26 ರವರೆಗೆ ಜಾರಿಯಲ್ಲಿತ್ತು.

ಗೋಬರ್‌ ಧನ್ : ತ್ಯಾಜ್ಯದಿಂದ ಇಂಧನ ವೃದ್ಧಿ

  • ಗೋಬರ್ಧನ್ (ಗ್ಯಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೋ-ಅಗ್ರೋ ರಿಸೋರ್ಸಸ್ ಧನ್) – ರಾಷ್ಟ್ರೀಯ ವೃತ್ತಾಕಾರ ಜೈವಿಕ ಇಂಧನ ಯೋಜನೆ (ನ್ಯಾಷನಲ್ ಸರ್ಕ್ಯುಲರ್ ಬಯೋಎನರ್ಜಿ ಸ್ಕೀಮ್): ಆರ್ಥಿಕ ವರ್ಷ 2026–27 ರಿಂದ 2035–36 ರವರೆಗೆ ₹23,731 ಕೋಟಿ ವೆಚ್ಚದೊಂದಿಗೆ 6 ಆಗಸ್ಟ್ 2026 ರಂದು ಸರ್ಕಾರದಿಂದ ಅನುಮೋದನೆ ಪಡೆದಿದೆ.
  • ಈ ಯೋಜನೆಯು ದೇಶೀಯ ಸಿಬಿಜಿ ಉತ್ಪಾದನೆಯನ್ನು ಸುಮಾರು ಹತ್ತು ಪಟ್ಟು ಹೆಚ್ಚಿಸುವ ಮತ್ತು ರಾಷ್ಟ್ರೀಯ ವೃತ್ತಾಕಾರ ಜೈವಿಕ ಆರ್ಥಿಕತೆಯನ್ನು (ಸರ್ಕ್ಯುಲರ್ ಬಯೋಎಕಾನಮಿ) ಸೃಷ್ಟಿಸುವ ಗುರಿಯನ್ನು ಹೊಂದಿದೆ.
  • ಜಾಗತಿಕ ಸೌರ ಸಹಕಾರ (ಗ್ಲೋಬಲ್ ಸೋಲಾರ್ ಕೋಆಪರೇಷನ್)

ಜಲವಿದ್ಯುತ್ (ಹೈಡ್ರೋ)

ಜಲವಿದ್ಯುತ್ ಯೋಜನೆಯು ನವೀಕರಿಸಬಹುದಾದ ವಿದ್ಯುತ್‌ನ ಪ್ರಮುಖ ಮೂಲವಾಗಿ ಮುಂದುವರಿದಿದೆ. ಇದು ವಿಶ್ವಾಸಾರ್ಹ ಮತ್ತು ನಮ್ಯತೆಯಿಂದ ಕೂಡಿದ ವಿದ್ಯುತ್ ಉತ್ಪಾದನೆಯನ್ನು ಒದಗಿಸುತ್ತದೆ. ಸೌರ ಮತ್ತು ಪವನ ಶಕ್ತಿ ಸಾಮರ್ಥ್ಯಗಳು ವಿಸ್ತರಿಸುತ್ತಿರುವಾಗ, ಇದು ಗ್ರಿಡ್‌ನ ಸ್ಥಿರತೆಗೂ ಬೆಂಬಲ ನೀಡುತ್ತದೆ. 31 ಜುಲೈ 2026 ರ ವೇಳೆಗೆ ದೊಡ್ಡ ಮತ್ತು ಸಣ್ಣ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಒಟ್ಟು ಜಲವಿದ್ಯುತ್ ಸಾಮರ್ಥ್ಯವು 57.24 ಜಿಡಬ್ಲು ತಲುಪಿದೆ.

ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ (ಸ್ಮಾಲ್ ಹೈಡ್ರೋ ಪವರ್ ಡೆವಲಪ್‌ಮೆಂಟ್ ಸ್ಕೀಮ್)

  • ಆರ್ಥಿಕ ವರ್ಷ 2026–27 ರಿಂದ 2030–31 ರವರೆಗೆ ₹2,584.60 ಕೋಟಿ ವೆಚ್ಚದೊಂದಿಗೆ ಸರ್ಕಾರವು ಮಾರ್ಚ್ 2026 ರಲ್ಲಿ ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದೆ.
  • ಈ ಯೋಜನೆಯು 1 ರಿಂದ 25 ಎಂಡಬ್ಲು ಸಾಮರ್ಥ್ಯದ ಯೋಜನೆಗಳ ಮೂಲಕ ಸುಮಾರು 1,500 ಎಂಡಬ್ಲು ಸಣ್ಣ ಜಲವಿದ್ಯುತ್ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ. ಇದು ವಿಶೇಷವಾಗಿ ಬೆಟ್ಟಗುಡ್ಡಗಳ ಪ್ರದೇಶಗಳು ಮತ್ತು ಈಶಾನ್ಯ ರಾಜ್ಯಗಳ ಯೋಜನೆಗಳಿಗೆ ಬೆಂಬಲ ನೀಡುತ್ತದೆ.

ಹಸಿರು ಹೈಡ್ರೋಜನ್ (ಗ್ರೀನ್ ಹೈಡ್ರೋಜನ್)

ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಷ್ಟಕರವಾಗಿರುವ (ಹಾರ್ಡ್-ಟು-ಅಬೇಟ್) ವಲಯಗಳಿಗೆ ಹಸಿರು ಹೈಡ್ರೋಜನ್ ಒಂದು ಸ್ವಚ್ಛ ಇಂಧನ ಆಯ್ಕೆಯಾಗಿ ಹೊರಹೊಮ್ಮಿದೆ. ಇದು ಇಂಧನ ಭದ್ರತೆ ಮತ್ತು ಕೈಗಾರಿಕಾ ಪ್ರಗತಿಗೂ ಬೆಂಬಲ ನೀಡಬಲ್ಲದು.

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್)

ಸರ್ಕಾರವು ಹಸಿರು ಹೈಡ್ರೋಜನ್ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಈ ವಲಯದಲ್ಲಿನ ಅವಕಾಶಗಳು ಹಾಗೂ ಸವಾಲುಗಳಿಗೆ ವ್ಯವಸ್ಥಿತವಾಗಿ ಸ್ಪಂದಿಸಲು 2023ರಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಪ್ರಮುಖ ಛತ್ರಿ ಕಾರ್ಯಕ್ರಮವಾಗಿ (ಅಂಬ್ರೆಲಾ ಪ್ರೋಗ್ರಾಂ) ಪ್ರಾರಂಭಿಸಿತು.

  • 2030 ರ ವೇಳೆಗೆ 5 ಎಂಎಂಟಿ (ಮಿಲಿಯನ್ ಮೆಟ್ರಿಕ್ ಟನ್) ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯೊಂದಿಗೆ, ₹19,744 ಕೋಟಿ ವೆಚ್ಚದಲ್ಲಿ ಜನವರಿ 2023 ರಲ್ಲಿ ಅನುಮೋದಿಸಲಾಯಿತು.
  • ಉತ್ಪಾದನಾ ಸಾಮರ್ಥ್ಯ: ಫೆಬ್ರವರಿ 2026 ರ ವೇಳೆಗೆ ವಾರ್ಷಿಕ ಸುಮಾರು 8,000 ಟನ್‌ಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯವನ್ನು ಕಮಿಷನ್ ಮಾಡಲಾಗಿದೆ (ಚಾಲನೆಗೆ ತರಲಾಗಿದೆ). 
  • ಸಾರಿಗೆ: ಜುಲೈ 2026ರಲ್ಲಿ, ಸರ್ಕಾರವು ಮಿಷನ್ ಅಡಿಯಲ್ಲಿ 21 ಮಾರ್ಗಗಳಲ್ಲಿ ಚಲಿಸುವ 70 ಹೈಡ್ರೋಜನ್ ಚಾಲಿತ ವಾಹನಗಳಿಗಾಗಿ 12 ಪ್ರಾಯೋಗಿಕ (ಪೈಲಟ್) ಯೋಜನೆಗಳನ್ನು ಪ್ರಾರಂಭಿಸಿತು.
  • ಜುಲೈ 2026 ರಲ್ಲಿ ಜಿಂದ್-ಸೋನಿಪತ್ ವಿಭಾಗದಲ್ಲಿ ಭಾರತದ ಮೊದಲ ಸ್ವದೇಶಿ ಹೈಡ್ರೋಜನ್ ಫ್ಯುಯೆಲ್ ಸೆಲ್ ಚಾಲಿತ ರೈಲು ಸಂಚಾರವನ್ನು ಪ್ರಾರಂಭಿಸಿತು.

ಅಣು ಶಕ್ತಿ (ನ್ಯೂಕ್ಲಿಯರ್ ಎನರ್ಜಿ)

ಭಾರತದ ಅಣು ಶಕ್ತಿ ವಲಯವು ಕಳೆದ ದಶಕದಲ್ಲಿ ಗಣನೀಯ ವಿಸ್ತರಣೆ ಮತ್ತು ಆಧುನೀಕರಣಕ್ಕೆ ಸಾಕ್ಷಿಯಾಗಿದೆ. ಸ್ವಚ್ಛ ಇಂಧನ, ಸ್ವದೇಶಿ ತಂತ್ರಜ್ಞಾನ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯತ್ತ ಗಮನಹರಿಸುವುದರೊಂದಿಗೆ, ದೇಶವು ತನ್ನ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ಭವಿಷ್ಯದ ಸಾಮರ್ಥ್ಯವೆರಡನ್ನೂ ಹೆಚ್ಚಿಸಿಕೊಂಡಿದೆ.

  • ಸ್ಥಾಪಿತ ಸಾಮರ್ಥ್ಯ: 31 ಜುಲೈ 2026 ರ ವೇಳೆಗೆ 8.78 ಜಿಡಬ್ಲು ಅಣು ವಿದ್ಯುತ್ ಸಾಮರ್ಥ್ಯವಿದೆ.
  • ಅಣು ಶಕ್ತಿ ಮಿಷನ್: 2047 ರ ವೇಳೆಗೆ ಅಣು ವಿದ್ಯುತ್ ಸಾಮರ್ಥ್ಯವನ್ನು 100 ಜಿಡಬ್ಲು ಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ.
  • ಯೋಜಿತ ವಿಸ್ತರಣೆ: ಅಂತರರಾಷ್ಟ್ರೀಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಸ್ವದೇಶಿ 700 ಎಂಡಬ್ಲು ಮತ್ತು 1000 ಎಂಡಬ್ಲು ರಿಯಾಕ್ಟರ್‌ಗಳೊಂದಿಗೆ, 2031–32 ರ ವೇಳೆಗೆ ಸಾಮರ್ಥ್ಯವು 22.38 ಜಿಡಬ್ಲು ಗೆ ಏರುವ ನಿರೀಕ್ಷೆಯಿದೆ.
  • ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳು: ಅಣು ಶಕ್ತಿ ಮಿಷನ್, ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿಯೋಜನೆಗಾಗಿ ₹20,000 ಕೋಟಿ ಒದಗಿಸುತ್ತದೆ. 2033 ರ ವೇಳೆಗೆ ಕನಿಷ್ಠ ಐದು ಸ್ವದೇಶಿ SMR ಗಳನ್ನು ಹೊಂದುವ ಗುರಿ ಹೊಂದಿದೆ.
  • ಫಾಸ್ಟ್ ಬ್ರೀಡರ್ ರಿಯಾಕ್ಟರ್: ಕಲ್ಪಾಕಂನಲ್ಲಿರುವ 500 ಎಂಡಬ್ಲುe ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ 6 ಏಪ್ರಿಲ್ 2026 ರಂದು ಮೊದಲ 'ಕ್ರಿಟಿಕಾಲಿಟಿ' ಸಾಧಿಸಿತು. ಇದು ಭಾರತದ ಮೂರು-ಹಂತದ ಅಣು ವಿದ್ಯುತ್ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.

ಶಾಂತಿ  ಕಾಯ್ದೆ, 2025

ದಿ ಸಸ್ಟೈನಬಲ್ ಹಾರ್ನೆಸಿಂಗ್ ಅಂಡ್ ಅಡ್ವಾನ್ಸ್‌ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ಶಾಂತಿ) ಕಾಯ್ದೆ, 2025: ಇದು ಪರವಾನಗಿಯ ಅಡಿಯಲ್ಲಿ ಅಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಅಥವಾ ಅಣು ಶಕ್ತಿಯ ಉತ್ಪಾದನೆ, ಬಳಕೆ ಮತ್ತು ವಿಲೇವಾರಿ ಚಟುವಟಿಕೆಗಳನ್ನು ಕೈಗೊಳ್ಳಲು ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡುತ್ತದೆ.

  • ನಾಗರಿಕ ಹೊಣೆಗಾರಿಕೆ (ಸಿವಿಲ್ ಲಯಬಿಲಿಟಿ): ಪ್ರತಿಯೊಂದು ಅಣು ಅಪಘಾತದ ಗರಿಷ್ಠ ಹೊಣೆಗಾರಿಕೆಯು 300 ಮಿಲಿಯನ್ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಗೆ ಸಮಾನವಾದ ರೂಪಾಯಿ ಮೊತ್ತ ಅಥವಾ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮೊತ್ತವಾಗಿರುತ್ತದೆ.
  • ಈ ಕಾಯ್ದೆಯು ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ಗೆ ಶಾಸನಬದ್ಧ ಸ್ಥಾನಮಾನವನ್ನು ನೀಡುತ್ತದೆ, ಇದು ಅದರ ನಿಯಂತ್ರಣ ಮತ್ತು ಸುರಕ್ಷತಾ ಕಾರ್ಯಗಳನ್ನು ಬಲಪಡಿಸುತ್ತದೆ.

ಭೂಉಷ್ಣ ಶಕ್ತಿ (ಜಿಯೋ ಥರ್ಮಲ್)

ಭೂಉಷ್ಣ ಶಕ್ತಿಯು ಸೌರ ಮತ್ತು ಪವನ ಶಕ್ತಿಯಂತಹ ವ್ಯತ್ಯಾಸವಾಗುವ ಮೂಲಗಳಿಗೆ ಪೂರಕವಾಗಿ ನಿಲ್ಲಬಲ್ಲ ವಿಶ್ವಾಸಾರ್ಹ ನವೀಕರಿಸಬಹುದಾದ ಇಂಧನ ಮೂಲವಾಗಿದೆ. ಭೂಉಷ್ಣ ಶಕ್ತಿಯು ವಿದ್ಯುತ್ ಉತ್ಪಾದಿಸಲು ಅಥವಾ ನೇರ ಶಾಖವನ್ನು ಒದಗಿಸಲು ಭೂಮಿಯೊಳಗೆ ಸಂಗ್ರಹವಾಗಿರುವ ಶಾಖವನ್ನು ಬಳಸಿಕೊಳ್ಳುತ್ತದೆ.

ಭೂಉಷ್ಣ ಶಕ್ತಿಯ ರಾಷ್ಟ್ರೀಯ ನೀತಿ (15 ಸೆಪ್ಟೆಂಬರ್ 2025 ರಂದು ಅಧಿಸೂಚಿಸಲಾಗಿದೆ)

  • ಈ ನೀತಿಯು ಭೂಉಷ್ಣ ಸಂಪನ್ಮೂಲಗಳ ಪರಿಶೋಧನೆ, ಅಭಿವೃದ್ಧಿ ಮತ್ತು ಬಳಕೆಗೆ ಸೂಕ್ತ ಚೌಕಟ್ಟನ್ನು ಒದಗಿಸುತ್ತದೆ.
  • ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ 381 ಬಿಸಿ ನೀರಿನ ಬುಗ್ಗೆಗಳಲ್ಲಿನ ಪರಿಶೋಧನೆಯ ಆಧಾರದ ಮೇಲೆ ಭಾರತದ ಭೂಉಷ್ಣ ಸಾಮರ್ಥ್ಯವನ್ನು ಸುಮಾರು 10,600 ಎಂಡಬ್ಲು ಎಂದು ಅಂದಾಜಿಸಿದೆ, ಇದರಲ್ಲಿ 42 ಭೂಉಷ್ಣ ತಾಣಗಳನ್ನು ಭರವಸೆಯ ಪ್ರದೇಶಗಳೆಂದು ಗುರುತಿಸಲಾಗಿದೆ.
  • ಈ ನೀತಿಯು ತಂತ್ರಜ್ಞಾನ ಪಾಲುದಾರಿಕೆಗಳು, ಜ್ಞಾನ ವಿನಿಮಯ ಮತ್ತು ಜಂಟಿ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು (R&D) ಉತ್ತೇಜಿಸುತ್ತದೆ. ಭಾರತವು ಭೂಉಷ್ಣ ಶಕ್ತಿಗಾಗಿ ಆಸ್ಟ್ರೇಲಿಯಾ, ಐಸ್ಲ್ಯಾಂಡ್, ಸೌದಿ ಅರೇಬಿಯಾ ಮತ್ತು ಅಮೆರಿಕದೊಂದಿಗೆ ಸಹಕಾರ ಒಪ್ಪಂದಗಳನ್ನು ಹೊಂದಿದೆ.
  • ಜುಲೈ-ಆಗಸ್ಟ್ 2025ರಲ್ಲಿ ಪ್ರಾಯೋಗಿಕ ಉತ್ಪಾದನಾ ಘಟಕ, ಸಂಪನ್ಮೂಲ ಮೌಲ್ಯಮಾಪನ ಯೋಜನೆಗಳು ಮತ್ತು ಸೌರ-ಭೂಉಷ್ಣ ಹೈಬ್ರಿಡ್ ಘಟಕ ಸೇರಿದಂತೆ ಐದು ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಇವು ಭೂಉಷ್ಣ ಬಳಕೆಯ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ.

ಭಾರತದ ಬದಲಾಗುತ್ತಿರುವ ಇಂಧನ ದೃಶ್ಯಾವಳಿ

ಶುದ್ಧ ಅಡುಗೆ ಅನಿಲವು ಇಂಧನ ಸಿಗದಿರುವ ಸವಾಲಿನಿಂದ ಹೊರಬಂದು, ಪ್ರತಿಯೊಂದು ಮನೆಗೂ ಸುಲಭವಾಗಿ ಸಿಗುವ ಇಂಧನ ಆಯ್ಕೆಯಾಗಿ ಬದಲಾಗಿದೆ. ಎಲ್‌ಪಿಜಿ ಸಂಪರ್ಕಗಳ ವಿಸ್ತರಣೆ ಮತ್ತು ಹೆಚ್ಚುತ್ತಿರುವ ಬಳಕೆಯು ಭಾರತೀಯ ಕುಟುಂಬಗಳಲ್ಲಿ ಅದರ ಬೆಳೆಯುತ್ತಿರುವ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ.

  • ರಾಷ್ಟ್ರೀಯ ಎಲ್‌ಪಿಜಿ ವ್ಯಾಪ್ತಿಯು 2014 ರಲ್ಲಿ ಶೇಕಡಾ 55.9 ರಷ್ಟಿದ್ದುದು 2026 ರಲ್ಲಿ ಶೇಕಡಾ 107.2ಕ್ಕೆ ಏರಿಕೆಯಾಗಿದೆ.
  • ಎಲ್‌ಪಿಜಿ ಗ್ರಾಹಕರ ಸಂಖ್ಯೆ 2014 ರಿಂದ 2026 ರ ವೇಳೆಗೆ 14.51 ಕೋಟಿಯಿಂದ 33.18 ಕೋಟಿಗೆ ಹೆಚ್ಚಾಗಿದೆ.
  • ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ, ಆರ್ಥಿಕ ವರ್ಷ 2025–26 ರಲ್ಲಿ ಸಿಲಿಂಡರ್ ಮರುಪೂರಣ (ರಿಫಿಲ್) ವಿತರಣೆಯು ಸುಮಾರು 49.21 ಕೋಟಿ ಸಿಲಿಂಡರ್‌ಗಳನ್ನು ತಲುಪಿದೆ.
  • ಆರ್ಥಿಕ ವರ್ಷ 2025–26ರಲ್ಲಿ ಪಿಎಂಯುವೈ ಅಡಿಯಲ್ಲಿ 25 ಲಕ್ಷ ಹೆಚ್ಚುವರಿ ಎಲ್‌ಪಿಜಿ ಸಂಪರ್ಕಗಳನ್ನು ಅನುಮೋದಿಸಲಾಗಿದ್ದು, 5 ಆಗಸ್ಟ್ 2026 ರ ವೇಳೆಗೆ 24.84 ಲಕ್ಷ ಸಂಪರ್ಕಗಳನ್ನು ಬಿಡುಗಡೆ ಮಾಡಲಾಗಿದೆ.
  • ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾಗಾರವಾಗಿದ್ದು, 22 ಕಾರ್ಯಾಚರಣೆಯ ಸಂಸ್ಕರಣಾಗಾರಗಳಲ್ಲಿ ವಾರ್ಷಿಕ 258.1 ಮಿಲಿಯನ್ ಟನ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.

'ಸಮುದ್ರ ಮಂಥನ' - ರಾಷ್ಟ್ರೀಯ ಆಫ್‌ಶೋರ್ ಪರಿಶೋಧನಾ ಯೋಜನೆ

ಸಮುದ್ರದಲ್ಲಿನ ತೈಲ ಮತ್ತು ಅನಿಲ ಪರಿಶೋಧನೆಯನ್ನು ಹೆಚ್ಚಿಸಲು ಹಾಗೂ ಇಂಧನ ಭದ್ರತೆಯನ್ನು ಬಲಪಡಿಸಲು ₹84,084 ಕೋಟಿ ವೆಚ್ಚದೊಂದಿಗೆ 31 ಜುಲೈ 2026 ರಂದು ಅನುಮೋದಿಸಲಾಗಿದೆ. ಇದು ಭೂಕಂಪನ ಸಮೀಕ್ಷೆಗಳು (ಸೀಸ್ಮಿಕ್ ಸರ್ವೇ), ಆಳವಾದ ನೀರಿನ ಅನ್ವೇಷಣೆಯ ಕೊರೆಯುವಿಕೆ (ಡೀಪ್‌ವಾಟರ್ ಡ್ರಿಲ್ಲಿಂಗ್) ಮತ್ತು ಆಫ್‌ಶೋರ್ ಉತ್ಪಾದನಾ ಮೂಲಸೌಕರ್ಯಗಳನ್ನು ಒಳಗೊಂಡಿದೆ.

ಭವಿಷ್ಯದ ನೋಟ: ಭಾರತದ ಇಂಧನ ಭವಿಷ್ಯದ ನಿರ್ಮಾಣ

ಭಾರತವು ಭದ್ರತೆ, ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಸಂಯೋಜಿಸುವ ಇಂಧನ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಪಳೆಯುಳಿಕೆಯೇತರ (ನಾನ್-ಫಾಸಿಲ್) ಸಾಮರ್ಥ್ಯದ ವಿಸ್ತರಣೆಗೆ ಬಲವಾದ ದೇಶೀಯ ಸಂಪನ್ಮೂಲಗಳು, ಮೂಲಸೌಕರ್ಯ, ಉತ್ಪಾದನೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಬೆಂಬಲ ನೀಡುತ್ತಿವೆ.

ಇಂಧನ ಬೇಡಿಕೆ ಬೆಳೆದಂತೆ, ಭಾರತದ ವೈವಿಧ್ಯಮಯ ಇಂಧನ ವ್ಯವಸ್ಥೆಯು ವಿಶ್ವಾಸಾರ್ಹ ವಿದ್ಯುತ್, ಹೆಚ್ಚಿನ ಇಂಧನ ಭದ್ರತೆ ಮತ್ತು ಸ್ವಚ್ಛ ಭವಿಷ್ಯವನ್ನು ಬೆಂಬಲಿಸುತ್ತದೆ. ನಿರಂತರ ನೀತಿ ಬೆಂಬಲ ಮತ್ತು ತಾಂತ್ರಿಕ ಪ್ರಗತಿಯು ಚೇತರಿಕೆಯ ಸಾಮರ್ಥ್ಯವಿರುವ, ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಇಂಧನ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

References

Cabinet

https://www.pib.gov.in/PressReleasePage.aspx?PRID=2241799&reg=3&lang=1

https://www.pib.gov.in/PressNoteDetails.aspx?ModuleId=3&NoteId=158349&reg=48&lang=2

https://www.pib.gov.in/PressReleasePage.aspx?PRID=2292445&reg=48&lang=1

Ministry of New and Renewable Energy (MNRE)

https://www.pib.gov.in/PressReleasePage.aspx?PRID=2296782&reg=48&lang=1

https://www.pib.gov.in/PressReleasePage.aspx?PRID=2250039&reg=48&lang=2

https://www.pib.gov.in/PressReleasePage.aspx?PRID=2293256&reg=48&lang=1

https://www.pib.gov.in/PressReleasePage.aspx?PRID=2244667&reg=48&lang=2

https://www.pib.gov.in/PressReleasePage.aspx?PRID=2245157&lang=2&reg=48

https://www.pib.gov.in/PressReleasePage.aspx?PRID=2250039&lang=1&reg=3

https://www.pib.gov.in/PressReleasePage.aspx?PRID=2291541&reg=48&lang=1

https://www.pib.gov.in/PressReleaseIframePage.aspx?PRID=2026700&reg=48&lang=2

https://www.pib.gov.in/PressReleasePage.aspx?PRID=2200435&reg=48&lang=2

https://pmkusum.mnre.gov.in/#/landing

https://mnre.gov.in/en/physical-progress/

https://mnre.gov.in/en/bio-energy-overview/

https://mnre.gov.in/en/new-technologies-overview/

https://www.pib.gov.in/PressReleasePage.aspx?PRID=1777364&reg=48&lang=2

https://www.pib.gov.in/PressReleasePage.aspx?PRID=2268992&reg=48&lang=2

https://pmsuryaghar.gov.in/#/

https://www.pib.gov.in/PressReleasePage.aspx?PRID=2249408&reg=3&lang=1

Ministry of Petroleum & Natural Gas

https://www.pib.gov.in/PressReleasePage.aspx?PRID=2266034&reg=48&lang=2

https://www.pib.gov.in/PressReleasePage.aspx?PRID=2295494&reg=3&lang=1

https://ppac.gov.in/download.php?file=rep_studies/1785837484_LPG_Profile_Report_Q1_FY_2026-27_Final_Web.pdf

https://www.pmuy.gov.in/index.aspx

https://gobardhan.eil.co.in/

Ministry of Coal

https://www.pib.gov.in/PressReleasePage.aspx?PRID=2293366&reg=48&lang=1

https://www.pib.gov.in/PressReleasePage.aspx?PRID=2289973&lang=2&reg=48

https://www.pib.gov.in/PressReleasePage.aspx?PRID=2260621&lang=2&reg=3

https://www.pib.gov.in/PressReleasePage.aspx?PRID=2286591&reg=48&lang=1

Department of Atomic Energy (DAE)

https://www.pib.gov.in/PressReleasePage.aspx?PRID=2198951&reg=3&lang=1

https://www.pib.gov.in/PressNoteDetails.aspx?NoteId=156593&ModuleId=3&reg=3&lang=2

https://www.pib.gov.in/PressReleasePage.aspx?PRID=2294814&reg=48&lang=1

https://www.pib.gov.in/PressReleasePage.aspx?PRID=2249537&reg=48&lang=2

https://www.pib.gov.in/PressReleasePage.aspx?PRID=2247971&lang=2&reg=48

Ministry of Railways

https://www.pib.gov.in/PressReleasePage.aspx?PRID=2285240&reg=48&lang=1

PIB Backgrounders

https://www.pib.gov.in/FactsheetDetails.aspx?Id=150630&reg=3&lang=1

https://www.pib.gov.in/FactsheetDetails.aspx?Id=149232&reg=48&lang=2

https://www.pib.gov.in/PressReleasePage.aspx?PRID=2270740&reg=3&lang=1

https://www.pib.gov.in/PressNoteDetails.aspx?NoteId=156593&ModuleId=3&reg=3&lang=2

https://www.pib.gov.in/PressNoteDetails.aspx?NoteId=155990&ModuleId=3&reg=48&lang=2

Click here to see PDF

 

*****

(तथ्य सामग्री आईडी: 150911) आगंतुक पटल : 258


Provide suggestions / comments
इस विश्लेषक को इन भाषाओं में पढ़ें : English , Bengali , हिन्दी , Assamese , Malayalam , Telugu