57th International Film Festival of India 2026
20 – 28 Nov 2026

ಅಂತರರಾಷ್ಟ್ರೀಯ ಸಹಯೋಗದ ಸಾಮರ್ಥ್ಯವನ್ನು ಉಲ್ಲೇಖಿಸಿದ ಘಾನಾದ ಬೀದಿಯಲ್ಲಿ ಬಾಲ್ಯ, ಗುರುತು ಮತ್ತು ಸ್ಥಿತಿಸ್ಥಾಪಕತ್ವವನ್ನು ಅನ್ವೇಷಿಸುವ "ಈಗೋ ವಿ ರೀಚ್ ಆಲ್" ಚಲನಚಿತ್ರದ ನಿರ್ಮಾಪಕರು

ಪ್ರಕಟಣಾ ದಿನಾಂಕ: 25 NOV 2026 7:01PMby PIB Bengaluruಪ್ರಕಟಣೆ ಐ.ಡಿ.: 2342472Views: 10

ಘಾನಾ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ಸಹಯೋಗದಿಂದ ನಿರ್ಮಾಣವಾದ "ಈಗೋ ವಿ ರೀಚ್ ಆಲ್" (ಅವರ್ ಟೈಮ್ ವಿಲ್ ಕಮ್) ನ ತೆರೆಯ ಹಿಂದಿನ ತಂಡವು ಇಂದು ಗೋವಾದ ಪಣಜಿಯಲ್ಲಿ ನಡೆದ 57 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿತು. ಅಂತರರಾಷ್ಟ್ರೀಯ ಸಿನಿಮಾ ವಿಭಾಗದ ಅಡಿಯಲ್ಲಿ ಪ್ರದರ್ಶಿಸಲಾದ 104 ನಿಮಿಷಗಳ ಈ ಚಲನಚಿತ್ರವು ಉತ್ಸವದಲ್ಲಿ ತನ್ನ ಏಷ್ಯಾ ಪ್ರೀಮಿಯರ್ ಅನ್ನು ಆಚರಿತು.

ನಿರ್ದೇಶಕರಾದ ಅಮರ್ತೆ ಅರ್ಮಾರ್ ಮತ್ತು ನಿರ್ಮಾಪಕರಾದ ಯೆಮೋಹ್ ಐಕೆ ಚಿತ್ರದ ಸೃಜನಶೀಲ ಪ್ರಯಾಣ, ಘಾನಾದ ಬೀದಿಗಳಲ್ಲಿ ಬಾಲ್ಯ ಮತ್ತು ಬದುಕುಳಿಯುವಿಕೆಯ ಅನ್ವೇಷಣೆ ಮತ್ತು ಸ್ಥಳೀಯವಾಗಿ ಬೇರೂರಿದ ಕಥೆಗಳನ್ನು ಪ್ರಪಂಚದಾದ್ಯಂತ ಪ್ರೇಕ್ಷಕರಿಗೆ ತರುವಲ್ಲಿ ಅಂತರರಾಷ್ಟ್ರೀಯ ಸಹಯೋಗದ ಪ್ರಾಮುಖ್ಯತೆಯ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.

ಚಿತ್ರದ ವಿಷಯಾಧಾರಿತ ಸ್ಫೂರ್ತಿಯ ಬಗ್ಗೆ ಮಾತನಾಡಿದ ನಿರ್ದೇಶಕರಾದ ಅಮರ್ತೆ ಅರ್ಮರ್, ಘಾನಾದ ಬೀದಿಯಲ್ಲಿ ಬಾಲ್ಯ ಮತ್ತು ಬಡತನದಲ್ಲಿ ಜೀವನ ನಡೆಸುವ ಯುವಕರ ಕಥೆಗಳಿಂದ ತಾವು ಬಹಳ ಹಿಂದಿನಿಂದಲೂ ಆಕರ್ಷಿತರಾಗಿರುವುದಾಗಿ ಹೇಳಿದರು. ಸಮಾಜದಿಂದ ಅಧಿಕವಾಗಿ ಕಡೆಗಣಿಸಲ್ಪಟ್ಟವರ ಕಥೆಗಳನ್ನು ದೊಡ್ಡ ರಾಷ್ಟ್ರೀಯ ಮತ್ತು ಸಿನಿಮೀಯ ಸಂವಾದಕ್ಕೆ ಹೇಗೆ ತರಬಹುದು ಎಂಬುದನ್ನು ಅನ್ವೇಷಿಸಲು ಈ ಚಿತ್ರ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ನಿರೂಪಣೆಯ ಮೂಲಕ, ಚಲನಚಿತ್ರ ನಿರ್ಮಾಪಕರು ವೈವಿಧ್ಯಮಯ ಸನ್ನಿವೇಶಗಳನ್ನೆದುರಿಸುವ ಯುವಕರು ದೇಶದ ಮತ್ತು ಅದರ ಭವಿಷ್ಯದ ಸಮಾನ ಭಾಗವೆಂದು ದೃಢೀಕರಿಸಲು ಅವರು ಪ್ರಯತ್ನಿಸಿದ್ದಾರೆ.

ಅವರ ಚಲನಚಿತ್ರ ನಿರ್ಮಾಣದ ಪ್ರಯಾಣ ಮತ್ತು ಘಾನಾದೊಂದಿಗಿನ ಅವರ ನಿರಂತರ ಸಂಪರ್ಕವನ್ನು ಪ್ರತಿಬಿಂಬಿಸುತ್ತಾ, ಅರ್ಮಾರ್ ಅವರು ಚಲನಚಿತ್ರ ನಿರ್ಮಾಪಕರು ತಮ್ಮ ಕಥೆಗಳ ಮಾಲೀಕತ್ವವನ್ನು ತೆಗೆದುಕೊಳ್ಳುವ ಮತ್ತು ಅವರ ಧ್ವನಿಯನ್ನು ನಿರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸ್ವತಂತ್ರ ಚಲನಚಿತ್ರ ನಿರ್ಮಾಪಕರು ಸಾಮಾನ್ಯವಾಗಿ ಹಣಕಾಸಿನ ನಿರ್ಬಂಧಗಳೊಳಗೆ ಕೆಲಸ ಮಾಡುತ್ತಾರೆ, ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಉದ್ಯಮವನ್ನು ಬಲಪಡಿಸಲು ಸಿನಿಮೀಯ ಗುಣಮಟ್ಟ ಮತ್ತು ಕಥೆ ಹೇಳುವ ಸಾಮರ್ಥ್ಯವನ್ನು ಪ್ರದರ್ಶಿಸುವ ಚಲನಚಿತ್ರಗಳನ್ನು ನಿರ್ಮಿಸುವುದು ಅನಿವಾರ್ಯವಾಗಿದೆ ಎಂದು ಅವರು ಗಮನಿಸಿದರು.

ಭಾರತ ಮತ್ತು ಘಾನಾ ನಡುವಿನ ಸಾಂಸ್ಕೃತಿಕ ವಿನಿಮಯದ ವ್ಯಾಪ್ತಿಯನ್ನು ಉಲ್ಲೇಖಿಸುತ್ತಾ, ಚಲನಚಿತ್ರ ನಿರ್ಮಾಪಕರು ಎರಡೂ ದೇಶಗಳ ಸಿನಿಮೀಯ ಸಂಸ್ಕೃತಿಗಳ ನಡುವೆ ಸಮಾನಾಂತರಗಳನ್ನು ಚಿತ್ರಿಸಿ, ಘಾನಾದ 'ಘಾಲಿವುಡ್' ಅನ್ನು ಭಾರತದ ಬಾಲಿವುಡ್‌ಗೆ ಪ್ರತಿರೂಪವೆಂದು ಉಲ್ಲೇಖಿಸಿದ ಅವರು, ಕೆಲವು ಸಾಂಸ್ಕೃತಿಕ ಅನುಭವಗಳು ಮತ್ತು ಸಾಮಾಜಿಕ ವಾಸ್ತವತೆಗಳಲ್ಲಿನ ಸಾಮ್ಯತೆಗಳನ್ನು ನೀಡಿದ ಎರಡೂ ದೇಶಗಳಲ್ಲಿನ ಪ್ರೇಕ್ಷಕರು ಪರಸ್ಪರರ ಕಥೆ ಹೇಳುವ ಸಂಪ್ರದಾಯಗಳಲ್ಲಿ ಸಾಂಸ್ಕೃತಿಕ ಅನುರಣನವನ್ನು ಕಂಡುಕೊಳ್ಳಬಹುದು ಎಂದು ಅವರು ಗಮನಿಸಿದರು.

ಚಲನಚಿತ್ರ ನಿರ್ಮಾಪಕರು ಭಾರತೀಯ ಮತ್ತು ಘಾನಾದ ಚಲನಚಿತ್ರ ನಿರ್ಮಾಪಕರ ನಡುವೆ ಹೆಚ್ಚಿನ ಸಹಯೋಗವನ್ನು ಅನ್ವೇಷಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದರು. ಇದರಲ್ಲಿ ಸೃಜನಶೀಲ ಪ್ರತಿಭೆ, ಕಥೆಗಳು ಮತ್ತು ಸಿನಿಮೀಯ ಅನುಭವಗಳನ್ನು ಘಾನಾದಿಂದ ಭಾರತಕ್ಕೆ ಹಾಗೂ ಭಾರತದಿಂದ ಘಾನಾಗೆ ತರಲು ಅವಕಾಶಗಳ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದರು. ಅಂತಹ ಪಾಲುದಾರಿಕೆಗಳು, ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸಬಹುದು, ಚಲನಚಿತ್ರ ನಿರ್ಮಾಪಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆಫ್ರಿಕನ್ ಸಿನಿಮಾದ ಗೋಚರತೆಯನ್ನು ಬಲಪಡಿಸಬಹುದು ಎಂದು ಅವರು ಗಮನಿಸಿದರು.

ಪತ್ರಿಕಾಗೋಷ್ಠಿಯನ್ನು ಶ್ರೀ ಮನನ್ ಸಿಂಗ್ ಅವರು ನಿರ್ವಹಿಸಿದರು.

ಸಂಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2342472
•
Media Centre: Goa
•
Festival Dates: Nov 20 – 28, 2026