57th International Film Festival of India 2026
20 – 28 Nov 2026

ವೇವ್ಸ್ ಬಜಾರ್ ಮೂಲಕ ಮೂಲ ವಿಷಯವನ್ನು ಅನ್ವೇಷಿಸಲು ಎನ್.ಎಫ್.ಡಿ‌.ಸಿ. ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಪಾಲುದಾರಿಕೆ


ವೇವ್ಸ್ ಬಜಾರ್ × ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ.) ಜಂಟಿಯಾಗಿ ವಿಷಯ ರಚನೆಕಾರರ ಸಲ್ಲಿಕೆ ಉಪಕ್ರಮ ಮೂಲಕ ಐದು ಭಾಷೆಗಳಲ್ಲಿ ಮೂಲ ಕಾದಂಬರಿ ಮತ್ತು ಕಾಲ್ಪನಿಕವಲ್ಲದ ಪರಿಕಲ್ಪನೆಗಳನ್ನು ಆಹ್ವಾನಿಸುತ್ತವೆ

ಪ್ರಕಟಣಾ ದಿನಾಂಕ: 22 NOV 2026 1:50PMby PIB Bengaluruಪ್ರಕಟಣೆ ಐ.ಡಿ.: 2339946Views: 2

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ‌.ಸಿ.) ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ.) ಇಂದು ಗೋವಾದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಸ್.ಐ.) ವೇವ್ಸ್ ಬಜಾರ್ × ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ.) ವಿಷಯ ರಚನೆಕಾರರ ಸಲ್ಲಿಕೆ ಉಪಕ್ರಮವನ್ನು ಪ್ರಾರಂಭಿಸಲು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ.

ಈ ಉಪಕ್ರಮವು ಭಾರತದಾದ್ಯಂತ ಬರಹಗಾರರು, ವಿಷಯ ಸೃಷ್ಟಿಕರ್ತರು ಮತ್ತು ನಿರ್ಮಾಣ ಸಂಸ್ಥೆಗಳಿಗೆ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಬಾಂಗ್ಲಾ ಭಾಷೆಗಳಲ್ಲಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ.) ಗೆ ಮೂಲ ಕಾದಂಬರಿ ಮತ್ತು ಕಾಲ್ಪನಿಕವಲ್ಲದ ಪರಿಕಲ್ಪನೆಗಳನ್ನು ವರ್ಣಿಸಲು ಮಾಡಲು ಅವಕಾಶವನ್ನು ಒದಗಿಸುತ್ತದೆ.

ಕಾದಂಬರಿ ಸರಣಿಗಳು, ಪ್ರೀಮಿಯಂ ಟಿವಿ+ ವಿಷಯ, ರಿಯಾಲಿಟಿ ಶೋಗಳು, ಆಟ ಮತ್ತು ಸ್ಪರ್ಧೆಯ ಸ್ವರೂಪಗಳು, ಪ್ರತಿಭೆ ಆಧಾರಿತ ಕಾರ್ಯಕ್ರಮಗಳು ಮತ್ತು ಇತರ ಸ್ಕ್ರಿಪ್ಟ್ ಮಾಡದ ಪರಿಕಲ್ಪನೆಗಳು ಸೇರಿದಂತೆ ಎಲ್ಲಾ ಸ್ವರೂಪಗಳಲ್ಲಿ ಸಲ್ಲಿಕೆಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅರ್ಜಿದಾರರನ್ನು ಪರಿಗಣನೆ ಮತ್ತು ಸಂಭಾವ್ಯ ಅಭಿವೃದ್ಧಿಗಾಗಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ.)ಗೆ ತಮ್ಮ ಪರಿಕಲ್ಪನೆಗಳನ್ನು ವಿವರವಾಗಿ ಪ್ರಸ್ತುತಿ ಮಾಡಲು ಆಹ್ವಾನಿಸಲಾಗುತ್ತದೆ. 

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ‌.ಸಿ.) ಯ ಕೈಗಾರಿಕಾ ವೇದಿಕೆಯಾದ ವೇವ್ಸ್ ಬಜಾರ್, ಭಾರತದ ಮಾಧ್ಯಮ ಮತ್ತು ಮನರಂಜನಾ ಪರಿಸರ ವ್ಯವಸ್ಥೆಯಾದ್ಯಂತ ಪಾಲುದಾರರೊಂದಿಗೆ ಸೃಜನಶೀಲ ಪ್ರತಿಭೆಯನ್ನು ಸಂಪರ್ಕಿಸುತ್ತದೆ. ಈ ಸಹಯೋಗವು ವಿಶೇಷವಾಗಿ ಪ್ರಾದೇಶಿಕ ಮಾರುಕಟ್ಟೆಗಳಿಂದ ಮೂಲ ಕಥೆ ಹೇಳುವಿಕೆಗೆ ಅವಕಾಶಗಳನ್ನು ವಿಸ್ತರಿಸುವ ಮತ್ತು ವೈವಿಧ್ಯಮಯ ಧ್ವನಿಗಳು ಮತ್ತು ದೃಷ್ಟಿಕೋನಗಳನ್ನು ವ್ಯಾಪಕ ಪ್ರೇಕ್ಷಕರಿಗೆ ತರುವ ಗುರಿಯನ್ನು ಹೊಂದಿದೆ.

ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ‌.ಸಿ.) ಯ ಅಧ್ಯಕ್ಷ ಜಿ. ಕೃಷ್ಣಕುಮಾರ್, "ಐ.ಎಫ್.ಎಫ್.ಐ. ಸಿನಿಮಾ ಮತ್ತು ಅದನ್ನು ಸಾಧ್ಯವಾಗಿಸುವ ಜನರ ಆಚರಣೆಯಾಗಿದೆ. ಇದು ಪ್ರಪಂಚದಾದ್ಯಂತದ ಕಥೆಗಳು, ಸಂಸ್ಕೃತಿಗಳು ಮತ್ತು ಸೃಜನಶೀಲ ಧ್ವನಿಗಳನ್ನು ಒಟ್ಟುಗೂಡಿಸುತ್ತದೆ. ಚಲನಚಿತ್ರಗಳು ಮತ್ತು ಧ್ವನಿಗಳ ವೈವಿಧ್ಯತೆಯು ಈ ಆವೃತ್ತಿಯನ್ನು ವಿಶೇಷವಾಗಿಸುತ್ತದೆ. "ಸ್ಟೋರೀಸ್ ವಿದೌಟ್ ಬಾರ್ಡರ್ಸ್" ಎಂಬ ಥೀಮ್ ಸಿನಿಮಾದ ಚೈತನ್ಯವನ್ನು ಸುಂದರವಾಗಿ ಸೆರೆಹಿಡಿಯುತ್ತದೆ" ಎಂದು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್.ಎಫ್.ಡಿ‌.ಸಿ.)  ವ್ಯವಸ್ಥಾಪಕ ನಿರ್ದೇಶಕ ಶ್ರೀ ಧೀರಜ್ ಸಿಂಗ್ ಅವರು ಹೇಳಿದರು.

"ವೇವ್ಸ್ ಬಜಾರ್ ಸೃಜನಶೀಲ ಪ್ರತಿಭೆ ಮತ್ತು ಉದ್ಯಮದ ನಡುವೆ ಅರ್ಥಪೂರ್ಣ ಸಂಪರ್ಕಗಳನ್ನು ನಿರ್ಮಿಸುವುದನ್ನು ಮುಂದುವರೆಸಿದೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದೊಂದಿಗಿನ ಈ ಸಹಯೋಗವು ಬರಹಗಾರರು, ಸೃಷ್ಟಿಕರ್ತರು ಮತ್ತು ನಿರ್ಮಾಣ ಸಂಸ್ಥೆಗಳಿಗೆ ಭಾಷೆಗಳು ಮತ್ತು ಸ್ವರೂಪಗಳಲ್ಲಿ ಮೂಲ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸಲು ಹೊಸ ಮಾರ್ಗಗಳನ್ನು ತೆರೆಯುತ್ತದೆ."

 ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಗೌರವ್ ಬ್ಯಾನರ್ಜಿ, "ದೇಶಾದ್ಯಂತ ಅಪಾರ ಸೃಜನಶೀಲ ಪ್ರತಿಭೆಗಳಿದ್ದು, ಸ್ಥಾಪಿತ ವೇದಿಕೆಗಳಿಗೆ ಯಾವಾಗಲೂ ದಾರಿ ಕಂಡುಕೊಳ್ಳದ ವಿಚಾರಗಳಿವೆ. ವೇವ್ಸ್ ಬಜಾರ್ ಮೂಲಕ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ‌.ಸಿ.) ಯೊಂದಿಗಿನ ನಮ್ಮ ಪಾಲುದಾರಿಕೆಯು ಬರಹಗಾರರು ಮತ್ತು ಸೃಷ್ಟಿಕರ್ತರು ಭಾಷೆಗಳು ಮತ್ತು ಸ್ವರೂಪಗಳಲ್ಲಿ ತಮ್ಮ ಮೂಲ ಪರಿಕಲ್ಪನೆಗಳನ್ನು ನಮಗೆ ತರಲು ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುವತ್ತ ಒಂದು ಹೆಜ್ಜೆಯಾಗಿದೆ. ಪ್ರೇಕ್ಷಕರಿಗೆ ಹೊಸ ದೃಷ್ಟಿಕೋನಗಳು ಮತ್ತು ಬಲವಾದ ವಿಚಾರಗಳನ್ನು ಕಂಡುಹಿಡಿಯಲು ನಾವು ಎದುರು ನೋಡುತ್ತಿದ್ದೇವೆ."

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು (ಎನ್.ಎಫ್.ಡಿ‌.ಸಿ.) ವೇವ್ಸ್ ಬಜಾರ್ ಪೋರ್ಟಲ್ (https://wavesbazaar.com) ಮೂಲಕ ಸಲ್ಲಿಕೆಗಳನ್ನು ನಿರ್ವಹಿಸುತ್ತದೆ ಮತ್ತು ಪರಸ್ಪರ ಒಪ್ಪಿದ ಮಾನದಂಡಗಳ ಆಧಾರದ ಮೇಲೆ ನಮೂದುಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ. ಆಯ್ಕೆಯಾದ ಅರ್ಜಿದಾರರನ್ನು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ.) ಸಂಸ್ಥೆಗೆ ತಮ್ಮ ಪರಿಕಲ್ಪನೆಗಳನ್ನು ವಿವರವಾಗಿ ಪ್ರಸ್ತುತಿ ಮಾಡಲು ಆಹ್ವಾನಿಸಲಾಗುತ್ತದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339946
•
Media Centre: Goa
•
Festival Dates: Nov 20 – 28, 2026