57th International Film Festival of India 2026
20 – 28 Nov 2026

ಪ್ರಸಿದ್ಧ ನಟ ರಾಕೇಶ್‌ ಬೇಡಿ ಐಎಫ್‌ಎಫ್‌ಐ 2026ರ ‘ಧುರಂಧರ್‌’ ಪತ್ರಿಕಾಗೋಷ್ಠಿಯಲ್ಲಿ ಪಾತ್ರ ನಿರ್ಮಾಣದ ಕಲೆಯನ್ನು ಅನಾವರಣಗೊಳಿಸಿದರು


ರಂಗಭೂಮಿಯ ಮೂಲಗಳು ಮತ್ತು ಆಳವಾದ ಪಾತ್ರ ಅಧ್ಯಯನವು ‘ಧುರಂಧರ್‌’ನಲ್ಲಿ ಜಮೀಲ್‌ ಜಮಾಲಿಯನ್ನು ರೂಪಿಸಿದೆ ಎಂದು ಐಎಫ್‌ಎಫ್‌ಐ 57ರಲ್ಲಿ ರಾಕೇಶ್‌ ಬೇಡಿ ಬಹಿರಂಗಪಡಿಸಿದ್ದಾರೆ

ಪ್ರಕಟಣಾ ದಿನಾಂಕ: 21 NOV 2026 9:29PMby PIB Bengaluruಪ್ರಕಟಣೆ ಐ.ಡಿ.: 2339940Views: 6

ಆದಿತ್ಯ ಧರ್‌ಅವರ ಹಿಂದಿ ವೈಶಿಷ್ಟ್ಯಪೂರ್ಣ ಚಲನಚಿತ್ರ ಧುರಂಧರ್‌, 57ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನಲ್ಲಿ ಭಾರತೀಯ ಪ್ಯಾನೋರಾಮಾ ವಿಭಾಗದ ಮುಖ್ಯಧಾರೆಯ ಚಲನಚಿತ್ರ ಫೀಚರ್‌ ಫಿಲ್ಮ್‌ ವಿಭಾಗವನ್ನು ತೆರೆಯಿತು. ಉತ್ಸವದ ಎರಡನೇ ದಿನ ಪಜಿ, ಗೋವಾ ಉತ್ಸವದ ಮಾಧ್ಯಮ ಕೇಂದ್ರದಲ್ಲಿ ನಡೆದ ಆಕರ್ಷಕ ಪತ್ರಿಕಾಗೋಷ್ಠಿಯ ಕೇಂದ್ರವಾಗಿತ್ತು.

ಈ ಸಂವಾದಾತ್ಮಕ ಅಧಿವೇಶನದಲ್ಲಿ ಹಿರಿಯ ನಟ ರಾಕೇಶ್‌ ಬೇಡಿ ಮತ್ತು ಪ್ರಸಿದ್ಧ ಉತ್ಪಾದನಾ ವಿನ್ಯಾಸಕಿ ಸೈನಿ ಎಸ್‌. ಜೋಹ್ರೇ ಭಾಗವಹಿಸಿದ್ದರು. ಅವರು ಚಿತ್ರದ ಸೃಜನಶೀಲ ಪ್ರಯಾಣ, ಸೂಕ್ಷ್ಮ ಪಾತ್ರ ನಿರ್ಮಾಣ ಮತ್ತು ದೃಶ್ಯ ಜಗತ್ತಿನ ನಿರ್ಮಾಣದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು. ಈ ಅಧಿವೇಶನವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ನಿರ್ದೇಶಕ ಜನರಲ್‌ ಶ್ರೀ ಮಹೇಶ್‌ ಕುಮಾರ್‌ ನಿರ್ವಹಿಸಿದರು.

ಜಮೀಲ್‌ ಜಮಾಲಿ ಪಾತ್ರದ ತಮ್ಮ ಅಭಿನಯದ ಬಗ್ಗೆ ಮಾತನಾಡಿದ ರಾಕೇಶ್‌ ಬೇಡಿ, ಆಧುನಿಕ ಸಿನೆಮಾದಲ್ಲಿಪದರಿತ ಪಾತ್ರ ಬರವಣಿಗೆಯ ಮಹತ್ವವನ್ನು ಬಿಂಬಿಸಿದರು. ತಮ್ಮ ವಿಶಾಲ ನಾಟಕ ಅನುಭವವನ್ನು ತಮ್ಮ ಕಲೆಯ ಶಾಶ್ವತ ಆಧಾರವೆಂದು ವರ್ಣಿಸಿ, ಬೇಡಿ ತಮ್ಮ ಪಾತ್ರವನ್ನು ಅಭಿವೃದ್ಧಿಪಡಿಸಲು ನಡೆದ ಸೂಕ್ಷ್ಮ ಸಂಶೋಧನೆಯ ಬಗ್ಗೆ ಮಾತನಾಡಿದರು. ಪಾತ್ರದ ಕ್ರಿಯೆಗಳು ದೃಶ್ಯದ ಬೇಡಿಕೆಗಳಿಂದ ಚಾಲಿತವಾಗಿರಬೇಕು ಎಂದು ಅವರು ಒತ್ತಿಹೇಳಿದರು. ಪ್ರದರ್ಶನವು ಕೇವಲ ಅನುಕರಣೆಯ ಅಭ್ಯಾಸವಲ್ಲದೆ ಸಂಪೂರ್ಣ ಪಾತ್ರ ನಿರೂಪಣೆಯಾಗಿರಬೇಕು.

ವೈವಿಧ್ಯಮಯ ಮತ್ತು ಸವಾಲಿನ ಪಾತ್ರಗಳಿಂದ ಗುರುತಿಸಲ್ಪಟ್ಟ ತಮ್ಮ ಐದು ದಶಕಗಳ ವೃತ್ತಿಜೀವನವನ್ನು ನೆನಪಿಸಿಕೊಂಡು, ಬೇಡಿ ಸಿನೆಮಾದ ಬದಲಾಗುತ್ತಿರುವ ವ್ಯಾಪ್ತಿ ಮತ್ತು ದೃಶ್ಯತೆಯ ಬಗ್ಗೆ ಮಾತನಾಡಿದರು. ‘ಏಕ್‌ ದುಜೆ ಕೆ ಲಿಯೇ’, ‘ತಿರಂಗಾ’ ಮತ್ತು ‘ಚಶ್ಮೆ ಬಡ್ದೂರ’ ಮುಂತಾದ ಹಿಂದಿನ ಚಿತ್ರಗಳ ಅಪಾರ ಜನಪ್ರಿಯತೆಯನ್ನು ನೆನಪಿಸಿಕೊಂಡು. ಆ ಸಮಯದಲ್ಲಿಯೂ ಸಿನೆಮಾ ಅಪಾರ ಸಾರ್ವಜನಿಕ ಆಕರ್ಷಣೆ ಹೊಂದಿದ್ದರೂ ಡಿಜಿಟಲ್‌ ಸಂಪರ್ಕದ ಕೊರತೆಯಿಂದ ಅದರ ವ್ಯಾಪ್ತಿ ಸೀಮಿತವಾಗಿತ್ತು ಎಂದು ಅವರು ಗಮನಿಸಿದರು.

ಇದಕ್ಕೆ ವಿರುದ್ಧವಾಗಿ ಸಾಮಾಜಿಕ ಮಾಧ್ಯಮವು ಪ್ರೇಕ್ಷಕರು ಪ್ರದರ್ಶನಗಳನ್ನು ಕಂಡುಹಿಡಿಯುವ ಮತ್ತು ತೊಡಗಿಸಿಕೊಳ್ಳುವ ರೀತಿಯನ್ನು ಬದಲಾಯಿಸಿದೆ. ಇದರಿಂದ ನಟನ ಕೆಲಸ ಒಂದು ಕ್ಲಿಕ್‌ನಲ್ಲಿ ವಿಶ್ವದಾದ್ಯಾಂತ ಪ್ರೇಕ್ಷಕರಿಗೆ ತಲುಪುತ್ತದೆ. ಚಿತ್ರಪ್ರಿಯರೊಬ್ಬರ ಹಾಸ್ಯ ಮತ್ತು ನಾಟಕೀಯ ಸಮಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಬೇಡಿ ವಿವರಿಸಿದರು, ಇಂತಹ ಸೂಕ್ಷ್ಮತೆಗಳು ಎಂದಿಗೂ ಯಾದೃಚ್ಛಿಕವಲ್ಲ. ಪ್ರತಿ ಭಾವ ಮತ್ತು ಅಭಿವ್ಯಕ್ತಿಯನ್ನು ಸ್ಕ್ರಿಪ್ಟ್‌ ಮತ್ತು ಪಾತ್ರ ವಕ್ರರೇಖೆಯ ಭಾಗವಾಗಿ ಜಾಗರೂಕತೆಯಿಂದ ಯೋಜಿಸಲಾಗಿದೆ. ಇದು ಚಿತ್ರಣಕ್ಕೆ ಪ್ರಾಮಾಣಿಕತೆಯನ್ನು ತರಲು ಉದ್ದೇಶಪೂರ್ವಕ ಅಭಿವ್ಯಕ್ತಿಯ ಮಾರ್ಗವಾಗಿದೆ ಎಂದು ಅವರು ಹೇಳಿದರು.

ನೀವು ಹೇಗೆ ಭಾವನೆಗಳ ನಡುವೆ ಸುಲಭವಾಗಿ ಬದಲಾವಣೆ ಮಾಡುತ್ತೀರಿ ಮತ್ತು ಕನ್ನಡಿ ಮುಂದೆ ಅಭ್ಯಾಸ ಮಾಡುತ್ತೀರಾ ಎಂದು ಕೇಳಿದಾಗ, ಬೇಡಿ ಅವರ ಅಭಿನಯದ ದೃಷ್ಟಿಕೋನದ ಬಗ್ಗೆ ಒಳನೋಟಗಳನ್ನು ನೀಡಿದರು. ಅವರು ಕನ್ನಡಿ ಮುಂದೆ ಅಭ್ಯಾಸ ಮಾಡಬೇಡಿ ಎಂದು ಸಲಹೆ ನೀಡಿದರು. ಪ್ರದರ್ಶನ ನೀಡುವಾಗ ಸ್ವಯಂ ನೋಡುವುದು ನಟನ ಬೆಳವಣಿಗೆಯನ್ನು ತಡೆಯಬಹುದು ಎಂದು ವಿವರಿಸಿದರು. ಏಕೆಂದರೆ ಅದನ್ನು ನಿರ್ವಹಿಸುವಾಗ ವ್ಯಕ್ತಿಯ ಪ್ರದರ್ಶನವನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುವುದು ಕಷ್ಟ. ಬದಲಾಗಿ, ಅವರು ಪಾತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮತ್ತು ಒಳಗೊಳ್ಳುವ ಮಹತ್ವವನ್ನು ಒತ್ತಿಹೇಳಿದರು. ಒಮ್ಮೆ ನಟನು ಪಾತ್ರದ ಮನೋಭಾವವನ್ನು ಅರ್ಥಮಾಡಿಕೊಂಡಾಗ - ಮಾತು, ಪ್ರತಿಕ್ರಿಯೆಗಳು ಮತ್ತು ಭಾವನಾತ್ಮಕ ಬದಲಾವಣೆಗಳು ಸಹಜವಾಗಿ ಹರಿಯುತ್ತವೆ.

ಉತ್ಪಾದನಾ ವಿನ್ಯಾಸಕಾರ ಸೈನಿ ಎಸ್‌. ಜೋಹ್ರೇ ಚಿತ್ರದ ವಾಸ್ತುಶಿಲ್ಪ ಪ್ರಾಮಾಣಿಕತೆಯನ್ನು ವಿವರಿಸಿ, ತಂಡವು 40ಕ್ಕೂ ಹೆಚ್ಚು ಪ್ರಾಯೋಗಿಕ ಸೆಟ್‌ಗಳನ್ನು ನಿರ್ಮಿಸಿದೆ ಎಂದು ಬಹಿರಂಗಪಡಿಸಿದರು. ಪಾಕಿಸ್ತಾನದ ಸ್ಥಳಗಳಿಗೆ ಭೌತಿಕ ಪ್ರವೇಶವಿಲ್ಲದೆ, ಜೋಹ್ರೇ ಸಂಪೂರ್ಣ ಸಂಶೋಧನೆ, ಸುದ್ದಿ ಆರ್ಕೈವ್‌ಗಳು, ಸ್ಥಳೀಯ ಗ್ಯಾಂಗ್‌-ಯುದ್ಧ ವರದಿಗಳು, ನಗರ ತಳಹದಿಗಳು ಮತ್ತು ಗೂಗಲ್‌ ಮ್ಯಾಪ್‌ಗಳನ್ನು ಅಧ್ಯಯನ ಮಾಡಿ ಚಿತ್ರದ ಪರಿಸರವನ್ನು ಶೂನ್ಯದಿಂದ ಪುನರ್‌ ನಿರ್ಮಿಸಿದರು.

ಪತ್ರಿಕಾಗೋಷ್ಠಿಯು 57ನೇ ಐಎಫ್‌ಎಫ್‌ಐ  ಪಾತ್ರವನ್ನು ಚಿತ್ರರಂಗದ ಕುರಿತು ಅರ್ಥಪೂರ್ಣ ಸಂವಾದಗಳಿಗೆ ಜೀವಂತ ವೇದಿಕೆಯಾಗಿ ನಿರ್ವಹಿಸಿತು. ಜತೆಗೆ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಪ್ರೇಕ್ಷಕರನ್ನು ಚಲನಚಿತ್ರ ನಿರ್ಮಾಣದ ಸೃಜನಾತ್ಮಕ ಪ್ರಕ್ರಿಯೆಗಳನ್ನು ಅನ್ವೇಷಿಸಲು ಒಟ್ಟುಗೂಡಿಸಿತು.

ಈ ರೀತಿಯ ಸಂವಹನಗಳ ಮೂಲಕ, ಚಿತ್ಸೋತ್ಸವದ ಪರದೆಯ ಮೇಲೆ ಆಕರ್ಷಕ ಕಥೆಗಳನ್ನು ಮಾತ್ರವಲ್ಲದೆ, ಅವುಗಳನ್ನು ಜೀವಂತಗೊಳಿಸುವ ಕೌಶಲ್ಯ, ಸಂಶೋಧನೆ ಮತ್ತು ಸಹಕಾರದ ಪ್ರಯತ್ನಗಳು ಕೂಡ ನಡೆಯುತ್ತವೆ. ಹಾಗೆಯೇ ಸಿನೆಮಾಟಿಕ್‌ ಅಭಿವ್ಯಕ್ತಿಯ ವೈವಿಧ್ಯಮಯ ಆಯಾಮಗಳ ಆಳವಾದ ಮೆಚ್ಚುಗೆಯನ್ನು ಉತ್ತೇಜಿಸುತ್ತದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339940
•
Media Centre: Goa
•
Festival Dates: Nov 20 – 28, 2026