57th International Film Festival of India 2026
20 – 28 Nov 2026

ಭಾರತ ಮತ್ತು ಸ್ಪೇನ್‌ ಐಎಫ್‌ಎಫ್‌ಐ 2026ರಲ್ಲಿ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿವೆ

ಪ್ರಕಟಣಾ ದಿನಾಂಕ: 21 NOV 2026 9:22PMby PIB Bengaluruಪ್ರಕಟಣೆ ಐ.ಡಿ.: 2339936Views: 11

ಭಾರತ ಮತ್ತು ಸ್ಪೇನ್‌ ದೇಶಗಳು ಮಾಧ್ಯಮ ಹಾಗೂ ಮನರಂಜನಾ ವಲಯದಲ್ಲಿ ಸಹಕಾರವನ್ನು ಬಲಪಡಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿವೆ. ದ್ವಿಪಕ್ಷೀಯ ಆಡಿಯೊ - ವಿಶುವಲ್‌ (ದೃಶ್ಯ-ಶ್ರಾವ್ಯ) ಸಹ - ನಿರ್ಮಾಣ ಒಪ್ಪಂದವನ್ನು ನವೀಕರಿಸುವುದು ಮತ್ತು ವಿಶ್ವ ಆಡಿಯೊ ವಿಜುವಲ್‌ ಮತ್ತು ಮನರಂಜನೆ ಶಿಖರ ಸಮ್ಮೇಳನ (ವೇವ್ಸ್‌)  ಮೂಲಕ ಸಹಯೋಗವನ್ನು ವಿಸ್ತರಿಸುವ ಕುರಿತು ಇಲ್ಲಿ ಚರ್ಚೆಗಳು ನಡೆಯುತ್ತಿವೆ. 57ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಸ್ಪೇನ್‌ ‘ಗೌರವ ಅತಿಥಿ ರಾಷ್ಟ್ರ’ವಾಗಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿಈ ಬೆಳವಣಿಗೆ ನಡೆದಿದೆ.

ಈ ಸಂಬಂಧ, ಶ್ರೀ ಪ್ರಿಥುಲ್‌ ಕುಮಾರ್‌, ಸಂಯುಕ್ತ ಕಾರ್ಯದರ್ಶಿ (ಪ್ರಸಾರ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಚಿವಾಲಯ ಮತ್ತು ಇಂಡಿಯಾ ಸಿನೆಹಬ್‌ (ಐಸಿಎಚ್‌) ಅಧಿಕಾರಿಗಳೊಂದಿಗೆ, ಸ್ಪೇನ್‌ ಸಂಸ್ಕೃತಿ ಸಚಿವಾಲಯದ ಸ್ಪೇನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಿನೆಮಾಟೋಗ್ರಫಿ ಮತ್ತು ಆಡಿಯೊ ವಿಶುವಲ್‌ ಆರ್ಟ್ಸ್ (ಐಸಿಎಎ) ನಿರ್ದೇಶಕಿ ಮಹಾನಿರ್ದೇಶಕಿ ಶ್ರೀಮತಿ ಮಾರ್ಟಾ ಸೆರ್ರಾನೋ ನೇತೃತ್ವದ ಸ್ಪ್ಯಾನಿಷ್‌ ಪ್ರತಿನಿಧಿ ತಂಡದೊಂದಿಗೆ ಗೋವಾದಲ್ಲಿ ಸಭೆ ನಡೆಸಿದರು.

ಚರ್ಚೆಗಳು ಚಲನಚಿತ್ರ ಮತ್ತು ದೃಶ್ಯ-ಶ್ರವ್ಯ ಉತ್ಪಾದನೆಯಲ್ಲಿ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಗಾಢಗೊಳಿಸುವ ಅವಕಾಶಗಳ ಮೇಲೆ ಕೇಂದ್ರೀಕೃತವಾಗಿದ್ದವು. ಇದರಲ್ಲಿಎರಡು ದೇಶಗಳ ಸೃಜನಶೀಲ ಕೈಗಾರಿಕೆಗಳ ನಡುವೆ ಹೆಚ್ಚಿನ ಸಹಕಾರವನ್ನು ಸುಗಮಗೊಳಿಸುವ ನವೀಕೃತ ಸಹ - ಉತ್ಪಾದನಾ ಚಟುವಟಿಕೆಗಳ ಮೂಲಕ ಕೂಡ ಸೇರಿದೆ.

ಪ್ರಸ್ತುತ ಭಾರತ - ಸ್ಪೇನ್‌ ದೃಶ್ಯಶ್ರವ್ಯ ಸಹ-ಉತ್ಪಾದನಾ ಒಪ್ಪಂದವನ್ನು 2012ರಲ್ಲಿಸಹಿ ಮಾಡಲಾಯಿತು. ಒಪ್ಪಂದವನ್ನು ನವೀಕರಿಸುವ ಕುರಿತು ಚರ್ಚೆಗಳು ಚಲನಚಿತ್ರ ಮತ್ತು ದೃಶ್ಯ-ಶ್ರವ್ಯ ಉತ್ಪಾದನೆಯಲ್ಲಿ ದ್ವಿಪಕ್ಷೀಯ ಸಹಕಾರದ ಚೌಕಟ್ಟನ್ನು ಬಲಪಡಿಸುವುದಕ್ಕೆ ಉದ್ದೇಶಿಸಲಾಗಿದೆ. ಸ್ಪೇನ್‌ ಬದಿಯವರು ವಿವರಿಸಿದಂತೆ, ಪ್ರಸ್ತಾವಿತ ಚೌಕಟ್ಟು, ಕಥಾ ಸಾಹಿತ್ಯ, ಅನಿಮೇಷನ್‌ ಮತ್ತು ಡಾಕ್ಯುಮೆಂಟರಿ ಯೋಜನೆಗಳ ಜತೆಗೆ ದೂರದರ್ಶನ ಸರಣಿಗಳು ಮತ್ತು ಚಲನಚಿತ್ರಗಳ ನಡುವೆ ಸಹಕಾರವನ್ನು ಕಲ್ಪಿಸಿದೆ.

ಐಎಫ್‌ಎಫ್‌ಐ 2026ರಲ್ಲಿ ಗೌರವ ಅಥವಾ ಅತಿಥಿ ರಾಷ್ಟ್ರವಾಗಿ ಸ್ಪೇನ್‌ ಭಾಗವಹಿಸುವಿಕೆ ಆಧುನಿಕ ಸ್ಪ್ಯಾನಿಷ್‌ ಚಲನಚಿತ್ರಗಳನ್ನು ಪ್ರದರ್ಶಿಸಲು ಮತ್ತು ಭಾರತೀಯ ಮತ್ತು ಸ್ಪ್ಯಾನಿಷ್‌ ಚಲನಚಿತ್ರ ಉದ್ಯಮಗಳ ವೃತ್ತಿಪರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು ಅವಕಾಶ ನೀಡುತ್ತದೆ. ಈ ಉತ್ಸವವು 2026 ನವೆಂಬರ್‌ 20 ರಿಂದ 28 ರವರೆಗೆ ಗೋವಾದಲ್ಲಿನಡೆಯುತ್ತಿದೆ.

2026ರ ನವೆಂಬರ್‌ 20ರಿಂದ 24ರವರೆಗೆ ಪಣಜಿಯಲ್ಲಿನಡೆಯುತ್ತಿರುವ ವೇವ್ಸ್‌ ಫಿಲ್ಮ್‌ ಬಜಾರ್‌ನ 20ನೇ ಆವೃತ್ತಿ, ಎರಡು ದೃಶ್ಯಶ್ರವ್ಯ ಉದ್ಯಮಗಳ ನಡುವಿನ ಸಂವಹನಕ್ಕೆ ಮತ್ತೊಂದು ವೇದಿಕೆಯನ್ನು ಒದಗಿಸುತ್ತದೆ. ಸ್ಪ್ಯಾನಿಷ್‌ ಕಾರ್ಯಕ್ರಮದಲ್ಲಿ ನವೆಂಬರ್‌ 22ರಂದು ಸಮರ್ಪಿತ ಸ್ಪ್ಯಾನಿಷ್‌ ದಿನವೂ ಸೇರಿದೆ; ಇದರಲ್ಲಿಉದ್ಯಮ ಮಂಡಳಿ ಮತ್ತು ಎರಡೂ ದೇಶಗಳ ವೃತ್ತಿಪರರ ನಡುವೆ ಸಂವಹನದ ಅವಕಾಶಗಳಿವೆ.

ಈ ಚರ್ಚೆಗಳು ದೃಶ್ಯ-ಶ್ರವಣ ಸಹಕಾರವನ್ನು ಬಲಪಡಿಸುವಲ್ಲಿ ಮತ್ತು ಸಹ-ಉತ್ಪಾದನೆ, ಸೃಜನಾತ್ಮಕ ಸಹಕಾರ ಮತ್ತು ವೃತ್ತಿಪರ ವಿನಿಮಯಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವಲ್ಲಿ ಭಾರತ ಮತ್ತು ಸ್ಪೇನ್‌ ನ ಹಂಚಿಕೊಂಡ ಆಸಕ್ತಿಯನ್ನು ಒತ್ತಿಹೇಳುತ್ತವೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339936
•
Media Centre: Goa
•
Festival Dates: Nov 20 – 28, 2026