57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನಲ್ಲಿ ಭಾರತೀಯ ಪ್ಯಾನೋರಾಮಾ ನಾನ್-ಫೀಚರ್ ಫಿಲ್ಮ್ ಜ್ಯೂರಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಚಲನಚಿತ್ರದ ವೈವಿಧ್ಯತೆ, ಕಥೆ ಹೇಳುವ ಶಕ್ತಿ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಪಾತ್ರವನ್ನು ಬಿಂಬಿಸುವುದರೊಂದಿಗೆ ಕಠಿಣ ಆಯ್ಕೆ ಪ್ರಕ್ರಿಯೆಯ ಕುರಿತು ಒಳನೋಟಗಳನ್ನು ಹಂಚಿಕೊಂಡಿತು. ಈ ಸಂವಾದವು 358 ಪ್ರವೇಶಗಳ ಪ್ರಭಾವಶಾಲಿ ಗುಂಪಿನಿಂದ 20 ಚಿತ್ರಗಳನ್ನು ಆಯ್ಕೆ ಮಾಡುವ ಹಿಂದಿನ ಚರ್ಚೆಗಳ ಒಂದು ನೋಟವನ್ನು ನೀಡಿತು.
_20261121193112_98e208.jpeg)
ಅಧಿವೇಶನದಲ್ಲಿ ಜ್ಯೂರಿ ಅಧ್ಯಕ್ಷರಾದ ಶ್ರೀ ಹಿಮಾಂಸು ಶೇಖರ್‌ಖತುವಾ, ಜ್ಯೂರಿ ಸದಸ್ಯರಾದ ಶ್ರೀಮತಿ ಆರತಿ ಪಟೇಲ್, ಶ್ರೀ ಅಭಿಜೀತ್ ಅರವಿಂದ್ ದಲ್ವಿ, ಶ್ರೀಮತಿ ರಾಗಿಣಿ ಸೋನಾ, ಶ್ರೀ ಶಿವ್ ಸನ್ನಿ, ಶ್ರೀ ಶಂಕಜೀತ್ ದೇ ಮತ್ತು ಶ್ರೀ ಧನೇಶ್ ಯಾಧವ್ ಟಿ. ಆರ್. ಭಾಗವಹಿಸಿದ್ದರು. ಸಂವಾದವನ್ನು ಪತ್ರಿಕಾ ಮಾಹಿತಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜನರಲ್, ಶ್ರೀ ಮಹೇಶ್ ಕುಮಾರ್ ನಿರ್ವಹಿಸಿದರು.
ಆಯ್ಕೆ ಪ್ರಕ್ರಿಯೆಯ ತತ್ವಶಾಸ್ತ್ರದ ಬಗ್ಗೆ ಮಾತನಾಡಿದ ಶ್ರೀ ಹಿಮಾಂಸು ಶೇಖರ್‌ಖತುವಾ, ಜ್ಯೂರಿಯ ಪ್ರಮುಖ ಪ್ರಯತ್ನವು ಸಿನೆಮಾ ಮೂಲಕ ಭಾರತವನ್ನು ಅದರ ನಿಜವಾದ ಅರ್ಥದಲ್ಲಿ ಪ್ರತಿನಿಧಿಸುವುದಾಗಿದೆ ಎಂದು ಒತ್ತಿಹೇಳಿದರು. ಐಎಫ್‌ಎಫ್‌ಐ ಯ ಘೋಷವಾಕ್ಯ ‘ಸ್ಟೋರೀಸ್ ವಿತೌಟ್ ಬಾರ್ಡರ್ಸ್’ ಅನ್ನು ಉಲ್ಲೇಖಿಸಿ, ಆಯ್ದ ಚಿತ್ರಗಳು ದೇಶದ ಬಹುಮುಖ ಗುರುತುಗಳು, ಅನುಭವಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹಿಡಿದಿಟ್ಟುಕೊಂಡು, ಕಥನದ ವಿಶ್ವವ್ಯಾಪಿ ಮನೋಭಾವವನ್ನು ಪ್ರತಿಬಿಂಬಿಸುವುದಾಗಿ ಗಮನಿಸಿದರು.
ಆಯ್ಕೆ ಪ್ರಕ್ರಿಯೆಯನ್ನು ವಿವರಿಸುತ್ತಾ, ಶ್ರೀ ಖತುವಾ ಅವರು, ಜ್ಯೂರಿ ಅಥವಾ ತೀರ್ಪುಗಾರರು ಹಲವು ಸುತ್ತುಗಳಲ್ಲಿಕಠಿಣ ಮೌಲ್ಯಮಾಪನ ನಡೆಸಿ, ಸಾಂಪ್ರದಾಯಿಕ ಸಿನೆಮಾ ಚಟುವಟಿಕೆಗಳು ಮತ್ತು ಮುಖ್ಯಧಾರೆಯ ಸಂವೇದನೆಗಳನ್ನು ಮೀರಿ ಪರಿಶೀಲಿಸಿತು ಎಂದು ಹೇಳಿದರು. ಈ ಅಭ್ಯಾಸದಲ್ಲಿ ದೇಶದ ವಿಭಿನ್ನ ಭಾಗಗಳಿಂದ ವಿಭಿನ್ನ ದೃಷ್ಟಿಕೋನಗಳು ಮತ್ತು ಆಕರ್ಷಕ ಕಥನಗಳನ್ನು ನೀಡುವ ಚಿತ್ರಗಳನ್ನು ಗುರುತಿಸಲಾಯಿತು. ಅವರು ಆಯ್ದ ಕೃತಿಗಳು ಒಟ್ಟಾಗಿ ಭಾರತದ ವೈವಿಧ್ಯಮಯ ಸಂಪ್ರದಾಯಗಳು, ಪರಂಪರೆಗಳು ಮತ್ತು ಸಾಂಸ್ಕೃತಿಕ ಭೂದೃಶ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಗಮನಿಸಿದರು. ಜ್ಯೂರಿ ಯ ಸಮಗ್ರ ದೃಷ್ಟಿಕೋನವನ್ನು ಒತ್ತಿ ಹೇಳಿ, ಚಿತ್ರಗಳನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಲಾಯಿತು, ಶೈಲಿ ಅಥವಾ ಕಥನದಂತಹ ಪ್ರತ್ಯೇಕ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದಿಲ್ಲಎಂದು ವಿವರಿಸಿದರು.

ಕೃತಕ ಬುದ್ಧಿಮತ್ತೆಯ ಚಲನಚಿತ್ರ ನಿರ್ಮಾಣದಲ್ಲಿಹೆಚ್ಚುತ್ತಿರುವ ಪ್ರಭಾವವನ್ನು ಉಲ್ಲೇಖಿಸಿ, ಶ್ರೀ ಖತುವಾ ಮಾನವ ಕಲ್ಪನೆ, ಸಂವೇದನೆ ಮತ್ತು ದೃಷ್ಟಿಕೋನವು ವಿಶಿಷ್ಟ ಮತ್ತು ಅಪ್ರತಿಷ್ಠಿತವಾಗಿವೆ ಎಂದು ಒತ್ತಿ ಹೇಳಿದರು. ಕೃತಕ ಬುದ್ಧಿಮತ್ತೆಯ ಸೃಜನಾತ್ಮಕ ಸಾಧನದ ಸಾಮರ್ಥ್ಯವನ್ನು ಒಪ್ಪಿಕೊಂಡು, ತಂತ್ರಜ್ಞಾನವು ಕಲಾತ್ಮಕ ಅಭಿವ್ಯಕ್ತಿಯನ್ನು ಪೂರಕವಾಗಿ ಮತ್ತು ಶ್ರೀಮಂತಗೊಳಿಸಬೇಕು, ಮಾನವ ಮನಸ್ಸನ್ನು ಬದಲಾಯಿಸಬಾರದು ಎಂದು ಅವರು ಹೇಳಿದರು.
ತೀರ್ಪುಗಾರರ ಮಂಡಳಿಯ ಸದಸ್ಯರಾದ ಶ್ರೀಮತಿ ಆರತಿ ಪಟೇಲ್ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಆಯ್ಕೆ ಪ್ರಕ್ರಿಯೆಯು ಅತ್ಯಂತ ರೋಚಕ ಹಾಗೂ ಅಪಾರ ತೃಪ್ತಿ ನೀಡುವಂತಹದ್ದಾಗಿತ್ತು ಎಂದು ಬಣ್ಣಿಸಿದರು. ವಿಶೇಷವಾಗಿ, ಸಲ್ಲಿಕೆಯಾದ ಕೃತಿಗಳಲ್ಲಿ ಕಂಡುಬಂದ ವಿಷಯಗಳು, ವಸ್ತುಗಳು ಮತ್ತು ದೃಷ್ಟಿಕೋನಗಳ ಅಸಾಧಾರಣ ವೈವಿಧ್ಯತೆಯನ್ನು ಅವರು ಉಲ್ಲೇಖಿಸಿದರು. ಚಲನಚಿತ್ರವು ಭಾಷಾ, ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ನಿಲ್ಲುತ್ತದೆ ಹಾಗೂ ಜನರನ್ನು ಮತ್ತು ಸಮುದಾಯಗಳನ್ನು ಹತ್ತಿರಕ್ಕೆ ತರುವ ಒಂದು ಸಾರ್ವತ್ರಿಕ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಅಭಿಜೀತ್ ಅರವಿಂದ್ ದಲ್ವಿ ಅವರು, ಈ ಚಿತ್ರಗಳು ಜ್ಯೂರಿಗೆ ಭಾರತದ ವೈವಿಧ್ಯಮಯ ಸಾಮಾಜಿಕ ವಾಸ್ತವಿಕತೆಗಳು ಮತ್ತು ಸಾಂಸ್ಕೃತಿಕ ನೈತಿಕತೆಯನ್ನು ವಿಭಿನ್ನ ಸಿನೆಮಾಟಿಕ್ ಧ್ವನಿಗಳ ಮೂಲಕ ಹಿಡಿದಿಟ್ಟುಕೊಂಡಿವೆ ಎಂದು ಹೇಳಿದರು. ಅವರು ಈ ಸಲ್ಲಿಕೆಗಳು ದೇಶದ ಚಲನಚಿತ್ರ ನಿರ್ಮಾಣ ಪರಂಪರೆಯ ಶ್ರೀಮಂತಿಕೆಯನ್ನು ಮತ್ತು ಚಲನಚಿತ್ರ ನಿರ್ಮಾಪಕರು ತಮ್ಮ ಸುತ್ತಲೂ ಇರುವ ಪರಿಸರವನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುವ ರೀತಿಯನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದನ್ನು ಬಿಂಬಿಸಿದರು.
ತೀರ್ಪುಗಾರರೊಂದಿಗಿನ ತಮ್ಮ ಸಂಬಂಧವನ್ನು ಮೌಲ್ಯಯುತ ಕಲಿಕೆಯ ಅನುಭವವೆಂದು ವರ್ಣಿಸಿದ ಶ್ರೀಮತಿ ರಾಗಿಣಿ ಸೋನಾ, ಉತ್ಸವ ವಿಷಯವಾದ ‘ಗಡಿಗಳಿಲ್ಲದ ಕಥೆಗಳು’ ಅನ್ನು ಮೆಚ್ಚಿಕೊಂಡು, ಅದನ್ನು ಸುಂದರ ಮತ್ತು ಅರ್ಥಪೂರ್ಣ ಎಂದು ಕರೆದರು. ಅವರು ಗಡಿಗಳನ್ನು ಮೀರಿ ಪ್ರೇಕ್ಷ ಕರನ್ನು ಹಂಚಿಕೊಂಡ ಮಾನವ ಅನುಭವಗಳ ಮೂಲಕ ಸಂಪರ್ಕಿಸುವ ಕಥೆಗಳ ಮಹತ್ವವನ್ನು ಒತ್ತಿಹೇಳಿದರು.

ಶ್ರೀ ಶಿವ ಸನ್ನಿ ಅವರು, ಸಿನೆಮಾದ ಪರಿವರ್ತನಾತ್ಮಕ ಶಕ್ತಿಯ ಬಗ್ಗೆ ಬೆಳಕು ಚೆಲ್ಲಿದರು. ಅರ್ಥಪೂರ್ಣ ಕಥನವು ಮನರಂಜನೆಯ ಹೊರತಾಗಿ ಚಿಂತನೆಗಳನ್ನು ಪ್ರೇರೇಪಿಸಲು, ದೃಷ್ಟಿಕೋನಗಳನ್ನು ರೂಪಿಸಲು ಮತ್ತು ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸಲು ವಿಸ್ತಾರವಾಗಬಹುದು ಎಂದು ಒತ್ತಿ ಹೇಳಿದರು.
ಈ ಪತ್ರಿಕಾಗೋಷ್ಠಿ ಜ್ಯೂರಿಯ ಚಲನಚಿತ್ರ ಆಯ್ಕೆ ವಿಧಾನ ಮತ್ತು ಭಾರತೀಯ ಪ್ಯಾನೋರಾಮಾ ಕೃತಿಗಳನ್ನು ಗುರುತಿಸುವಲ್ಲಿಇರುವ ಪರಿಗಣನೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಿತು. ವಿಭಿನ್ನ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಅನುಭವಗಳಲ್ಲಿಆಧಾರಿತ ಕಥೆಗಳನ್ನು ಒಟ್ಟುಗೂಡಿಸುವ ಮೂಲಕ, ಈ ಆಯ್ಕೆ ಭಾರತೀಯ ಪ್ಯಾನೋರಾಮಾ ಭಾರತೀಯ ಸಿನೆಮಾದ ಶ್ರೀಮಂತಿಕೆಯನ್ನು ಮತ್ತು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ಪ್ರೇಕ್ಷಕರನ್ನು ಸಂಪರ್ಕಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಪಾತ್ರವನ್ನು ಪುನಃ ದೃಢಪಡಿಸುತ್ತದೆ.
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****