ಪ್ರಕಟಣಾ ದಿನಾಂಕ:
12 NOV 2026 11:41PM by PIB Bengaluru
ಫಿಲಿಪ್ಪೀನ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ನವೆಂಬರ್ 16 ರಿಂದ 17ರವರೆಗೆ ಫಿಲಿಪ್ಪೀನ್ಸ್ ನ ಮನಿಲಾಕ್ಕೆ ಭೇಟಿ ನೀಡಲಿದ್ದಾರೆ.
ಈ ಭೇಟಿಯ ಸಮಯದಲ್ಲಿ, 2026 ರ ನವೆಂಬರ್ 17ರಂದು 2026 ರ ಆಸಿಯಾನ್ ಅಧ್ಯಕ್ಷರಾಗಿ ಫಿಲಿಪ್ಪಿನ್ಸ್ ಆಯೋಜಿಸಿರುವ 23ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 21 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (ಇಎಎಸ್) ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ.
ಭಾರತ-ಆಸಿಯಾನ್ ಸಂಬಂಧಗಳು ಭಾರತದ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಇಂಡೋ-ಪೆಸಿಫಿಕ್ ಬಗ್ಗೆ ನಮ್ಮ ದೃಷ್ಟಿಕೋನದ ಕೇಂದ್ರ ಆಧಾರಸ್ತಂಭವಾಗಿದೆ. ಭಾರತ ಮತ್ತು ಆಸಿಯಾನ್ 2026 ಅನ್ನು ಆಸಿಯಾನ್-ಭಾರತ ಕಡಲ ಸಹಕಾರ ವರ್ಷವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಬಂದಿದೆ ಮತ್ತು 2027 ರಲ್ಲಿ 35 ವರ್ಷಗಳ ಸಂವಾದ ಸಂಬಂಧಗಳು ಮತ್ತು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಐದು ವರ್ಷಗಳ ಸ್ಮರಣಾರ್ಥ ಈ ಭೇಟಿ ನಡೆಯಲಿದೆ.
ಆಸಿಯಾನ್-ಭಾರತ ಶೃಂಗಸಭೆಯು ಆಸಿಯಾನ್-ಭಾರತ ಕ್ರಿಯಾ ಯೋಜನೆ 2026-2030 ಸೇರಿದಂತೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸುತ್ತದೆ ಮತ್ತು ಸಹಕಾರದ ಭವಿಷ್ಯದ ದಿಕ್ಕನ್ನು ರೂಪಿಸುತ್ತದೆ.
ಪೂರ್ವ ಏಷ್ಯಾ ಶೃಂಗಸಭೆಯು ಆಸಿಯಾನ್ ಮತ್ತು ಇತರ ಭಾಗವಹಿಸುವ ರಾಷ್ಟ್ರಗಳೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
*****